BELAGAVI NEWS :
ಮಳೆಗಾಲಿನಲ್ಲಿ ಬೆಂಡೆಕಾಯಿ ತಿನ್ನಬಹುದೇ ಎಂಬ ಪ್ರಶ್ನೆಗೆ ಪೌಷ್ಟಿಕ ತಜ್ಞರ ಉತ್ತರ ಸ್ಪಷ್ಟವಾಗಿದೆ - ಸರಿಯಾದ ರೀತಿಯಲ್ಲಿ ಸ್ವಚ್ಛಗೊಳಿಸಿ, ಚೆನ್ನಾಗಿ ಬೇಯಿಸಿ ಸೇವಿಸಿದರೆ ಬೆಂಡೆಕಾಯಿ ಆರೋಗ್ಯಕ್ಕೆ ಪ್ರಯೋಜನಕಾರಿಯೇ ಹೊರತು ಹಾನಿಕಾರಕವಲ್ಲ.
ಬೆಂಡೆಕಾಯಿಯಲ್ಲಿ ಫೈಬರ್, ಬೆಂಡೆಕಾಯಿಯಲ್ಲಿ ಫೈಬರ್, ವಿಟಮಿನ್ ಸಿ, ವಿಟಮಿನ್ ಕೆ, ಪೊಲೆಟ್ ಹಾಗೂ ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ಜೀರ್ಣಕ್ರಿಯೆಯನ್ನು ಸುಧಾರಿಸಲು ಹಾಗೂ ರೋಗನಿರೋಧಕ ಶಕ್ತಿಯನ್ನು ಬೆಂಬಲಿಸಲು ಸಹಕಾರಿಯಾಗುತ್ತದೆ. ಮಳೆಗಾಲದಲ್ಲಿ ಸುಂಕಗಳ ಅಪಾಯ ಹೆಚ್ಚಾಗುವ ಕಾರಣ,ಪೌಷ್ಟಿಕಾಂಶ ಯುದ್ಧ ಆಹಾರವನ್ನು ಆಹಾರ ಕ್ರಮದಲ್ಲಿ ಸೇವಿಸಿಕೊಳ್ಳುವುದು ಮುಖ್ಯ.
ಆದರೆ ಈ ಋತುವಿನಲ್ಲಿ ತರಕಾರಿಗಳ ಮೇಲೆ ತೇವಾಂಶ, ಧೂಳು ಅಥವಾ ಸೂಕ್ಷ್ಮ ಜೀವಗಳ ಬೆಳವಣಿಗೆಯ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಬೆಂಡೆಕಾಯಿಯನ್ನು ಖರೀದಿಸುವಾಗ ತಾಜಾ ಮತ್ತು ಉತ್ತಮ ಗುಣಮಟ್ಟದದ್ದನ್ನು ಆಯ್ಕೆ ಮಾಡಬೇಕು. ಬಳಸುವ ಮೊದಲು ಚೆನ್ನಾಗಿ ತೊಳೆದು, ಅಗತ್ಯವಿದ್ದರೆ ಕೆಲ ನಿಮಿಷಗಳು ಉಪ್ಪು ನೀರಿನಲ್ಲಿ ನೆನೆಯಿಟ್ಟು ಸ್ವಚ್ಛಗೊಳಿಸುವುದು ಉತ್ತಮ. ಅರ್ಧ ಬೇಯಿಸಿದ ಅಥವಾ ಕಚ್ಚಾ ರೂಪದಲ್ಲಿ ಸೇವಿಸುವುದನ್ನು ತಪ್ಪಿಸುವುದು ಸುರಕ್ಷಿತ.
ಒಟ್ಟಿನಲ್ಲಿ, ಮಳೆಗಾಲದಲ್ಲಿ ಬೆಂಡೆಕಾಯಿ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸುವ ಅಗತ್ಯವಿಲ್ಲ. ಸ್ವಚ್ಛತೆ ಮತ್ತು ಸರಿಯಾದ ಅಡುಗೆ ವಿಧಾನಗಳನ್ನು ಪಾಲಿಸಿದರೆ, ಇದು ಆರೋಗ್ಯಕರ ಆಹಾರದ ಭಾಗವಾಗಿರಬಹುದು. ಮಳೆಗಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಪೌಷ್ಟಿಕ ಆಹಾರ,ಸಾಕಷ್ಟು ನೀರು ಹಾಗೂ ಉತ್ತಮ ಸ್ವಚ್ಛತಾ ಕ್ರಮಗಳನ್ನು ಅನುಸರಿಸುವುದು ಅತ್ಯಂತ ಮುಖ್ಯ.
ಮಳೆಗಾಲದಲ್ಲಿ ಬೆಂಡೆಕಾಯಿ ಸೇವಿಸಬಹುದೇ?
