Belagavi news:
ಐಪಿಎಲ್ 2026ರಲ್ಲಿ ಅದ್ಭುತ ಫಾರ್ಮ್ ನಲ್ಲಿ ಕಾಣಿಸಿಕೊಳ್ಳುತ್ತಿರುವ ಅನುಭವಸಂಪನ್ನ ವೇಗಿ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ಭಾರತ ತಂಡಕ್ಕೆ ಕರೆತರಬೇಕು ಎಂದು ಮಾಜಿ ಕ್ರಿಕೆಟಿಗ ಆರ್.ಅಶ್ವಿನ್ ಆಗ್ರಹಿಸಿದ್ದಾರೆ. ಹಲವು ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರವಾಗಿರುವ ಭುವಿ, ಪ್ರಸ್ತುತ ಸಿಸನ್ ನಲ್ಲಿ ತಮ್ಮ ಶ್ರೇಷ್ಠ ಬೌಲಿಂಗ್ ಮತ್ತು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಆರ್.ಸಿ.ಬಿ ಪರ ಆಡುತ್ತಿರುವ ಭುವನೇಶ್ವರ್ ಕುಮಾರ್ ಇದುವರೆಗೆ 11 ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಪಡೆದು ಮಿಂಚಿದ್ದಾರೆ. ವಿಶೇಷವಾಗಿ ಪವರ್ ಪ್ಲೇ ಹಾಗೂ ಡೆತ್ ಓವರ್ ಗಳಲ್ಲಿ ನಿರ್ಣಾಯಕ ವಿಕೆಟ್ಗಳನ್ನು ಪಡೆದು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಅವರ ನಿಯಂತ್ರಿತ ಲೈನ್ ಮತ್ತು ಲೆಂಗ್ತ್ ಬೌಲಿಂಗ್ ಎದುರಾಳಿ ಬೆಟ್ಸ್ ಮನ್ ಗಳಿಗೆ ಸವಾಲ್ ಆಗುತ್ತಿದೆ.
ಈ ಪ್ರದರ್ಶನವನ್ನು ಗಮನಿಸಿದ ಆರ್. ಅಶ್ವಿನ್ ಭುವನೇಶ್ವರ್ ಕುಮಾರ್ ಅವರ ಅನುಭವ ಮತ್ತು ಫಾರ್ಮ್ ಅನ್ನು ಪರಿಗಣಿಸಿ ಭಾರತ ತಂಡದಲ್ಲಿ ಅವರಿಗೆ ಮತ್ಯಾವಕಾಶ ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಕ್ರಿಕೆಟ್ ವಲಯದಲ್ಲೂ ಈ ಹೇಳಿಕೆ ಚರ್ಚೆಗೆ ಕಾರಣವಾಗಿದ್ದು, ಭುವಿಯ ಕಮ್ ಬ್ಯಾಕ್ ಬಗ್ಗೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗಿದೆ.
ಟೀಮ್ ಇಂಡಿಯಾದ ಆಯ್ಕೆ ಸಮಿತಿಯ ಮುಂದೆ ಈಗ ಅನುಭವ ಮತ್ತು ಯುವ ಪ್ರತಿಭೆಗಳ ಸಮತೋಲನದ ಪ್ರಶ್ನೆ ಮತ್ತೊಮ್ಮೆ ಎದುರಾಗಿದೆ.
ಐಪಿಎಲ್ 2026ರಲ್ಲಿ ಭುವನೇಶ್ವರ್ ಕುಮಾರ್ ನೀಡುತ್ತಿರುವ ಆಲ್ ರೌಂಡ್ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಭಾನುವಾರ ಮುಂಬೈ ಇಂಡಿಯನ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಆರ್‌ಸಿಬಿ ಪರ ಆಡಿದ ಭುವಿ ನಾಲ್ಕು ಪ್ರಮುಖ ವಿಕೆಟ್ಗಳನ್ನು ಕಬಳಿಸುವ ಮೂಲಕ ತಂಡದ ಗೆಲುವಿಗೆ ಮಹತ್ವದ ಕೊಡುಗೆ ನೀಡಿದರು. ಮಾತ್ರವಲ್ಲದೆ, ಚೇಸಿಂಗ್ ವೇಳೆ ಅಂತಿಮ ಓವರ್ ನಲ್ಲಿ ಸಿಕ್ಸರ್ ತಿಳಿಸಿ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು.
