belagavi news :
ವಾಷಿಂಗ್ಟನ್: ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತ, ಚೀನಾ, ಸ್ಲೋವಾಕಿಯಾ, ಹಂಗೇರಿ ಮತ್ತು ಅಜೆರ್ಬೈಜಾನ್ ಸೇರಿದಂತೆ 5 ಪ್ರಮುಖ ರಾಷ್ಟ್ರಗಳ ಮೇಲೆ 100% ಸುಂಕವಿಧಿಸುವ ಮಸೂದೆಯನ್ನು ಅಮೆರಿಕದ ಉಭಯ ಪಕ್ಷಗಳ ಸೆನೆಟರ್ ಗಳು ಮಂಡಿಸಿದ್ದಾರೆ. ಈ ಪ್ರಸ್ತಾವನೆಯ ಉದ್ದೇಶ ರಷ್ಯಾದ ಇಂಧನ ರಫ್ತಿನಿಂದ ಆಗುವ ಆದಾಯವನ್ನು ಕಡಿಮೆ ಮಾಡಿ, ಅದರ ಆರ್ಥಿಕತೆಯ ಮೇಲೆ ಒತ್ತಡ ಹೇರುವುದಾಗಿದೆ.
ಯಾವ ದೇಶಗಳು ಈ ಮಸೂದೆಯ ವ್ಯಾಪ್ತಿಗೆ ಬರುತ್ತೆ?
ಪ್ರಸ್ತಾವಿತ ಮಸೂದೆಯಲ್ಲಿ ರಷ್ಯಾದ ತೈಲ ಮತ್ತು ಅನಿಲದ ಪ್ರಮುಖ ಖರೀದಿದಾರರಾಗಿರುವ ಈ ಐದು ರಾಷ್ಟ್ರಗಳನ್ನು ಗುರಿಯಾಗಿಸಲಾಗಿದೆ.
•ಭಾರತ
•ಚೀನಾ
•ಸ್ಲೋವಾಕಿಯಾ
•ಹಂಗೇರಿ
* ಅಜೆರ್ಬೈಜಾನ್
ಇದೇ ವೇಳೆ, ರಷ್ಯಾದಿಂದ ಸೀಮಿತ ಪ್ರಮಾಣದಲ್ಲಿ ಅನಿಲ ಖರೀದಿಸುವ 15ಯುರೋಪಿಯನ್ ರಾಷ್ಟ್ರಗಳಿಗೆ ಈ ಪ್ರಸ್ತಾವನೆಯಿಂದ ವಿನಾಯಿತಿ ನೀಡಲಾಗಿದೆ.
ಅಮೆರಿಕದ ಉದ್ದೇಶವೇನು?
ಸೆನೆಟರ್ ಗಳ ಪ್ರಕಾರ, ಈ ಮಸೂದೆ ಯುರೋಪಿನ ಮಿತ್ರ ರಾಷ್ಟ್ರಗಳನ್ನು ಗುರಿಯಾಗಿಸಿಕೊಂಡಿಲ್ಲ. ರಷ್ಯಾದ ಇಂಧನದ ಪ್ರಮುಖ ಖರೀದಿದಾರರ ಮೇಲಷ್ಟೇ ಆರ್ಥಿಕ ಒತ್ತಡ ಹೇರುವ ಉದ್ದೇಶದಿಂದ ಇದನ್ನು ರೂಪಿಸಲಾಗಿದೆ. ಮಸೂದೆ ಅಂಗೀಕಾರವಾದರೆ, ಯುದ್ಧಕ್ಕೆ ಹಣಕಾಸಿನ ಬೆಂಬಲ ಒದಗಿಸುತ್ತಿದೆ ಎಂದು ಅಮೆರಿಕ ಪರಿಗಣಿಸುವ ರಾಷ್ಟ್ರಗಳ ವಿರುದ್ಧ ಸುಂಕವನ್ನು ಭೌಗೋಳಿಕ-ರಾಜಕೀಯ (Geopolitical) ಅಸ್ತ್ರವಾಗಿ ಬಳಸುವ ಅಧಿಕಾರ ಕಾಂಗ್ರೆಸ್ ಗೆ ದೊರೆಯುವ ಸಾಧ್ಯತೆ ಇದೆ.
