<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

Belagavi issue :ಜೂನ್ ಎರಡರ ಒಳಗೆ ನಿರ್ಧಾರ ಕೈಗೊಳ್ಳಿ,ಇಲ್ಲವಾದರೆ ಕ್ರಮ ಎಂದು ವಾಟಾಳ್ ಎಚ್ಚರಿಕೆ

Belagavi issue :ಜೂನ್ ಎರಡರ ಒಳಗೆ ನಿರ್ಧಾರ ಕೈಗೊಳ್ಳಿ,ಇಲ್ಲವಾದರೆ ಕ್ರಮ ಎಂದು ವಾಟಾಳ್ ಎಚ್ಚರಿಕೆ
Summary: Pro-Kannada activist Vatal Nagaraj has again given a strong warning regarding the Belagavi issue, saying that a decision must be taken that the Mahajan report must be implemented by June 2. Otherwise, there will be an unprecedented revolution in Belagavi," he warned.

belagavi news :

ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ಅವರು ಬೆಳಗಾವಿ ಗಡಿ ವಿಚಾರವಾಗಿ ಮತ್ತೆ ತೀವ್ರ ಎಚ್ಚರಿಕೆ ನೀಡಿದ್ದು,ಜೂನ್ ೨ ರೊಳಗೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ"ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ" ಹಾಗೂ ಮಹಾಜನ್ ವರದಿ ಜಾರಿಗೆ ತರಬೇಕೆಂಬ ನಿರ್ಣಯ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇಲ್ಲವಾದರೆ ಜೂನ್ 4ರಂದು ಬೆಂಗಳೂರಿನಲ್ಲಿ ಎಲ್ಲಾ ಕನ್ನಡ ಸಂಘಟನೆಗಳ ಸಭೆ ಕರೆದು ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಗಳವಾರ ಬೆಳಗಾವಿ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ಥಾಪಿಸಿರುವ ಹಲ್ಮಿಡಿ ಶಾಸನದ ಪ್ರತಿ ಕೃತಿಗೆ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಾಟಾಳ್ ನಾಗರಾಜ್,"ಮಹಾನಗರ ಪಾಲಿಕೆ ಯಾವ ನೆಲೆಯಲ್ಲಿದೆ ಎಂಬುದನ್ನು ಅಧಿಕಾರದಲ್ಲಿರುವವರು ಅರ್ಥಮಾಡಿಕೊಳ್ಳಬೇಕು.ಬೆಳಗಾವಿ ಕನ್ನಡಿಗರ ಗಂಡು ಮೆಟ್ಟಿದ ನೆಲ.ಇದು ಕರ್ನಾಟಕದ ಅವಿಭಾಜ್ಯ ಅಂಗ.ಮಹಾಜನ್ ವರದಿ ಜಾರಿ ಆಗಲೇಬೇಕು" ಎಂದು ಒತ್ತಾಯಿಸಿದರು.

ಇನ್ನಷ್ಟು ಕಿಡಿಕಾರಿದ ಅವರು,"ಒಂದು ವಾರದೊಳಗೆ ಬೆಳಗಾವಿ ಕನ್ನಡದ ಅವಿಭಾಜ್ಯ ಅಂಗ ಮತ್ತು ಮಹಾಜನ್ ವರದಿ ಜಾರಿಗೆ ತರಬೇಕೆಂಬ ನಿರ್ಣಯ ಕೈಗೊಳ್ಳಬೇಕು.ಆಗಲು ಎಚ್ಚೆತ್ತುಕೊಳ್ಳದಿದ್ದರೆ,ಜೂನ್ 4ರಂದು ಬೆಂಗಳೂರಿನಲ್ಲಿ ಎಲ್ಲಾ ಕನ್ನಡ ಸಂಘಟನೆಗಳ ಸಭೆ ನಡೆಸುತ್ತೇವೆ.ಪ್ರವೀಣ್ ಶೆಟ್ಟಿ,ಶಿವರಾಮೇ ಗೌಡ,ನಾರಾಯಣ ಗೌಡ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳ ಮುಖಂಡರು ಆಹ್ವಾನಿಸಿ ಅಖಂಡ ಕರ್ನಾಟಕ ಬಂದ್ ಗೆ ಕರೆ ನೀಡಿದ್ದೇವೆ" ಎಂದು ಹೇಳಿದರು.ಈ ಹೇಳಿಕೆಯಿಂದ ಬೆಳಗಾವಿ ಗಡಿ ವಿವಾದ ಮತ್ತೊಮ್ಮೆ ರಾಜಕೀಯ ಮತ್ತು ಕನ್ನಡಪರ ಸಂಘಟನೆಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು,ಮುಂದಿನ ದಿನಗಳಲ್ಲಿ ಹೋರಾಟ ತೀವ್ರಗೊಳ್ಳುವ ಸಾಧ್ಯತೆ ವ್ಯಕ್ತವಾಗಿದೆ.

