Belagavi news:
ಬೆಳಗಾವಿ ಜಿಲ್ಲೆಯ ಕಕ್ಕೇರಿ ಭಾಗದಲ್ಲಿ ಭಾರಿ ಮಳೆ ಮತ್ತು ಬಿರುಗಾಳಿ ಪರಿಣಾಮವಾಗಿ ಅವಾಂತರ ಉಂಟಾಗಿದೆ. ಕಳೆದ ಒಂದು ವಾರದಿಂದ ಪ್ರತಿದಿನ ಸಂಜೆ ವೇಳೆಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಜೋರಾದ ಮಳೆಯೊಂದಿಗೆ ಬಿರುಗಾಳಿ ಬೀಸುತ್ತಿರುವುದು ಕಂಡು ಬರುತ್ತಿದೆ.
ಮಂಗಳವಾರ ಸಂಜೆ ಕೂಡ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು, ಬಿರುಗಾಳಿಯ ರಬಸಕ್ಕೆ ಹಲವು ಕಡೆಗಳಲ್ಲಿ ಮರಗಳು ಧರೆಗುರುಳಿದ ಘಟನೆಗಳು ನಡೆದಿವೆ. ಜೊತೆಗೆ ವಿದ್ಯುತ್ ಕಂಬಗಳು ಕೂಡ ಹಾನಿಗೊಳಗಾಗಿರುವುದರಿಂದ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ಒಂದೆಡೆ ತೀವ್ರ ಬಿಸಿಲು. ಮತ್ತೊಂದೆಡೆ ಮಳೆರಾಯನ ಆರ್ಭಟ ಕಂಡು ಬಂದಿದೆ. ಖಾನಾಪುರ ತಾಲೂಕಿನ ಕಕ್ಕೇರಿ ಗ್ರಾಮದಲ್ಲಿ ಮಂಗಳವಾರ ಸಂಜೆ ಬಿರುಗಾಳಿ ಸಹಿತ ಗುಡುಗು ಮಳೆಯು ಭಾರೀ ಅವಾಂತರ ಸೃಷ್ಟಿಸಿದೆ.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನಿಯತ್ತಿ ಸುಡುವ ಬಿಸಿಲಿದ್ದರು, ಸಂಜೆ ವೇಳೆಗೆ ಬಿರುಗಾಳಿಯೊಂದಿಗೆ ಶುರುವಾದ ಮಳೆ ಗ್ರಾಮದಲ್ಲಿ ದೊಡ್ಡ ಮಟ್ಟದ ಹಾನಿಗೆ ಕಾರಣವಾಯಿತು. ಹಲವು ಬೃಹತ್ ಮರಗಳು ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿದ ಘಟನೆ ನಡೆದಿದೆ.
ಬಿರುಗಾಳಿಯ ತೀವ್ರತೆಗೆ ಕೆಲವು ಮನೆಗಳು ಮತ್ತು ಅಂಗಡಿಗಳ ತಾತ್ಕಾಲಿಕ ಶೆಡ್ ಗಳು ಕೂಡ ಹಾರಿ ಹೋಗಿರುವುದು ಕಂಡುಬಂದಿದೆ. ಈ ಘಟನೆಗೆ ಗ್ರಾಮಸ್ಥರು ಬೆಚ್ಚಿಬಿದ್ದಿದ್ದು, ಹಲವರು ಮನೆ ಒಳಗೆ ಆಶ್ರಯ ಪಡೆದು ಕೆಡಕಿ ಮೂಲಕ ಮಳೆ ಅವಾಂತರವನ್ನು ವೀಕ್ಷಿಸಿದ್ದಾರೆ. ಕೆಲವರು ಈ ದೃಶ್ಯಗಳನ್ನು ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ರಸ್ತೆ ಮೇಲೆ ಮರ ಬಿದ್ದ ಕಾರಣ ಕೆಳಕಾಲ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಪ್ರಯಾಣಿಕರು ತೊಂದರೆ ಅನುಭವಿಸಿದ್ದಾರೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.
