<?= $pageTitle ?>
Logo
ಮುಖಪುಟ ಓದುವುದು ಕೇಳು
Health

Avocado Benefits : ಆಹಾರದಲ್ಲಿ ಆವಕಾಡೊ ಸೇವಿಸಿದರೆ ಕೊಲೆಕ್ಟ್ರಾಲ್ ನಿಯಂತ್ರಣ, ಹೃದಯಕ್ಕೂ ರಕ್ಷಣೆ

Avocado Benefits : ಆಹಾರದಲ್ಲಿ ಆವಕಾಡೊ ಸೇವಿಸಿದರೆ ಕೊಲೆಕ್ಟ್ರಾಲ್ ನಿಯಂತ್ರಣ, ಹೃದಯಕ್ಕೂ ರಕ್ಷಣೆ
Summary: Why is avocado good for your health? Studies suggest that eating avocado daily can help reduce bad cholesterol and improve heart health, digestion, weight control, and immunity. Here is a complete list of the major health benefits of avocado and the benefits of eating it daily.

BELAGAVI NEWS :

Avocado Benefits: ದಿನಕ್ಕೊಂದು ಆವಕಾಡೊ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣ, ಹೃದಯ ಆರೋಗ್ಯಕ್ಕೂ ಹಲವು ಲಾಭ

ಆರೋಗ್ಯಕರ ಆಹಾರ ಪದ್ಧತಿ ಅನುಸರಿಸುವವರು ಸಾಮಾನ್ಯವಾಗಿ ಸೇಬು, ಕಿತ್ತಳೆ, ದಾಳಿಂಬೆ, ಬಾಳೆಹಣ್ಣುಗಳಂತ ಹಣ್ಣುಗಳನ್ನು ಹೆಚ್ಚು ಆಯ್ಕೆ ಮಾಡುತ್ತಾರೆ. ಆದರೆ ಮಾರುಕಟ್ಟೆ ಅಥವಾ ಸೂಪರ್ ಮಾರ್ಕೆಟ್ ನಲ್ಲಿ ಕಾಣುವ ಆವಕಾಡೊ (Avocado) ಹಣ್ಣನ್ನು ಅದರ ಬೆಲೆ ಅಥವಾ ಪರಿಚಯದ ಕೊರತೆಯಿಂದ ಅನೇಕರು ಖರೀದಿಸುವುದಿಲ್ಲ.

ಆದರೆ ಇತ್ತೀಚಿನ ಅಧ್ಯಯನಗಳ ಪ್ರಕಾರ, ಆವಕಾಡೊ ಹಣ್ಣು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಮತ್ತು ಹೃದಯದ ಆರೋಗ್ಯವನ್ನು ಕಾಪಾಡಲು ಸಹಕಾರಿಯಾಗಬಹುದು. ಹೃದ್ರೋಗದ ಅಪಾಯವನ್ನು ತಗ್ಗಿಸಲು ಈ ಹಣ್ಣಿನಲ್ಲಿರುವ ಆರೋಗ್ಯಕರ ಕೊಬ್ಬು, ಫೈಬರ್ ಹಾಗೂ ಪೋಷಕಾಂಶಗಳು ನೆರವಾಗುತ್ತವೆ ಎಂದು ಸಂಶೋಧಕರು ತಿಳಿಸಿದ್ದಾರೆ.

ತಜ್ಞರ ಪ್ರಕಾರ, ಕಟ್ಟುನಿಟ್ಟದ ಆಹಾರ ನಿಯಮಗಳು ಅಥವಾ ಹೆಚ್ಚುವರಿ ಔಷಧಿಗಳ ಅವಲಂಬನೆ ಇಲ್ಲದೆ, ಸಮತೋಲಿತ ಆಹಾರದ ಭಾಗವಾಗಿ ದಿನಕ್ಕೊಂದು ಆವಕಾಡೊ ಸೇರಿಸುವುದು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಬಹುದು. ಜೊತೆಗೆ ಇದು ದೇಹಕ್ಕೆ ಅಗತ್ಯವಾದ ವಿಟಮಿನ್ ಗಳು, ಖನಿಜಗಳು ಮತ್ತು ಆಂಟಿ ಆಕ್ಸಿಡೆಂಟ್ ಗಳನ್ನು ಒದಗಿಸಿ ಒಟ್ಟಾರೆ ಆರೋಗ್ಯ ಸುಧಾರಿಸಲು ಸಹಾಯ ಮಾಡುತ್ತದೆ.

ಆವಕಾಡೊ ಹಣ್ಣು ಕೆಟ್ಟ ಕೆಲಸ ಕಡಿಮೆ ಮಾಡಲು ಹೇಗೆ ನೆರವಾಗುತ್ತದೆ, ಹೃದಯದ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಉಪಯುಕ್ತವಾಗಿದೆ ಮತ್ತು ಇದನ್ನು ಆರೋಗ್ಯದಲ್ಲಿ ಹೇಗೆ ಸೇರಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ಆರೋಗ್ಯಕರ ಜೀವನ ಶೈಲಿಗೆ ಸಹಕಾರಿ

Avocado Benefits : ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು ಆವಕಾಡೊ ಹೇಗೆ ಸಹಾಯ ಮಾಡುತ್ತದೆ? ಅಧ್ಯಯನದಲ್ಲಿ ಬಹಿರಂಗ

ಇತ್ತೀಚೆಗೆ American Journal Of Clinical Lipidology ನಲ್ಲಿ ಪ್ರಕಟವಾದ ಅಧ್ಯಯನವು ಆವಕಾಡೊ ಹಣ್ಣಿನ ಆರೋಗ್ಯ ಪ್ರಯೋಜನಗಳ ಕುರಿತು ಮಹತ್ವದ ಮಾಹಿತಿ ನೀಡಿದೆ. ಸಂಶೋಧಕರು ಅಧಿಕ ತೂಕ ಹಾಗೂ ಹೆಚ್ಚಿನ LDL ಸಮಸ್ಯೆ ಹೊಂದಿದವರನ್ನು 2 ಗುಂಪುಗಳಾಗಿ ವಿಭಜಿಸಿ ಅಧ್ಯಯನ ನಡೆಸಿದರು.

ಮೊದಲ ಗುಂಪಿನವರಿಗೆ ಅವರ ಸಾಮಾನ್ಯ ಆರದ ಜೊತೆಗೆ ಪ್ರತಿದಿನ ಒಂದು ಆವಕಾಡೊ ಹಣ್ಣನ್ನು ಸೇವಿಸಲು ಸೂಚಿಸಲಾಯಿತು. ಎರಡನೇ ಗುಂಪು ಯಾವುದೇ ಹೆಚ್ಚುವರಿ ಹಣ್ಣು ಸೇವಿಸದೆ ತಮ್ಮ ಸಾಮಾನ್ಯ ಆಹಾರ ಪದ್ಧತಿಯನ್ನು ಮುಂದುವರೆಸಿತು. ಆರು ತಿಂಗಳ ಬಳಿಕ ನಡೆಸಿದ ರಕ್ತ ಪರೀಕ್ಷೆಯಲ್ಲಿ, ಪ್ರತಿದಿನ ಆವಕಾಡೊ ಸೇವಿಸಿದವರಲ್ಲಿ ಗಮನಾರ್ಹವಾಗಿ ಕಡಿಮೆಯಾಗುವುದು ಕಂಡು ಬಂದಿದೆ.

ಆವಕಾಡೊ ಹಣ್ಣಿನಲ್ಲಿರುವ ಪೋಷಕಾಂಶಗಳ ವಿಶೇಷತೆ

ಸಂಶೋಧಕರ ಪ್ರಕಾರ, ಆವಕಾಡೊದಲ್ಲಿ ಹೃದಯದ ಆರೋಗ್ಯಕ್ಕೆ ಉಪಯುಕ್ತವಾದ ಮನೋಸಾಚುರೇಟೆಡ್ ಪ್ಯಾಟ್ ಗಳು ಸಮೃದ್ಧವಾಗಿವೆ. ಈ ಆರೋಗ್ಯಕರ ಕೊಬ್ಬು ದೇಹದಲ್ಲಿನ ಕೆಟ್ಟ ಕೊಬ್ಬಿನ ಪ್ರಮಾಣವನ್ನು ನಿಯಂತ್ರಿಸಲು ನೆರವಾಗುತ್ತದೆ ಮತ್ತು ಹೃದಯ ಸಂಬಂಧಿ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಕಾರಿಯಾಗಬಹುದು.

ಇದಲ್ಲದೆ, ಅವಕಾಡೊದಲ್ಲಿರುವ ಫೈಬರ್ ಜೀರ್ಣ ಕ್ರಿಯೆಯನ್ನು ಸುಧಾರಿಸುವುದರ ಜೊತೆಗೆ ಆರೋಗ್ಯದಲ್ಲಿನ ಕೊಬ್ಬಿನ ಹೀರಿಕೊಳ್ಳುವಿಕೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರ ಪರಿಣಾಮವಾಗಿ ದೇಹದಿಂದ ಅನಗತ್ಯ ಕೊಬ್ಬು ಹೊರತೆಗೆಯುವ ಪ್ರಕ್ರಿಯೆ ಸುಗಮವಾಗುತ್ತದೆ.

ಆವಕಾಡೊದಲ್ಲಿ ಇರುವ ಪೊಟ್ಯಾಶಿಯಂ ರಕ್ತ ಒತ್ತಡವನ್ನು ನಿಯಂತ್ರಿಸಲು ನೆರವಾಗುತ್ತದೆ. ಜೊತೆಗೆ ವಿಟಮಿನ್ ಇ ಮತ್ತು ಆಂಟಿ ಆಕ್ಸಿಡೆಂಟ್ ಗಳು ರಕ್ತ ನಾಳಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸಿ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಆವಕಾಡೊ ಜೊತೆಗೆ ಆರೋಗ್ಯಕರ ಜೀವನ ಶೈಲಿ : ಹೃದಯದ ಆರೋಗ್ಯಕ್ಕೆ ಸಮತೋಲಿತ ಅಭ್ಯಾಸಗಳು ಮುಖ್ಯ

ಆವಕಾಡೊ ಹಣ್ಣು ಹೃದಯದ ಆರೋಗ್ಯಕ್ಕೆ ಸಮತೋಲಿತ ಅಭ್ಯಾಸಗಳು ಮುಖ್ಯ

ಆವಕಾಡೊ ಹಣ್ಣು ಹೃದಯದ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡಬಹುದು. ಆದರೆ ಕೇವಲ ಆವಕಾಡೊ ಸೇವಿಸುವುದರಿಂದ ಮಾತ್ರ ಸಂಪೂರ್ಣ ಆರೋಗ್ಯ ಸಾಧ್ಯವಿಲ್ಲ.

ಉತ್ತಮ ಫಲಿತಾಂಶಕ್ಕಾಗಿ ಅದನ್ನು ಆರೋಗ್ಯಕರ ಜೀವನ ಶೈಲಿಯೊಂದಿಗೆ ಸಂಯೋಜಿಸುವುದು ಅಗತ್ಯವಾಗಿದೆ.

ವೈದ್ಯರ ಪ್ರಕಾರ, ಪ್ರತಿದಿನ ಆವಕಾಡೊ ಸೇವಿಸುವುದರ ಜೊತೆಗೆ ನಿಯಮಿತ ನಡಿಗೆ, ಸಮರ್ಪಕ ನಿದ್ರೆ, ಒತ್ತಡ ನಿಯಂತ್ರಣ ಮತ್ತು ಧೂಮಪಾನದಿಂದ ದೂರವಿರುವ ಅಭ್ಯಾಸಗಳು ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗುತ್ತವೆ.

ಸಮತೋಲಿತ ಆಹಾರ, ದೈಹಿಕ ಚಟುವಟಿಕೆ ಮತ್ತು ಆರೋಗ್ಯಕರ ಜೀವನ ಶೈಲಿಯ ಸಂಯೋಜನೆಯು ಕ್ಯಾಲೆಸ್ಟ್ರಾಲ್ ನಿಯಂತ್ರಣ ಹಾಗೂ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ನೆರವಾಗಬಹುದು.

ಈ ವರದಿಯಲ್ಲಿ ನೀಡಿರುವ ಆರೋಗ್ಯ ಸಂಬಂಧಿತ ಮಾಹಿತಿ ಸಾಮಾನ್ಯ ಅರಿವಿಗಾಗಿ ಮಾತ್ರ. ಇಲ್ಲಿ ಉಲ್ಲೇಖಿಸಿರುವ ಸಲಹೆಗಳು ವೈಜ್ಞಾನಿಕ ಅಧ್ಯಯನಗಳು, ಸಂಶೋಧನೆಗಳು ಹಾಗೂ ಆರೋಗ್ಯ ತಜ್ಞರ ಮಾಹಿತಿಯನ್ನು ಆದರಿಸಿವೆ. ಯಾವುದೇ ಆರೋಗ್ಯ ಪದ್ಧತಿ ಅಥವಾ ಜೀವನಶೈಲಿ ಬದಲಾವಣೆಯನ್ನು ಅನುಸರಿಸುವ ಮೊದಲು ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ವೈದ್ಯರು ಅಥವಾ ತಜ್ಞರ ಸಲಹೆ ಪಡೆಯುವುದು ಉತ್ತಮ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online