<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Trending

ಅಮೆರಿಕ vs ಇರಾನ್ : ಯುದ್ಧ ಮತ್ತೆ ಆರಂಭವಾಗುತ್ತದಾ?

ಅಮೆರಿಕ vs ಇರಾನ್ : ಯುದ್ಧ ಮತ್ತೆ ಆರಂಭವಾಗುತ್ತದಾ?
Summary: With tensions between the United States and Iran escalating again, global discussions are underway about the possibility of war. Political and military activity in the Middle East has intensified, with reports that Iran is mobilizing its military.

belagavi news:

ಅಮೇರಿಕ ಇರಾನ್ ನಡುವಿನ ಉದ್ವಿಗ್ನತೆ ಮುಂದುವರಿಕೆ ಅಮೆರಿಕ ಮತ್ತು ಇರಾನ್ ನಡುವಿನ ಕದನ ವಿರಾಮ ಜಾರಿಯಲ್ಲಿದ್ದರೂ, ಇಬ್ಬರ ನಡುವೆ ಇರಾನ್ ಅ ವಿಶ್ವಾಸ ಇನ್ನೂ ಕಡಿಮೆಯಾಗಿಲ್ಲ, ಇತ್ತೀಚಿನ ಬೆಳವಣಿಗೆಯಲ್ಲಿ ಇರಾನ್ ಅಧಿಕಾರಿಗಳು ಅಮೆರಿಕ ಯಾವುದೇ ಒಪ್ಪಂದಕ್ಕೆ ಸಂಪೂರ್ಣವಾಗಿ ಬದ್ಧವಾಗಿಲ್ಲ ಎಂದು ಆರೋಪಿಸಿದ್ದಾರೆ. ಈ ಹೇಳಿಕೆಗಳು ಎರಡು ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಗಂಭೀರ ಗೊಳಿಸುವ ಸಾಧ್ಯತೆ ಇದೆ.

ಟೆಹ್ರಾನ್ (ಇರಾನ್): ಅಮೇರಿಕ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಮತ್ತೊಮ್ಮೆ ತೀವ್ರ ಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ. ಯುದ್ಧ ಮತ್ತಿ ಆರಂಭವಾಗುವ ಸಾಧ್ಯತೆ ಇದೆ ಎಂದು ಖತಮ್ ಅಲ್ ಅನ್ಬಿಯಾ ಕೇಂದ್ರ ಪ್ರಧಾನ ಕಛೇರಿಯ ಉಪ ನಿರೀಕ್ಷಕ ಸರ್ದಾರ್ ಅಸಾದಿ ತಿಳಿಸಿದ್ದಾರೆ.

ಇಬ್ಬರ ನಡುವೆ ಪ್ರಸ್ತುತ ಕದನ ವಿರಾಮ ಜಾರಿಯಲ್ಲಿದ್ದರೂ ಅಮೆರಿಕ ಯಾವುದೇ ಒಪ್ಪಂದಕ್ಕೆ ಬದ್ಧವಾಗಿಲ್ಲ ಎಂದು ಇರಾನ್ ಆರೋಪಿಸಿದೆ. ಈ ಹೇಳಿಕೆಗಳು ಎರಡು ರಾಷ್ಟ್ರಗಳ ನಡುವಿನ ಅವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸುವ ಸೂಚನೆ ನೀಡುತ್ತಿವೆ.

Sponsored

ಇದಲ್ಲದೆ, ತೈಲ್ ಬೆಲೆಗಳ ಕುಸಿತವನ್ನು ತಡೆಯುವ ಗುರಿಯನ್ನು ಇರಾನ್ ಹೊಂದಿದೆ ಎಂದು ತಿಳಿಸಲಾಗಿದೆ. ಅಮೇರಿಕ ಸೃಷ್ಟಿಸಿರುವ ಅವ್ಯವಸ್ಥೆಯಿಂದ ಹೊರಬರುವ ಪ್ರಯತ್ನದಲ್ಲಿದ್ದೇವೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದಿಂದ ನಡೆಯಬಹುದಾದ ಯಾವುದೇ ದಾಳಿಯನ್ನು ಎದುರಿಸಲು ತಮ್ಮ ಸೇನೆ ಸಂಪೂರ್ಣ ಸಜ್ಜಾಗಿದೆ ಎಂದು ಇರಾನ್ ಎಚ್ಚರಿಕೆ ನೀಡಿದೆ.

ಇರಾನ್-ಅಮೆರಿಕ ಸಂಘರ್ಷ ಭೀತಿ ಹೆಚ್ಚಳ:

ಇರಾನ್ ಮತ್ತು ಅಮೆರಿಕ ನಡುವಿನ ಉದ್ವಿಗ್ನತೆ ಮತ್ತೆ ಸಂಘರ್ಷದತ್ತ ಸಾಗುವ ಲಕ್ಷಣಗಳು ಕಾಣಿಸುತ್ತಿವೆ. ಅಮೆರಿಕ ಯಾವುದೇ ಒಪ್ಪಂದಗಳಿಗೆ ಬದ್ಧವಾಗಿಲ್ಲ ಎಂಬುದಕ್ಕೆ ಪುರಾವೆಗಳು ದೊರೆಯುತ್ತಿವೆ ಎಂದು ವರದಿಗಳು ಸೂಚಿಸುತ್ತಿವೆ. ಗಲ್ಫ್ ಪ್ರದೇಶದ ವಿವಿಧ ದೇಶಗಳಲ್ಲಿನ ಅಮೆರಿಕಾದ ಸೇನಾ ನೆಲೆಗಳಿಗೆ ಇರಾನ್ ಮಹತ್ತರ ಹಾನಿಯನ್ನುಂಟುಮಾಡಿದೆ ಎಂದು ಸಿಎನ್ ಎನ್ ತನಿಕೆ ವರದಿ ತಿಳಿಸಿದೆ.

