Belagavi news:
ಬಿಸಿಸಿಐ ಪ್ರಕಟಿಸಿರುವಂತಹ ವಾರ್ಷಿಕ ಒಪ್ಪಂದದ ಪಟ್ಟಿಯಿಂದ ಆರ್ಸಿಬಿ ಆಟಗಾರರಾದ ರಜತ್ ಪಟಿದಾರ ಅವರನ್ನು ಕೈ ಬಿಟ್ಟಿರುವುದು ಕ್ರಿಕೆಟ್ ವಲಯದಲ್ಲಿ ಬಾರಿ ಚರ್ಚೆಗೆ ಕಾರಣವಾಗಿದೆ.ಕಳೆದ ಹಲವು ಸಮಯದಿಂದ ಉತ್ತಮ ಪ್ರದರ್ಶನ ನೀಡುತ್ತಿದ್ದ ಪಟಿದಾರ್ ಅವರನ್ನು ಪಟ್ಟಿಯಿಂದ ಹೊರಗಿಟ್ಟಿರುವುದು ಅಭಿಮಾನಿಗಳಿಗೆ ಆಶ್ಚರ್ಯವನ್ನು ಮೂಡಿಸಿದೆ.
ಬಿಸಿಸಿಐ ವಾರ್ಷಿಕ ಒಪ್ಪಂದ ಪಟ್ಟಿಯಲ್ಲಿ ಸ್ಥಾನ ಸಿಗುವುದು ಆಟಗಾರರ ಸಾಧನೆ ಮತ್ತು ಭವಿಷ್ಯದ ಅವಕಾಶಗಳಿಗೆ ಮಹತ್ವದ ದಾರಿಯಾಗಿರುತ್ತದೆ. ಆರ್ಸಿಬಿ ತಂಡದಲ್ಲಿ ಪ್ರಮುಖ ಆಟಗಾರರಾಗಿರುವ ರಜತ್ ಪಟಿದಾರ್ ಅವರ ಮುಂದಿನ ಅವಕಾಶಗಳು ಹಾಗೂ ತಂಡದ ಮೇಲಿನ ಪರಿಣಾಮಗಳ ಕುರಿತು ಚರ್ಚೆಯು ನಡೆಯುತ್ತಿವೆ ಎಂದು ಹೇಳಲಾಗುತ್ತದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯಿಂದ ವಿಶೇಷ ಮಾಹಿತಿಯೊಂದು ಹೊರ ಬಿದ್ದಿದೆ.ಜೊತೆಗೆ ಮುಂದಿನ ಋತುವಿನ ಆಟಗಾರರ ಕೇಂದ್ರ ಒಪ್ಪಂದ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಈ ಪಟ್ಟಿಯಲ್ಲಿ ಹಲವು ಮಹತ್ವದ ಬದಲಾವಣೆಗಳು ನಡೆದಿದ್ದು,ಟೆಸ್ಟ್ ಮತ್ತು ಏಕದಿನ ತಂಡ ನಾಯಕ ಶುಭಮನ್ ಗಿಲ್ ಅವರಿಗೆ ಬಡ್ತಿ ನೀಡಲಾಗಿದೆ.ಇನ್ನು ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಅವರಿಗೆ ಹಿಂಬಡ್ತಿ ನೀಡಲಾಗಿದೆ ಎಂಬ ಸ್ಪಷ್ಟ ಮಾಹಿತಿಯು ತಿಳಿದು ಬಂದಿದೆ.
ಬಿಸಿಸಿಐ ಕೇಂದ್ರ ಒಪ್ಪಂದ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬೂಮ್ರ ಅತ್ಯುನ್ನತ ದರ್ಜೆಯಲ್ಲಿ ಮುಂದುವರೆದಿದ್ದಾರೆ ಆದರೆ,ಕಳೆದ ಋತುವಿಗೆ ಹೋಲಿಸಿದರೆ ಕೆಲವು ಪ್ರಮುಖ ಆಟಗಾರರನ್ನು ಪಟ್ಟಿಯಿಂದ ಹೊರಗಿಟ್ಟಿದ್ದಾರೆ.
ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿ ಹಾಗೂ ಆರ್ಸಿಬಿ ಆಟಗಾರ ರಜತ್ ಪಟಿದಾರ ಸೇರಿದಂತೆ ಹಲವು ಆಟಗಾರರನ್ನು ಕೇಂದ್ರ ಒಪ್ಪಂದ ಪಟ್ಟಿಯಿಂದ ಹೊರ ಇಟ್ಟಿದ್ದಾರೆ ಈ ವಿಷಯವು ಕ್ರಿಕೆಟ್ ವಲಯದಲ್ಲಿ ಬಾರಿ ವಿಶೇಷವಾಗಿ ಶಮಿ ಹೆಸರು ಪಟ್ಟಿಯಲ್ಲಿ ಕಾಣಿಸದಿರುವುದು ಅಭಿಮಾನಿಗಳಲ್ಲಿ ಆಶ್ಚರ್ಯ ಮೂಡಿಸುತ್ತಿದೆ.
ಇತ್ತೀಚಿಗೆ ನಡೆದ ಟಿ20 ತಂಡಕ್ಕೆ ಮರಳಿರುವ ಇಶಾನ್ ಕಿಶನ್ ಕೂಡ ಹೊಟ್ಟೆಯಿಂದ ಹೊರಗುಳಿದಿದ್ದಾರೆ.ದೇಶಿಯ ಕ್ರಿಕೆಟ್ ಆಡದ ಕಾರಣ ಬಿಸಿಸಿಐ ಕಿಶನ್ ಅವರನ್ನು ಈ ಹಿಂದೆ ಒಪ್ಪಂದದಿಂದ ಕೈಬಿಟ್ಟಿತು. ಇದರ ಜೊತೆಗೂ ಅವರು ದೇಶಿ ಕ್ರಿಕೆಟ್ ನಲ್ಲಿ ಆಡುತ್ತಿದ್ದು ಇದೀಗ ವಿಶ್ವಕಪ್ ತಂಡದಲ್ಲೂ ಸಾಲ ಪಡೆದಿದ್ದರು ಪಟ್ಟಿಯಿಂದ ಹೊರಗಿಡಲಾಗಿದ್ದು ಅಚ್ಚರಿಗೆ ಕಾರಣವಾಗಿದೆ.ಶಮಿ ದೇಶಿಯ ಕ್ರಿಕೆಟ್ ನಲ್ಲಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ,ಆದರೂ ಕೂಡ ಅವರನ್ನು ತಂಡದಿಂದ ಮತ್ತು ಕೇಂದ್ರದ ಒಪ್ಪಂದ ಪಟ್ಟಿಯಿಂದ ಹೊರಗಿಟ್ಟಿದ್ದಾರೆ. ಇದು ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಕಳೆದ ವರ್ಷದ ಒಪ್ಪಂದದ ಪಟ್ಟಿಯಲ್ಲಿ ರಜತ್ ಸ್ಥಾನ ಪಡೆದುಕೊಂಡಿದ್ದರು. ಅಲ್ಲದೆ,ಮುಕೇಶ್ ಕುಮಾರ್ ಅವರನ್ನು ಸಹ ಈ ಬಾರಿ ಕೇಂದ್ರ ಒಪ್ಪಂದದಿಂದ ತೆಗೆದು ಹಾಕಲಾಗಿದೆ. ಒಟ್ಟಾರಿಯಾಗಿ ಐದು ಜನರನ್ನು ಈ ಒಂದು ಒಪ್ಪಂದದ ಪಟ್ಟಿಯಿಂದ ಹೊರಗಿಟ್ಟಿದ್ದಾರೆ ಎಂದು ಹೇಳಲಾಗುತ್ತದೆ.ಐದು ಜನರು ಮೊಹಮ್ಮದ್ ಶಮಿ,ಇಶಾನ್ ಕಿಶನ್,ರಜತ್ ಪಾಟಿದಾರ್ , ಸರ್ಫರಾಜ್ ಖಾನ್,ಮುಕೇಶ್ ಕುಮಾರ್ ಐದು ಜನರನ್ನು ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ತಿಳಿಸಲಾಗಿದೆ.ಇದು ಕ್ರಿಕೆಟ್ ವಲಯದಲ್ಲಿ ಬೇಸರದ ಸಂಗತಿಯಾಗಿದೆ.
