Belagavi news:
ವಾಷಿಂಗ್ಟನ್ ಡಿಸಿ: ಇರಾನ್ ಮಿಲಿಟರಿ ಸಂಪೂರ್ಣವಾಗಿ ನಾಶವಾಗಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದ್ದಾರೆ. ಅಮೆರಿಕವು ಈ ಸಂಘರ್ಷವನ್ನು ಶಾಂತಿಯುತ ಮಾರ್ಗದಲ್ಲಾಗಲಿ ಅಥವಾ ಬೇರೆ ರೀತಿಯಲ್ಲಾಗಲಿ ಗೆಲ್ಲಲಿದೆ ಎಂದು ಅವರು ತಿಳಿಸಿದ್ದಾರೆ.
ಚೀನಾಕ್ಕೆ ಪ್ರಯಾಣ ಆರಂಭಿಸುವ ಮೊದಲು ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದು, ಇರಾನ್ ವಿಚಾರದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಸ್ತಕ್ಷೇಪ ಮಾಡಬೇಕಮ್ಮ ಪ್ರಶ್ನೆಗೆ ಪ್ರತಿಕ್ರಿಯಿಸಿದರು. " ಇಲ್ಲ, ಇರಾನ್ ಪರವಾಗಿ ನಮಗೆ ಯಾವುದೇ ಸಹಾಯದ ಅಗತ್ಯವಿಲ್ಲ. ನಾವು ಅದನ್ನು ಒಂದಲ್ಲ ಒಂದು ರೀತಿಯಲ್ಲಿ ಗೆಲ್ಲುತ್ತೇವೆ. ಶಾಂತಿಯುತವಾಗಿಯೂ ಅಥವಾ ಬೇರೆ ರೀತಿಯಲ್ಲೂ ಗೆಲ್ಲುತ್ತೇವೆ" ಎಂದು ಟ್ರಂಪ್ ಹೇಳಿದ್ದಾರೆ.
ಇರಾನ್ ಮೇಲಿನ ದಿಗ್ಬಂಧನಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಅವು ಶೇ. 100 ರಷ್ಟು ಪರಿಣಾಮ ನೀಡುತ್ತಿವೆ ಎಂದು ಅವರು ಇದೇ ವೇಳೆ ತಿಳಿಸಿದ್ದಾರೆ.
ನ್ಯಾಟೋ ವಿರುದ್ಧ ಮತ್ತೆ ಹರಿಹಾಯ್ದ ಟ್ರಂಪ್: 'ಸಹಾಯ ಮಾಡಲಿಲ್ಲ, ಈಗ ಅಗತ್ಯ ಇಲ್ಲ'
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ನ್ಯಾಟೋ (NATO) ವಿರುದ್ಧ ಮತ್ತೆ ತೀವ್ರ ಟೀಕೆ ವ್ಯಕ್ತಪಡಿಸಿದ್ದಾರೆ. " ನ್ಯಾಟೋ ಬಗ್ಗೆ ನನಗೆ ತುಂಬಾ ನಿರಾಸೆಯಾಗಿದೆ. ನಾವು ಅಗತ್ಯವಿದ್ದಾಗ ಅವರು ನಮ್ಮ ಸಹಾಯಕ್ಕೆ ಬರಲಿಲ್ಲ. ಈಗ ನಮಗೆ ನ್ಯಾಟೋ ಅಗತ್ಯವಿಲ್ಲ" ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅಲ್ ಜಜೀರಾ ವರದಿಯ ಪ್ರಕಾರ, ನ್ಯಾಟೋ ಪ್ರಧಾನ ಕಾರ್ಯದರ್ಶಿ ಪ್ರಸ್ತುತ ಜಾಗತಿಕ ಯುದ್ಧ ಪರಿಸ್ಥಿತಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಕಡಲ ಭದ್ರತೆ ಹಾಗೂ ಪ್ರಾದೇಶಿಕ ಸ್ಥಿರತೆಯ ಕಡೆ ಹೆಚ್ಚಿನ ಗಮನ ನೀಡಲಾಗುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ನ್ಯಾಟೋ ಸದಸ್ಯ ರಾಷ್ಟ್ರಗಳು ಪ್ರಮುಖ ವ್ಯಾಪಾರ ಮಾರ್ಗಗಳು ಮತ್ತು ಸಾಗರ ಮಾರ್ಗಗಳ ರಕ್ಷಣೆಗೆ ಆದ್ಯತೆ ನೀಡುತ್ತಿವೆ ಎಂದು ತಿಳಿದು ಬಂದಿದೆ.
