Belagavi News:
ಚಂಡೀಗಢ: ಜೂನ್ 13ರಂದು ಸೆಕ್ಟರ್ 11 ಪ್ರದೇಶದಲ್ಲಿ ನಡೆದ ಫಾರ್ಮಸಿ ಕ್ಯಾಷಿಯರ್ ಜಾಂಕಿ ದಾಸ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಪೊಲೀಸರು ಮೂವರು ಶಂಕಿತರನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರೆದಿದ್ದು, ಕಪುರ್ತಲಾ ಜೈಲಿನಲ್ಲಿರುವ ಮತ್ತೊಬ್ಬ ಆರೋಪಿ ಧರ್ಮೇಂದ್ರ ಸಿಂಗ್ ಅವರನ್ನು ವಿಚಾರಣೆಗಾಗಿ ಪ್ರೊಡಕ್ಷನ್ ವಾರಂಟ್ ಮೇಲೆ ಚಂಡೀಗಢಕ್ಕೆ ಕರೆತರಲಾಗಿದೆ.
ಬಂಧಿತರನ್ನು ಆಕಾಶ್ ಕುಮಾರ್ ಅಲಿಯಾಸ್ ಮಣಿ, ಸಚಿನ್ ಸಿಲ್ವೆಸ್ಟರ್ ಮತ್ತು ಗುರ್ಮೀತ್ ಸಿಂಗ್ ಅಲಿಯಾಸ್ ಬಾದ್ ಶಾ ಎಂದು ಗುರುತಿಸಲಾಗಿದೆ. ಇವರು ಪಂಜಾಬ್ ನ ತರಣ್ ತರಣ್ ಜಿಲ್ಲೆಯ ನಿವಾಸಿಗಳಾಗಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಪ್ರಕರಣದ ಜಾಲವು ಪಾಕಿಸ್ತಾನದ ಸಂಪರ್ಕ ಹೊಂದಿರುವ ಸಾಧ್ಯತೆಗಳ ಬಗ್ಗೆ ಸುಳಿವುಗಳು ಲಭಿಸಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಆರೋಪಿಗಳು ಜೈಲಿನಲ್ಲಿರುವ ಜೈಲಿನಲ್ಲಿರುವ ಧರ್ಮೇಂದ್ರ ಸಿಂಗ್ ಅವರ ಸೂಚನೆ ಮೇರೆಗೆ ಕಾರ್ಯನಿರ್ವಹಿಸುತ್ತಿದ್ದರು ಎನ್ನಲಾಗಿದ್ದು, ಅವರ ಮಾರ್ಗದರ್ಶನದಲ್ಲೇ ಕೊಲೆ ಸಂಚು ರೂಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.
ಅಮೃತಸರ ಮತ್ತು ತರಣ್ ತರಣ್ ಪ್ರದೇಶಗಳಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದ್ದು, ಅವರಿಂದ 3 ಕೆಜಿ 28 ಗ್ರಾಂ ಮೆಥಾಂಫೆಟಮೈನ್ (ಐಸ್ ಡ್ರಗ್) ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತುವಿನ ಅಂತರರಾಷ್ಟ್ರೀಯ ಮಾರುಕಟ್ಟೆ ಮೌಲ್ಯ ಸುಮಾರು 24 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಇದರ ಜೊತೆಗೆ ಸುಮಾರು 8 ಲಕ್ಷ ರೂ. ಮೌಲ್ಯದ ನಕಲಿ ನೋಟಗಳು, ಅಕ್ರಮ ಪಿಸ್ತೂಲ್ ಹಾಗೂ ಜೀವಂತ ಗುಂಡುಗಳನ್ನು ಕೂಡ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ಮತ್ತಷ್ಟು ಆರೋಪಿಗಳು ಹಾಗೂ ಸಂಚಿನ ಕುರಿತು ತನಿಖೆ ಮುಂದುವರೆದಿದೆ.
