Belagavi News:
ಮದುವೆಯ ಕನಸುಗಳು ಚಿಗುರಿದ್ದ ಸಮಯದಲ್ಲೇ ಕೇರಳದ ಯುವ ನಾವಿಕನ ಬದುಕು ದುರಂತದಲ್ಲಿ ಅಂತ್ಯ ಕಂಡಿದೆ. ನಿಶ್ಚಿತಾರ್ಥ ಮುಗಿದ ಕೇವಲ ಒಂದು ವಾರ ಕಳೆದಿದ್ದಾಗಲೇ, ರಷ್ಯಾ - ಉಕ್ರೇನ್ ಯುದ್ಧದ ದ್ವಾಲೆಗೆ ಕೇರಳದ 26 ವರ್ಷದ ಅಖಿಲ್ ಜೋಯನ್ ಬಲಿಯಾಗಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕೊಂಡು ನಿವಾಸಿಯಾಗಿದ್ದ ಅಖಿಲ್ ಜೋಯದ್, ಉಕ್ರೇನ್ ನ ಓಡೆಸ್ಸಾ ಬಂದರು ಕರಾವಳಿಯಲ್ಲಿ ನಡೆದ ರಷ್ಯಾ ಕ್ಷಿಪಣಿ ದಾಳಿಯಲ್ಲಿ ಮೃತಪಟ್ಟ ನಾಲ್ವರು ಭಾರತೀಯ ನಾವಿಕರಲ್ಲಿ ಒಬ್ಬರಾಗಿದ್ದಾರೆ.
ಮದುವೆ ಕನಸು ಕಂಡಿದ್ದ ಯುವಕನ ದಾರುಣ ಅಂತ್ಯ :
ಅಖಿಲ್ ಜೋಯನ್ ಕೆಲವೇ ತಿಂಗಳುಗಳಲ್ಲಿ ಮದುವೆಯಾಗುವ ಕನಸು ಕಂಡಿದ್ದರು. ಹೊಸ ಜೀವನ ಆರಂಭಿಸುವ ನಿರೀಕ್ಷೆಯಲ್ಲಿದ್ದ ಯುವಕ, ಕುಟುಂಬಕ್ಕೆ ಉತ್ತಮ ಭವಿಷ್ಯ ಕಟ್ಟಿಕೊಡಬೇಕು ಎಂಬ ಹಂಬಲ ಹೊಂದಿದ್ದರು. ಆದರೆ ದೂರದ ಉಕ್ರೇನ್ ನಲ್ಲಿ ನಡೆದ ಯುದ್ಧದ ದಾಳಿಯೊಂದು ಅವರ ಬದುಕನ್ನೇ ಕಸಿದುಕೊಂಡಿದೆ.
ಅಖಿಲ್ ಅವರ ಸಾವಿನ ಸುದ್ದಿ ಕುಟುಂಬಕ್ಕೆ ಹಾಗೂ ಗ್ರಾಮಸ್ಥರಿಗೆ ಆಘಾತ ತಂದಿದ್ದು, ವೆಲ್ಲರಿಕ್ಕೊಂಡು ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಓಡೆಸ್ಸಾ ಬಂದರು ಬಳಿ ರಷ್ಯಾ ಕ್ಷಿಪಣಿ ದಾಳಿ :
ರಷ್ಯಾ- ಉಕ್ರೇನ್ ಸಂಘರ್ಷದ ನಡುವೆ ಉಕ್ರೇನ್ ನ ಓಡಿಸಾ ಬಂದರು ಕರಾವಳಿ ಪ್ರದೇಶದಲ್ಲಿ ನಡೆದ ಕ್ಷಿಪಣಿ ದಾಳಿಯಲ್ಲಿ ಭಾರತೀಯ ನಾವಿಕರು ಸಾವನ್ನಪ್ಪಿದ್ದಾರೆ. ಈ ದಾಳಿಯಲ್ಲಿ ಅಖಿಲ್ ಜೋಯನ್ ಸೇರಿದಂತೆ ನಾಲ್ವರು ಭಾರತೀಯರು ಮೃತಪಟ್ಟಿದ್ದಾರೆ.
