<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಜಪಾನ್ ಮಾವಿಗೆ ಟಕ್ಕರ್ ಕೊಟ್ಟ ಬೀದರ್ ರೈತನ ವಿಶೇಷ ಬೆಳೆ

ಜಪಾನ್ ಮಾವಿಗೆ ಟಕ್ಕರ್ ಕೊಟ್ಟ ಬೀದರ್ ರೈತನ ವಿಶೇಷ ಬೆಳೆ
Summary: Bidar farmers have grown the world's most expensive mango and made the state proud. The rare Japanese mango crop is now going viral on social media.

Belagavi News:

ಕರ್ನಾಟಕದ ಬೀದರ್ ಜಿಲ್ಲೆಯ ರೈತರು ವಿಶ್ವದ ಅತ್ಯಂತ ದುಬಾರಿ ಮಾವಿನಕಾಯಿ ಎಲ್ಲರ ಗಮನ ಸೆಳೆದಿದ್ದಾರೆ. ಜಪಾನೀಸ್ ತಳಿಯ ಅಪರೂಪದ ಈ ಮಾವಿನಹಣ್ಣು ಲಕ್ಷಾಂತರ ರೂಪಾಯಿ ಮೌಲ್ಯ ಹೊಂದಿದ್ದು, ರಾಜ್ಯದಲ್ಲೇ ಹೊಸ ಕೃಷಿ ಕ್ರಾಂತಿಗೆ ಕಾರಣವಾಗಿದೆ.

ಆಧುನಿಕ ಕೃಷಿ ತಂತ್ರಜ್ಞಾನ ಬಳಸಿಕೊಂಡು ಬೆಳೆದ ಈ ವಿಶೇಷ ಮಾವಿನ ಬೆಳೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ. ರೈತನ ಸಾಧನೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದ್ದು, ಯುವ ಕೃಷಿಕರಿಗೆ ಇದು ಪ್ರೇರಣೆಯಾಗಿದೆ.

ಜಪಾನ್ ಮೂಲದ ವಿಶ್ವದ ಅತ್ಯಂತ ದುಬಾರಿ ಮಾವಿನ ತಳಿಗಳಲ್ಲಿ ಒಂದಾದ ಮಿಯಾಜಾಕಿ ಮಾವು ಇದೀಗ ಕರ್ನಾಟಕದ ಬೀದರ್ ಜಿಲ್ಲೆಯಲ್ಲಿ ಬೆಳೆದಿದ್ದು, ರೈತನ ಸಾಧನೆ ಎಲ್ಲರ ಗಮನ ಸೆಳೆದಿದೆ. ಬೀದರ್ ಜಿಲ್ಲೆಯ ಬಾಲ್ಕಿ ತಾಲೂಕಿನ ಹಲ್ಬರ್ಗ ಗ್ರಾಮದ ರೈತ ಹಣಮಂತ ರಾವ್ ಶ್ರೀಮಾಳೆ ಅವರು ಪ್ರಾಯೋಗಿಕವಾಗಿ ಬೆಳೆದ ಮಿಯಾಜಾಕಿ ಮಾವು ಉತ್ತಮ ಫಲ ನೀಡಿದ್ದು, ಕೃಷಿ ವಲಯದಲ್ಲಿ ಹೊಸ ಸಂಚಲದ ಮೂಡಿಸಿದೆ.

Sponsored

ಮಿಯಾಜಾಕಿ ನಾವು ತನ್ನ ವಿಶಿಷ್ಟ ರುಚಿ, ಕೆಂಪು ಬಣ್ಣ ಹಾಗೂ ಅಪಾರ ಪೌಷ್ಟಿಕಾಂಶಗಳಿಂದ ವಿಶ್ವದ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹೊಂದಿದೆ. ಈ ಮಾವಿನ ಬೆಲೆ ಪ್ರತಿ ಕೆಜಿಗೆ ಸುಮಾರು 2.5 ಲಕ್ಷ ರೂಪಾಯಿವರೆಗೆ ತಲುಪುತ್ತದೆ ಎನ್ನಲಾಗಿದ್ದು, ಇದನ್ನು ವಿಶ್ವದ ಅತ್ಯಂತ ದುಬಾರಿ ಮಾವಿನ ತಳಿಯನ್ನು ಕರೆಯಲಾಗುತ್ತದೆ.