Sponsored

ಬಂದ್ ದಿನ ನಾವು ಬೆಳಗಾವಿಗೆ ಬರುತ್ತೇವೆ.ಬೆಳಗಾವಿಯಿಂದಲೇ ಬಹುದೊಡ್ಡ ಕ್ರಾಂತಿ ಆರಂಭವಾಗಲಿದೆ.ಹೊಸ ಕ್ರಾಂತಿಗೆ ದಿಕ್ಸೂಚಿ ಸಿಗಲಿದೆ. ಇಲ್ಲಿಂದ ಕ್ರಾಂತಿಯ ಕಳೆ ಮೊಳಗಲಿದೆ.ಇಡೀ ಉತ್ತರ ಕರ್ನಾಟಕ,ಕಲ್ಯಾಣ ಕರ್ನಾಟಕ ಜನರು ಬೆಳಗಾವಿ ಜೊತೆಗೆ ನಿಲ್ಲಬೇಕು.ನಮ್ಮ ದೇಹದ ರಕ್ತದ ಕೊನೆ ಹನಿ ಇರುವವರೆಗೂ ಹೋರಾಡಲು ನಾವು ಸಿದ್ಧರಿದ್ದೇವೆ ಎಂದು ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದರು.

ಹಿರಿಯ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರು ಬೆಳಗಾವಿ ಗಡಿ ವಿಚಾರವಾಗಿ ಮಾತನಾಡುವ ವೇಳೆ ಚಟಾಕಿ ಒಂದನ್ನು ಹಾರಿಸಿ ಗಮನ ಸೆಳೆದರು, "ಈ ಹೋರಾಟದಿಂದ ಮುಂದೆ ರಾಜ್ಯದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುತ್ತದೆ.ಕನ್ನಡ ಇದರಲ್ಲಿ ಸರ್ಕಾರ ಬರಬೇಕು.ಆಗ ಸುವರ್ಣ ವಿಧಾನಸೌಧದಲ್ಲಿ ಕನ್ನಡ ಸಂಘಟನೆಗಳಿಗೆ ಒಂದು ಕೊಠಡಿ ನೀಡಬೇಕು.ಪ್ರತಿಯೊಂದು ಕನ್ನಡ ಸಂಘಟನೆಗೆ ವರ್ಷಕ್ಕೆ ಒಂದು ಕೋಟಿ ರೂ.ಅನುದಾನ ಘೋಷಿಸಬೇಕು.ಪ್ರೆಸ್ ಕ್ಲಬ್ ಗೆ 5 ಕೋಟಿ ರೂ.ನೀಡಬೇಕು.ಇದು ಯಾವಾಗಲೂ ಸಾಧ್ಯ ಆಗುತ್ತದೆ ಅಂದರೆ ನಾನು ಮುಖ್ಯಮಂತ್ರಿ ಆಗಬೇಕು.ಮುಂದೆ ನಾನೇ ಸಿಎಂ ಆಗೋದು"ಎಂದು ಹಾಸ್ಯ ಭರಿತವಾಗಿ ಹೇಳಿದರು.

ಇದಷ್ಟೇ ಅಲ್ಲದೆ, "ನಮ್ಮ ಜೊತೆಗಿರುವ ಕನ್ನಡ ಪರ,ರೈತಪರ ಸಂಘಟನೆಗಳ ಮುಖಂಡರು ಹಾಗೂ ಪತ್ರಕರ್ತರಿಗೂ ಸಚಿವ ಸ್ಥಾನ ಕೊಡುತ್ತೇವೆ.ಸಿದ್ದರಾಮಯ್ಯ ಅವರೇ,ನೀವು ಏನು ಕಣ್ಮುಚ್ಚಿ ಕುಳಿತಿದ್ದೀರಾ? ಇದೇನು ಹುಡುಕಾಟವೇ? ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಕೈಗೊಳ್ಳಿ.ಇಲ್ಲವಾದರೆ ಮಹಾನಗರ ಪಾಲಿಕೆಯನ್ನು ವಜಾ ಮಾಡಿ" ಎಂದು ಒತ್ತಾಯಿಸಿದರು.

ಬೆಳಗಾವಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಆವರಣದಲ್ಲಿ ನೂತನವಾಗಿ ಪ್ರತಿಷ್ಠಾಪಿಸಿರುವ ಕನ್ನಡದ ಮೊದಲ Halmidi Inscription ಪ್ರತಿಕೃತಿಗೆ ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಅವರ ನೇತೃತ್ವದಲ್ಲಿ ವಿಶೇಷ ಪೂಜೆ ಮತ್ತು ಜಲ ಅಭಿಷೇಕ ನೆರವೇರಿಸಲಾಯಿತು.

