Belagavi news:
ಟಾಲಿವುಡ್ ನಟ ವಿಜಯ್ ದೇವರಕೊಂಡ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ ನಟಿ ರಶ್ಮಿಕಾ ಮಂದಣ್ಣ ಅವರ ಹಳೆಯ ಹೇಳಿಕೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿದೆ. ಕಷ್ಟದ ಸಮಯದಲ್ಲಿ ವಿಜಯ್ ತಮಗೆ ಮಾನಸಿಕ ನೆಮ್ಮದಿ ನೀಡಿದ್ದಾರೆ ಎಂದು ರಶ್ಮಿಕಾ ಹೇಳಿದ್ದ ಈ ಮಾತು ಅಭಿಮಾನಿಗಳ ಗಮನ ಸೆಳೆದಿದೆ.
ಇಂದು (ಮೇ 9) ವಿಜಯ್ ದೇವರಕೊಂಡ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ವಿಶೇಷ ದಿನದ ಹಿನ್ನೆಲೆ ರಶ್ಮಿಕಾ ಹೇಳಿದ ಬಾವುಕ ಮಾತುಗಳು ಮತ್ತೆ ಚರ್ಚೆಗೆ ಬಂದಿವೆ. ಹಿಂದಿನ ಸಂಬಂಧದಲ್ಲಿನ ಸಂಕಷ್ಟದ ಸಂದರ್ಭಗಳಲ್ಲಿ ವಿಜಯ್ ತಮಗೆ ಬೆಂಬಲವಾಗಿ ನಿಂತಿದ್ದರು ಎಂದು ರಶ್ಮಿಕಾ ಸ್ಮರಿಸಿದರು.
"ಜೀವನದಲ್ಲಿ ಸಂತೋಷ ಮತ್ತು ಶಾಂತಿ ನೀಡುವ ವ್ಯಕ್ತಿಯನ್ನು ಜೊತೆ ಇರುವುದು ಮುಖ್ಯ" ಎಂದು ಹೇಳಿದ ರಶ್ಮಿಕಾ ಮಂದಣ್ಣ, ವಿಜಯ್ ತಮ್ಮ ಜೀವನದಲ್ಲಿ ಎಷ್ಟು ವಿಶೇಷ ವ್ಯಕ್ತಿ ಎಂಬುದನ್ನು ವಿವರಿಸಿದ್ದರು. ಈ ಹೇಳಿಕೆ ಈಗ ಅಭಿಮಾನಿಗಳಲ್ಲಿ ಮತ್ತೆ ಕುತೂಹಲ ಹೆಚ್ಚಿಸಿದೆ.
ಬಹುಕಾಲದಿಂದ ವಿಜಯಿ ದೇವರು ಕೊಂಡ ಮತ್ತು ರಶ್ಮಿಕ ಮಂದಣ್ಣ ನಡುವಿನ ಸಂಬಂಧದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇಬ್ಬರು ಒಟ್ಟಿಗೆ ಕಾಣಿಸಿಕೊಳ್ಳುವ ಪ್ರತಿಯೊಂದು ಸಂದರ್ಭವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೀಗ ವಿಜಯ್ ದೇವರಕೊಂಡ ಹುಟ್ಟು ಹಬ್ಬದ ಸಂಭ್ರಮದ ನಡುವೆ ರಶ್ಮಿಕ ಹಳೆಯ ಹೇಳಿಕೆ ಮತ್ತೆ ಟ್ರೆಂಡ್ ಆಗಿದ್ದು, ಫ್ಯಾನ್ಸ್ ಇಬ್ಬರ ಬಾಂಧವ್ಯ ಬಗ್ಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ಹಂಚಿಕೊಂಡಿದ್ದಾರೆ.
ರಶ್ಮಿಕಾ ಮಂದಣ್ಣ ಅವರ ಹಳೆಯ ಸಂದರ್ಶನವನ್ನು ಇದೀಗ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸಂದರ್ಭದಲ್ಲಿ ಅವರು ತಮ್ಮ ಜೀವನದ ಕಹಿ ಅನುಭವಗಳು , ಹಿಂದಿನ ಸಂಬಂಧದಲ್ಲಿನ ಸಂಕಷ್ಟಗಳು ಹಾಗೂ ಆ ಸಮಯದಲ್ಲಿ ತಮಗೆ ಬೆಂಬಲವಾಗಿ ನಿಂತ ವ್ಯಕ್ತಿಯ ಬಗ್ಗೆ ಭಾವುಕರಾಗಿ ಮಾತನಾಡಿದರು.
ಹಿಂದಿನ ಸಂಬಂಧದ ಒತ್ತಡದ ಕ್ಷಣಗಳನ್ನು ಸ್ಮರಿಸಿದ್ದ ರಶ್ಮಿಕಾ, ಆ ಸಂದರ್ಭದಲ್ಲಿ ತಮಗೆ ಮಾನಸಿಕ ನೆಮ್ಮದಿ ನೀಡಿದ್ದು ನಟ ವಿಜಯ್ ದೇವರಕೊಂಡ ಎಂದು ಹೇಳಿಕೊಂಡಿದ್ದರು. ಇದೇ ಕಾರಣಕ್ಕೆ ವಿಜಯ ತಮ್ಮ ಜೀವನದಲ್ಲಿ ಬಹಳ ವಿಶೇಷವಾಗಿ ಎಂದು ಅವರು ಅಭಿಪ್ರಾಯಪಟ್ಟಿದ್ದರು.
