<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಟಿವಿಕೆ ಮುಖ್ಯಸ್ಥ ವಿಜಯ ವಿರುದ್ಧ ಹೊಸ ವಿವಾದ - ನಕಲಿ ಬೆಂಬಲ ಪತ್ರ ಪ್ರಕರಣಕ್ಕೆ ದೂರು

ಟಿವಿಕೆ ಮುಖ್ಯಸ್ಥ ವಿಜಯ ವಿರುದ್ಧ ಹೊಸ ವಿವಾದ - ನಕಲಿ ಬೆಂಬಲ ಪತ್ರ ಪ್ರಕರಣಕ್ಕೆ ದೂರು
Summary: A complaint has been filed against TVK leader Vijaya on the basis of allegations of giving fake support letters from MLAs, which has caused a huge debate in the political circles. Know the complete details of this case, the allegations, the background of the support letter controversy and the response of the TVK party

Belagavi news:

ತಮಿಳುನಾಡಿನ ರಾಜಕೀಯದಲ್ಲಿ ಹೊಸ ಸಂಚಲನ ಸೃಷ್ಟಿಯಾಗಿದ್ದು, ಅಮ್ಮ ಮಕ್ಕಳ್ ಮುನ್ನೆತ್ರ ಕಳಗಂ ಪಕ್ಷವು ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ ವಿರುದ್ಧ ಪೊಲೀಸ್ ದೂರ ದಾಖಲಿಸಿದೆ. ಶಾಸಕರ ನಕಲಿ ಬೆಂಬಲ ಪತ್ರವನ್ನು ಬಳಸಿಕೊಂಡು ಸರ್ಕಾರ ರಚನೆಯಲ್ಲಿ ಎಎಂಎಂಕೆ ಬೆಂಬಲವಿದೆ ಎಂಬ ತಪ್ಪು ಭಾವನೆ ಮೂಡಿಸಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿ.ಟಿ.ವಿ.ದಿನಕರನ್ ಅವರ ಪರವಾಗಿ ಸಲ್ಲಿಸಲಾದ ದೂರಿನಲ್ಲಿ, ಶಾಸಕ ಕಾಮರಾಜ ಅವರು ಟಿವಿಕೆಗೆ ಬೆಂಬಲ ಸೂಚಿಸುವ ಪತ್ರ ಬರೆದಿರುವಂತೆ ತೋರಿಸಲಾಗಿದೆ ಎಂದು ಹೇಳಲಾಗಿದೆ. ಈ ಪತ್ರವನ್ನು ಟಿವಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದರ ಪ್ರಾಮಾಣಿಕತೆಯ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿವೆ.

ಇದರ ಜೊತೆಗೆ, ಕಾಮರಾಜ್ ಅವರು ದಿನಕರನ ಅವರ ಅನುಮೋದನೆ ಯೊಂದಿಗೆ ತಿವಿಕೆಗೆ ಬೆಂಬಲ ಘೋಷಿಸುತ್ತಿರುವ ವಿಡಿಯೋವನ್ನು ಟಿವಿಕೆ ಹಂಚಿಕೊಂಡಿತ್ತು. ಆದರೆ ಆ ವಿಡಿಯೋ ಕೂಡ ನಕಲಿಯಾಗಿದ್ದು, ಸಾರ್ವಜನಿಕರನ್ನು ತಪ್ಪು ದಾರಿ ಗೆಳೆಯ ಉದ್ದೇಶದಿಂದ ಸೃಷ್ಟಿಸಲಾಗಿದೆ ಎಂದು ಎಎಂಎಂಕೆ ಆರೋಪಿಸಿದೆ.

ಈ ಬೆಳವಣಿಗೆಯಿಂದ ತಮಿಳುನಾಡಿನಲ್ಲಿ ಸರ್ಕಾರ ರಚನೆ ಹಾಗೂ ರಾಜಕೀಯ ಮೈತ್ರಿಗಳ ಬಗ್ಗೆ ಗೊಂದಲ ಮತ್ತಷ್ಟು ಹೆಚ್ಚಾಗಿದೆ. ಪ್ರಕರಣ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಈ ವಿವಾದ ತೀವ್ರಗೊಳ್ಳುವ ಸಾಧ್ಯತೆ ಇದೆ.

