belagavi news :
ಜೂನ್ 2 ರ ವಾಯು ಗುಣಮಟ್ಟ ವರದಿ ಪ್ರಕಾರ , ಕರ್ನಾಟಕದ ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ತೃಪ್ತಿದಾಯಕ ಮಟ್ಟದಲ್ಲಿದ್ದು, ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇತ್ತೀಚೆಗೆ ಸುರಿದ ಮಳೆ ಮತ್ತು ಬಲವಾದ ಗಾಳಿ ಪರಿಣಾಮವಾಗಿ ವಾತಾವರಣದಲ್ಲಿದ್ದ ದೂಳು ಹಾಗೂ ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ಜನರು ಶುದ್ಧ ಗಾಳಿಯನ್ನು ಅನುಭವಿಸುತ್ತಿದ್ದಾರೆ.
ರಾಜ್ಯದ ಪ್ರಮುಖ ನಗರಗಳಿಗೆ ವಾಯುಗುಣ ಮಟ್ಟ ಸೂಚ್ಯಂಕ ಉತ್ತಮ ಗುಣಮಟ್ಟದಲ್ಲಿದ್ದು, ವಿಶೇಷವಾಗಿ ಚಿಕ್ಕಮಗಳೂರು ಮತ್ತು ಗದಗ ಜಿಲ್ಲೆಗಳು ದೇಶದಲ್ಲೇ ಅತ್ಯಂತ ಶುದ್ಧ ಗಾಳಿ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ಈ ಬೆಳವಣಿಗೆಗೆ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ರಾಜ್ಯಕ್ಕೆ ಹೆಮ್ಮೆಯ ಸಂಗತಿಯಾಗಿದೆ.
ಸಿಲಿಕಾನ್ ಸಿಟಿ ಬೆಂಗಳೂರು ಸಾಮಾನ್ಯ ವಾಗಿ ವಾಹನದಟ್ಟನೆ ಮತ್ತು ನಗರೀಕರಣದಿಂದ ವಾಯು ಮಾಲಿನ್ಯದ ಸವಾಲುಗಳನ್ನು ಎದುರಿಸುತ್ತಿದ್ದರು, ಕಳೆದ ಕೆಲವು ದಿನಗಳಿಂದ ಸುರಿದ ಮಳೆಯ ಪರಿಣಾಮ ವಾಯುಗುಣ ಮಟ್ಟದಲ್ಲಿ ಗಮನಹಧಾರಣೆ ಕಂಡು ಬಂದಿದೆ. ಮಳೆ ನೀರು ವಾತಾವರಣದಲ್ಲಿರುವ ಧೂಳಿನ ಕಣಗಳನ್ನು ಕೆಳಕ್ಕೆ ತಳ್ಳುವುದರಿಂದ ಗಾಳಿಗೆ ಸ್ವಚ್ಛತೆ ಹೆಚ್ಚಾಗಿದೆ ಎಂದು ಪರಿಸರ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಚಿಕ್ಕಮಗಳೂರಿನ ಹಸಿರು ಪರಿಸರ ಮತ್ತು ಪಶ್ಚಿಮ ಘಟ್ಟ ಪ್ರಾದೇಶಿಕ ಪ್ರಾಕೃತಿಯ ಸೌಂದರ್ಯ ಗಾಳಿಯ ಗುಣಮಟ್ಟವನ್ನು ಮತ್ತಷ್ಟು ಉತ್ತಮಗೊಳಿಸಿದ್ದು, ಗದಗ ಜಿಲ್ಲೆಯಲ್ಲಿಯೂ ಮಾಲಿನ್ಯ ಪ್ರಮಾಣ ಕಡಿಮೆ ದಾಖಲಾಗಿದೆ. ಇದರಿಂದ ಈ ನಗರಗಳು ದೇಶದ ಅತ್ಯಂತ ಆರೋಗ್ಯಕರ ವಾತಾವರಣ ಹೊಂದಿರುವ ದೇಶಗಳಾಗಿ ಗುರುತಿಸಿಕೊಂಡಿವೆ.
ಪರಿಸರ ತಜ್ಞರ ಪ್ರಕಾರ, ಮಳೆಗಾಲದ ಆರಂಭದಲ್ಲಿ ವಾಯುಗುಣ ಮಟ್ಟ ಸಾಮಾನ್ಯವಾಗಿ ಸುಧಾರಿಸುತ್ತದೆ. ಆದರೆ ನಗರ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ, ಕೈಗಾರಿಕಾ ಚಟುವಟಿಕೆಗಳು ಮತ್ತು ನಿರ್ಮಾಣ ಕಾಮಗಾರಿಗಳ ನಿಯಂತ್ರಣವು ದೀರ್ಘಕಾಲಿಕವಾಗಿ ಉತ್ತಮ ಕಾಯ್ದುಕೊಳ್ಳಲು ಅಗತ್ಯವಾಗಿದೆ.
ಬೆಂಗಳೂರಿನಲ್ಲಿ ಶುದ್ಧ ಗಾಳಿ, AQI 44 ; ಚಿಕ್ಕಮಗಳೂರು ಮತ್ತು ಗದಗ ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ :
ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ನಗರಗಳಲ್ಲಿ ಇಂದಿನ ವಾಯು ಗುಣಮಟ್ಟ ಅತ್ಯುತ್ತಮ ಮಟ್ಟದಲ್ಲಿದೆ. ಜೂನ್ 2ರ ವಾಯು ಗುಣಮಟ್ಟ ಸೂಚ್ಯಂಕ ವರದಿ ಪ್ರಕಾರ, ಬೆಂಗಳೂರಿನ ಸರಾಸರಿ AQI 42 ರಿಂದ 44 ರ ನಡುವೆ ದಾಖಲಾಗಿದ್ದು, ಇದು ಉತ್ತಮ ವರ್ಗಕ್ಕೆ ಸೇರಿದೆ. ಇತ್ತೀಚೆಗೆ ಸುರಿದ ಮಳೆ ಹಾಗೂ ಬಿರುಗಾಳಿಯ ಪರಿಣಾಮವಾಗಿ ವಾತಾವರಣದಲ್ಲಿದ್ದ ಧೂಳು ಮತ್ತು ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ನಗರದಲ್ಲಿ ಶುದ್ಧ ಗಾಳಿ ಹರಿದಾಡುತ್ತಿದೆ.
ಹವಾಮಾನ ಇಲಾಖೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ ಅಂಕಿ ಅಂಶಗಳ ಪ್ರಕಾರ, 0 ರಿಂದ 50 ರ ಒಳಗಿನ AQI ಅನ್ನು ಉತ್ತಮ ಗುಣಮಟ್ಟದ ಗಾಳಿ ಎಂದು ಪರಿಗಣಿಸಲಾಗುತ್ತದೆ. ಪ್ರಸ್ತುತ ಬೆಂಗಳೂರಿನ ವಾಯು ಗುಣಮಟ್ಟ ಆರೋಗ್ಯಕರ ಮಟ್ಟದಲ್ಲಿದ್ದು, ಸಾರ್ವಜನಿಕರಿಗೆ ಯಾವುದೇ ಆತಂಕವಿಲ್ಲದ ವಾತಾವರಣ ನಿರ್ಮಾಣವಾಗಿದೆ.
ಬೆಂಗಳೂರಿನ ಪ್ರಮುಖ ಪ್ರದೇಶಗಳ AQI ಹೇಗಿದೆ? :
ನಗರದ ಪ್ರಮುಖ ವಲಯಗಳಾದ ಸಿಲ್ಕ್ ಬೋರ್ಡ್ ಮತ್ತು ಜಯನಗರ ಪ್ರದೇಶಗಳಲ್ಲಿ ವಾಯುಗುಣಮಟ್ಟ ಉತ್ತಮವಾಗಿದ್ದು, AQI 45ರ ಆಸುಪಾಸಿನಲ್ಲಿ ದಾಖಲಾಗಿದೆ. ಸಾಮಾನ್ಯವಾಗಿ ವಾಹನ ದಟ್ಟಣೆ ಹೆಚ್ಚಿರುವ ಈ ಪ್ರದೇಶಗಳಲ್ಲಿ ಮಳೆಯ ಪರಿಣಾಮವಾಗಿ ಮಾಲಿನ್ಯ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ.
