Belagavi News:
ನಟ ಹಾಗೂ ರಾಜಕಾರಣಿ ದಳಪತಿ ವಿಜಯ್ ಅವರ ಬಹು ನಿರೀಕ್ಷಿತ 'ಜನ ನಾಯಗನ್' ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಬಹುದೊಡ್ಡ ಅಪ್ಡೇಟ್ ಹೊರ ಬಿದ್ದಿದೆ. ವಿಜಯ್ ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿರುವ ಈ ರಾಜಕೀಯ ಆ್ಯಕ್ಷನ್ ಡ್ರಾಮಾ ಚಿತ್ರ ಹಲವು ಅಡೆತಡೆಗಳು ಮತ್ತು ಬಿಡುಗಡೆ ದಿನಾಂಕ ಮುಂದೂಡಿಕೆಗಳ ಬಳಿಕ ಜುಲೈ 24ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಹೊರಬಿದ್ದಿದೆ. ಈ ಬೆಳವಣಿಗೆ ವಿಜಯ್ ಅಭಿಮಾನಿಗಳಲ್ಲಿ ಭಾರಿ ಸಂಭ್ರಮ ಮೂಡಿಸಿದೆ.
ಹಲವು ತಿಂಗಳುಗಳಿಂದ ಚಿತ್ರದ ಬಿಡುಗಡೆ ದಿನಾಂಕದ ಬಗ್ಗೆ ಅನಿಶ್ಚಿತತೆ ಮುಂದುವರೆದಿತ್ತು. ವಿಜಯ್ ರಾಜಕೀಯ ಪ್ರವೇಶದ ಬಳಿಕ ಹಾಗೂ ತಮಿಳುನಾಡಿನ ರಾಜಕೀಯ ಬೆಳವಣಿಗೆಗಳ ನಡುವೆ ಚಿತ್ರದ ಕುರಿತು ಯಾವುದೇ ಪ್ರಮುಖ ಅಧಿಕೃತ ಅಪ್ಡೇಟ್ ಲಭ್ಯವಾಗಿರಲಿಲ್ಲ. ಇದೀಗ ಚಿತ್ರದ ಬಿಡುಗಡೆಗೆ ಇದ್ದ ಅಡೆತಡೆಗಳು ನಿವಾರಣೆಯಾಗಿದ್ದು, ರಿಲೀಸ್ ಡೇಟ್ ಅಂತಿಮಗೊಂಡಿರುವ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
'ಜನ ನಾಯಗನ್' ಚಿತ್ರವನ್ನು ಖ್ಯಾತ ನಿರ್ದೇಶಕ ಎಚ್.ವಿನೋದ್ ನಿರ್ದೇಶಿಸಿದ್ದು, ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡಿದೆ. ರಾಜಕೀಯ ಹಿನ್ನಲೆಯೊಂದಿಗೆ ಆ್ಯಕ್ಷನ್ ಹಾಗೂ ಭಾವನಾತ್ಮಕ ಕಥಾಂದರ ಹೊಂದಿರುವ ಈ ಬಿಗ್ ಬಜೆಟ್ ಸಿನಿಮಾ ವರ್ಷದಲ್ಲೇ ಅತ್ಯಂತ ನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದೆ. ಚಿತ್ರದ ಟೀಸರ್, ಪೋಸ್ಟರ್ ಹಾಗೂ ವಿಜಯ್ ಅವರ ಲುಕ್ ಈಗಾಗಲೇ ಸಿನಿ ಪ್ರಿಯರಲ್ಲಿ ಕುತೂಹಲ ಹೆಚ್ಚಿಸಿದೆ.
ದಳಪತಿ ವಿಜಯ್ ಸಿನಿಮಾ ಜೀವನದ ಮಹತ್ವದ ಚಿತ್ರವೆಂದು ಪರಿಗಣಿಸಲಾಗುತ್ತಿರುವ 'ಜನ ನಾಯಗನ್' ಬಾಕ್ಸ್ ಆಫೀಸ್ ನಲ್ಲಿ ಯಾವ ಮಟ್ಟದ ಯಶಸ್ಸು ಸಾಧಿಸಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆ ಮಾಡಿದೆ. ಬಿಡುಗಡೆ ದಿನಾಂಕದ ಮಾಹಿತಿ ಹೊರಬಿದ್ದಿರುವ ಹಿನ್ನೆಲೆಯಲ್ಲಿ ಚಿತ್ರತಂಡದಿಂದ ಶೀಘ್ರದಲ್ಲೇ ಟ್ರೈಲರ್, ಪ್ರಚಾರ ಕಾರ್ಯಕ್ರಮ ಹಾಗೂ ಇತರೆ ಅಧಿಕೃತ ಘೋಷಣೆಗಳು ಹೊರಬೀಳುವ ನಿರೀಕ್ಷೆ ಇದೆ.
