belagavi news :
ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಯಶಸ್ಸಿನ ಬಳಿಕ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ : ದಿ ರೆವೆಂಜ್ 'ಇದೀಗ OTT ಪ್ರವೇಶಕ್ಕೆ ಸಜ್ಜಾಗಿದೆ. ರಣ್ ವೀರ್ ಸಿಂಗ್ ಮುಖ್ಯ ಭೂಮಿಯಲ್ಲಿ ನಟಿಸಿರುವ ಈ ಸ್ಪೈ ಆಕ್ಷನ್ ಥ್ರಿಲ್ಲರ್ ಸಿನಿಮಾ ಡಿಜಿಟಲ್ ಬಿಡುಗಡೆಯ ಮೂಲಕ ಮತ್ತೆ ಸಜ್ಜು ಮಾಡುತ್ತಿದೆ. ಆದರೆ ಚಿತ್ರದ OTT ರಿಲೀಸ್ ಅಭಿಮಾನಿಗಳಲ್ಲಿ ಗೊಂದಲ ಮೂಡಿಸಿದೆ. ಕಾರಣ, ಈ ಸಿನಿಮಾ ನೆಟ್ ಫ್ಲಿಕ್ಸ್ ನಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಮಾತ್ರ ಲಭ್ಯವಾಗುವುದಿಲ್ಲ ಎಂಬ ಮಾಹಿತಿ ಹೊರ ಬಂದಿದೆ. ನೆಟ್ ಪ್ಲಿಕ್ಸ್ ನ ಅಧಿಕೃತ ಮಾಹಿತಿಯ ಪ್ರಕಾರ, ‘ಧುರಂಧರ್ : ದಿ ರೆವೆಂಜ್' ಸಿನಿಮಾ ಮೇ 14, 2026ರಂದು ವಿದೇಶಗಳಲ್ಲಿ ಸ್ಟ್ರೀಮ್ ಆಗಲಿದೆ.
ಕೆಲ ದೇಶಗಳಲ್ಲಿ ಟೈಮ್ ಝೋನ್ ವ್ಯತ್ಯಾಸದಿಂದ ಮೇ 15ರಂದು ಸಿನಿಮಾ ಲಭ್ಯವಾಗುವ ಸಾಧ್ಯತೆ ಇದೆ. ಇನ್ನು ವಿಶೇಷವೇನೆಂದರೆ, OTTನಲ್ಲಿ ಈ ಚಿತ್ರ ‘ಧುರಂಧರ್ : ದಿ ರೆವೆಂಜ್ 'ಎಂಬ ವಿಸ್ತೃತ ಶೀರ್ಷಿಕೆಯಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ಚಿತ್ರಮಂದಿರ ಆವೃತ್ತಿಯಲ್ಲಿ ಕಾಣದ ಹೆಚ್ಚುವರಿ ದೃಶ್ಯಗಳು ಮತ್ತು ದೀರ್ಘ ರನ್ ಟೈಮ್ ಇರಲಿದೆ ಎನ್ನಲಾಗಿದೆ.
‘ಧುರಂಧರ್ : ದಿ ರೆವೆಂಜ್ ' OTT ಆವೃತ್ತಿಗೆ ಬಾರಿ ನಿರೀಕ್ಷೆ ಹೆಚ್ಚಿಸಿದೆ. ವರದಿಗಳ ಪ್ರಕಾರ, ಚಿತ್ರದ ಸ್ಟ್ರೀಮಿಂಗ್ ವರ್ಶನ್ ಸುಮಾರು 3 ಗಂಟೆ 52 ನಿಮಿಷಗಳ ರನ್ ಟೈಮ್ ಹೊಂದಿರಲಿದ್ದು, ಇದು ಥಿಯೇಟ್ರಿಕಲ್ ಕಟ್ ಗಿಂತ ಸುಮಾರು ಮೂರು ನಿಮಿಷ ಹೆಚ್ಚು ಎನ್ನಲಾಗಿದೆ. ಈ ವಿಸ್ತೃತ ಆವೃತ್ತಿಯಲ್ಲಿ ಸೆನ್ಸಾರ್ ಮಾಡದ ಡೈಲಾಗ್ ಗಳು, ಹೆಚ್ಚುವರಿ ದೃಶ್ಯಗಳು ಹಾಗೂ ವಿಸ್ಕೃತ ಕ್ರೆಡಿಟ್ಗಳು ಇರಲಿವೆ ಎಂಬ ಮಾತುಗಳು ಸಿನಿಪ್ರಿಯರ ಕುತೂಹಲ ಹೆಚ್ಚಿಸಿವೆ.