ಮಳೆಗಾಲದಲ್ಲಿ ಸಾಮಾನ್ಯವಾಗಿ ಜೀರ್ಣಕ್ರಿಯೆ ನಿಧಾನಗೊಳಿಸುವುದು, ತೇವಾಂಶ ಹೆಚ್ಚಾಗುವುದು ಹಾಗೂ ರೋಗನಿರೋಧಕ ಶಕ್ತಿ ಕುಂಠಿತಗೊಳ್ಳುವುದು ಸಾಮಾನ್ಯ. ಇಂತಹ ಸಂದರ್ಭಗಳಲ್ಲಿ ಪೌಷ್ಟಿಕಾಂಶಯುಕ್ತ ಆಹಾರಗಳ ಸೇವನೆ ಆರೋಗ್ಯವನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಬೆಂಡೆಕಾಯಿ ಮಳೆಗಾಲದಲ್ಲೂ ಸುರಕ್ಷಿತವಾಗಿ ಸೇವಿಸಬಹುದಾದ ತರಕಾರಿಗಳಲ್ಲಿ ಒಂದಾಗಿದೆ. ಇದರಲ್ಲಿ ಫೈಬರ್,ವಿಟಮಿನ್ ಸಿ, ಪೊಲೆಟ್ ಮತ್ತು ಆಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿದ್ದು, ದೇಹದ ಒಟ್ಟಾರೆ ಆರೋಗ್ಯಕ್ಕೆ ಸಹಕಾರಿಯಾಗುತ್ತದೆ.
ಬೆಂಡೆಕಾಯಿಂದ ಚರ್ಮದ ಆರೈಕೆ:
ಬೆಂಡೆಕಾಯಿಯಲ್ಲಿರುವ ನೈಸರ್ಗಿಕ ಜಲ್ ಅನ್ನು 'ಲೋಳೆ'ಎಂದು ಕರೆಯಲಾಗುತ್ತದೆ. ಈ ಲೋಳೆಯು ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿಯಾಗಿದೆ. ಮಳೆಗಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತವೆ. ಜೊತೆಗೆ,ಇದರಲ್ಲಿರುವ ಲೋಳೆಯು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸಿ ಕರುಳಿನ ಆರೋಗ್ಯವನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಇನ್ನೂ ಹಲವು ಪ್ರಯೋಜನಗಳು:
ಬೆಂಡೆಕಾಯಿಯಲ್ಲಿರುವ ಫೈಬರ್ ಮಲಬದ್ಧತೆಯನ್ನು ತಡೆಯಲು ನೆರವಾಗುತ್ತದೆ. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಕಾರಿಯಾಗಬಹುದು. ಜೊತೆಗೆ,ಇದು ಹೊಟ್ಟೆ ತುಂಬದ ಭಾವನೆಯನ್ನು ನೀಡುವ ಮೂಲಕ ಅನಗತ್ಯ ಹಸಿವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ತೂಕ ನಿಯಂತ್ರಣದಲ್ಲೂ ಸಹಕಾರಿಯಾಗಬಹುದು
ಬೆಂಡೆಕಾಯಿ ಭಾರತೀಯ ಅಡುಗೆಯಲ್ಲಿ ಸಾಮಾನ್ಯವಾಗಿ ಬಳಸುವ ಪೌಷ್ಟಿಕ ತರಕಾರಿಗಳಲ್ಲಿ ಒಂದಾಗಿದೆ. ಆಯುರ್ವೇದ ದೃಷ್ಟಿಯಿಂದ ನೋಡಿದರೆ, ಬೆಂಡೆಕಾಯಿ ದೇಹಕ್ಕೆ ತಂಪು ನೀಡುವ ಗುಣವನ್ನು ಹೊಂದಿದೆ ಎಂದು ಪರಿಗಣಿಸಲಾಗುತ್ತದೆ. ವಿಶೇಷವಾಗಿ ಬೇಸಿಗೆಯಲ್ಲಿ ಕಚ್ಚಾ ಅಥವಾ ಕಡಿಮೆ ಮಸಾಲೆ ಬಳಸಿ ತಯಾರಿಸಿದ ಬೆಂಡೆಕಾಯಿ ದೇಹದ ಉಷ್ಣತೆಯನ್ನು ಸಮತೋಲನದಲ್ಲಿಡಲು ಸಹಾಯಮಾಡುತ್ತದೆ. ಆದರೆ ಹೆಚ್ಚು ಎಣ್ಣೆ ಮತ್ತು ಮಸಾಲೆಯನ್ನು ಸೇರಿಸಿ ಅಡುಗೆ ಮಾಡಿದರೆ ಅದರ ಸ್ವಭಾವದಲ್ಲಿ ಸ್ವಲ್ಪ ಬದಲಾವಣೆ ಕಂಡುಬರಬಹುದು.
