ಆರ್ಯವೀರ್ ಸೆಹ್ವಾಗ್ ಸಿಡಿಲಬ್ಬರ ದೆಹಲಿ ತಂಡಕ್ಕೆ ಭರ್ಜರಿ ಜಯ
Aaryavir Sehwag: ಭಾರತ ತಂಡದ ಮಾಜಿ ಆರಂಭಿಕ ದಾಂಡಿಗ ವೀರೇಂದ್ರ ಸೆಹ್ವಾಗ್ ಅವರ ಸುಪುತ್ರ ಆರ್ಯವೀರ್ ಸೆಹ್ವಾಗ್ ಈಗಾಗಲೇ ಡೆಲ್ಲಿ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದ್ದಾರೆ. ಇದೀಗ ಅಂಡರ್-19 ಆಟಗಾರರ ಕೂಚ್ ಬೆಹಾರ್ ಟೂರ್ನಿಯಲ್ಲೂ ಕಣಕ್ಕಿಳಿಯುವ ಮೂಲಕ ಭರ್ಜರಿ ಪ್ರದರ್ಶನ ನೀಡಿದ್ದಾರೆ.
ಕೂಚ್ ಬೆಹಾರ್ ಟೂರ್ನಿಯಲ್ಲಿ ಟೀಮ್ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅವರ ಪುತ್ರ ಆರ್ಯವೀರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. ಈ ಪ್ರದರ್ಶನದೊಂದಿಗೆ ದೆಹಲಿ ತಂಡ ಅಮೋಘ ಜಯ ಸಾಧಿಸಿದೆ. ನ್ಯೂ ದೆಹಲಿಯ ಏರ್ಫೋರ್ಸ್ ಕಾಂಪ್ಲೆಕ್ಸ್ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ದೆಹಲಿ ಹಾಗೂ ಬಿಹಾರ್ ತಂಡಗಳು ಮುಖಾಮುಖಿಯಾಗಿದ್ದವು.
ಅದರಲ್ಲೂ ಬಿರುಸಿನ ಬ್ಯಾಟಿಂಗ್ನೊಂದಿಗೆ ಗಮನ ಸೆಳೆದ ಆರ್ಯವೀರ್ 120 ಎಸೆತಗಳಲ್ಲಿ 14 ಫೋರ್ಗಳೊಂದಿಗೆ 72 ರನ್ ಬಾರಿಸಿದರು. ಈ ಅರ್ಧಶತಕದ ನೆರವಿನೊಂದಿಗೆ ದೆಹಲಿ ತಂಡ ಮೊದಲ ಇನಿಂಗ್ಸ್ನಲ್ಲಿ 278 ರನ್ ಕಲೆಹಾಕಿತು.
ಮೊದಲು ಬ್ಯಾಟ್ ಮಾಡಿದ ದೆಹಲಿ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಆರಂಭಿಕನಾಗಿ ಕಣಕ್ಕಿಳಿದ ಆರಾಧ್ಯ ಚಾವ್ಲಾ ಕೇವಲ 4 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ತನ್ಮಯ್ ಚೌಧರಿ (0) ಕೂಡ ವಿಕೆಟ್ ಒಪ್ಪಿಸಿದರು. ಈ ಹಂತದಲ್ಲಿ ಜೊತೆಗೂಡಿದ ಆರ್ಯವೀರ್ ಸೆಹ್ವಾಗ್ ಹಾಗೂ ನಾಯನ ಪ್ರಣವ್ ಪಂತ್ ಉತ್ತಮ ಜೊತೆಯಾಟ ಪ್ರದರ್ಶಿಸಿದರು.
ಬಿಹಾರ್ ತಂಡವು ಅಲ್ಪ ಮೊತ್ತಕ್ಕೆ ಕುಸಿದಿದ್ದರಿಂದ ದೆಹಲಿ ಫಾಲೋಆನ್ ಹೇರಿತು. ಅದರಂತೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಬಿಹಾರ್ ತಂಡವು 205 ರನ್ಗಳಿಸಿ ಆಲೌಟ್ ಆದರು. ಈ ಬಾರಿ ಕೂಡ ಲಕ್ಷ್ಮಣ್ 4 ವಿಕೆಟ್ ಪಡೆದು ಮಿಂಚಿದರು.
ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಬಿಹಾರ್ ತಂಡಕ್ಕೆ ಯುವ ವೇಗಿ ಲಕ್ಷ್ಮಣ್ ಆಘಾತದ ಮೇಲೆ ಆಘಾತ ನೀಡಿದರು. ಪರಿಣಾಮ ಬಿಹಾರ್ ತಂಡವು ಕೇವಲ 125 ರನ್ಗಳಿಸಿ ಆಲೌಟ್ ಆಯಿತು. ದೆಹಲಿ ಪರ 12 ಓವರ್ಗಳನ್ನು ಎಸೆದ ಲಕ್ಷ್ಮಣ್ ಕೇವಲ 45 ರನ್ ನೀಡಿ 7 ವಿಕೆಟ್ ಪಡೆದರು.
ಇನ್ನು ಈ ಪಂದ್ಯದಲ್ಲಿ ಬ್ಯಾಟಿಂಗ್ನಲ್ಲಿ ಆರ್ಯವೀರ್ 99 ರನ್ ಸಿಡಿಸಿ ಮಿಂಚಿದರೆ, ಲಕ್ಷ್ನಣ್ 11 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ದೆಹಲಿ ಗೆಲುವಿನಲ್ಲಿ ಆರ್ಯವೀರ್ ಹಾಗೂ ಲಕ್ಷ್ಮಣ್ ಪ್ರಮುಖ ಪಾತ್ರವಹಿಸಿದರು.
ಮೊದಲ ಇನಿಂಗ್ಸ್ನಲ್ಲಿನ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ನಲ್ಲಿ 53 ರನ್ಗಳ ಗುರಿ ಪಡೆದ ದೆಹಲಿ ಪರ ಆರ್ಯವೀರ್ ಸೆಹ್ವಾಗ್ 45 ಎಸೆತಗಳಲ್ಲಿ 4 ಫೋರ್ಗಳೊಂದಿಗೆ ಅಜೇಯ 27 ರನ್ ಬಾರಿಸಿದರು. ಈ ಮೂಲಕ ದೆಹಲಿ ತಂಡ 15.2 ಓವರ್ಗಳಲ್ಲಿ 53 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇನ್ನಷ್ಟು ಓದಿರಿ:
ಅಣ್ಣ ಪದಕ್ಕೆ ; ಈ ಸಂಬಂಧವನ್ನು ಬೇಕಾಬಿಟ್ಟಿ ಬಳಸಿದ ಬಿಗ್ ಬಾಸ್ ಸ್ಪರ್ಧಿಗಳು