ಬಿಸಿಸಿಐ ರಚಿಸಿರುವ ಹೊಸ ಕೇಂದ್ರ ಒಪ್ಪಂದದ ಪಟ್ಟಿ ಈ ಕೆಳಗಿನಂತಿದೆ:
ಗ್ರೇಡ್ 'ಎ' ನಲ್ಲಿ :
ಶುಭಮನ್ ಗಿಲ್, ಜಸ್ಪ್ರೀತ್ ಬುಮ್ರಾ , ರವೀಂದ್ರ ಜಡೇಜಾ
ಗ್ರೇಡ್ 'ಬಿ' ನಲ್ಲಿ :
ರೋಹಿತ್ ಶರ್ಮಾ,ವಿರಾಟ್ ಕೊಹ್ಲಿ,ಕೆ ಎಲ್ ರಾಹುಲ್,ವಾಷಿಂಗ್ಟನ್ ಸುಂದರ್,ಮೊಹಮ್ಮದ್ ಸಿರಾಜ್,ಹಾರ್ದಿಕ್ ಪಾಂಡ್ಯ,ರಿಷಬ್ ಪಂತ್,ಕುಲದೀಪ್ ಯಾದವ್,ಸೂರ್ಯ ಕುಮಾರ್ ಯಾದವ್,ಯಶಸ್ವಿ ಜೈಸ್ವಾಲ್,ಶ್ರೇಯಸ್ ಅಯ್ಯರ್ ಈ ಆಟಗಾರರು ಗ್ರೇಡ್ ಬಿ ಯಲ್ಲಿ ಇದ್ದಾರೆ.
ಗ್ರೇಡ್ 'ಸಿ' ನಲ್ಲಿ :
ತಿಲಕ್ ವರ್ಮಾ,ಅಕ್ಷರ್ ಪಟೇಲ್,ರಿಂಕು ಸಿಂಗ್,ಶಿವಂ ದುಬೆ,ಅರ್ಷದೀಪ್ ಸಿಂಗ್,ಸಂಜು ಸ್ಯಾಮ್ಸನ್,ಪ್ರಸಿದ್ಧ ಕೃಷ್ಣ,ಆಕಾಶ್ ದೀಪ್,ಹರ್ಷಿತ್ ರಾಣಾ,ಧ್ರುವ್ ಜುರೆಲ್,ವರುಣ್ ಚಕ್ರವರ್ತಿ,ರೆಡ್ಡಿ,ನಿತೀಶ್ ಕುಮಾರ್,ಅಭಿಷೇಕ್ ಶರ್ಮ,ತಾಯಿ ಸುದರ್ಶನ್,ಋತುರಾಜ್ ಗಾಯಕ್ವಾಡ್ ,ರವಿ ಬಿಷ್ಣೋಯ ಈ ಎಲ್ಲಾ ಆಟಗಾರರು ಗ್ರೇಡ್ ಸಿ ಯಲ್ಲಿ ಇದ್ದಾರೆ.
ಒಟ್ಟಾರೆಯಾಗಿ ಹೇಳುವುದಾದರೆ ಬಿಸಿಸಿಐ ನ ಈ ವಾರ್ಷಿಕ ಒಪ್ಪಂದದ ಪಟ್ಟಿಯು ಅನಿರೀಕ್ಷಿತವಾಗಿ ಮೂಡಿಬಂದಿದೆ.ಐದು ಜನ ಆಟಗಾರರ ಹೆಸರು ಈ ಪಟ್ಟಿಯಲ್ಲಿ ಇಲ್ಲದಿರುವುದರಿಂದ ಈ ಒಂದು ಪಟ್ಟಿಯ ಚರ್ಚೆ ತೀವ್ರವಾಗಿ ನಡೆಯುತ್ತಿದೆ.
ಇನ್ನಷ್ಟು ಓದಿರಿ:
ಕೆಂಪೇಗೌಡ ಏರ್ಪೋರ್ಟ್ ನಿರ್ಬಂಧಿತ ಪ್ರದೇಶದಲ್ಲಿ ಅನುಮತಿ ಇಲ್ಲದೆ ಬಲೂನ್ ಹಾರಾಟ