ಈ ಅದ್ಭುತ ಪ್ರದರ್ಶನದ ಬೆನ್ನಲ್ಲೇ ಮಾಜಿ ಸ್ಪಿನ್ನರ್ ಆರ್ ಅಶ್ವಿನ್ ಹಾಗೂ ಮಾಜಿ ಮುಖ್ಯದಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ಭಾರತ್ ತಂಡಕ್ಕೆ ಸೇರಿಸಬೇಕು ಎಂದು ಆಗ್ರಹಿಸಿದ್ದಾರೆ. ಅಶ್ವಿನ್ ತಮ್ಮ ಪ್ರತಿಕ್ರಿಯೆಯಲ್ಲಿ,"ಇದು ಭುವನೇಶ್ವರ್ ಅವರ ದಿನ. ನಿಮ್ಮ ಸಮಯವೊಂದಾಗ ಯಾರು ನಿಮ್ಮನ್ನು ತಡೆಯಲು ಸಾಧ್ಯವಿಲ್ಲ. ಅವರು ಪವರ್ ಪ್ಲೇಸ್ ನಲ್ಲಿ ವಿಕೆಟ್ ಪಡೆಯುತ್ತಾರೆ ಮತ್ತು ಡೆತ್ ಓವರ್ ಗಳಲ್ಲೂ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಾರೆ" ಎಂದು ಹೇಳಿದ್ದಾರೆ.
ಅವರು ಮುಂದುವರೆದು, ಭುವನೇಶ್ವರ್ ಫಿಟ್ನೆಸ್ ಕಾಪಾಡಿಕೊಳ್ಳಲು ಬಹಳ ಶ್ರಮಿಸುತ್ತಿದ್ದಾರೆ ಮತ್ತು ದೇಶಿಯ ಕ್ರಿಕೆಟ್ ಹಾಗೂ ಟಿ20 ಪಂದ್ಯಗಳಲ್ಲಿ ನಿರಂತರವಾಗಿ ಆಡುತ್ತಿದ್ದಾರೆ ಎಂದು ಪ್ರಶಂಸಿಸಿದರು. "ಅಗತ್ಯವಿದ್ದರೆ ಒತ್ತಡದ ಸಂದರ್ಭದಲ್ಲಿ ಸಿಕ್ಸರ್ ಹೊಡೆಯುವ ಸಾಮರ್ಥ್ಯ ಅವರಲ್ಲಿದೆ" ಎಂದು ಅಶ್ವಿನ್ ಹೇಳಿದ್ದಾರೆ.
ಭುವನೇಶ್ವರ್ ಅವರ ಪ್ರದರ್ಶನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಬ್ರಿಂಗ್ ಬ್ಯಾಕ್ ಭುವಿ(#B ringBackBhuvi) ಎಂಬ ಹ್ಯಾಷ್ ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು ಕೂಡ ಅವರನ್ನು ಟೀಮ್ ಇಂಡಿಯಾಗೆ ಮರಳಿ ಸೇರಿಸಬೇಕೆಂದು ಆಗ್ರಹಿಸುತ್ತಿದ್ದಾರೆ. ಕ್ರಿಕೆಟ್ ತಜ್ಞರ ಪ್ರಕಾರ, ಅವರ ಅನುಭವ ಮತ್ತು ಪ್ರಸ್ತುತ ಫಾರ್ಮ್ ಭಾರತ ತಂಡದ ಬೌಲಿಂಗ್ ವಿಭಾಗಕ್ಕೆ ದೊಡ್ಡ ಬಲವಾಗಬಹುದು.
ಐಪಿಎಲ್ ೨೦೨೬ರಲ್ಲಿ ಭುವನೇಶ್ವರ್ ಕುಮಾರ್ ಅವರ ಅದ್ಭುತ ಪ್ರದರ್ಶನ ಕ್ರಿಕೆಟ್ ವಲಯದಲ್ಲಿ ಬಾರಿ ಸಂಚಲನ ಮೂಡಿಸಿದೆ. ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಅವರು ತೋರಿದ ಬೌಲಿಂಗ್ ಪ್ರದರ್ಶನವನ್ನು ಮಾಜಿ ಮುಖ್ಯ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ "ಹಳೆಯ ಭುವಿಯನ್ನು ನೆನಪಿಸುವ ಆಟ" ಎಂದು ಶ್ಲಾಘಿಸಿದ್ದಾರೆ.