ವಿದೇಶಿ ತಳಿ ನಮ್ಮ ನೆಲದಲ್ಲಿ ಬೆಳೆಯುತ್ತದೆ ಎಂಬ ಕುತೂಹಲ ರೈತ ಹನುಮಂತ ರಾವ್ ಶ್ರೀ ಮಾಲೆ ಅವರು ತಮ್ಮ ತೋಟದಲ್ಲಿ ಮಿಯಾಜಾಕಿ ಮಾವಿನ ಗಿಡಗಳನ್ನು ನೆಟ್ಟು ಪ್ರಾಯೋಗಿಕ ಕೃಷಿ ಕೈಗೊಂಡಿದ್ದರು. ಇದೀಗ ಗಿಡಗಳು ಉತ್ತಮವಾಗಿ ಬೆಳೆದು ಫಲ ನೀಡಿರುವುದು ರೈತರಲ್ಲಿ ಹೊಸ ಭರವಸೆ ಮೂಡಿಸಿದೆ.

ಆಧುನಿಕ ಕೃಷಿ ತಂತ್ರಜ್ಞಾನ, ವಿಶೇಷ ಆರೈಕೆ ಮತ್ತು ಸೂಕ್ತ ಹವಾಮಾನದಿಂದ ಈ ಬೆಳೆ ಯಶಸ್ವಿಯಾಗಿದ್ದ, ಇದೀಗ ಈ ತೋಟವನ್ನು ನೋಡಲು ಸುತ್ತಮುತ್ತಲಿನ ರೈತರು ಆಗಮಿಸುತ್ತಿದ್ದಾರೆ. ಬೀದರ್ ರೈತನ ಈ ಸಾಧನೆ ಸಾಮಾಜಿಕ ಜಾಲತಾಣಗಳಲ್ಲೂ ವೈರಲ್ ಆಗಿದ್ದು, ರಾಜ್ಯದ ಕೃಷಿ ಕ್ಷೇತ್ರಕ್ಕೆ ಹೊಸ ಹೆಮ್ಮೆ ತಂದಿದೆ.

ವಿಶ್ವದ ಅತ್ಯಂತ ದುಬಾರಿ ಮಿಯಾಜಾಕಿ ಮಾವಿನ ಬೆಳೆ ಯಶಸ್ವಿಯಾದ ಹಿನ್ನೆಲೆ ಬೀದರ್ ಜಿಲ್ಲೆಯ ರೈತ ಹನುಮಂತ್ ರಾವ್ ಶ್ರೀ ಮಾಲೆ ಇದೀಗ ಎರಡು ಎಕರೆ ಪ್ರದೇಶದಲ್ಲಿ ಈ ವಿಶೇಷ ಮಾವಿನ ತಳಿ ಬೆಳೆಸಲು ಮುಂದಾಗಿದ್ದಾರೆ. ಜಪಾನ್ ಮೂಲದ ಮಿಯಾಜಾಕಿ ಮಾವು ತನ್ನ ವಿಶಿಷ್ಟ ರುಚಿ, ಕೆಂಪು ಬಣ್ಣ ಹಾಗೂ ಅಪಾರ ಪೌಷ್ಟಿಕಾಂಶಗಳಿಂದ ವಿಶ್ವದಾದ್ಯಂತ ಭಾರಿ ಬೇಡಿಕೆ ಹೊಂದಿದೆ.

Sponsored

ಈ ಮಾವಿನಲ್ಲಿ ದೇಹಕ್ಕೆ ಅಗತ್ಯವಾದ ಆಂಟಿ ಆಕ್ಸಿಡೆಂಟ್ ಗಳು, ಬೀಟಾ ಕ್ಯಾರೋಟಿನ್ ಮತ್ತು ಪೋಲಿಕ್ ಆಸಿಡ್ ಪ್ರಮಾಣದಲ್ಲಿದ್ದು, ಆರೋಗ್ಯಕ್ಕೆ ಬಹಳ ಉಪಯುಕ್ತವೆಂದು ತಜ್ಞರು ಹೇಳುತ್ತಾರೆ. ಅತ್ಯಂತ ಸಿಹಿಯಾದ ರುಚಿ ಮತ್ತು ಗುಣಮಟ್ಟದಿಂದ ಮಿಯಾಜಾಕಿ ಮಾವು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಯಲ್ಲಿ ಮಾರಾಟವಾಗುತ್ತದೆ.