ನೆಟ್ ಪ್ಲಿಕ್ಸ್ ನಿಂದ ವೈರಲ್ ಆಗಿರುವ ಸ್ಕಿನ್ ಗ್ರ್ಯಾಬ್ ಗಳು ಕೂಡ ಅಭಿಮಾನಿಗಳಲ್ಲಿ ಉತ್ಸಾಹ ಮೂಡಿಸಿದೆ. ಸ್ಕ್ರೀನ್ ಗ್ರ್ಯಾಬ್ ನಲ್ಲಿ ಕಾಣಿಸಿಕೊಂಡಿರುವ ವಿವರಣೆ ಹೀಗಿದೆ: ವೈಯಕ್ತಿಕ ದುರಂತದಿಂದ ಪ್ರೇರಿತನಾದ ಹಮ್ಜಾ, ಪಾಕಿಸ್ತಾನದ ಕ್ರಿಮಿನಲ್ ಅಂಡರ್ ವರ್ಡ್ ಅನ್ನು ನಾಶ ಮಾಡುವ ತನ್ನ ರಹಸ್ಯ ಕಾರ್ಯಾಚರಣೆಯಲ್ಲಿ ಆಳವಾಗಿ ತೊಡಗುತ್ತಾನೆ."ಅಂತರಾಷ್ಟ್ರೀಯ ಸ್ಟ್ರೀಮಿಂಗ್ ಹಕ್ಕುಗಳನ್ನು ನೆಟ್ ಪ್ಲಿಕ್ಸ್ ಪಡೆದುಕೊಂಡಿದ್ದರು, ಭಾರತೀಯ ಪ್ರೇಕ್ಷಕರಿಗೆ ಈ ಸಿನಿಮಾ ಅದೇ ವೇದಿಕೆಯಲ್ಲಿ ಲಭ್ಯವಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಭಾರತೀಯ ಒಟಿಪಿ ಹಕ್ಕುಗಳು ಜಿಯೋಹಾಟ್ಸ್ಟಾರ್ ಗೆ ಹೋಗಿವೆ ಎನ್ನುವ ವರದಿಗಳು ಹರಿದಾಡುತ್ತಿವೆ. ಚಿತ್ರ ತಂಡ ಇನ್ನೂ ಭಾರತದ ಸ್ಟ್ರೀಮಿಂಗ್ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿಲ್ಲ. ಆದರೆ ಎರಡು ವಾರಗಳ ಥಿಯೇಟ್ರಿಕಲ್ ರನ್ ಪೂರ್ಣಗೊಂಡ ಬಳಿಕ, ಮೇ 14ರಂದು ಸಿನಿಮಾ ಜಿಯೋಹಾಟ್ಸ್ಟಾರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ವರದಿಗಳು ಸೂಚಿಸುತ್ತೇವೆ.