ಆ ಪಂದ್ಯದಲ್ಲಿ ಭುವನೇಶ್ವರ್ ತಮ್ಮ ಮೊದಲ ಓವರ್ನಲ್ಲೇ ರಿಕಲ್ಟನ್ ಅವರನ್ನು ಔಟ್ ಮಾಡಿ ಆರಂಭಿಕ ಹೊಡೆತ ನೀಡಿದರು. ನಂತರ ಎರಡನೇ ಓವರ್ ನಲ್ಲಿ ರೋಹಿತ್ ಶರ್ಮಾ ಅವರನ್ನು ನಕಲ್ ಬಾಲ್ ಮೂಲಕ ಪೆವಿಲಿಯನ್ ಗೆ ಕಳುಹಿಸಿದರು. ಅದೇ ಓವರ್ ನ ಮುಂದಿನ ಎಸೆತದಲ್ಲಿ ಸೂರ್ಯ ಕುಮಾರ್ ಯಾದವ್ ಅವರನ್ನು ಡಕ್ ಔಟ್ ಮಾಡುವ ಮೂಲಕ ಮುಂಬೈ ಇಂಡಿಯನ್ ಬ್ಯಾಟಿಂಗ್ ಲೈನ್ ಅಪ್ ಗೆ ದೊಡ್ಡ ಹೊಡೆತ ನೀಡಿದರು.
ಈ ನಿರ್ಣಾಯಕ ವಿಕೆಟ್ಗಳ ಪರಿಣಾಮವಾಗಿ ಮುಂಬೈ ಇಂಡಿಯನ್ಸ್ ದೊಡ್ಡ ಮೊತ್ತ ಕಲೆ ಹಾಕಲು ವಿಫಲವಾಯಿತು. ಶ್ರೀಕಾಂತ್ ಪ್ರಕಾರ, ಇಂತಹ ಪ್ರದರ್ಶನ ನೀಡುತ್ತಿರುವ ಭುವನೇಶ್ವರ್ ಕುಮಾರ್ ಅವರನ್ನು ಮತ್ತೆ ಭಾರತ ತಂಡಕ್ಕೆ ಸೇರಿಸಬೇಕು ಎಂಬುದು ತೀವ್ರ ಅಗತ್ಯವಾಗಿದೆ. 36 ವರ್ಷದ ಭುವಿ ಕೊನೆಯ ಬಾರಿ 2022 ರಲ್ಲಿ ಟೀಮ್ ಇಂಡಿಯಾ ಪರ ಆಡಿದ್ದರು.
ಪ್ರಸ್ತುತ ಐಪಿಎಲ್ 2026 ಸೀಸನ್ ನಲ್ಲಿ ಆರ್‌ಸಿಬಿ ಪರ ಆಡುತ್ತಿರುವ ಭುವನೇಶ್ವರ್ ಕುಮಾರ್ 11 ಪಂದ್ಯಗಳಲ್ಲಿ 21 ವಿಕೆಟ್ಗಳನ್ನು ಪಡೆದು ಪರ್ಪಲ್ ಕ್ಯಾಪ್ ಹಿಡಿದಿದ್ದಾರೆ. ಪವರ್ ಪ್ಲೇ ಮತ್ತು ಡೆತ್ ಓವರ್ ಗಳಲ್ಲಿ ಸಮಾನವಾಗಿ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುತ್ತಿರುವ ಅವರು, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.
ಅವರ ಈ ನಿರಂತರ ಉತ್ತಮ ಪ್ರದರ್ಶನ ಹಿನ್ನೆಲೆಯಲ್ಲಿ ಅಭಿಮಾನಿಗಳು ಹಾಗೂ ಕ್ರಿಕೆಟ್ ತಜ್ಞರು "ಭುವಿಯನ್ನು ಮತ್ತೆ ಭಾರತ ತಂಡಕ್ಕೆ ಕರೆತನ್ನಿ" ಎಂಬ ಆಗ್ರಹವನ್ನು ಹೆಚ್ಚಿಸುತ್ತಿದ್ದಾರೆ.
Also Read:
ಸೋಮವಾರದ ಭವಿಷ್ಯ: ಯಾವ ರಾಶಿಗೆ ಲಾಭ? ಯಾರಿಗೆ ಎಚ್ಚರಿಕೆ?