ಕುವೈತನ ಕ್ಯಾಂಪ್ ಬುಹ್ರಿಂಗ್ ಪ್ರವೇಶದಲ್ಲಿ ಇರುವ ಅತಿ ದೊಡ್ಡ ಯುಎಸ್ ಮಿಲಿಟರಿ ಕೇಂದ್ರವು ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಯಿಂದ ಗಂಭೀರವಾಗಿ ಹಾನಿಗೊಳಗಾಗಿದೆ. ದಾಳಿಯ ಪರಿಣಾಮವಾಗಿ ಆ ಪ್ರದೇಶ ಬಹುತೇಕ ಖಾಲಿಯಾಗಿದ್ದು, ಭದ್ರತಾ ಕ್ರಮಗಳು ಹೆಚ್ಚಿಸಲಾಗಿದೆ. ಒಟ್ಟಾರೆ, ಇರಾನ್ ದಾಳಿಗಳಿಂದ ಎಂಟು ದೇಶಗಳಲ್ಲಿ ಕನಿಷ್ಠ 16 ಸೇನಾ ನೆಲೆಗಳಿಗೆ ಹಾನಿಯಾಗಿದೆ ಎಂದು ವರದಿಗಳು ತಿಳಿಸಿವೆ.

Sponsored

ಇದರ ಜೊತೆಗೆ ಓಮನ್ ಕೊಲ್ಲಿ ಹಾಗೂ ಸುತ್ತಮುತ್ತಲಿನ ಪ್ರಮುಖ ಸಮುದ್ರ ಮಾರ್ಗಗಳಲ್ಲಿ ಅಮೆರಿಕಾದ ದಿಗ್ಬಂಧನದಿಂದ ಇರಾನ್ ಗೆ ಬಾರಿ ಆರ್ಥಿಕ ನಷ್ಟ ಉಂಟಾಗಿದೆ. ಸುಮಾರು 4.8 ಬಿಲಿಯನ್ ಡಾಲರ್ ತೈಲ ಆದಾಯವನ್ನು ಕಳೆದುಕೊಂಡಿರುವುದಾಗಿ ಅಂದಾಜಿಸಲಾಗಿದೆ. ಈ ಬೆಳವಣಿಗೆ ಟೆಹ್ರಾನ್ ಮೇಲಿನ ಆರ್ಥಿಕ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಪೆಂಟಗನ್ ಅಂದಾಜು ಮಾಡಿದೆ ಎಂದು ಆಕ್ಸಿಯೋಸ್ ವರದಿ ತಿಳಿಸಿದೆ.

ಹಾರ್ಮುಜ್ ಜಲಸಂಧಿಯ ಮೂಲಕ ಸುರಕ್ಷಿತವಾಗಿ ಹಾದು ಹೋಗಲು ಇರಾನ್ ಗೆ ಶುಲ್ಕವನ್ನು ಪಾವತಿ ಮಾಡಿದರೆ ನಿರ್ಬಂಧನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಹಡಗು ಕಂಪನಿಗಳಿಗೆ ಎಚ್ಚರಿಕೆ ಕೂಡ ರವಾನಿಸಿದೆ.

ಈ ಪ್ರದೇಶದಲ್ಲಿನ ಅಮೆರಿಕದ ಜಾರಿ ಕಾರ್ಯಚರಣೆಗಳಿಂದ ಉಂಟಾದ ಅಡಚಣೆಗಳ ಪರಿಣಾಮವಾಗಿ ಇರಾನ್ ಗೆ ಸುಮಾರು 5 ಬಿಲಿಯನ್ ಯು ಎಸ್ ಡಾಲರ್ ಮೌಲ್ಯದ ತೈಲ ಆದಾಯ ನಷ್ಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನುಮೋದಿತ ಕಡಲ ವ್ಯಾಪಾರ ಮತ್ತು ಇಂಧನ ರಫ್ತುಗಳನ್ನು ಗುರಿಯಾಗಿಸಿಕೊಂಡ ಕ್ರಮಗಳಿಂದ ಈ ಆರ್ಥಿಕ ಹೊಡೆತ ಉಂಟಾಗಿದೆ ಎಂದು ಹೇಳಲಾಗಿದೆ.

ಜಾಗತಿಕ ತೈಲ ಸಂಚಾರದ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯ ಬಳಿ ಹಡಗು ಮಾರ್ಗಗಳ ಕುರಿತು ನಡೆಯುತ್ತಿರುವ ಉದ್ವಿಗ್ನತೆಯ ಮಧ್ಯೆ ಈ ವರದಿ ಬಂದಿದೆ.

Sponsored

Also Read:

ಗ್ಯಾಸ್ ದರ ಹೆಚ್ಚಳಕ್ಕೆ ವಿರೋಧ : ಮೋದಿಯವರಿಗೆ ಹೋಟೆಲ್ ಅಸೋಸಿಯೇಷನ್ ಮನವಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online