Sponsored

ಈ ಸಂದರ್ಭದಲ್ಲಿ ಹಾಲು ಹಾಗೂ ಸಪ್ತ ನದಿಗಳಿಂದ ತರಲಾಗಿದ್ದ ಪವಿತ್ರ ನೀರಿನಿಂದ ಶಾಸನದ ಪ್ರತಿಕೃತಿಗೆ ಅಭಿಷೇಕ ಮಾಡಲಾಯಿತು.ಕನ್ನಡಪರ ಸಂಘಟನೆಗಳ ಮಹಿಳಾ ಕಾರ್ಯಕರ್ತರು ತಲೆ ಮೇಲೆ ಹೊತ್ತು ತಂದಿದ್ದ ಕೊಡಗಳಲ್ಲಿ ಸಪ್ತ ನದಿಗಳ ನೀರನ್ನು ಶಾಸನದ ಪ್ರತಿ ಕೃತಿಯ ಮೇಲೆ ಸುರಿದು ಭಕ್ತಿ ಭಾವದಿಂದ ಪೂಜೆ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕನ್ನಡಪರ ಹೋರಾಟಗಾರರು ಮತ್ತು ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.

ಈ ವೇಳೆ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, ಸಾ.ರಾ.ಗೋವಿಂದ, ಅಶೋಕ್ ಚಂದರಗಿ, ಮಹದೇವ ತಳವಾರ್, ಶ್ರೀನಿವಾಸ್ ತಾಳೂಕರ್, ವಾಜೀದ್ ಹಿರೇಕೊಡಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಹಲ್ಮಿಡಿ ಶಾಸನ ಕನ್ನಡ ಭಾಷೆಯ ಐತಿಹಾಸಿಕ ಪರಂಪರೆಯ ಸಂಕೇತವಾಗಿದ್ದು,ಅದರ ಪ್ರತಿ ಕೃತಿಗೆ ನಡೆದ ಈ ಪೂಜೆ ಮತ್ತು ಜಲಾಭಿಷೇಕ ಕಾರ್ಯಕ್ರಮ ಕನ್ನಡ ಪರ ಸಂಘಟನೆಗಳ ಗಮನ ಸೆಳೆಯಿತು.

ಬೆಳಗಾವಿಯಲ್ಲಿ ಕನ್ನಡಪರ ಹೋರಾಟ ತೀವ್ರಗೊಂಡಿದ್ದು,ಹಿರಿಯ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಹಾಗು ಸಾ.ರಾ.ಗೋವಿಂದ ಅವರನ್ನು ಪೊಲೀಸರು ವರ್ಷಕ್ಕೆ ಪಡೆದ ಘಟನೆ ನಡೆದಿದೆ.

Sponsored

ಜಿಲ್ಲಾಧಿಕಾರಿ ಕಚೇರಿ, ಅವರದಲ್ಲಿ ನಡೆದ ಕಾರ್ಯಕ್ರಮದ ಬಳಿಕ,ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಲು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಹೋರಾಟಗಾರರು ಮುಂದಾಗಿದ್ದರು.ಈ ವೇಳೆ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಪೊಲೀಸರು ಅವರನ್ನು ತಡೆದಿದ್ದಾರೆ.ತಡೆಯುವ ಸಂದರ್ಭದಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು,ಕೆಲ ಪ್ರತಿಭಟನಾ ಕಾರರು ರಸ್ತೆ ಮೇಲೆ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರೊಂದಿಗೆ ಪ್ರತಿಭಟನಾಕಾರರ ನಡುವೆ ತೀವ್ರ ವಾಗ್ವಾದ ನಡೆದಿದ್ದು,ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ವಾಟಾಳ್ ನಾಗರಾಜ್ ಸಾ.ರಾ.ಗೋವಿಂದ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವರ್ಷಕ್ಕೆ ಪಡೆದಿದ್ದಾರೆ.

ಈ ಘಟನೆಯ ಬಳಿಕ ನಗರದಲ್ಲಿ ತಾತ್ಕಾಲಿಕವಾಗಿ ಒತ್ತಡದ ವಾತಾವರಣ ನಿರ್ಮಾಣವಾಗಿದ್ದು,ಕನ್ನಡಪರ ಸಂಘಟನೆಗಳ ಮುಂದಿನ ಹೋರಾಟದ ಬಗ್ಗೆ ಕುತೂಹಲ ಹೆಚ್ಚಾಗಿದೆ.

Also Read:

Sponsored

ಮೆಕ್ಕಾದಲ್ಲಿ ಹಜ್ ಯಾತ್ರೆ ಆರಂಭ: ಲಕ್ಷಾಂತರ ಭಕ್ತರ ಭಾರಿ ಆಗಮನ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online