Belagavi News:
ಅಮರಾವತಿ: ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜೊನ್ನಗಿರಿಯಲ್ಲಿ ದೇಶದ ಅತಿ ದೊಡ್ಡ ಖಾಸಿಗೆ ವಲಯದ ಚಿನ್ನದ ಗಣಿಗಾರಿಕೆ ಮತ್ತು ಸಂಸ್ಕರಣಾ ಯೋಜನೆಗೆ ಇಂದು ಮುಖ್ಯಮಂತ್ರಿ ಎನ್ .ಚಂದ್ರಬಾಬು ನಾಯ್ಡು ಚಾಲನೆ ನೀಡಿಲಿದ್ದಾರೆ. ಸುಮಾರು 405 ಕೋಟಿ ರೂ.ವೆಚ್ಚದ ಈ ಮಹತ್ವಾಕಾಂಕ್ಷಿ ಯೋಜನೆ ರಾಜ್ಯದಲ್ಲಿ ವಾಣಿಜ್ಯಕ ಚಿನ್ನದ ಉತ್ಪಾದನೆಗೆ ಹೊಸ ಅಧ್ಯಾಯವನ್ನು ಆರಂಭಿಸುವ ನಿರೀಕ್ಷೆ ಮೂಡಿಸಿದೆ.
ಜಿಯೋ ಮೈಸೂರು ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಡೆಕ್ಕನ್ ಗೋಲ್ಡ್ ಮೈನ್ಸ್ ಲಿಮಿಟೆಡ್ ಜಂಟಿಯಾಗಿ ಈ ಯೋಜನೆಯನ್ನು ಅಭಿವೃದ್ಧಿಪಡಿಸಿವೆ. ರಾಜ್ಯದ ಅತಿದೊಡ್ಡ ಚಿನ್ನದ ಗಣಿ ಎಂದು ಗುರುತಿಸಲ್ಪಟ್ಟಿರುವ ಈ ಯೋಜನೆ ಆಂಧ್ರಪ್ರದೇಶದ ಕೈಗಾರಿಕಾ ಮತ್ತು ಆರ್ಥಿಕ ಬೆಳವಣಿಗೆಗೆ ಪ್ರಮುಖ ಕೊಡುಗೆ ನೀಡಲಿದೆ.
ಸಾಂಪ್ರದಾಯಿಕವಾಗಿದೆ ದೇಶದ ಚಿನ್ನದ ಗಣಿಗಾರಿಕೆಯಲ್ಲಿ ಹೆಸರಾಗಿರುವ ಕರ್ನಾಟಕದ ಕೋಲಾರ ಗೋಲ್ಡ್ ಫೀಲ್ಡ್ಸ್ ಗೆ ಪರ್ಯಾಯವಾಗಿ ಬೆಳೆಯುವ ಸಾಮರ್ಥ್ಯವನ್ನು ಜೊನ್ನಗಿರಿ ಯೋಜನೆ ಹೊಂದಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಈ ಯೋಜನೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಿದ ಬಳಿಕ ರಾಜ್ಯ ಖಜಾನೆಗೆ ಕೋಟಿ ಕೋಟಿ ರೂಪಾಯಿ ಆದಾಯ ಹರಿದುಬರುವ ಸಾಧ್ಯತೆ ಇದೆ.
ಯೋಜನೆಗಾಗಿ ಈಗಾಗಲೇ ಆಂಧ್ರಪ್ರದೇಶ ಸರಕಾರ 1,500 ಎಕರೇ ಭೂಮಿಯನ್ನು ಮಂಜೂರು ಮಾಡಿದೆ. ಮೊದಲ ಹಂತದಲ್ಲಿ 600 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ಚಟುವಟಿಕೆಗಳು ಆರಂಭವಾಗಲಿದ್ದು. ಅಗತ್ಯ ಸಂಸ್ಕಾರಣಾ ಘಟಕಗಳ ನಿರ್ಮಾಣವು ಪೂರ್ಣಗೊಂಡಿದೆ. ಉತ್ಪಾದನಾ ಸಾಮರ್ಥ್ಯ ಹೆಚ್ಚಾದಂತೆ ಎರಡನೆ ಹಂತದಲ್ಲಿ ಉಳಿದ ಪ್ರದೇಶಕ್ಕೂ ಯೋಜನೆಯನ್ನು ವಿಸ್ತರಿಸುವ ಯೋಜನೆ ರೂಪಿಸಲಾಗಿದೆ.
ಜೊನ್ನಗಿರಿ ಗೋಲ್ಡ್ ಮೈನ್ಸ್ ಯೋಜನೆಯಿಂದ ಸ್ಥಳೀಯ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚುವುದರ ಜೊತೆಗೆ, ಕರ್ನೂಲ್ ಜಿಲ್ಲೆಯಲ್ಲಿ ಕೈಗಾರಿಕಾ ಅಭಿವೃದ್ಧಿಗೆ ಹೊಸ ಉತ್ತೇಜನ ಸಿಗಲಿದೆ. ರಾಜ್ಯದ ಖನಿಜ ಸಂಪನ್ಮೂಲಗಳ ಸದ್ಬಳಕೆಯ ಮೂಲಕ ಆರ್ಥಿಕ ಪ್ರಗತಿಗೆ ವೇಗ ನೀಡುವ ಮಹತ್ವದ ಹೆಜ್ಜೆಯಾಗಿ ಈ ಯೋಜನೆ ಪರಿಗಣಿಸಲಾಗಿದೆ.
ಜೊನ್ನಗಿರಿ ಗೋಲ್ಡ್ ಮೈನ್ಸ್ ಘಟಕವು ತನ್ನ ಕಾರ್ಯಾಚರಣೆಯ ಮೊದಲ ವರ್ಷದಲ್ಲೇ ಸುಮಾರು 400ಕೆಜಿ ಚಿನ್ನ ಉತ್ಪಾದಿಸುವ ಗುರಿ ಹೊಂದಿದೆ. ಮುಂದಿನ ವರ್ಷದಿಂದ ವಾರ್ಷಿಕ ಉತ್ಪಾದನೆ 900 ಕೆಜಿಗೆ ಏರಿಕೆಯಾಗಲಿದ್ದು. ಖಚಿತವಾಗಿ ಹಂತ ಹಂತವಾಗಿ ಪ್ರತಿ ವರ್ಷ ಎರಡು ಟನ್ ಚಿನ್ನ ಉತ್ಪಾದಿಸುವ ಮಟ್ಟಕ್ಕೆ ವಿಸ್ತರಣೆಗೊಳ್ಳುವ ಯೋಜನೆ ರೂಪಿಸಲಾಗಿದೆ.
ಈ ಯೋಜನೆಯ ವಿಶೇಷತೆ ಎಂದರೆ ರಾಜ್ಯ ಸರ್ಕಾರಕ್ಕೆ ಗಣನೀಯ ಪ್ರಮಾಣದ ಆದಾಯ ಹರಿದು ಬರುವುದು. ಗಣಿಯಲ್ಲಿ ಉಪಾದನೆ ಆಗುವ ಚಿನ್ನದ ಮೌಲ್ಯದ ಮೇಲೆ ಆಂಧ್ರಪ್ರದೇಶ ಸರ್ಕಾರಕ್ಕೆ ಶೇಕಡಾ 4ರಾಯಧನ ಲಬಿಸಲಿದೆ. ಪ್ರಸ್ತುತ ಅಂದಾಜಿನ ಪ್ರಕಾರ, ಮೊದಲ ಹಂತದಲ್ಲಿ 400 ಕೆಜಿ ಚಿನ್ನದ ಉತ್ಪಾದನೆಯಿಂದ ರಾಜ್ಯ ಖಜಾನೆಗೆ ಸುಮಾರು 57ಕೋಟಿ ರೂ.ಆದಾಯ ಸಿಗುವ ನಿರೀಕ್ಷೆಯಿದ್ದು, ಉತ್ಪಾದನೆ 900 ಕೆಜಿಗೆ ಏರಿದ ಬಳಿಕ ಈ ಮೊತ್ತ 144ಕೋಟಿ ರೂ.ವರೆಗೆ ಹೆಚ್ಚಾಗಲಿದೆ ಎಂದು ಸರ್ಕಾರ ತಿಳಿಸಿದೆ.
ಆರ್ಥಿಕ ಲಾಭದ ಜೊತೆಗೆ, ಈ ಯೋಜನೆ ಸ್ಥಳೀಯ ಮಟ್ಟದಲ್ಲಿ ಉದ್ಯೋಗ ಸೃಷ್ಟಿಗೊ ಕಾರಣವಾಗಲಿದೆ. ಸುಮಾರು 700ಮಂದಿಗೆ ನೇರ ಮತ್ತು ಪರೋಕ್ಷ ಉದ್ಯೋಗಾವಕಾಶಗಳು ದೊರೆಯಲಿದ್ದು, ಕರ್ನೂಲ್ ಜಿಲ್ಲೆಯ ಕೈಗಾರಿಕಾ ಬೆಳವಣಿಗೆಗೆ ಹೊಸ ಚೈತನ್ಯ ಸಿಗಲಿದೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಜೊನ್ನಗಿರಿಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ನಂತರ ಪಟ್ಟಿಕೊಂಡ ವಿಧಾನಸಭಾ ಕ್ಷೇತ್ರದ ಟಿಡಿಪಿ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರೊಂದಿಗೆ ಸಂವಾದ ನಡೆಸಲಿದ್ದಾರೆ.
ರಾಜ್ಯದ ಖನಿಜ ಸಂಪನ್ಮೂಲಗಳ ಸದ್ಬಳಕೆಯ ಮೂಲಕ ಆದಾಯ ಹೆಚ್ಚಿಸುವ ಮತ್ತು ಕೈಗಾರಿಕಾ ಹೊಡಿಕೆಗಳನ್ನು ಆಕರ್ಷಿಸುವ ಪ್ರಮುಖ ಯೋಜನೆಗಳಲ್ಲಿ ಜೊನ್ನಗಿರಿ ಗೋಲ್ಡ್ ಮೈನ್ಸ್ ಒಂದಾಗಿ ಹೊರಹಮ್ಮಿದೆ.
Also Read:
ಮಹಾರಾಷ್ಟ್ರದಲ್ಲಿ ನೀರಿಗಾಗಿ ಹಾಹಾಕಾರ ; ಕರ್ನಾಟಕಕ್ಕೆ ನೀರು ಬಿಡದಿರಲು ಕಾರಣ ತಿಳಿಸಿದ ಸತೀಶ್ ಜಾರಕಿಹೊಳಿ"