ಟಿವಿಕೆ ವಿರುದ್ಧ ಎಂ ಎಂ ಕೆ ದೂರು:

ತಮಿಳುನಾಡು ರಾಜಕೀಯದಲ್ಲಿ ಭಾರಿ ಸಂಚಲನ ಮೂಡಿಸಿರುವ ಬೆಳವಣಿಗೆಯಲ್ಲಿ, ಅಮ್ಮ ಮಕ್ಕಳ್ ಮನ್ನೇತ್ರ ಕಳಗಂ ಎಎಂಎಂಕೆ ಪಕ್ಷವು ಏಕೈಕ ಶಾಸಕ ಎಸ್. ಕಾಮರಾಜ್ ಅವರ ಬೆಂಬಲವನ್ನು ಸುಳ್ಳಾಗಿ ತೋರಿಸಲು ನಕಲಿ ಪತ್ರ ಹಾಗೂ ಎಐ ನಿರ್ಮಿತ ವಿಡಿಯೋ ಬಳಸಲಾಗಿದೆ ಎಂದು ಆರೋಪಿಸಲಾಗಿದೆ.

ರಾಜಕೀಯ ವಲಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಕಾಮರಾಜ ಅವರು ನಿನ್ನೆ ಸುದ್ದಿಗಾರರೊಂದಿಗೆ ಮಾತನಾಡಿ ತಾವು ಟಿವಿಕೆಗೆ ಯಾವುದೇ ಬೆಂಬಲ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದಾದ ಬಳಿಕ ಎಎಂಎಂಕೆ ಪ್ರಧಾನ ಕಾರ್ಯದರ್ಶಿ ಟಿಟಿವಿ ದಿನಕರನ್, ತಮ್ಮ ಪಕ್ಷದ ಶಾಸಕ ಕಾಮ್ರಾಜ್ ಅವರ ಪತ್ರದ ನಕಲಿ ಪ್ರತಿಯೊಂದು ಟಿವಿಕೆ ರಾಜ್ಯಪಾಲರಿಗೆ ಸಲ್ಲಿಸಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ದಿನಕರನ್ ಅವರು, "ನಮ್ಮ ವಿರುದ್ಧ ಸುಳ್ಳು ಪ್ರಚಾರ ನಡೆಸಲಾಗುತ್ತಿದೆ. ನಕಲಿ ಪತ್ರದ ಮೂಲಕ ಸರ್ಕಾರ ರಚನೆಯಲ್ಲಿ ಎಎಂಎಂಕೆ ಬೆಂಬಲವಿದೆ ಎಂಬ ಭಾವನೆ ಮೂಡಿಸಲು ಯತ್ನಿಸಲಾಗಿದೆ" ಎಂದು ಆರೋಪಿಸಿ, ಟಿವಿಕೆ ವಿರುದ್ಧ ಪೊಲೀಸ್ ದೂರು ನೀಡುವುದಾಗಿ ಎಚ್ಚರಿಸಿದ್ದರು. ಅದರ ಬೆನ್ನೆಲೆ ಇಂದು ಅಧಿಕೃತವಾಗಿ ದೂರು ದಾಖಲಾಗಿದೆ.

ಇದರ ನಡುವೆ, ತಮ್ಮ ಮೇಲೆ ಬಂದ ಆರೋಪಗಳನ್ನು ತಳ್ಳಿಹಾಕಲು ಟಿವಿಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ಹಂಚಿಕೊಂಡಿತ್ತು. ಆ ವಿಡಿಯೋದಲ್ಲಿ ಶಾಸಕ ಕಾಮರಾಜ ಅವರು ಟಿವಿಕೆಗೆ ಬೆಂಬಲ ಸೂಚಿಸುವ ಪತ್ರ ಬರೆಯುತ್ತಿರುವುದು ಹಾಗೂ ದಿನಕರನ್ ಅವರ ಅನುಮೋದನೆ ಯೊಂದಿಗೆ ಬೆಂಬಲ ನೀಡುತ್ತಿರುವುದಾಗಿ ಕಾಣಿಸಿಕೊಂಡಿತ್ತು.