'ಜನ ನಾಯಗನ್' ರಿಲೀಸ್ ಡೇಟ್ - ಜುಲೈ 24ಕ್ಕೆ ದಳಪತಿ ವಿಜಯ್ 'ಜನ ನಾಯಗನ್' ಗ್ರಾಂಡ್ ರಿಲೀಸ್? ಚಿತ್ರತಂಡದಿಂದ ಮಹತ್ವದ ಮಾಹಿತಿ :
ದಳಪತಿ ವಿಜಯ್ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ,
'ಜನ ನಾಯಗನ್' ಚಿತ್ರದ ಬಿಡುಗಡೆಗೆ ಸಂಬಂಧಿಸಿದಂತೆ ಹೊಸ ಅಪ್ಡೇಟ್ ಹೊರ ಬಿದ್ದಿದೆ. ಇತ್ತೀಚಿನ ವರದಿಗಳ ಪ್ರಕಾರ, ಈ ಬಹುನಿರೀಕ್ಷಿತ ರಾಜಕೀಯ ಆ್ಯಕ್ಷನ್ ಡ್ರಾಮಾ ಸಿನಿಮಾ ಜುಲೈ 24 2018ರಂದು ವಿಶ್ವದಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲು ಸಜ್ಜಾಗಿದೆ. ಈ ನಿಗದಿತ ಬಿಡುಗಡೆ ದಿನಾಂಕ ಮಾಹಿತಿಯನ್ನು ಚಿತ್ರತಂಡವು ವಿದೇಶಿ ವಿತರಿಕರಿಗೂ ರವಾನಿಸುವುದಾಗಿ ವರದಿಗಳು ತಿಳಿಸಿವೆ. ಇದರಿಂದ ಕೋಟ್ಯಾಂತರ ವಿಜಯ್ ಅಭಿಮಾನಿಗಳಲ್ಲಿ ಸಂಭ್ರಮದ ಮನೆ ಮಾಡಿದೆ.
'ಜನ ನಾಯಗನ್' ಚಿತ್ರಕ್ಕೆ ಖ್ಯಾತ ನಿರ್ದೇಶಕ ಎಚ್ ವಿನೋದ್ ಆ್ಯಕ್ಷನ್ ಕಟ್ ಹೇಳಿದ್ದು, ದಳಪತಿ ವಿಜಯ್ ಅವರಿಗೆ ಜೋಡಿಯಾಗಿ ನಟಿ ಪೂಜಾ ಹೆಗಡೆ ಅಭಿನಯಿಸಿದ್ದಾರೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಮಮಿತಾ ಬೈಜು, ಬಾಬಿ ಡಿಯೋಲ್, ಗೌತಮ್ ವಾಸುದೇವ್, ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಹಾಗೂ ನರೇನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಭರ್ಜರಿ ತಾರಾ ಬಳಗದ ಕಾರಣದಿಂದಲೇ ಈ ಚಿತ್ರದ ಮೇಲೆ ಸಿನಿಪ್ರಿಯರ ನಿರೀಕ್ಷೆ ಮತ್ತಷ್ಟು ಹೆಚ್ಚಿದೆ.
ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಮಾಡುತ್ತಿರುವ ಈ ಬಿಗ್ ಬಜೆಟ್ ಸಿನಿಮಾಗೆ ಸಂಗೀತ ನಿರ್ದೇಶಕ ಅನಿರುದ್ಧ ರವಿಚಂದ್ರನ್ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ಗಳು ಮತ್ತು ಪ್ರಚಾರ ಸಾಮಗ್ರಿಗಳು ಅಭಿಮಾನಿಗಳ ಗಮನ ಸೆಳೆದಿದ್ದು, ಟ್ರೈಲರ್ ಹಾಗೂ ಹಾಡುಗಳ ಬಿಡುಗಡೆಯದಾಗಿ ಸಿನಿಪ್ರಿಯರು ಕಾತುರದಿಂದ ಕಾಯುತ್ತಿದ್ದಾರೆ.