ಬೀದರ್ ರೈತನ ಈ ಸಾಧನೆ ಇದೀಗ ರಾಜ್ಯದ ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಯುವ ರೈತರಿಗೆ ಪ್ರೇರಣೆಯಾಗಿದೆ. ಆಧುನಿಕ ಕೃಷಿ ತಂತ್ರಜ್ಞಾನ ಬಳಸಿ ವಿದೇಶಿ ತಳಿಯ ಬೆಳೆಸಿದ ಈ ಪ್ರಯತ್ನಕ್ಕೆ ಸಾರ್ವಜನಿಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ವಿಶ್ವದ ಅತ್ಯಂತ ದುಬಾರಿ ಮಿಯಾ ಜಾಕಿ ಮಾವಿನಹಳ್ಳಿ ಇದೀಗ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಹೆಚ್ಚುತ್ತಿದೆ. ಜಪಾನ್ ಮೂಲದ ಈ ವಿಶೇಷ ಮಾವು ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸಲು ಸಹಾಯಕವಾಗುತ್ತದೆ ಎನ್ನಲಾಗಿದೆ. ಇದರಲ್ಲಿ ಆಂಟಿ ಆಕ್ಸಿಡೆಂಟ್ ಗಳು, ಬೀಟಾ ಕ್ಯಾರೋಟಿನ್ ಹಾಗೂ ಪೋಲಿಕ್ ಆಸಿಡ್ ಸಮೃದ್ಧವಾಗಿದೆ. ಆರೋಗ್ಯಕರ ಗುಣಲಕ್ಷಣಗಳು ಮತ್ತು ವಿಶಿಷ್ಟ ಸಿಹಿ ರುಚಿಯಿಂದ ಈ ಹಣ್ಣು ಕೆಲವೆಡೆ ಕೆಜಿಗೆ ಲಕ್ಷಾಂತರ ರೂಪಾಯಿ ಬೆಲೆಯಲ್ಲಿ ಮಾರಾಟವಾಗುತ್ತಿದೆ.

ಇದೀಗ ಬೀದರ್ ಜಿಲ್ಲೆಯ ರೈತ ಹಣಮಂತ ರಾವ್ ಶ್ರೀ ಮಾಲೆ ತಮ್ಮ ತೋಟದಲ್ಲಿ ಮಿಯಾಜಾಕಿ ಮಾವನ್ನು ಯಶಸ್ವಿಯಾಗಿ ಬೆಳೆದು ಕೃಷಿ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಸಾಂಪ್ರದಾಯಿಕ ಬೆಳೆಗಳ ಜೊತೆಗೆ ಹೊಸ ತಳಿಯ ಬೆಳೆಗಳತ್ತ ರೈತರು ಆಸಕ್ತಿ ತೋರುತ್ತಿರುವುದು ಕೃಷಿಯಲ್ಲಿ ಹೊಸ ಆಶಾಬರವನ್ನು ಮೂಡಿಸಿದೆ.

Sponsored

ವಿದೇಶಿ ತಳಿಯ ದುಬಾರಿ ನಾವು ಬೀದರ್ ನೆಲದಲ್ಲಿ ಫಲ ನೀಡಿರುವುದು ಇದೀಗ ರಾಜ್ಯದ ರೈತರ ಗಮನ ಸೆಳೆದಿದ್ದು, ಆಧುನಿಕ ಕೃಷಿಯತ್ತ ಯುವ ರೈತರು ಮುಖ ಮಾಡುವಂತೆ ಪ್ರೇರೇಪಿಸಿದೆ ಎಂದು ವರದಿ ಪ್ರಕಾರ ಹೇಳಲಾಗುತ್ತದೆ.

Also Read:

ಅಮೇರಿಕ-ಇರಾನ್ ಗುಪ್ತ ಮಾತುಕತೆ ತೀವ್ರ: ಅಂತಿಯ ಒಪ್ಪಂದದ ಕರಡು ಸಿದ್ದತೆ!

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online