"ಯಾರೂ ಕೂಡ ಇಷ್ಟವಿಲ್ಲದ ಅಥವಾ ಒತ್ತಡದ ಸಂಬಂಧದಲ್ಲಿ ಬಲವಂತವಾಗಿ ಮುಂದುವರೆಯಬಾರದು. ಜೀವನದಲ್ಲಿ ಶಾಂತಿ ಮತ್ತು ಸಂತೋಷ ತರುವಂತಹ ವ್ಯಕ್ತಿಯೊಂದಿಗೆ ಇರುವುದು ತುಂಬಾ ಮುಖ್ಯ ಎಂಬುದನ್ನು ನಾನು ಈಗ ಅರಿತುಕೊಂಡಿದ್ದೇನೆ"ಎಂದು ರಶ್ಮಿಕಾ ಮಂದಣ್ಣ ಹೇಳಿದ್ದರು.
ಈ ಹೇಳಿಕೆ ಇದೀಗ ಮತ್ತೆ ವೈರಲ್ ಆಗಿದ್ದು, ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ನಡುವಿನ ಆತ್ಮೀಯ ಭಾಂದವ್ಯದ ಬಗ್ಗೆ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ವಿಜಯ್ ದೇವರಕೊಂಡ ಹುಟ್ಟು ಹಬ್ಬದ ಸಂಭ್ರಮದ ನಡುವೆ ಈ ಹಳೇ ಸಂದರ್ಶನ ಮತ್ತೊಮ್ಮೆ ಟ್ರೆಂಡ್ ಆಗುತ್ತಿದೆ.
"ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯ್ ದೇವರಕೊಂಡ ಇರಲಿ" :
ರಶ್ಮಿಕಾ ಮಂದಣ್ಣ ಹೇಳಿದ್ದರು
ಟಾಲಿವುಡ್ ನ ಜನಪ್ರಿಯ ಜೋಡಿ ಯಾದ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಕುರಿತು ಮತ್ತೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಆರಂಭವಾಗಿದೆ. ಗರ್ಲ್ ಫ್ರೆಂಡ್ ಸಿನಿಮಾ ವೇದಿಕೆಯಲ್ಲಿ ರಶ್ಮಿಕ ಹೇಳಿದ ಬಾವುಕ ಮಾತುಗಳು ಇದೀಗ ಮತ್ತೆ ವೈರಲ್ ಆಗಿವೆ.
ಕಾರ್ಯಕ್ರಮದ ವೇಳೆ ಮಾತನಾಡಿದ್ದ ರಶ್ಮಿಕಾ ಮಂದಣ್ಣ,"ಈ ಸಿನಿಮಾದ ಆರಂಭದಿಂದಲೂ ನೀನು ನನ್ನ ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯದೇವರ ಕೊಂಡ ಇರಲಿ ಎಂದು ನಾನು ಹಾರೈಸುತ್ತೇನೆ. ಅಂತಹ ವ್ಯಕ್ತಿ ಸಿಗುವುದು ಒಂದು ಆಶೀರ್ವಾದ"ಎಂದು ಹೇಳಿ ಭಾವುಕರಾಗಿದ್ದರು.
ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೆಡ್ ಚಿತ್ರಗಳ ಮೂಲಕ ಅಭಿಮಾನಿಗಳ ಮನ ಗೆದ್ದ ಈ ಜೋಡಿ, ನಿಜ ಜೀವನದಲ್ಲೂ ಉತ್ತಮ ಸ್ನೇಹಿತರಾಗಿ ಗುರುತಿಸಿಕೊಂಡಿದ್ದಾರೆ. ಇಬ್ಬರ ನಡುವೆ ಡೇಟಿಂಗ್ ವದಂತಿಗಳು ಕೇಳಿ ಬಂದರೂ, ಅವುಗಳನ್ನು ರಶ್ಮಿಕ ಕ್ಯೂಟ್ ಎಂದು ನಗುಮುಖದಿಂದ ಪ್ರತಿಕ್ರಿಯಿಸಿದ್ದರು.
ಇದೇ ವೇಳೆ ರಶ್ಮಿಕಾ ಮಂದಣ್ಣ ನಟ ವಿಜಯ್ ದೇವರಕೊಂಡ ಅವರ ಪ್ರಾಮಾಣಿಕತೆ ಮತ್ತು ಬೆಂಬಲ ಯಾವಾಗಲೂ ಗೌರವಿಸುತ್ತಿರುವುದಾಗಿ ಹೇಳಿಕೊಂಡಿದ್ದರು. ಇದೀಗ ವಿಜಯ್ ದೇವರಕೊಂಡ ಹುಟ್ಟು ಹಬ್ಬದ ಸಂದರ್ಭದಲ್ಲಿ ಈ ಹಳೆಯ ವಿಡಿಯೋ ಮತ್ತು ಹೇಳಿಕೆಗಳು ಮತ್ತೆ ಟ್ರೆಂಡ್ ಆಗಿದ್ದು, ಅಭಿಮಾನಿಗಳು ಜೋಡಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಇತ್ತೀಚಿಗೆ ಅಷ್ಟೇ ಮದುವೆಯಾದ ಈ ಜೋಡಿ, ತಮ್ಮ ದಾಂಪತ್ಯದ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಟಾಲಿವುಡ್ ನಲ್ಲಿ ಎಲ್ಲರ ಗಮನ ಸೆಳೆದ ಈ ಜೋಡಿ ಇದೀಗ ಮದುವೆಯಾದ ಖುಷಿಯಲ್ಲಿ ಸಂತಸದಿಂದ ಇದ್ದಾರೆ.
Also Read:
ಸಚಿವ ಮುನಿಯಪ್ಪ ಹೇಳಿಕೆಯಿಂದ ಒಳ ಮೀಸಲಾತಿ ಹುದ್ದೆಗಳ ಚರ್ಚೆಗೆ ಹೊಸ ತಿರುವು