ಇತ್ತೀಚಿಗೆ ಚಿತ್ರದ ವಿರುದ್ಧ ಕಾನೂನು ವಿವಾದ ಒಂದು ಹೊರಹೊಮ್ಮಿದ್ದು, ಡಿಜಿಟಲ್ ರಿಲೀಸ್ ಮೇಲೆ ಅದರ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಈ ವಿವಾದ ಚಿತ್ರಕ್ಕೆ ಕ್ಲೈಮಾಕ್ಸ್ ಟ್ರ್ಯಾಕ್ 'ರಂಗ ದೇ ಲಾಲ್' ಕುರಿತಾಗಿದೆ. ಈ ಹಾಡು 'ತ್ರಿದೇವ್' ಚಿತ್ರದ ಐಕಾನಿಕ್ ಸಾಂಗ್ ‘ತಿರ್ಚಿ ಟೋಪಿವಾಲೆ'ಯ ರಿಮಿಕ್ಸ್ ಆವೃತ್ತಿಯಾಗಿದೆ ಎಂದು ಹೇಳಲಾಗುತ್ತಿದೆ. ವರದಿಗಳ ಪ್ರಕಾರ, 'ತ್ರಿದೇವ್' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ರಾಜೀವ್ ರೈ ಅವರು, ಮೂಲ ಹಾಡುಗಳನ್ನು ಅಗತ್ಯ ಅನುಮತಿ ಇಲ್ಲದೆ ಬಳಸಲಾಗುತ್ತಿದೆ ಎಂದು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದಾರೆ. ವಿಚಾರಣೆ ವೇಳೆ, ಮೇ ಮಧ್ಯಭಾಗದ ಮೊದಲು ಸಿನಿಮಾವನ್ನು OTT ನಲ್ಲಿ ಬಿಡುಗಡೆ ಮಾಡುವ ಯೋಜನೆ ಇಲ್ಲ ಎಂದು ನಿರ್ಮಾಪಕರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎನ್ನಲಾಗಿದೆ. ಈ ಬೆಳವಣಿಗೆಯಿಂದ ಭಾರತದಲ್ಲಿ ಚಿತ್ರದ OTT ಬಿಡುಗಡೆ ದಿನಾಂಕದ ಬಗ್ಗೆ ಇನ್ನಷ್ಟು ಗೊಂದಲ ನಿರ್ಮಾಣವಾಗಿದೆ.
ಆದಿತ್ಯ ಧರ್ ನಿರ್ದೇಶನದ ಬಹು ಚರ್ಚಿತ ಆಕ್ಷನ್ ಥ್ರಿಲ್ಲರ್ ‘ಧುರಂಧರ್ : ದಿ ರೆವೆಂಜ್’ ಬಾಲಿವುಡ್ ಸೂಪರ್ ಸ್ಟಾರ್ ರಣ್ ವೀರ್ ಸಿಂಗ್ ‘ಹನ್ಜಾ ಅಲಿ ಮಜಾರಿ' ಪಾತ್ರದಲ್ಲಿ ಮಿಂಚಿದ್ದಾರೆ. ಅವರೊಂದಿಗೆ ಸಾರಾ ಅರ್ಜುನ್, ಆರ್. ಮಾಧವನ್, ಅರ್ಜುನ್ ರಾಂಪಾಲ್, ಸಂಜಯ್ ದತ್ ಹಾಗೂ ರಾಕೇಶ್ ಬೇಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಸಿನಿಮಾ ಈಗಾಗಲೇ ಜಾಗತಿಕ ಬಾಕ್ಸ್ ಆಫೀಸ್ ನಲ್ಲಿ ಹಲವು ದಾಖಲೆಗಳನ್ನು ಮುರಿದಿದ್ದು, 2026ರ ಅತಿ ದೊಡ್ಡ ಬ್ಲಾಕ್ ಬಸ್ಟರ್ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ಸಿನಿಮಾ ಇಂಡಸ್ಟ್ರಿ ಟ್ರ್ಯಾಕರ್ ಸ್ಯಾಕ್ನಿಲ್ ವರದಿ ಪ್ರಕಾರ, ಧುರಂಧರ್ 2 ವಿಶ್ವದಾದ್ಯಂತ ಇದುವರೆಗೆ ₹1,791.55 ಕೋಟಿ ಗಳಿಕೆ ಮಾಡಿದೆ. ಅಲ್ಲದೆ ಭಾರತದಲ್ಲಿ₹1,365.20 ಕೋಟಿ ಕಲೆಕ್ಷನ್ ಆಗಿದ್ದು, ವಿದೇಶಿ ಮಾರುಕಟ್ಟೆಯಲ್ಲಿ₹456.35 ಕೋಟಿ ವ್ಯವಹಾರ ನಡೆದಿದೆ. ಈ ಮೂಲಕ ರಣ್ ವೀರ್ ಸಿಂಗ್ ಅಭಿನಯದ ಈ ಚಿತ್ರ ಜಾಗತಿಕ ಸಿನಿಪ್ರಿಯರ ಮನೆಗೆದ್ದಿದೆ.
Also Read: