belagavi news :
ಚಿತ್ರದುರ್ಗದಲ್ಲಿ ಬಿಎಸ್ ವೈ ಅಭಿಮಾನೋತ್ಸವದ ಸಂಭ್ರಮ ಜೋರಾಗಿದೆ. ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಸನ್ಮಾನ ಸಲ್ಲಿಸಲು ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನಿಗಳು ಸಾಗರೋ ಪಾದಿಯಲ್ಲಿ ಆಗಮಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂರಪ್ಪ ಅಭಿಮಾನಿಗಳು ವಿಶೇಷವಾಗಿ 2 ಕೆ.ಜಿ ಬೆಳ್ಳಿಯ ಗಣೇಶ ಮೂರ್ತಿಯನ್ನು ತರಿಸಿ ಗೌರವ ಸಲ್ಲಿಸಿದಲು ಸಿದ್ಧತೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ,"ಯಡಿಯೂರಪ್ಪ ಅವರು 50 ವರ್ಷಗಳ ಕಾಲ ರಾಜಕೀಯ ಜೀವನ ನಡೆಸಿದ್ದಾರೆ. ರೈತರ ಪರ ಬಜೆಟ್ ಮಂಡಿಸಿದವರು, ಮಹಿಳೆಯರು ಮತ್ತು ಮಕ್ಕಳಿಗೆ ಸೈಕಲ್ ನೀಡಿದವರು, ರೈತ ನಾಯಕನಾದ ಅವರ ಆಶೀರ್ವಾದದಿಂದ ನಾನು ಎರಡು ಬಾರಿ ಶಾಸಕನಾಗಿದ್ದೇನೆ, ಬಿಜೆಪಿ ಪಕ್ಷವು ಅವರ ಮಾರ್ಗದರ್ಶನದಲ್ಲಿ ಮುಂದುವರೆಯಲಿದೆ,"ಎಂದು ಹೇಳಿದರು.
ಇದೇ ವೇಳೆ ಯಡಿಯೂರಪ್ಪ ಅವರ ಮೊಮ್ಮಗ ಭಗತ್ ಬಾವುಕರಾಗಿ ಮಾತನಾಡಿ,"ನಮ್ಮ ತಾತನ ಇವತ್ತು ವರ್ಷದ ರಾಜಕೀಯ ಜೀವನವನ್ನು ನೆನಪಿಸಿಕೊಳ್ಳುವುದು ಹೆಮ್ಮೆಯ ಸಂಗತಿ. ನಾವು ಕೂಡ ಅವರನ್ನು ನೋಡಿ ಬೆಳೆದಿದ್ದೇವೆ. ಅಭಿಮಾನೋತ್ಸವ ಕಾರ್ಯಕ್ರಮ ನೋಡಿದರೆ ತುಂಬಾ ಖುಷಿಯಾಗುತ್ತದೆ. ರಾಜ್ಯಾದ್ಯಂತ ಹೋರಾಟ ನಡೆಸಿ ಆಡಳಿತ ಮಾಡಿದ ನಾಯಕರು ನಮ್ಮ ತಾತ. ಅವರ ಅಂಬಾಸಿಡರ್ ಕಾರಿನಲ್ಲಿ ನಾನು ಸಹ ಓಡಾಡಿದ್ದೇನೆ. ಅದೇ ಕಾರನ್ನು ಪ್ರದರ್ಶನಕ್ಕೆ ಇಟ್ಟಿರೋದು ವಿಶೇಷ ಸಂತೋಷ ತಂದಿದೆ,"ಎಂದು ಹೇಳಿದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಎಸ್ ಯಡಿಯೂರಪ್ಪ ಅಭಿಮಾನಿಯೋತ್ಸವ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸುವ ಹಿನ್ನೆಲೆ, ಜನರಿಗೆ ಯಾವುದೇ ಆರೋಗ್ಯ ತೊಂದರೆ ಉಂಟಾದರೆ ತಕ್ಷಣ ಚಿಕಿತ್ಸೆ ನೀಡುವ ಉದ್ದೇಶದಿಂದ ವಿಶೇಷ ಆಂಬುಲೆನ್ಸ್ ವ್ಯವಸ್ಥೆ ಮಾಡಲಾಗಿದೆ. ಬಿಜೆಪಿ ಹೆಲ್ತ್ ಪ್ರಕೋಸ್ಟ್ ವತಿಯಿಂದ ಸುಮಾರು ನಿಯೋಜಿಸಲಾಗಿದ್ದು, ವೈದ್ಯರು, ನರ್ಸ್ ಗಳು ಸೇರಿದಂತೆ ಆರೋಗ್ಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ಸುರಕ್ಷಿತ ಹಾಗೂ ತ್ವರಿತ ಆರೋಗ್ಯ ಸೇವೆ ಒದಗಿಸಲು ಆಯೋಜಕರು ವಿಶೇಷ ಗಮನ ಹರಿಸಿದ್ದಾರೆ. ಇದೇ ವೇಳೆ ಕಾರ್ಯಕ್ರಮದಲ್ಲಿ ಅಭಿಮಾನಿ ಒಬ್ಬರ ವಿಶಿಷ್ಟ ಅಭಿಮಾನವು ಗಮನ ಸೆಳೆಯಿತು. ಕೊಪ್ಪಳ ಜಿಲ್ಲೆಯ ಕುಷ್ಟಗಿಯಿಂದ ಆಗಮಿಸಿದ ಭರತ್ ಎಂಬ ಅಭಿಮಾನಿ, ತಮ್ಮ ದೇಹದ ಮೇಲೆ ಬಿಜೆಪಿ ನಾಯಕರ ಟ್ಯಾಟು ಹಾಕಿಸಿಕೊಂಡು ಕಾರ್ಯಕ್ರಮಕ್ಕೆ ಬಂದಿದ್ದರು. ಅವರ ಎದೆ ಮೇಲೆ ಪ್ರಧಾನಿ ಮೋದಿ ಹಾಗೂ ಕುಷ್ಟಗಿ ಶಾಸಕ ದೊಡ್ಡನ ಗೌಡ ಪಾಟೀಲ್ ಇದ್ದರೆ, ಬೆನ್ನಿನ ಮೇಲೆ ಕಮಲದ ಹೂವಿನ ಚಿಹ್ನೆ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಸಚಿವರಾದ ಸಿಟಿ ರವಿ, ಶ್ರೀರಾಮುಲು, ಜನಾರ್ದನ್ ರೆಡ್ಡಿ ಹಾಗೂ ಅಶ್ವಥ್ ನಾರಾಯಣ್ ಅವರ ಚಿತ್ರಗಳನ್ನು ಹಚ್ಚಿಸಿ ಕೊಂಡು ಅಭಿಮಾನ ಮೆರೆದರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿವೈ ಅಭಿಮಾನೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡೂರಪ್ಪ ಅವರು ಬಳಸಿದ್ದ ಅಂಬಾಸಿಡರ್ ಕಾರು ವಿಶೇಷ ಆಕರ್ಷಣೆಯಾಗಿ ಗಮನ ಸೆಳೆದಿದೆ. ಈ ಕಾರನ್ನು ಕಾರ್ಯಕ್ರಮದ ವೇದಿಕೆ ಮುಂಬಾಗ ಪ್ರದರ್ಶನಕ್ಕಿಡಲಾಗಿದ್ದು, ಅಭಿಮಾನಿಗಳು ಅದೇ ಕಾರಿನ ಮುಂದೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
"ಯಡಿಯೂರಪ್ಪ ಅವರು ಓಡಾಡಿದ ಕಾರನ್ನು ನೋಡುವುದೇ ನನಗೆ ಸಂತೋಷ. ಅದಕ್ಕಾಗಿಯೇ ನಾನು ಇಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದೇನೆ,"ಎಂದು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಅದೇ ವೇಳೆ ಕಾರ್ಯಕ್ರಮಕ್ಕೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿ ಸಿದ ಅಭಿಮಾನಿಗಳು ಸಾಗರೋಪಾಯದಲ್ಲಿ ಬಂದಿದ್ದಾರೆ, ದೊಡ್ಡ ಜನ ಸಮೂಹ ಕಂಡುಬಂದಿದೆ.
ಆರಂಭದಲ್ಲಿ ವೇದಿಕೆ ಕಾರ್ಯಕ್ರಮ ತಡವಾದ ಕಾರಣ ಮಧ್ಯಾಹ್ನ ಒಂದು ಮೂವತ್ತರ ವೇಳೆಯೂ ಕಾರ್ಯಕ್ರಮ ಆರಂಭವಾಗದೆ ಜನರು ಕಾದು ಕುಳಿತ ಸ್ಥಿತಿ ಉಂಟಾಯಿತು. ಬಳಿಕ ಕ್ರಮೇಣ ಕಾರ್ಯಕ್ರಮ ಆರಂಭವಾಗುತ್ತಿದ್ದಂತೆ ಲಕ್ಷಾಂತರ ಅಭಿಮಾನಿಗಳು ವೇದಿಕೆ ಅತ್ತ ಹರಿದು ಬಂದವರು.
ಚಿತ್ರದುರ್ಗದಲ್ಲಿ ನಡೆಯುತ್ತಿರುವ ಬಿಎಸ್ ವೈ ಅಭಿಮಾನೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ಭರ್ಜರಿ ಸನ್ಮಾನ ಸಲ್ಲಿಸಲಾಗಿದ್ದು, ಈ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು."ಅಭಿಮಾನೋತ್ಸವಕ್ಕೆ ಸುಮಾರು 5 ಲಕ್ಷ ಜನರು ಬರುವ ನಿರೀಕ್ಷೆ ಇದೆ. ಯಾರು ಪೈಪೋಟಿ ಮಾಡದೆ ವಾಹನಗಳಲ್ಲಿ ಸುರಕ್ಷಿತವಾಗಿ ಬಂದು ಹೋಗಿ. ಅದೇ ನನಗೆ ನೀವು ನೀಡುವ ದೊಡ್ಡ ಗೌರವ", ಎಂದು ಅವರು ಹೇಳಿದರು.
ರಾಜಕೀಯ ಕುರಿತು ಮಾತನಾಡಿದ ಯಡಿಯೂರಪ್ಪ, ಪಶ್ಚಿಮ ಬಂಗಾಳದಲ್ಲಿ ಇಂದು ಬಿಜೆಪಿ ಅಭ್ಯರ್ಥಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಎಂದು ಉಲ್ಲೇಖಿಸಿ ಸಂತೋಷ ವ್ಯಕ್ತಪಡಿಸಿದರು. ಜೊತೆಗೆ, ಕರ್ನಾಟಕದಲ್ಲಿಯೂ ಮುಂದಿನ ದಿನಗಳಲ್ಲಿ ಬಹುದೊಡ್ಡ ಗೆಲುವು ಸಿಗಲಿದೆ ಎಂದು ಆತ್ಮವಿಶ್ವಾಸನ ವ್ಯಕ್ತಪಡಿಸಿದರು."ಪಶ್ಚಿಮ ಬಂಗಾಳದ ಫಲಿತಾಂಶ ಕರ್ನಾಟಕದಲ್ಲಿಯೂ ಮರುಕಳಿಸಲಿದೆ"ಎಂದು ಅವರು ಆತ್ಮವಿಶ್ವಾಸದಿಂದ ಹೇಳಿದರು.
Also Read:
ಟಿವಿಕೆ ಮುಖ್ಯಸ್ಥ ವಿಜಯ ವಿರುದ್ಧ ಹೊಸ ವಿವಾದ - ನಕಲಿ ಬೆಂಬಲ ಪತ್ರ ಪ್ರಕರಣಕ್ಕೆ ದೂರು