ನಿಶ್ಚಿತಾರ್ಥದ ತಿಂಗಳಲ್ಲೇ ದುರಂತ - ಉಕ್ರೇನ್ ನಲ್ಲಿ ರಷ್ಯಾ ದಾಳಿಗೆ ಬಲಿಯಾದ ಕೇರಳದ ನಾವಿಕ ಅಖಿಲ್ ಜೋಯದ್ ಕಥೆ :
ಮದುವೆಯ ಕನಸು ಹೊತ್ತು ವಿದೇಶಕ್ಕೆ ಮರಳಿದ್ದ ಕೇರಳದ ಯುವ ನಾವಿಕ ಅಖಿಲ್ ಜೋಯನ್ ಅವರ ಬದುಕು ಯುದ್ಧದ ದಾಳಿಗೆ ದುರಂತ ಅಂತ್ಯ ಕಂಡಿದೆ. ನಿಶ್ಚಿತಾರ್ಥವಾಗಿ ತಿಂಗಳು ಕಳೆಯುವ ಅಷ್ಟರಲ್ಲಿ ಕೆಲಸಕ್ಕೆ ಮರಳಿದ್ದ 26 ವರ್ಷದ ಅಖಿಲ್, ಉಕ್ರೇನ್ ನ ಓಡಿಸಾ ಕರಾವಳಿಯಲ್ಲಿ ನಡೆದ ರಷ್ಯಾ ಕ್ಷಿಪಣಿ ದಾಳಿಗೆ ಬಲಿಯಾಗಿದ್ದಾರೆ.
ಕೇವಲ 19ನೇ ವಯಸ್ಸಿನಲ್ಲಿ ಮರ್ಚೆಂಟ್ ನೇವಿಗೆ ಸೇರಿದ್ದ ಅಖಿಲ್, ಕಳೆದ ಆರು ವರ್ಷಗಳಿಂದ ಹಡಗಿನಲ್ಲಿ ನಾವಿಕನಾಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಪರಿಶ್ರಮದಿಂದ ಇತ್ತೀಚೆಗಷ್ಟೇ ಹೊಸ ಮನೆ ಒಂದನ್ನು ನಿರ್ಮಿಸಿದ್ದ ಅವರು, ಕುಟುಂಬದ ಉತ್ತಮ ಭವಿಷ್ಯಕ್ಕಾಗಿ ಶ್ರಮಿಸುತ್ತಿದ್ದರು.
ಏಕೈಕ ಪುತ್ರನನ್ನು ಕಳೆದುಕೊಂಡ ಕುಟುಂಬ :
ಕಾಸರಗೋಡು ಜಿಲ್ಲೆಯ ವೆಲ್ಲರಿಕ್ಕೊಂಡು ನಿವಾಸಿಯಾಗಿದ್ದ ಅಖಿಲ್, ಎಲೆಕ್ಟ್ರಿಕಲ್ ಅಂಗಡಿ ನಡೆಸುತ್ತಿದ್ದ ತಂದೆ ಜೋಯನ್ ಹಾಗೂ ವಿಮಾ ಏಜೆಂಟ್ ತಾಯಿ ಸ್ಯಾಲಿ ಅವರ ಏಕೈಕ ಪುತ್ರರಾಗಿದ್ದರು. ಅಖಿಲ್ ಅವರ ಸಾವಿನ ಸುದ್ದಿ ಕುಟುಂಬವನ್ನು ಆಘಾತಕ್ಕೀಡು ಮಾಡಿದ್ದು, ಹುಟ್ಟೂರಿನಲ್ಲಿ ಶ್ಲೋಕದ ವಾತಾವರಣ ನಿರ್ಮಾಣವಾಗಿದೆ.