ಆದರೆ, ಆ ವಿಡಿಯೋ ಕೂಡ ಎಐ ತಂತ್ರಜ್ಞಾನ ಬಳಸಿ ಸೃಷ್ಟಿಸಲಾದ ನಕಲಿ ದೃಶ್ಯ ಎಂದು ಎಎಂಎಂಕೆ ಗಂಭೀರ ಆರೋಪ ಮಾಡಿದೆ. ಈ ಬೆಳವಣಿಗೆ ತಮಿಳುನಾಡಿನ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದ್ದು, ಸರ್ಕಾರ ರಚನೆ ಕುರಿತು ರಾಜಕೀಯ ಲೆಕ್ಕಾಚಾರಗಳಿಗೂ ಹೊಸ ತಿರುವು ನೀಡಿದೆ.

ತಮಿಳುನಾಡಿನ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ಟಿವಿಕೆ ವಿವಾದಕ್ಕೆ ಇದೀಗ ಮತ್ತೊಂದು ತಿರುವು ಸಿಕ್ಕಿದೆ. ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ಎಎಂಎಂಕೆ ಶಾಸಕ ಕಾಮರಾಜ್ ಬೆಂಬಲ ನೀಡುವ ಕುರಿತು ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳ ನಡುವೆ ಹೊಸ ಹೇಳಿಕೆ ಹೊರಬಿದ್ದಿದೆ.

ಹೇಳಿಕೆಯಲ್ಲಿ,"ಎಎಂಎಂಕೆಪ್ರಧಾನ ಕಾರ್ಯದರ್ಶಿ ಟಿ ವಿ ದಿನಕರನ್ ಅವರು ಅನುಮೋದನೆ ಯೊಂದಿಗೆ ತಮಿಳಿಗ ವೆಟ್ರಿ ಕಳಗಂಗೆ ಬೆಂಬಲ ನೀಡುತ್ತಿರುವುದಾಗಿ ಕಮರಾಜ್ ಹೇಳಿದ್ದಾರೆ.

ಈ ಹೇಳಿಕೆ ಅವರ ಬಿದ್ದ ಬೆನ್ನಲಿ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮತ್ತಷ್ಟು ಹೆಚ್ಚಾಗಿದೆ. ಈಗಾಗಲೇ ಎಎಂಎಂಕೆ, ಟಿವಿಕೆ ವಿರುದ್ಧ ನಕಲಿ ಬೆಂಬಲ ಪತ್ರ ಹಾಗೂ ಎಐ ನಿರ್ಮಿತ ವಿಡಿಯೋ ಬಳಕೆಯ ಆರೋಪ ಮಾಡಿ ಪೊಲೀಸ್ ದೂರು ದಾಖಲಿಸಿರುವುದು ದೊಡ್ಡ ಚರ್ಚೆಗೆ ಕಾರಣವಾಗಿದೆ.

ಇದಕ್ಕೂ ಮೊದಲು ಎಸ್ ಕಾಮರಾಜ್ ಸುದ್ದಿಗಾರರ ಮುಂದೆ ತಾವು ಟಿವಿಕೆಗೆ ಬೆಂಬಲ ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು. ಆದರೆ ಟಿವಿಕೆ ಪಕ್ಷವು ಕಮರಾಜ್ ಬೆಂಬಲ ಪತ್ರ ಬರೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ತಮ್ಮ ವಿರುದ್ಧದ ಆರೋಪಗಳನ್ನು ತಳ್ಳಿ ಹಾಕಲು ಪ್ರಯತ್ನಿಸಿತು.

ಈ ವಿಡಿಯೋ ಹಾಗೂ ಪತ್ರದ ನೈಜತೆಯ ಕುರಿತು ಇದೀಗ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ಸರ್ಕಾರ ರಚನೆಗೆ ಸಂಬಂಧಿಸಿದ ಸಮೀಕರಣಗಳ ಮೇಲು ಇದರ ಪರಿಣಾಮ ಬೀರುವ ಸಾಧ್ಯತೆ ಇದೆ. ತಮಿಳುನಾಡಿನ ರಾಜಕೀಯದಲ್ಲಿ ಈ ವಿವಾಹದ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾವೇರಿಸುವ ಲಕ್ಷಣಗಳು ಕಾಣುತ್ತಿವೆ.

Also Read:

ಧುರಂಧರ್ 2 OTT ಬಿಡುಗಡೆ ಸುದ್ದಿ: Netflix ನಲ್ಲಿ ವಿದೇಶ ರಿಲೀಸ್ ಫಿಕ್ಸ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online