Belagavi News:
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು, ಅವರಿಗೆ ಅದೃಷ್ಟ ತಂದಿದೆ ಎಂದು ಹೇಳಲಾಗುವ ವಿಶೇಷ ಕಾರಿನ ಪ್ರದರ್ಶನ. ರಾಜಕೀಯ ಜೀವನದ ಹಲವು ಮಹತ್ವದ ಕ್ಷಣಗಳಿಗೆ ಸಾಕ್ಷಿಯಾದ ಈ ಕಾರು ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿತು.
ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಟ್ಟಿದ್ದ ಈ ಕಾರು ಬಿ ಎಸ್ ವೈ ಬಳಸಿದ್ದ ಹಳೆಯ ಮಾದರಿಯ ವಾಹನವಾಗಿದ್ದು, ಅವರ ರಾಜಕೀಯ ಏರಿಗೆಯ ಹಲವು ನೆನಪುಗಳನ್ನು ಹೊತ್ತಿದೆ ಎನ್ನಲಾಗುತ್ತಿದೆ. ಅಭಿಮಾನಿಗಳು ಕಾರಿನೊಂದಿಗೆ ಫೋಟೋ ತೆಗೆಸಿಕೊಳ್ಳಲು ಮುಗಿಬಿದ್ದ ದೃಶ್ಯಗಳು ಗಮನ ಸೆಳೆದವು.
ಈ ಕಾರು ಹಲವು ಚುನಾವಣಾ ಪ್ರಚಾರಗಳು, ರಾಜಕೀಯ ಸಭೆಗಳು ಹಾಗೂ ಮಹತ್ವದ ಪ್ರವಾಸಗಳಲ್ಲಿ ಬಿಎಸ್ ವೈ ಜೊತೆಗಿದ್ದ ಕಾರಿನಿಂದಲೇ "ಲಕ್ಕಿ ಕಾರು" ಎಂಬ ಹೆಸರಿನಿಂದ ಪ್ರಸಿದ್ಧಿಯಾಗಿದೆ. ವಾಹನದ ವಿನ್ಯಾಸ, ನಿರ್ವಹಣೆ ಮತ್ತು ಅದರ ಇತಿಹಾಸ ಅಭಿಮಾನಿಗಳಲ್ಲಿ ವಿಶೇಷ ಆಸಕ್ತಿ ಹುಟ್ಟಿಸಿತು.
ಅಭಿಮಾನೋತ್ಸವದಲ್ಲಿ ಕಾರಿನ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದ್ದು, ಬಿಎಸ್ ವೈ ರಾಜಕೀಯ ಪಯಣದ ಮರಣಿಯ ಕ್ಷಣಗಳನ್ನು ಮತ್ತೆ ನೆನಪಿಗೆ ತಂದಿದೆ. ಸಾಮಾಜಿಕ ಜಾಲತಾಣಗಳಲ್ಲೂ ಕಾರಿನ ಫೋಟೋಗಳು ಮತ್ತು ವಿಡಿಯೋಗಳು ವೈರಲ್ ಆಗುತ್ತಿವೆ.
ನಗರದಲ್ಲಿ ನಾಳೆ ನಡೆಯಲಿರುವ ಬಿಎಸ್ ವೈ ಅಭಿಮಾನೋತ್ಸವದ ಹಿನ್ನೆಲೆ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಳಸಿದ್ದ ಅಂಬಾಸಿಡರ್ ಕಾರನ್ನು ವಿಶೇಷವಾಗಿ ಪ್ರದರ್ಶನಕ್ಕೆ ನೀಡಲಾಗಿದೆ. ಹಲವು ರಾಜಕೀಯ ನೆನಪುಗಳಿಗೆ ಸಾಕ್ಷಿಯಾದ ಈ ಕಾರು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿದೆ.
ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ಕಾರಿನ ವೀಕ್ಷಣೆ ಮಾಡಿ ಸಂಭ್ರಮಿಸಿದರು. ಅಲ್ಲದೆ ಕಾರಿನೊಂದಿಗೆ ಸೆಲ್ಫಿ ತೆಗೆಸಿಕೊಂಡು ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದರು. "ಬಿಎಸ್ ವೈ ಲಕ್ಕಿ ಕಾರು" ಎಂದಿ ಖ್ಯಾತಿಯಾಗಿರುವ ಈ ಅಂಬಾಸಿಡರ್ ವಾಹನ ಅಭಿಮಾನಿಗಳಲ್ಲಿ ವಿಶೇಷ ಕುತೂಹಲ ಮೂಡಿಸಿದೆ.
ಯಡಿಯೂರಪ್ಪ ಅವರ ರಾಜಕೀಯ ಪಯಣದಲ್ಲಿ ಮಹತ್ವದ ಕ್ಷಣಗಳಿಗೆ ಈ ಕಾರು ಸಾಕ್ಷಿಯಾಗಿದ್ದು, ಹಲವು ಚುನಾವಣಾ ಪ್ರಚಾರ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಬಳಸಲಾಗಿತ್ತು ಎನ್ನಲಾಗಿದೆ. ಹೀಗಾಗಿ ಅಭಿಮಾನೋತ್ಸವದಲ್ಲಿ ಕಾರಿನ ಪ್ರದರ್ಶನ ಎಲ್ಲರ ಗಮನ ಸೆಳೆಯುತ್ತಿದೆ.
ಕಾರಿನ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನೋತ್ಸವಕ್ಕೂ ಮುನ್ನವೇ ಕಾರ್ಯಕ್ರಮದ ಕಳೆ ಹೆಚ್ಚಿಸಿವೆ.
ಬಿಎಸ್ ವೈ ಅಂಬಾಸಿಡರ್ ಕಾರಿನ ಬಗ್ಗೆ ವಿಜಯೇಂದ್ರ ಬಾವುಕ ಮಾತು:
ನಗರದಲ್ಲಿ ನಡೆಯಲಿರುವ ಬಿ ಎಸ್ ಐ ಅಭಿಮಾನಿ ಉತ್ಸವದ ಅಂಗವಾಗಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಳಸಿದ್ದ ಅಂಬಾಸಿಡರ್ ಕಾರು ಭಾರಿ ಗಮನ ಸೆಳೆಯುತ್ತಿದೆ. ಈ ವೇಳೆ ತಂದೆ ಬಳಸಿದ್ದ ಕಾರಿನ ಬಗ್ಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ "ಯಡಿಯೂರಪ್ಪರನ್ನು ಗುರುತಿಸುವಷ್ಟೇ ಈ ಕಾರನ್ನು ಜನ ಗುರುತಿಸುತ್ತಾರೆ" ಎಂದು ಹೇಳಿದರು.
ಅಂದು ನಗರ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿದ್ದ ಬಿಜೆಪಿಯನ್ನು ಹಳ್ಳಿಗಳಿಗೆ ತಲುಪಿಸಲು ಈ ಕಾರು ಮಹತ್ವದ ಪಾತ್ರ ವಹಿಸಿದೆ ಎಂದು ವಿಜಯೇಂದ್ರ ನೆನಪಿಸಿದರು. ಬಿಎಸ್ ವೈ ಪಕ್ಷದ ಅನೇಕ ಪ್ರಮುಖ ನಾಯಕರು ಇದೇ ಕಾರಿನಲ್ಲಿ ರಾಜ್ಯದ ವಿವಿಧ ಭಾಗಗಳಿಗೆ ತೆರಳಿ ಪಕ್ಷದ ಪ್ರಚಾರ ನಡೆಸಿದರು ಎಂದು ತಿಳಿಸಿದ್ದಾರೆ.
ರಾಜಕೀಯ ಹೋರಾಟ, ಚುನಾವಣಾ ಪ್ರಚಾರ ಮತ್ತು ಪಕ್ಷ ಸಂಘಟನೆಯ ಹಲವು ಸ್ಮರಣೀಯ ಕ್ಷಣಗಳಿಗೆ ಸಾಕ್ಷಿಯಾದ ಈ ಅಂಬಾಸಿಡರ್ ಕಾರು ಇದೀಗ ಅಭಿಮಾನೋತ್ಸವದ ಪ್ರಮುಖ ಆಕರ್ಷಣೆಯಾಗಿದೆ. ಕಾರನ್ನು ವೀಕ್ಷಿಸಲು ಬಿಜೆಪಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಮುಗಿಬಿದ್ದಿದ್ದು, ಅದರೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು.
ಬಿಎಸ್ ವೈ ರಾಜಕೀಯ ಪಯಣದ ಸಂಕೇತವಾಗಿ ಕಾಣುತ್ತಿರುವ ಈ ಕಾರಿನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲಾಗುತ್ತಿದ್ದು, ಅಭಿಮಾನೋತ್ಸವಕ್ಕೂ ಮುನ್ನವೇ ಕಾರ್ಯಕ್ರಮದ ಕಳೆ ಹೆಚ್ಚಿಸಿವೆ.
Also Read:
KD ಗೆ ಭರ್ಜರಿ ರೆಸ್ಪಾನ್ಸ್ : 8 ದಿನಗಳ ಕಲೆಕ್ಷನ್ ಎಷ್ಟು ?