ಟೆಸ್ಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮುಶ್ಫಿಕುರ್ ರಹೀಮ್
Mushfiqur Rahim Test Records: ಬಾಂಗ್ಲಾದೇಶ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಈವರೆಗೆ 108 ಆಟಗಾರರು ಕಣಕ್ಕಿಳಿದಿದ್ದಾರೆ. ಇವರಲ್ಲಿ 107 ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು ಮುಶ್ಫಿಕುರ್ ರಹೀಮ್ ಸಾಧಿಸಿ ತೋರಿಸಿದ್ದಾರೆ. ಅದು ಕೂಡ ಬರೋಬ್ಬರಿ 20 ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡುವ ಮೂಲಕ ಎಂಬುದು ವಿಶೇಷ.
ಬಾಂಗ್ಲಾದೇಶ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಮುಶ್ಫಿಕುರ್ ರಹೀಮ್ (Mushfiqur Rahim) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಕೂಡ 100 ಟೆಸ್ಟ್ ಪಂದ್ಯಗಳನ್ನಾಡುವ ಮೂಲಕ ಎಂಬುದು ವಿಶೇಷ. ಐರ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವುದರೊಂದಿಗೆ ಮುಶ್ಫಿಕುರ್ ರಹೀಮ್ ಈ ವಿಶೇಷ ಸಾಧನೆ ಮಾಡಿದ್ದಾರೆ.
ಮುಶ್ಫಿಕುರ್ ರಹೀಮ್ 100 ಟೆಸ್ಟ್ ಪಂದ್ಯಗಳನ್ನಾಡಿದ ದಾಖಲೆಯೊಂದಿಗೆ ಬಾಂಗ್ಲಾದೇಶ್ ಪರ ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ರನ್ ಗಳಿಸಿದ ರೆಕಾರ್ಡ್ ಅನ್ನು ಕೂಡ ಹೊಂದಿದ್ದಾರೆ. ಈವರೆಗೆ 182 ಟೆಸ್ಟ್ ಇನಿಂಗ್ಸ್ ಆಡಿರುವ ಅವರು ಒಟ್ಟು 6351* ರನ್ ಕಲೆಹಾಕಿದ್ದಾರೆ.
ಬಾಂಗ್ಲಾದೇಶ್ ಪರ ಈವರೆಗೆ 108 ಆಟಗಾರರು ಟೆಸ್ಟ್ ಪಂದ್ಯಗಳನ್ನಾಡಿದ್ದಾರೆ. ಇವರಲ್ಲಿ 100 ಟೆಸ್ಟ್ ಪಂದ್ಯಗಳ ಸಾಧನೆ ಮಾಡಿರುವುದು ಮುಶ್ಫಿಕುರ್ ರಹೀಮ್ ಮಾತ್ರ ಎಂಬುದು ವಿಶೇಷ. ಅಂದರೆ 107 ಆಟಗಾರರಿಗೆ ಸಾಧ್ಯವಾಗದೇ ಇರುವುದನ್ನು 38 ವರ್ಷದ ಮುಶ್ಫಿಕುರ್ ಮಾಡಿ ತೋರಿಸಿದ್ದಾರೆ.
ಬಾಂಗ್ಲಾದೇಶ್ ಪರ ಈವರೆಗೆ 100 ಟೆಸ್ಟ್ ಪಂದ್ಯಗಳನ್ನಾಡಿರುವ ಮುಶ್ಫಿಕುರ್ ರಹೀಮ್ ಒಟ್ಟು 3 ಡಬಲ್ ಸೆಂಚುರಿ ಬಾರಿಸಿದ್ದಾರೆ. ಈ ಮೂಲಕ ಬಾಂಗ್ಲಾ ಪರ ಅತ್ಯಧಿಕ ದ್ವಿಶತಕ ಸಿಡಿಸಿದ ದಾಖಲೆಯನ್ನು ಸಹ ಹೊಂದಿದ್ದಾರೆ. ಅಲ್ಲದೆ ಟೆಸ್ಟ್ನಲ್ಲಿ ಅತೀ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ (7 ಬಾರಿ) ಪಡೆದ ಬಾಂಗ್ಲಾ ಆಟಗಾರ ಎಂಬ ರೆಕಾರ್ಡ್ ಕೂಡ ಮುಶ್ಫಿಕುರ್ ರಹೀಮ್ ಹೆಸರಿನಲ್ಲಿದೆ.
ಹಾಗೆಯೇ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ಬಾಂಗ್ಲಾದೇಶ್ ಪರ ಅತ್ಯಧಿಕ ಎಸೆತಗಳನ್ನು ಎದುರಿಸಿದ ದಾಖಲೆ ಮುಶ್ಫಿಕುರ್ ರಹೀಮ್ ಹೆಸರಿನಲ್ಲಿದೆ. ಮುಶ್ಫಿಕುರ್ ಈವರೆಗೆ 13121* ಎಸೆತಗಳನ್ನು ಎದುರಿಸಿ ಈ ದಾಖಲೆ ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೆ ಬಾಂಗ್ಲಾ ಪರ ಟೆಸ್ಟ್ನಲ್ಲಿ ದ್ವಿಶತಕ ಬಾರಿಸಿದ ಮೊದಲ ಬ್ಯಾಟರ್ ಕೂಡ ಮುಶ್ಫಿಕುರ್ ರಹೀಮ್.
ಇನ್ನಷ್ಟು ಓದಿರಿ:
ಮಾಸ್ಕ್ ಧರಿಸಿ ಬಸವನಗುಡಿ ಕಡಲೆ ಕಾಯಿ ಪರಿಷೆ ಸುತ್ತಾಡಿದ ಕನ್ನಡದ ಖ್ಯಾತ ನಟಿ