ಪೋಷಕಾಂಶಗಳ ಭಂಡಾರ:
ಬೆಂಡೆಕಾಯಿ ಕೇವಲ ರುಚಿಕರವಾದ ತರಕಾರಿ ಮಾತ್ರವಲ್ಲ, ಆರೋಗ್ಯಕ್ಕೆ ಅಗತ್ಯವಿರುವ ಹಲವು ಪೋಷಕಾಂಶಗಳ ಮೂಲವೂ ಹೌದು. ಇದರಲ್ಲಿ ಹಲವು ಖನಿಜಾಂಶಗಳು ದೊರೆಯುತ್ತವೆ. ಜೊತೆಗೆ,ಇದು ಕಡಿಮೆ ಕ್ಯಾಲೋರಿ ಹೊಂದಿರುವುದರಿಂದ ಆರೋಗ್ಯಕರ ಆಹಾರ ಕ್ರಮಕ್ಕೆ ಉತ್ತಮ ಆಯ್ಕೆಯಾಗಿದೆ.
ಹೃದಯದ ಆರೋಗ್ಯಕ್ಕೆ ಬೆಂಬಲ:
ಬೆಂಡೆಕಾಯಿಯಲ್ಲಿರುವ ಕರಗುವ ನಾರಿನಂಶ ದೇಹದಲ್ಲಿನ ಕೆಟ್ಟ ಕ್ಯಾಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ. ಹಲವು ಅಧ್ಯಯನಗಳ ಪ್ರಕಾರ, ನಿಯಮಿತವಾಗಿ ಬೆಂಡೆಕಾಯಿ ಸೇವಿಸುವವರಲ್ಲಿ ಟ್ರೈಗ್ಲಿಸರೈಡ್ ಗಳು, ಒಟ್ಟು ಕೊಲೆಸ್ಟ್ರಾಲ್ ಮತ್ತು ಎಲ್‌ಡಿಎಲ್ ಮಟ್ಟವನ್ನು ಕಡಿಮೆ ಮಾಡುವ ಸಾಧ್ಯತೆ ಇದೆ. ಇದೇ ವೇಳೆ ಎಚ್‌ಡಿಎಲ್ ಅಥವಾ ಉತ್ತಮ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗಲು ಸಹ ನೆರವಾಗಬಹುದು. ಈ ಕಾರಣಗಳಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೆಂಡೆಕಾಯಿ ಉಪಯುಕ್ತ ಆಹಾರವಾಗಿದೆ.
ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಹಕಾರಿ:
ಬೆಂಡೆಕಾಯಿಯಲ್ಲಿರುವ ಫೈಬರ್ ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವ ವೇಗವನ್ನು ನಿಧಾನಗೊಳಿಸುತ್ತದೆ. ಇದರಿಂದ ರಕ್ತದಲ್ಲಿನ ಗ್ಲೂಕೋಸ್ ಮತವನ್ನು ಸಮತೋಲನದಲ್ಲಿಡಲು ನೆರವಾಗಬಹುದು. ಮಧುಮೇಹದ ಅಪಾಯ ಇರುವವರು ಅಥವಾ ರಕ್ತದಲ್ಲಿನ ಸಕ್ಕರೆ ನಿಯಂತ್ರಣದಲ್ಲಿ ಇಡಲು ಬಯಸುವವರು ವೈದ್ಯರ ಸಲಹೆಯೊಂದಿಗೆ ತಮ್ಮ ಆಹಾರದಲ್ಲಿ ಬೆಂಡೆಕಾಯಿಯನ್ನು ಸೇರಿಸಬಹುದು.
ಜೀರ್ಣ ಕ್ರಿಯೆ, ಕಣ್ಣು ಮತ್ತು ಚರ್ಮದ ಆರೋಗ್ಯಕ್ಕೆ ಒಳ್ಳೆಯದು:
ಬೆಂಡೆಕಾಯಿಯಲ್ಲಿನ ನೈಸರ್ಗಿಕ ಲೋಳೆಯ ಗುಣ ಜೀರ್ಣ ಕ್ರಿಯೆಯನ್ನು ಸುಗಮಗೊಳಿಸಿ ಕರುಳಿನ ಆರೋಗ್ಯವನ್ನು ಉತ್ತಮಗೊಳಿಸಲು ನೆರವಾಗುತ್ತದೆ. ಇದರಲ್ಲಿರುವ ವಿಟಮಿನ್ ಎ ಕಣ್ಣಿನ ಆರೋಗ್ಯಕ್ಕೆ ಸಹಕಾರಿಯಾಗಿದರೆ, ವಿಟಮಿನ್ ಸಿ ಮತ್ತು ಆಂಟಿಆಕ್ಸಿಡೆಂಟ್ ಗಳು ಚರ್ಮದ ಕಾಂತಿ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.