ಪಾಕಿಸ್ತಾನದ ಸಂಪರ್ಕ ಬಯಲು: ಚಂಡೀಗಢ ಫಾರ್ಮಸಿ ಕ್ಯಾಷಿಯರ್ ಕೊಲೆ ಪ್ರಕರಣದ ತನಿಖೆಯಲ್ಲಿ ಆರೋಪಿಗಳ ಪಾಕಿಸ್ತಾನ ಸಂಪರ್ಕದ ಬಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳು ಕೇವಲ ಕೊಲೆ ಪ್ರಕರಣಕ್ಕೆ ಸೀಮಿತವಾಗಿರದೆ, ಮಾದಕ ದ್ರವ್ಯ ಸಾಗಣೆ ಹಾಗೂ ನಕಲಿ ನೋಟುಗಳ ವ್ಯವಹಾರದಲ್ಲೂ ತೊಡಗಿಸಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಪಾಕಿಸ್ತಾನ ಮೂಲದ ಹ್ಯಾಂಡ್ಲರ್ ಗಳಿಂದ ಪಡೆಯುತ್ತಿದ್ದರು ಎನ್ನಲಾಗಿದ್ದು, ಅವರ ಮಾರ್ಗದರ್ಶನದಲ್ಲಿ ವಿವಿಧ ಅಪರಾಧ ಹಾಗೂ ಕಾನೂನುಬಾಹಿರ ಚಟುವಟಿಕೆಗಳನ್ನು ನಡೆಸುತ್ತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಆರೋಪಿಗಳ ಮೊಬೈಲ್ ಫೋನುಗಳು, ಬ್ಯಾಂಕ್ ಖಾತೆಗಳು ಹಾಗೂ ವಿದೇಶಿ ಸಂಪರ್ಕಗಳ ಕುರಿತು ಹೆಚ್ಚಿನ ಪರಿಶೀಲನೆ ನಡೆಯುತ್ತಿದೆ.
ಕೇಂದ್ರ ಪ್ರದೇಶದ ಡಿಜಿಪಿ ಡಾ. ಸಾಗರ್ ಪ್ರೀತ್ ಹೂಡಾ, ಐಜಿಪಿ ಪುಷ್ಪೇಂದ್ರ ಕುಮಾರ್ ಹಾಗೂ ಅಪರಾಧ ವಿಭಾಗದ ಎಸ್ ಪಿ ಮಂಜಿತ್ ಸಿಂಗ್ ಅವರ ಮೇಲ್ವಿಚಾರಣೆಯಲ್ಲಿ ಚಂಡೀಗಢ ಪೊಲೀಸ್ ಕ್ರೈಂ ಬ್ರಾಂಚ್ ಈ ಕಾರ್ಯಚರಣೆ ನಡೆಸಿದೆ.
ಡಿಎಸ್ಪಿ (ಕ್ರೈಂ) ಲಕ್ಷ್ಯ ಪಾಂಡೆ ಅವರ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ನರೇಂದ್ರ ಸಿಂಗ್ ಪಾಟಿಯಾಲ್ ನೇತೃತ್ವದ ತಂಡವು ಪಂಜಾಬ್ ನ ಹಲವು ಪ್ರದೇಶಗಳಲ್ಲಿ ನಿರಂತರ ದಾಳಿ ನಡೆಸಿ, ಈ ಜಾಲವನ್ನು ಪತ್ತೆ ಹಚ್ಚಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಇನ್ನಷ್ಟು ಮಾಹಿತಿಗಳು ಹೊರಬರುವ ಸಾಧ್ಯತೆಯಿದೆ.

Also Read:
ಎಂಇಎಸ್ ಪರ ಮಹಾರಾಷ್ಟ್ರ ಸರ್ಕಾರದ ನಿಲುವು: ಪ್ರಿಯಾಂಕ್ ಖರ್ಗೆ ತೀವ್ರ ವಿರೋಧ