ಮದುವೆ ಕನಸು ಕಂಡಿದ್ದ ಅಖಿಲ್ ಗೆ ವಿಧಿಯ ಹೊಡೆತ :
ಕೆಲವೇ ದಿನಗಳ ಹಿಂದಷ್ಟೇ ಆಲಪ್ಪುಳ ಮೂಲದ ಯುವತಿಯೊಂದಿಗೆ ಅಖಿಲ್ ಅವರ ನಿಶ್ಚಿತಾರ್ಥ ಅದ್ದೂರಿಯಾಗಿ ನಡೆದಿತ್ತು. ಇನ್ನೆರಡು ತಿಂಗಳಲ್ಲಿ ಮದುವೆ ನಡೆಯಬೇಕಿತ್ತು . ಮದುವೆಯ ಬಳಿಕ ಅಪಾಯಕಾರಿ ಹಡಗಿನ ಕೆಲಸ ತೊರೆದು ಹೊಸ ಉದ್ಯಮಕ್ಕೆ ಸೇರಬೇಕೆಂಬ ಕನಸನ್ನು ಅಖಿಲ್ ಹೊಂದಿದ್ದರು.
ಆದರೆ ನಿಶ್ಚಿತಾರ್ಥದ ಬಳಿಕ ಕೆಲಸಕ್ಕೆ ಮರಳಿದ ಕೇವಲ ಒಂದೇ ತಿಂಗಳಲ್ಲೇ ಸಂಭವಿಸಿದ ದುರಂತ ಅವರ ಎಲ್ಲಾ ಕನಸುಗಳನ್ನು ಕಸಿದುಕೊಂಡಿದೆ.
ಕಂಪನಿಯ ಇ-ಮೇಲ್ ತಂದ ಆಘಾತ :
ಸೋಮವಾರ ಸಂಜೆ ಅಖಿಲ್ ಕೆಲಸ ಮಾಡುತ್ತಿದ್ದ ಶಿಫ್ಟಿಂಗ್ ಕಂಪನಿಯಲ್ಲಿ ಬಂದ ಒಂದು ಇ-ಮೇಲ್ ಕುಟುಂಬಕ್ಕೆ ಆಘಾತಕಾರಿ ಸುದ್ದಿಯನ್ನು ತಲುಪಿಸಿತು. ಅಖಿಲ್ ತಮ್ಮ ಊರಿನಲ್ಲಿ ಶಿಸ್ತಿನ ಮತ್ತು ಜನಪ್ರಿಯ ಯುವಕನಾಗಿದ್ದರೂ ಎಂದು ಸ್ಥಳೀಯರು ಹೇಳಿದ್ದಾರೆ.
ಒಡೆಸ್ಸಾ ಕರಾವಳಿಯಲ್ಲಿ ನಡೆದ ದಾಳಿ :
ವರದಿಗಳ ಪ್ರಕಾರ, ಪಶ್ಚಿಮ ಆಫ್ರಿಕಾದ ಧ್ವಜ ಹೊಂದಿದ್ದ 'ಎಂ ವಿ ಗೋಲ್ಡನ್ ಲೀಯೋ ' ಸರಕು ಸಾಗಾಣಿ ಹಡಗು ಉಕ್ರೇನಿಯನ್ ಜೋಳವನ್ನು ಹೊತ್ತು ಓಡೆಸ್ಸಾ ಬಂದರಿನಿಂದ ಹೊರಟಿತ್ತು. ಈ ವೇಳೆ ರಷ್ಯಾ ಪಡೆಗಳ ದಾಳಿಗೆ ಹಡಗು ಸಿಲುಕಿದ್ದು, ಭಾರತದ ನಾಲ್ವರು ಹಾಗೂ ಸಿರಿಯಾದ ಐವರು ನಾವಿಕರು ಸೇರಿದಂತೆ ಒಟ್ಟು ಹತ್ತು ಸಿಬ್ಬಂದಿ ಮೃತಪಟ್ಟಿದ್ದಾರೆ.
ಅಖಿಲ್ ಮೃತ ದೇಹ ಸ್ವದೇಶಕ್ಕೆ ತರಲು ಪ್ರಯತ್ನ :
ಅಖಿಲ್ ಅವರ ಭೌತಿಕ ಶರೀರವನ್ನು ಭಾರತಕ್ಕೆ ತರಲು ಕೇರಳ ಮುಖ್ಯಮಂತ್ರಿ, ಕಚೇರಿ ಮತ್ತು ನೋರ್ಕಾ ಇಲಾಖೆ, ರಷ್ಯಾ ಕಾನ್ಸುಲೇಟ್ ಹಾಗೂ ಭಾರತದ ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿವೆ.