BELAGAVI NEWS :
ಮುಂಬೈ: ಮಹಾರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆವೊಂದು ನಡೆದಿದ್ದು, Uddhav Thackeray ನೇತೃತ್ವದ ಶಿವಸೇನೆ (ಯುಬಿಟಿ) ಬಣಕ್ಕೆ ಭಾರೀ ಹಿನ್ನಡೆಯಾಗಿದೆ. ಪಕ್ಷದ ಒಟ್ಟು 9 ಲೋಕಸಭಾ ಸಂಸದರ ಪೈಕಿ 6 ಮಂದಿ ಬಂಡಾಯ ಎದ್ದು, Eknath Shinde ನೇತೃತ್ವದ ಶಿವಸೇನೆ ಬಣವನ್ನು ಸೇರಲು ಮುಂಬೈ ತಲುಪಿದ್ದಾರೆ ಎನ್ನಲಾಗಿದೆ.
ಮಹಾರಾಷ್ಟ್ರ ವಿಧಾನಸಭೆಯ ಮುಂಗಾರು ಅಧಿವೇಶನದ ಮೊದಲ ದಿನವೇ ಈ ರಾಜಕೀಯ ಹೈಡ್ರಾಮಾ ನಡೆದಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ವಿಧಾನಸಭೆ ಆವರಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಏಕನಾಥ್ ಶಿಂಧೆ, ತಾವು ರೂಪಿಸಿದ್ದ, " ಆಪರೇಷನ್ ಟೈಗರ್" ಯಶಸ್ವಿಯಾಗಿದೆ ಎಂದು ಹೇಳಿಕೊಂಡಿದ್ದಾರೆ ಬಳಿಕ ಈ ಆರು ಸಂಸದರು ಮುಂಬೈನ ಮಲಬಾರ್ ಹಿಲ್ಸ್ ಪ್ರದೇಶದಲ್ಲಿರುವ ಶಿಂಧೆ ಅವರ ' ನಂದನವನ' ನಿವಾಸಕ್ಕೆ ಭೇಟಿ ನೀಡಿರುವುದಾಗಿ ವರದಿಯಾಗಿದೆ.
ಉದ್ದವ್ ಠಾಕ್ರೆ ಬಣದ 9 ಸಂಸದರ ಪೈಕಿ 6 ಮಂದಿ ಒಂದೇ ವೇಳೆ ಶಿಂಧೆ ಬಣಕ್ಕೆ ಬೆಂಬಲ ಸೂಚಿಸುತ್ತಿರುವುದು ರಾಜಕೀಯವಾಗಿ ಮಹತ್ವದ ಬೆಳವಣಿಗೆಯಾಗಿದೆ. ಇದು ಒಟ್ಟು ಸಂಸದರ ಮೂರನೇ ಎರಡರಷ್ಟು ಸಂಖ್ಯೆಯಾಗಿರುವುದರಿಂದ, ಪಕ್ಷಾಂತರ ನಿಷೇಧ ಕಾಯ್ದೆಯಡಿ ಅವರನ್ನು ಅನರ್ಹಗೊಳಿಸುವುದು ಕಾನೂನಾತ್ಮಕವಾಗಿ ಸವಾಲಿನ ವಿಷಯವಾಗಬಹುದು ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ನಡೆಯುತ್ತಿವೆ.
ಈ ಬೆಳವಣಿಗೆಯಿಂದ ಲೋಕಸಭೆಯಲ್ಲಿ ಉದ್ದವ್ ಠಾಕ್ರೆ ಬಣದ ಬಲ ಕುಗ್ಗುವ ಸಾಧ್ಯತೆ ಇದ್ದು, ಮಹಾರಾಷ್ಟ್ರದಲ್ಲಿ Shiv Sena (UBT) ಮತ್ತು Shiv Sena ನಡುವಿನ ರಾಜಕೀಯ ಪೈಪೋಟಿ ಮತ್ತಷ್ಟು ತೀವ್ರಗೊಳ್ಳುವ ನಿರೀಕ್ಷೆಯಿದೆ. ರಾಜ್ಯದ ರಾಜಕೀಯ ಸಮೀಕರಣಗಳ ಮೇಲೂ ಈ ಬೆಳವಣಿಗೆ ಮಹತ್ವದ ಪರಿಣಾಮ ಬೀರುವ ಸಾಧ್ಯತೆ ಇದೆ.
ಶಿವಸೇನೆ (ಯುಬಿಟಿ) ಬಣಕ್ಕೆ ಮತ್ತೊಂದು ರಾಜಕೀಯ ಆಘಾತ ಎದುರಾಗಿರುವುದಾಗಿ ವರದಿಯಾಗಿದೆ. ಪಕ್ಷದ 6 ಸಂಸದರು ಬಂಡಾಯ ಎದ್ದು, ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ನಿವಾಸಕ್ಕೆ ಭೇಟಿ ನೀಡಿರುವುದು ಮಹಾರಾಷ್ಟ್ರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ. ಈ ಸಂಸದರು ಶೀಘ್ರದಲ್ಲೇ ಅಧಿಕೃತವಾಗಿ ಶಿಂಧೆ ನೇತೃತ್ವದ ಶಿವಸೇನೆ ಬಣವನ್ನು ಸೇರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮೂಲಗಳ ಪ್ರಕಾರ, ಶಿಂಧೆ ನಿವಾಸಕ್ಕೆ ತಲುಪಿರುವ ಸಂಸದರು ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ರಾಜಕೀಯ ನಿರ್ಧಾರಕ್ಕೆ ಬಗ್ಗೆ ಅಧಿಕೃತ ಮಾಹಿತಿ ನೀಡುವ ನಿರೀಕ್ಷೆಯಿದೆ. ಈ ಬೆಳವಣಿಗೆಯು ಉದ್ದವ್ ಠಾಕ್ರೆ ನೇತೃತ್ವದ ಬಣಕ್ಕೆ ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ. ಇದೇ ವೇಳೆ, ಪಕ್ಷದೊಳಗಿನ ಬೆಳವಣಿಗೆಗಳ ಕುರಿತು ಚರ್ಚಿಸಲು ಉದ್ದವ್ ಠಾಕ್ರೆ ಇಂದು ಶಾಸಕರ ಸಭೆ ಕರೆದಿದ್ದರು. ಆದರೆ ಈ ಸಭೆಗೆ ಮೂವರು ಶಾಸಕರು ಗೈರಾಗಿರುವುದು ರಾಜಕೀಯ ವಲಯದಲ್ಲಿ ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.