ರಾಜಕೀಯ ಹಾಗೂ ಆ್ಯಕ್ಷನ್ ಕಥಾಂದರ ಹೊಂದಿರುವ ''ಜನ ನಾಯಗನ್' ದಳಪತಿ ವಿಜಯ್ ಅವರ ವೃತ್ತಿ ಜೀವನದ ಅತ್ಯಂತ ಮಹತ್ವದ ಸಿನಿಮಾಗಳಲ್ಲಿ ಒಂದೆಂದು ಹೇಳಲಾಗುತ್ತದೆ. ಬಿಡುಗಡೆಯಾದ ಬಳಿಕ ಆಫೀಸ್ ನಲ್ಲಿ ಯಾವ ರೀತಿಯ ದಾಖಲೆ ನಿರ್ಮಿಸಲಿದೆ ಎಂಬ ಕುತೂಹಲ ಸಿನಿರಸಿಕರಲ್ಲಿ ಹೆಚ್ಚಾಗಿದೆ.
'ಜನ ನಾಯಗನ್' ಬಳಿಕ 'ಟಾಕ್ಸಿಕ್' ರಿಲೀಸ್ - ಕೆವಿಎನ್ ನಲ್ಲಿ ಪ್ರೊಡಕ್ಷನ್ ನ ಮೆಗಾ ಪ್ಲ್ಯಾನ್ ಏನು ? :
ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ 'ಜನ ನಾಯಗನ್'ಚಿತ್ರದ ಬಿಡುಗಡೆ ದಿನಾಂಕ ಅಂತಿಮಗೊಂಡಿರುವ ಬೆನ್ನಲ್ಲೇ ನಿರ್ಮಾಣ ಸಂಸ್ಥೆ ಕೆವಿಎನ್ ಪ್ರೊಡಕ್ಷನ್ ತನ್ನ ಮುಂದಿನ ಬಿಗ್ ಬಜೆಟ್ ಸಿನಿಮಾ ಟಾಕ್ಸಿಕ್ ಬಿಡುಗಡೆಗು ಸಿದ್ಧತೆ ನಡೆದಿದೆ. ವರದಿಗಳ ಪ್ರಕಾರ, 'ಜನ ನಾಯಗನ್' ಜುಲೈ 24ರಂದು ಬಿಡುಗಡೆಯಾದರೆ, ಸುಮಾರು ಒಂದು ತಿಂಗಳ ಬಳಿಕ ಅಗಸ್ಟ್ 26ರಂದು ಟಾಕ್ಸಿಕ್ ಚಿತ್ರವನ್ನು ವಿಶ್ವದಾದ್ಯಂತ ತೆರೆಗೆ ತರಲು ಯೋಜನೆ ರೂಪಿಸಲಾಗಿದೆ.
ಟಾಕ್ಸಿಕ್ ಚಿತ್ರದ ಮೇಲು ಸಿಹಿಪ್ರಿಯರಲ್ಲಿ ಭಾರಿ ನಿರೀಕ್ಷೆ ಇದ್ದು,ಎರಡು ಸಿನಿಮಾಗಳನ್ನು ಯಶಸ್ವಿಯಾಗಿ ಬಿಡುಗಡೆ ಮಾಡುವ ಉದ್ದೇಶದಿಂದ ವಿಶೇಷ ತಂತ್ರ ರೂಪಿಸಿದೆ ಎನ್ನಲಾಗಿದೆ. ಮೊದಲಿಗೆ 'ಜನ ನಾಯಗನ್' ಚಿತ್ರಕ್ಕೆ ಉತ್ತಮ ಪ್ರದರ್ಶನಾವಧಿ ದೊರೆಯುವಂತೆ ಯೋಜನೆ ರೂಪಿಸಲಾಗಿದ್ದು, ಬಳಿಕ ಟಾಕ್ಸಿಕ್ ಸಿನಿಮಾ ವನ್ನು ಚಿತ್ರಮಂದಿರಗಳಿಗೆ ತರಲು ನಿರ್ಧರಿಸಲಾಗಿದೆ.
Also Read :
ಚಂಡೀಗಢ ಕೊಲೆ ಪ್ರಕರಣದಲ್ಲಿ ಪಾಕಿಸ್ತಾನ ಸಂಪರ್ಕ ಶಂಕೆ: ಮೂವರು ಅರೆಸ್ಟ್