ಈ ತಕ್ಷಣದ ಭೌಗೋಳಿಕ ರಾಜಕೀಯ ಅಡೆತಡೆಗಳ ಹೊರತಾಗಿಯೂ, ನ್ಯಾಟೋ ಆಂತರಿಕ ಆರೋಗ್ಯ ಮತ್ತು ಆರ್ಥಿಕ ಪದ್ಧತಿಯ ಬಗ್ಗೆ ರುಟ್ಟೆ ವಿಶ್ವಾಸದಿಂದಲೇ ಇದ್ದಾರೆ. ನ್ಯಾಟೋದ ಭವಿಷ್ಯದ ಬಗ್ಗೆ ನಾನು ಅತ್ಯಂತ ಆಶಾವಾದಿಯಾಗಿದ್ದೇನೆ ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದಾರೆ.
ಅಮೆರಿಕ ಇರಾನ್ ಸಂಘರ್ಷ: ಜಾಗತಿಕ ಇಂಧನ ಮಾರುಕಟ್ಟೆಗಳಲ್ಲಿ ಅಸ್ಥಿರತೆ
ಅಮೆರಿಕ ಮತ್ತು ಇರಾನ್ ನಡುವಿನ ತೀವ್ರಗೊಳ್ಳುತ್ತಿರುವ ಸಂಘರ್ಷವು ಜಾಗತಿಕ ಇಂಧನ ಮಾರುಕಟ್ಟೆಗಳನ್ನು ಅಸ್ತವ್ಯಸ್ತ ಗೊಳಿಸಿದೆ. ಹಾರ್ಮುಜ್ ಜಳಸಂಧಿಯನ್ನು ಟೆಹ್ರಾನ್ ನಿರ್ಬಂಧಿಸಿರುವುದಾಗಿ ತಿಳಿದು ಬಂದಿದ್ದು, ಈ ಮಾರ್ಗದ ಮೂಲಕ ವಿಶೇಷ ತೈಲ ಮತ್ತು ಅನಿಲದ ಸುಮಾರು ಐದನೇ ಒಂದು ಭಾಗದಷ್ಟು ಪ್ರಮಾಣ ಸಾಗಣೆ ಆಗುತ್ತದೆ.
ಪೂರೈಕೆ ಕೊರತೆಯನ್ನು ತಗ್ಗಿಸುವ ಪ್ರಯತ್ನವಾಗಿ ವಾಷಿಂಗ್ಟನ್ ಮಾರ್ಚಿನಲ್ಲಿ ಇರಾನಿನ ತೈಲದ ಮೇಲಿನ ಕೆಲವು ನಿರ್ಬಂಧಗಳನ್ನು ಸಡಿಲಿಸಿದ್ದರು, ಈಗ ಮತ್ತೆ ಆ ನಿರ್ಬಂಧಗಳನ್ನು ಬಿಗಿಗೊಳಿಸುತ್ತಿದೆ. ಇದರಿಂದ ಜಾಗತಿಕ ತೈಲ ಪೂರೈಕೆ ಪರಿಸ್ಥಿತಿ ಮತ್ತಷ್ಟು ಒತ್ತಡಕ್ಕೆ ಒಳಗಾಗಿದೆ.
ಇರಾನ್ ನ ಹೆಚ್ಚಿನ ತೈಲ ರಫ್ತುಗಳು ಏಷ್ಯ ಮಾರುಕಟ್ಟೆಗಳಿಗೆ ಸಾಗುತ್ತಿದ್ದು ಅದರಲ್ಲಿ ಚೀನಾ ಪ್ರಮುಖ ಆಮದುದಾರ ರಾಷ್ಟ್ರವಾಗಿದೆ. ಒಟ್ಟಾರೆ ನೋಡಿದರೆ ಬೀಜಿಂಗ್, ಟೆಹ್ರಾನ್ ಅತಿ ದೊಡ್ಡ ವ್ಯಾಪಾರ ಪಾಲುದಾರರಾಗಿ ಉಳಿದಿದೆ.
Also Read:
Heavy Rain in Belagavi: ಕಕ್ಕೇರಿಯಲ್ಲಿ ಬಿರುಗಾಳಿಗೆ ಜನಜೀವನ ಅಸ್ತವ್ಯಸ್ತ