ಇನ್ನು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿಯೂ ವಾಯುಗುಣ ಮಟ್ಟ ತೃಪ್ತಿದಾಯಕ ಮಟ್ಟದಲ್ಲಿದೆ. ಕೈಗಾರಿಕಾ ಚಟುವಟಿಕೆಗಳು ಹೆಚ್ಚಿದ್ದರು, ಬಿರುಗಾಳಿ ಮತ್ತು ಮಳೆಯ ಪರಿಣಾಮ ಮಾಲಿನ್ಯ ನಿಯಂತ್ರಣದಲ್ಲಿದ್ದು, AQI ಸುರಕ್ಷಿತ ಮಟ್ಟದಲ್ಲಿ ದಾಖಲಾಗಿದೆ.
ಕರ್ನಾಟಕದ ಇತರೆ ನಗರಗಳಲ್ಲೂ ಉತ್ತಮ ವಾಯುಗು ಗುಣಮಟ್ಟ :
ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಹಲವು ಜಿಲ್ಲೆಗಳಲ್ಲಿಯೂ ವಾಯುಗುಣ ಮಟ್ಟ ತೃಪ್ತಿದಾಯಕವಾಗಿದೆ. ದೇಶದ ಅತ್ಯಂತ ಶುದ್ಧ ಗಾಳಿ ಇರುವ ನಗರಗಳ ಪಟ್ಟಿಯಲ್ಲಿ ಚಿಕ್ಕಮಗಳೂರು ಮತ್ತು ಗದಗ ಪ್ರಮುಖ ಸ್ಥಾನ ಪಡೆದಿವೆ. ಈ ಎರಡು ನಗರಗಳಲ್ಲಿ ಪರಿಸರ ಅತ್ಯಂತ ಸ್ವಚ್ಛವಾಗಿದ್ದು, ಆರೋಗ್ಯಕರ ವಾತಾವರಣ ದಾಖಲಾಗಿದೆ.
ಇತ್ತೀಚಿನ ಮಳೆಯಿಂದಾಗಿ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ವಾಯುಮಾಲಿನ್ಯ ಪ್ರಮಾಣ ಮತ್ತಷ್ಟು ಕಡಿಮೆಯಾಗಿದೆ. ಮೈಸೂರು, ಮಂಡ್ಯ, ಬೆಳಗಾವಿ ಮತ್ತು ಬಾಗಲಕೋಟೆ ನಗರಗಳಲ್ಲಿ AQI 35 ರಿಂದ 60ರ ನಡುವೆ ದಾಖಲಾಗಿದ್ದು, ಉತ್ತಮ ಹಾಗೂ ತೃಪ್ತಿದಾಯಕ ವರ್ಗದಲ್ಲಿವೆ.
ಮಳೆಯಿಂದಾಗಿ ಮಾಲಿನ್ಯ ಹೇಳಿಕೆ:
ಪರಿಸರ ತಜ್ಞರ ಪ್ರಕಾರ, ರಾಜ್ಯದ ವಿವಿಧ ಭಾಗಗಳಲ್ಲಿ ಸುರಿದ ಮಳೆ ಹಾಗೂ ಬಲವಾದ ಗಾಳಿಯಿಂದ ವಾತಾವರಣದಲ್ಲಿದ್ದ ಧೂಳು, ಹೊಗೆ ಮತ್ತು ಮಾಲಿನ್ಯಕಾರಕ ಕಣಗಳು ನೆಲಕ್ಕೆ ಕುಸಿದಿವೆ. ಇದರ ಪರಿಣಾಮವಾಗಿ ಗಾಳಿಯ ಗುಣಮಟ್ಟದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದ್ದು, ಕರ್ನಾಟಕದ ಹಲವು ನಗರಗಳು ದೇಶದ ಅತ್ಯಂತ ಸ್ವಚ ವಾತಾವರಣ ಹೊಂದಿರುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.
Also Read:
ಹೊಸಕೋಟೆಯಲ್ಲಿ ಜನರ ಗಮನ ಸೆಳೆದ ದೃಶ್ಯ: ಕಣ್ಣೂರ ಹಳ್ಳಿ ಪ್ರದೇಶದಲ್ಲಿ 23 ನಾಗರಹಾವು ಮರಿಗಳು ಪತ್ತೆ