ಉದ್ದವ್ ಠಾಕ್ರೆ ಅವರ ಶಿವಸೇನೆ ತೊರೆದು ಏಕನಾಥ್ ಶಿಂಧೆ ಜೊತೆ ಕೈಜೋಡಿಸಲು ಸಜ್ಜಾಗಿರುವ 6 ಸಂಸದರ ಪಟ್ಟಿ ಇಲ್ಲಿದೆ.
ಸಂಜಯ್ ದಿನಾ ಪಾಟೀಲ್ (ಮುಂಬೈ)
ಸಂಜಯ್ ಜಾಧವ್ (ಪರಭಣಿ)
ಸಂಜಯ್ ದೇಶ್ ಮುಖ್ (ಯಾವತ್ಮಲ್ - ವಾಶಿಮ್)
ಓಂಪ್ರಕಾಶ್ ನಿಂಬಾಳ್ಕರ್ (ಧಾರಾಶಿವ್)
ಭೌಸಾಹೇಬ್ ವಾಕಚೌರೆ (ಶಿರಡಿ)
ನಾಗೇಶ್ ಪಾಟೀಲ್ ಅಷ್ಟೀಕರ್ ( ಹಿಂಗೋಲಿ)
ಈ ಪೈಕಿ ನಾಲ್ವರು ಸಂಸದರು ಈಗಾಗಲೇ ಮುಂಬೈ ವಿಮಾನ ನಿಲ್ದಾಣಕ್ಕೆ ತಲುಪಿದ್ದು, ಉಳಿದ ಇಬ್ಬರೂ ಕೂಡ ಅವರನ್ನು ಸೇರಿಕೊಂಡಿದ್ದಾರೆ. ಬಂಡಾಯ ಸಂಸದರಾದ ನಾಗೇಶ್ ಪಾಟೀಲ್ ಮತ್ತು ಓಂಪ್ರಕಾಶ್ ರಾಜೆ ನಿಂಬಾಳ್ಕರ್ ತಾವು ಬಣ ಬದಲಾಯಿಸುತ್ತಿರುವುದನ್ನು ಈಗಾಗಲೇ ಖಚಿತಪಡಿಸಿದ್ದಾರೆ.
ಬಂಡಾಯದ ಬೆಳವಣಿಗೆಗಳ ನಡುವೆ ಶಿವಸೇನಾ (UBT) ನಾಯಕ ಆದಿತ್ಯ ಠಾಕ್ರೆ ಸಂಸದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಅವರು ಹೇಳಿದ್ದು, ಈ ಸಂಸದರು ಮಹಾ ವಿಕಾಸ್ ಅಘಾಡಿ (MVA) ಹಾಗೂ ಇಂಡಿಯಾ ಒಕ್ಕೂಟದ ಬೆಂಬಲ, ಕಾಂಗ್ರೆಸ್ ಮತ್ತು ಎನ್ ಸಿಪಿ ನಾಯಕರ ಪ್ರಚಾರದ ಸಹಾಯದಿಂದ ಗೆಲುವು ಸಾಧಿಸಿದ್ದರು. ಆದರೆ ಈಗ ಪಕ್ಷಕ್ಕೆ ದ್ರೋಹ ಬಗೆಯುವ ಮೂಲಕ ತಮ್ಮ ರಾಜಕೀಯ ವಿಶ್ವಾಸಾರ್ಹತೆಯನ್ನು ತಾವೇ ಹಾಳು ಮಾಡಿಕೊಂಡಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಈ ನಡುವೆ, ಹೆಚ್ಚಿನ ನಾಯಕರು ಅಥವಾ ಶಾಸಕರು ಪಕ್ಷದಿಂದ ದೂರ ಸರಿಯದಂತೆ ತಡೆಯುವ ಉದ್ದೇಶದಿಂದ ಉದ್ದವ್ ಠಾಕ್ರೆ ಮುಂಬೈನ ನಾರಿಮನ್ ಪಾಯಿಂಟ್ ನಲ್ಲಿರುವ ' ಶಿವಾಲಯ' ದಲ್ಲಿ ಪಕ್ಷದ ಎಲ್ಲಾ ಶಾಸಕರು ಮತ್ತು ವಿಧಾನಪರಿಷತ್ ಸದಸ್ಯರ ತುರ್ತು ಸಭೆಯನ್ನು ನಡೆಸಿದ್ದಾರೆ.
Also Read:
ಪ್ರತಿ ದಿನ ಬೆಂಡೆಕಾಯಿ ತಿಂದರೆ ಏನಾಗುತ್ತದೆ?ಶುಗರ್ ನಿಯಂತ್ರಣಕ್ಕೆ ಬೆಂಡೆಕಾಯಿ ರಾಮಬಾಣವೇ? ಇಲ್ಲಿದೆ ಪರಿಹಾರ