500% ಸುಂಕದಿಂದ 100% ಕ್ಕೆ ಬದಲಾವಣೆ:
ಈ ಮಸೂದೆಯ ಆರಂಭಿಕ ಕರಡಿನಲ್ಲಿ ರಷ್ಯಾದಿಂದ ತೈಲ ಮತ್ತು ಅನಿಲ ಖರೀದಿಸುವ ರಾಷ್ಟ್ರಗಳ ಮೇಲೆ 500% ಸುಂಕ ವಿಧಿಸುವ ಪ್ರಸ್ತಾವನೆ ಇತ್ತು. ಬಳಿಕ ಮುಂದುವರೆದಿದೆ ಪರಿಷ್ಕೃತ ಕರಡಿನಲ್ಲಿ ಅದನ್ನು 100% ಸುಂಕಕ್ಕೆ ಇಳಿಸಲಾಗಿದೆ.
ರಷ್ಯಾದ ಆರ್ಥಿಕತೆಯ ಮೇಲೆ ಪರಿಣಾಮ ಬೀರುವ ಪ್ರಯತ್ನ:
ಕನೆಕ್ಟಿಕಟ್ ನ ಡೆಮಾಕ್ರಟಿಕ್ ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಅವರ ಪ್ರಕಾರ, ಈ ಮಸೂದೆ ಕೇವಲ ಸುಂಕ ವಿಧಿಸುವುದಕ್ಕೆ ಸೀಮಿತವಾಗಿಲ್ಲ. ರಷ್ಯಾದ ಇಂಧನ, ಹಣಕಾಸು ಮತ್ತು ರಕ್ಷಣಾ ಕ್ಷೇತ್ರಗಳ ಮೇಲೆ ಹೆಚ್ಚಿನ ಆರ್ಥಿಕ ನಿರ್ಬಂಧಗಳನ್ನು ಹೇರುವ ಉದ್ದೇಶವನ್ನೂ ಒಳಗೊಂಡಿದೆ.
ರೋಜರ್ ವಿಕರ್ ಹೇಳಿದ್ದೇನು?
ಮಿಸ್ಸಿಸ್ಸಿಪ್ಪಿಯ ರಿಪಬ್ಲಿಕನ್ ಸೆನೆಟರ್ ರೋಜರ್ ಎಕರ್ ಅವರು, ಈ ಮಸೂದೆಯನ್ನು ಸೆಮಿಟರ್ ಲಿಂಡ್ಸೆ ಗ್ರಹಾಂ ಯುರೋಪಿನಲ್ಲಿ ಶಾಂತಿ ಮತ್ತು ಭದ್ರತೆಯನ್ನು ಬಲಪಡಿಸುವ ಉದ್ದೇಶದಿಂದ ರೂಪಿಸಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ಮೇಲೆ ಪರಿಣಾಮ ಏನು?
ಈ ಮಸೂದೆ ಇನ್ನೂ ಪ್ರಸ್ತಾವನೆಯ ಹಂತದಲ್ಲಿದೆ. ಇದು ಕಾನೂನಾಗಲು ಅಮೆರಿಕದ ಕಾಂಗ್ರೆಸ್ ನ ಎರಡು ಸದನಗಳ ಅನುಮೋದನೆ ಮತ್ತು ನಂತರದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕಿದೆ. ಜಾರಿಗೆ ಬಂದರೆ ಭಾರತ-ಅಮೆರಿಕ ವ್ಯಾಪಾರ, ರಷ್ಯಾದಿಂದ ತೈಲ ಆಮದು ಹಾಗೂ ಜಾಗತಿಕ ಇಂಧನ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.