ಬೆಂಡೆಕಾಯಿ ಸೇವನೆಯಿಂದ ಆರೋಗ್ಯಕ್ಕೆ ಸಿಗುವ ಅದ್ಭುತ ಲಾಭಗಳು:
ಬೆಂಡೆಕಾಯಿ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ತರಕಾರಿಗಳಲ್ಲಿ ಒಂದಾಗಿದೆ. ಇದರಲ್ಲಿರುವ ಫೈಟೊಕೆಮಿಕಲ್‌ಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳು ದೇಹದಲ್ಲಿನ ಸ್ವತಂತ್ರ ರಾಡಿಕಲ್ ಗಳ ಚಟುವಟಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಉರಿಯುತ ನಿಯಂತ್ರಣವಾಗುವುದರ ಜೊತೆಗೆ,ಕೆಲವು ದೀರ್ಘಕಾಲಿನ ಆರೋಗ್ಯ ಸಮಸ್ಯೆಗಳ ಅಪಾಯವನ್ನು ತಗ್ಗಿಸಲು ನೆರವಾಗಬಹುದು. ಜೊತೆಗೆ,ರಕ್ತದೊತ್ತಡವನ್ನು ಸಮತೋಲನದಲ್ಲಿಡುವಲ್ಲಿಯೂ ಬೆಂಡೆಕಾಯಿ ಸಹಕಾರಿಯಾಗಿದೆ.
ಬೆಂಡೆಕಾಯಿಯಲ್ಲಿರುವ ನಾರಿನಂಶವು ಜೀರ್ಣ ಕ್ರಿಯೆಯನ್ನು ನಿಧಾನಗೊಳಿಸುವ ಮೂಲಕ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ನೆರವಾಗುತ್ತದೆ.ವಿಶೇಷವಾಗಿ ಕಾರ್ಬೋಹೈಡ್ರೇಟ್ ಗಳು ಮತ್ತು ಸಕ್ಕರೆ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುವ ಗುಣ ಇದಕ್ಕಿದೆ. ಆದ್ದರಿಂದ ಮಧುಮೇಹದ ಅಪಾಯ ಹೊಂದಿರುವವರು ಅಥವಾ ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿಯಂತ್ರಿಸಲು ಬಯಸುವವರಿಗೆ ಇದು ಉತ್ತಮ ಆಹಾರ ಆಯ್ಕೆಯಾಗಿದೆ.
ಇದರಲ್ಲಿರುವ ಪೆಕ್ಟಿನ್ ಎಂಬ ಕರಗುವ ನಾರಿನಾಂಶ ಕರಳಿನ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಪೆಕ್ಟಿನ್ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾ ಗಳ ಬೆಳವಣಿಗೆಯನ್ನು ಉತ್ತೇಜಿಸಿ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯಮಾಡುತ್ತದೆ. ಇದರ ಪರಿಣಾಮವಾಗಿ ಮಲಬದ್ದತೆ ಸಮಸ್ಯೆಯಿಂದ ಬಳಲುವವರಿಗೆ ಬೆಂಡೆಕಾಯಿ ಸೇವನೆ ಪ್ರಯೋಜನಕಾರಿ ಆಗಬಹುದು.
ಕೆಲವು ಅಧ್ಯಯನಗಳು ಹೆಚ್ಚಿನ ನಾರಿನಾಂಶ ಯುಕ್ತ ಆಹಾರ ಸೇವನೆಯು ಕರುಳಿನ ಆರೋಗ್ಯವನ್ನು ಸುಧಾರಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲುಕಾರಿಯಾಗಬಹುದು ಎಂದು ಸೂಚಿಸಿವೆ. ಆದರೆ ಬೆಂಡೆಕಾಯಿ ಮಾತ್ರವೇ ಕ್ಯಾನ್ಸರ್ ತಡೆಯುತ್ತದೆ ಎಂದು ಹೇಳಲು ಸಾಕಷ್ಟು ವೈಜ್ಞಾನಿಕ ಸಾಕ್ಷ್ಯ ಗಳಿಲ್ಲ.ಆರೋಗ್ಯಕರ ಜೀವನ ಶೈಲಿ ಮತ್ತು ಸಮತೋಲಿತ ಆಹಾರದ ಭಾಗವಾಗಿ ಇದನ್ನು ಸೇವಿಸುವುದು ಉತ್ತಮ.
Also Read:
ದೇವಸ್ಥಾನಕ್ಕೆ ತೆರಳಿದಾಗ ಮೆಟ್ಟಿಲು ಮುಟ್ಟಿ ನಮಸ್ಕಾರ ಯಾಕೆ ಮಾಡುತ್ತಾರೆ? ಇದರ ಹಿಂದಿನ ಅರ್ಥವೇನು? ನೋಡೋಣ ಬನ್ನಿ