ಸತತ 1 ಗಂಟೆಗೂ ಅಧಿಕ ಕಾಲ ಮಳೆ ಆಯಿತು. ಆಮೇಲೆ ಮಳೆ ನಿಂತ ಮೇಲೆ ಗ್ರಾಮಸ್ಥರು, ಗ್ರಾಮ ಪಂಚಾಯಿತಿ ಸಿಬ್ಬಂದಿ ರಸ್ತೆ ಮೇಲೆ ಬಿದ್ದಿದ ಮರ ವಿದ್ಯುತ್ ಕಂಬಗಳನ್ನು ತೆರೆವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಬೆಳಗಾವಿ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸಾಯಂಕಾಲ ಆಗುತ್ತಿದ್ದಂತೆ ಅಲ್ಲಲ್ಲಿ ಜೋರಾದ ಮಳೆ, ಬಿರುಗಾಳಿ ಬೀಸುತ್ತಿದೆ. ಮಳೆಯಾದರೆ ಏನು ಸಮಸ್ಯೆ ಇಲ್ಲ. ಆದರೆ ಭಾರಿ ಪ್ರಮಾಣದ ಗಾಳಿಯಿಂದ ಮರ,ವಿದ್ಯುತ್ ಕಂಬಗಳು ಬೀಳುತ್ತಿರುವುದು ಜನರಲ್ಲಿ ಭೀತಿ ಹುಟ್ಟಿಸಿದ್ದು ಮಾತ್ರ ಸುಳ್ಳಲ್ಲ.
ಚಿಕ್ಕಮಂಗಳೂರು ಜಿಲ್ಲೆಯಲ್ಲಿ ಹಲವೆಡೆ ಧಾರಾಕಾರ ಮಳೆ ಮುಂದುವರಿದಿದ್ದು, ಜನಜೀವಕ್ಕೂ ಪರಿಣಾಮ ಬೀರಿದೆ. ಸೋಮವಾರ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಗಬ್ಗಲ್ ಬಳಿಯ ಕಲ್ಮನೆ ಗ್ರಾಮದಲ್ಲಿ ಭಾರಿ ಗಾಳಿ ಮತ್ತು ಮಳೆಯೂ ಮದುವೆ ಸಂಭ್ರಮವನ್ನೇ ಅಸ್ತವ್ಯಸ್ತಗೊಳಿಸಿದೆ.
ಮದುವೆ ಸಮಾರಂಭದಲ್ಲಿ ಊಟಕ್ಕಾಗಿ ಹಾಕಲಾಗಿದ್ದ ಶಾಮಿಯಾನ ಟೆಂಟ್ ಬಿರುಗಾಳಿಯ ರಭಸಕ್ಕೆ ಮುರಿದು ಬಿದ್ದಿದ್ದು, ಕುರ್ಚಿಗಳು ಸಹ ಹಾರಿ ಹೋಗಿರುವ ಘಟನೆ ನಡೆದಿದೆ. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯ ಪರಿಣಾಮ ಸಂಬಂಧಿಕರು ಹಾಗೂ ಸ್ನೇಹಿತರು ಪರದಾಡುವಂತಾಯಿತು.
ಮಳೆ ನಿಲ್ಲುವವರೆಗೂ ಅತಿಥಿಗಳು ಊಟಕ್ಕೆ ಹರಸಾಹಸಪಟ್ಟಿದ್ದು, ನಂತರ ಲಭ್ಯವಿದ್ದ ಜಾಗದಲ್ಲಿ ನಿಂತು ಊಟ ಮಾಡಿ ತೆರೆಳಿದ್ದಾರೆ. ಕಲ್ಮನೆ ಗ್ರಾಮದ ರೋಹಿಣಿ ಮತ್ತು ಸಕಲೇಶಪುರ ತಾಲೂಕಿನ ಹೆನ್ನಾಳ್ಳಿ ಗ್ರಾಮದ ಗಗನ್ ಅವರ ವಿವಾಹ ನಡೆಯುತ್ತಿದ್ದ ಸಂದರ್ಭದಲ್ಲಿ ಏಕಾಏಕಿ ಆರಂಭವಾದ ಗಾಳಿ ಮಳೆಯಿಂದ ಮದುವೆ ಮನೆ ಸಂಪೂರ್ಣ ಅಸ್ತವ್ಯಸ್ತ ಗೊಂಡಿತು.
Also Read: