<?= $pageTitle ?>
Logo
ಮುಖಪುಟ ಓದುವುದು ಕೇಳು
Trending

BLOಗಳ ಎಡವಟ್ಟು ಬಯಲು: SIR ಪ್ರಕ್ರಿಯೆಯಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಂಡ ಆರೋಪ

BLOಗಳ ಎಡವಟ್ಟು ಬಯಲು: SIR ಪ್ರಕ್ರಿಯೆಯಲ್ಲಿ ಶಾಲಾ ಮಕ್ಕಳನ್ನು ಬಳಸಿಕೊಂಡ ಆರೋಪ
Summary: Another controversy has arisen in the SIR process. There have been allegations that BLOs have used school children during voter verification, a move that has sparked outrage in the public sector. There has been a demand for clarification from the authorities regarding the blunders in the process.

BELAGAVI ENWS :

ಮುಖ್ಯಾಂಶಗಳು;

• ಬೆಳಗಾವಿ SIR ಪ್ರಕ್ರಿಯಲ್ಲಿ ಸಾಲುಸಾಲು ಎಡವಟ್ಟು

• ಶಾಲಾ ಮಕ್ಕಳನ್ನ ಬಳಸಿಕೊಂಡು SIR ಮಾಡುತ್ತಿರುವ ಬಿಎಲ್ ಒಗಳು

• ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠ ಶಾಲೆಯಲ್ಲಿ ಘಟನೆ

SIR ಪ್ರಕ್ರಿಯೆಯಲ್ಲಿ ಎಡವಟ್ಟು ಆರೋಪ: ಮನೆ ಮನೆಗೆ ತೆರಳಬೇಕಿದ್ದ BLO ಗಳು ಸಾರ್ವಜನಿಕ ಸ್ಥಳಗಳಲ್ಲಿ ಪರಿಶೀಲನೆ ನಡೆಸುತ್ತಿರುವ ಆರೋಪ

ಬೆಳಗಾವಿ: ಕರ್ನಾಟಕದಲ್ಲಿ ನಡೆಯುತ್ತಿರುವ SIR ( Special Intensive Revision) ಪ್ರಕ್ರಿಯೆ ವೇಳೆ ಹಲವು ಕಡೆಗಳಲ್ಲಿ ನಿಯಮ ಉಲ್ಲಂಘನೆ ಆರೋಪಗಳು ಕೇಳಿ ಬರುತ್ತಿವೆ. ಮತದಾರರ ವಿವರಗಳ ಪರಿಶೀಲನೆಗಾಗಿ ಚುನಾವಣಾ ಆಯೋಗವು BLO ಗಳಿಗೆ ಮನೆ ಮನೆಗೆ ತೆರಳಿ SIR ಕಾರ್ಯ ನಡೆಸುವಂತೆ ಸೂಚನೆ ನೀಡಿದೆ.

ಆದರೆ, ಕೆಲವು ಕಡೆಗಳಲ್ಲಿ BLO ಗಳು ಮನೆಗಳಿಗೆ ತೆರಳುವ ಬದಲು ದೇವಸ್ಥಾನ, ಮಸೀದಿ ಹಾಗೂ ಊರಿನ ಕಟ್ಟೆಗಳಂತಹ ಸಾರ್ವಜನಿಕ ಸ್ಥಳಗಳಲ್ಲಿ ಕುಳಿತು SIR ಪ್ರಕ್ರಿಯೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ.

ಮತದಾರರ ನಿಖರ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ನಡೆಯುತ್ತಿರುವ ಈ ಪ್ರಕ್ರಿಯೆಯಲ್ಲಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ. SIR ಕಾರ್ಯದ ವೇಳೆ ಯಾವುದೇ ರೀತಿಯ ಲೋಪಗಳು ನಡೆಯದಂತೆ ಅಧಿಕಾರಿಗಳು ಗಮನ ಹರಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ರಾಜ್ಯದಲ್ಲಿ ನಡೆಯುತ್ತಿರುವ SIR (Special Intensive Revision) ಪ್ರಕ್ರಿಯೆ ನಡೆಯುವ ಮತ್ತೊಂದು ವಿವಾದ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮರಡಿಮಠ ಗ್ರಾಮದಲ್ಲಿ SIR ಕಾರ್ಯಕ್ಕೆ ಶಾಲಾ ಮಕ್ಕಳನ್ನು ಬಳಸಿಕೊಳ್ಳಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಮತದಾರರ ಪರಿಶೀಲನೆಗಾಗಿ ಗ್ರಾಮಸ್ಥರನ್ನು ಶಾಲೆಗೆ ಕರೆಸಿ BLO ಗಳು SIR ಪ್ರಕ್ರಿಯೆ ನಡೆಸುತ್ತಿದ್ದಾರೆ ಎನ್ನಲಾಗಿದ್ದು, ಈ ವೇಳೆ ಫೋಟೋ ಆಂಟಿಸುವುದು ಹಾಗೂ ಅರ್ಜಿ ನಮೂನೆಗಳನ್ನು ಭರ್ತಿ ಮಾಡುವ ಕೆಲಸಗಳಿಗೆ ವಿದ್ಯಾರ್ಥಿಗಳನ್ನು ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ಮತದಾರರ ಪರಿಷ್ಕರಣೆ ಕಾರ್ಯವು ಅಧಿಕೃತ ಪ್ರಕ್ರಿಯೆಯಾಗಿದ್ದು, ಅದರಲ್ಲಿ ಶಾಲಾ ಮಕ್ಕಳನ್ನು ತೊಡಗಿಸಿಕೊಂಡಿರುವುದು ಸರಿಯಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ. ಘಟನೆ ಕುರಿತು ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಆಗ್ರಹ ಕೇಳಿಬಂದಿದೆ.

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online