<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಬಳ್ಳಾರಿ ಅಂದ್ರಾಳ ಹಳ್ಳ ಘಟನೆ: ಮಹಿಳೆಯರ ಶವ ಪತ್ತೆ; ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ

ಬಳ್ಳಾರಿ ಅಂದ್ರಾಳ ಹಳ್ಳ ಘಟನೆ: ಮಹಿಳೆಯರ ಶವ ಪತ್ತೆ; ಪ್ರವಾಹದಲ್ಲಿ ಕೊಚ್ಚಿಹೋಗಿರುವ ಸಾಧ್ಯತೆ
Summary: The body of a woman was found in Andral Halla in Bellary district, causing concern among the locals. The water level in the ravine has risen due to heavy rains overnight, and it is suspected that the woman may have been swept away. Upon receiving information about the incident, police and local officials immediately rushed to the spot and conducted an investigation. The body has been sent to the hospital for further procedures, and more information about the incident is being collected.

Belagavi news:

ಬಳ್ಳಾರಿ ನಗರದ ಹೊರವಲಯದ ಅಂದ್ರಾಳ್ ಹಳ್ಳದಲ್ಲಿ ಅಪರಿಚಿತ ಮಹಿಳೆಯೊಬ್ಬರ ಮೃತದೇಹ ಭಾನುವಾರ ಬೆಳಿಗ್ಗೆ ಪತ್ತೆಯಾಗಿದೆ. ಶನಿವಾರ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದ ಹಳ್ಳದಲ್ಲಿ ಉಂಟಾದ ಪ್ರವಾಹದ ವೇಳೆ ಮಹಿಳೆ ಕೊಚ್ಚಿಹೋಗಿರುವ ಸಾದ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ.

ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದ್ದು, ಅಂದ್ರಾಳ ಹಳ್ಳ ತುಂಬಿ ಹರಿಯುತ್ತಿತ್ತು. ಭಾನುವಾರ ಮುಂಜಾನೆ ಅಲ್ಲದೆ ಬಳಿ ಸಾರ್ವಜನಿಕರು ಹೋಗುತ್ತಿದ್ದಾಗ, ನೀರಿನ ರಭಸದಲ್ಲಿ ಸುಲುಕಿಕೊಂಡಿದ್ದ ಮಹಿಳೆಯ ಶವ ಗಮನಕ್ಕೆ ಬಂದಿದೆ. ತಕ್ಷಣವೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ಪಡೆದ ಕೂಡಲೇ ಸ್ಥಳಕ್ಕೆ ಧಾವಿಸಿದ ಬಳ್ಳಾರಿ ಗ್ರಾಮೀಣ ಠಾಣೆ ಪೋಲಿಸರು, ಮೃತದೇಹವನ್ನು ಹಳ್ಳಯಿಂದ ಹೊರತೆಗೆದು ಪರಿಶೀಲನೆ ನಡೆಸಿದ್ದಾರೆ. ಮೃತ ಮಹಿಳೆಯ ವಯಸ್ಸು ಅಂದಾಜು 35 ರಿಂದ 40 ವರ್ಷಗಳ ನಡುವೆ ಇದ್ದು, ಸದ್ಯಕ್ಕೆ ಅವರ ಗುರುತು ಪತ್ತೆಯಾಗಿಲ್ಲ.

Sponsored

ಮಹಿಳೆ ಕಾಲು ಜಾರಿ ಹಳ್ಳಕ್ಕೆ ಬಿದ್ದಿರಬಹುದೇ ಅಥವಾ ರಸ್ತೆ ದಾಟುವ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದ್ದು, ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಯವರಿಗೆ ಮಗನಿಂದಲೇ ಚಾಕುವಿನಿಂದ ಇರಿತ: ಪ್ರತ್ಯೇಕ ಘಟನೆಯಲ್ಲಿ, ಯುವಕನೋರ್ವ ಮನೆಯವರ ಮೇಲೆ ಚಾಕುವಿನಿಂದ ದಾಳಿ ಮಾಡಿ, ಬಳಿಕ ತಾನು ಇರಿದುಕೊಂಡ ಘಟನೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಅಯೋಧ್ಯೆ ಗ್ರಾಮದಲ್ಲಿ ಪ್ರತ್ಯೇಕ ಘಟನೆಯೊಂದು ಭಾನುವಾರ ರಾತ್ರಿ ಬಾರಿ ಆಘಾತ ಮೂಡಿಸಿದೆ. ಮನೆಯವರಲ್ಲೆ ಒಬ್ಬ ಯುವಕ ಚಾಕುವಿನಿಂದ ದಾಳಿ ನಡೆಸಿದ ಪರಿಣಾಮ ತಂದೆ ಮತ್ತು ಮಗಳು ಸಾವನ್ನಪ್ಪಿದ್ದು, ತಾಯಿ ಹಾಗೂ ಆರೋಪಿ ಯುವಕ ಗಾಯಗೊಂಡಿದ್ದಾರೆ.

ಮಾಹಿತಿಯ ಪ್ರಕಾರ, ಶನಿವಾರ ರಾತ್ರಿ ಸುಮಾರು 9 ಗಂಟೆಗೆ ಕುಟುಂಬದವರು ಊಟ ಮಾಡಿ ಮಲಗಿದ್ದ ವೇಳೆ, ಏಕಾಏಕಿ ಲೈಟ್ ಆಫ್ ಮಾಡಿ ಪಿಯುಸಿ ಓದುತ್ತಿದ್ದ, ಸಾಯಿ ವೆಂಕಟಮಣಿ (18) ಚಾಕುವಿನಿಂದ ಮನೆಯವರ ಮೇಲೆ ದಾಳಿ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಈ ದಾಳಿಯಲ್ಲಿ ತಂದೆ ವೆಂಕಟ ನಾಯ್ಡು ಮತ್ತು ಅಕ್ಕ ಪ್ರಗತಿ (19) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಗಂಭೀರವಾದ ಗಾಯಗೊಂಡ ತಾಯಿ ಸೌಜನ್ಯ (40) ಅವರನ್ನು ಬಳ್ಳಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ದಾಳಿ ನಡೆಸಿದ ಆರೋಪಿ ಯುವಕನನ್ನು ತಾನೇ ಚಾಕುವಿನಿಂದ ಇರಿದುಕೊಂಡಿದ್ದು, ಆತನಿಗೂ ಚಿಕಿತ್ಸೆ ಮುಂದುವರೆದಿದೆ.

Sponsored

ಈ ಕುರಿತು ಮೃತರ ತಂದೆ ನೀಡಿದ್ದ ದೂರು ಆಧಾರವಾಗಿ ಪ್ರಕರಣ ದಾಖಲಿಸಲಾಗಿದ್ದು, ಘಟನೆ ಕುರಿತು ಕೊಪ್ಪಲ್ ಎಸ್ ಪಿ ರಾಮ್ ಎಲ್, ಅರಸಿದ್ದಿ ಮಾಹಿತಿ ನೀಡಿದ್ದಾರೆ ಪ್ರಕರಣದ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Also Read:

ಚಿನ್ನಸ್ವಾಮಿ ಸ್ಟೇಡಿಯಂ ವಿರುದ್ಧ ಗಂಭೀರ ಆರೋಪ - ಏನದು? ಇಲ್ಲಿದೆ ನೋಡಿ ಫುಲ್ ಅಪ್ಡೇಟ್ಸ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online