BELAGAVI NEWS :
ಟಾಕ್ಸಿಕ್ ಸಿನಿಮಾ ಬಿಡುಗಡೆಗು ಮುನ್ನವೇ ಬಾರಿ ಹೈಪ್ ಸೃಷ್ಟಿಸಿದ್ದು, ಇದೀಗ ಚಿತ್ರದ ಮಹಿಳಾ ಪಾತ್ರಗಳ ಬಗ್ಗೆ ನಟ ಯಶ್ ನೀಡಿರುವ ಹೇಳಿಕೆ ಸಿನಿ ಪ್ರೇಮಿಗಳ ಕೌತುಕವನ್ನು ಮತ್ತಷ್ಟು ಹೆಚ್ಚಿಸಿದೆ. ನಿರ್ದೇಶಕಿ ಗೀತು ಮೋಹನ್ ದಾಸ್ ಆಕ್ಷನ್ ಕಟ್ ಹೇಳಿರುವ ಈ ಬಹುನಿರೀಕ್ಷಿತ ಸಿನಿಮಾದಲ್ಲಿ ಅನೇಕ ಮಹಿಳೆಯರು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುವುದು ವಿಶೇಷ ಚಿತ್ರದಲ್ಲಿ ಎಸ್ ಜೊತೆಗೆ ರುಕ್ಮಿಣಿ ವಸಂತ, ನಯನತಾರ, ಹುಮಾ ಖುರೇಷಿ, ಕಿಯಾರಾ ಅಡ್ವಾಣಿ, ತಾರಾ ಸುತಾರಿಯ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. 'ಟಾಕ್ಸಿಕ್: ಎ ಫೇರಿ ಟೇಲ್ ಪಾರ್ ಗ್ರೋನ್ - ಅಪ್ಸ್ 'ಚಿತ್ರದ ಕಥೆ ವಿಭಿನ್ನ ಶೈಲಿಯಲ್ಲಿದ್ದು, ಮಹಿಳಾ ಪಾತ್ರಗಳು ಬಹಳ ಬೋಲ್ಡ್, ಶಕ್ತಿಶಾಲಿ ಹಾಗೂ ಕಥೆಗೆ ಮಹತ್ವದ ತಿರುವು ನೀಡುವಂತಿವೆ ಎಂದು ಯಶ್ ತಿಳಿಸಿದ್ದಾರೆ.
ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಿನಿಮಾ ಈಗಾಗಲೇ ಬಾರಿ ನೀರಿಕ್ಷೆ ಹುಟ್ಟಿಸಿದ್ದು, ಎಸ್ ನೀಡಿರುವ ಹೊಸ ಸುಳಿವಿನಿಂದ ಚಿತ್ರದ ಮೇಲಿನ ಹೈಪ್ ಮತ್ತಷ್ಟು ಹೆಚ್ಚಾಗಿದೆ. ಯಶ್ ಇತ್ತೀಚಿಗೆ ವೆರೈಟಿ ಇಂಡಿಯಾ'ಗೆ ನೀಡಿದ ಸಂದರ್ಶನದಲ್ಲಿ ಟಾಕ್ಸಿಕ್ ಚಿತ್ರದ ಕುರಿತು ಹಲವು ಆಸಕ್ತಿಕರ ವಿಷಯಗಳನ್ನು ಹಂಚಿಕೊಂಡಿದ್ದಾರೆ.
'ಸಾಮಾನ್ಯವಾಗಿ ಗ್ಯಾಂಗ್ ಸ್ಟರ್ ಜಗತ್ತು ಅಥವಾ ಮನುಷ್ಯರ ಕರಾಳ ಮುಖದ ಕಥೆಗಳು ಹೆಚ್ಚಾಗಿ ಪುರುಷರ ದೃಷ್ಟಿಕೋನದಿಂದಲೇ ಬರುತ್ತವೆ. ಆದರೆ ಆಳವಾದ ಭಾವನೆಗಳ ಅರಿವು ಇರುವ ಗೀತು ಮೋಹನ್ ದಾಸ್ ಅವರಂತಹ ನಿರ್ದೇಶಕಿ ಈ ಕತೆಯನ್ನು ಕೈಗೆತ್ತಿ ಕೊಂಡಾಗ ಪ್ರತಿಯೊಂದು ದೃಶ್ಯವೂ ಹೊಸ ಆಯಾಮ ಪಡೆಯುತ್ತದೆ'ಎಂದು ಯಶ್ ಹೇಳಿದ್ದಾರೆ.
ಇನ್ನಷ್ಟು ವಿವರಿಸಿದವರು,'ನಮ್ಮ ಸಿನಿಮಾದಲ್ಲಿನ ಕೆಲವು ಮಹಿಳಾ ಪಾತ್ರಗಳು ನಿಜಕ್ಕೂ ಬಹಳ ಬೋಲ್ಡ್ ಮತ್ತು ಶಕ್ತಿಶಾಲಿಯಾಗಿವೆ. ತಮ್ಮ ಜೀವನದ ಹೊಣೆಗಾರಿಕೆಯನ್ನು ತಾವೇ ಹೊತ್ತು ಯಾವುದೇ ಪರಿಸ್ಥಿತಿಯಲ್ಲೂ ಬದುಕುಳಿಯುವ ಧೈರ್ಯ ಹೊಂದಿರುವ ಮಹಿಳೆಯರಿವು. ಪ್ರತಿಯೊಬ್ಬ ಮನುಷ್ಯನ ಒಳಗು ವಿಭಿನ್ನ ರೀತಿಯ ಹಿಂಸೆ ಅಡಗಿದೆ. ಅಂತ ಪ್ರಬಲ ವ್ಯಕ್ತಿತ್ವಗಳನ್ನು ಒಬ್ಬ ಮಹಿಳೆಯ ದೃಷ್ಟಿಕೋನದ ಮೂಲಕ ಕಥೆಯೊಳಗೆ ತರುವುದು ಪ್ರೇಕ್ಷಕರಿಗೆ ಸಂಪೂರ್ಣ ಹೊಸ ಅನುಭವ ನೀಡುತ್ತದೆ'ಎಂದು ಹೇಳಿದ್ದಾರೆ.
ಈ ಹೇಳಿಕೆಗಳ ಮೂಲಕ ಟಾಕ್ಸಿಕ್ ಸಿನಿಮಾ ಕೇವಲ ಆಕ್ಷನ್ ಅಥವಾ ಗ್ಯಾಂಗ್ ಸ್ಟರ್ ಕಥೆಯಷ್ಟೇ ಅಲ್ಲ, ಮಹಿಳಾ ಪಾತ್ರಗಳಿಗೆ ಹೆಚ್ಚಿನ ಮಹತ್ವ ನೀಡುವ ವಿಭಿನ್ನ ಪ್ರಯತ್ನ ವಾಗಿಯೂ ಮೂಡಿ ಬರುತ್ತಿದೆ ಎಂಬ ನಿರೀಕ್ಷೆ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
ಟಾಕ್ಸಿಕ್ ಬಂದು ಆಕ್ಷನ್ ಥ್ರಿಲ್ಲರ್ ಸಿನಿಮಾ ವಾಗಿದ್ದು, ಗೀತು ಮೋಹನ್ ದಾಸ್ ಕಥೆ ಬರೆದು ನಿರ್ದೇಶಿಸಿದ್ದಾರೆ. ಚಿತ್ರದ ಎಸ್ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇ ಷಿ, ತಾರಾ ಸುತಾರಿಯ ಮತ್ತು ರುಕ್ಮಿಣಿ ವಸಂತ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅಕ್ಷಯ ಒಬೆರಾಯ್, ಸುಖದೇವ್ ನಾಯರ್, ಅಮಿತ್ ತಿವಾರಿ ಸೇರಿದಂತೆ ಹಲವು ಕಲಾವಿದರು ತಾರಾ ಗಣದಲ್ಲಿದ್ದಾರೆ.
ಟಾಕ್ಸಿಕ್ ಸಿನಿಮಾ ತಾಂತ್ರಿಕ ಹಾಗೂ ನಿರ್ಮಾಣ ಮಟ್ಟದಲ್ಲಿಯೂ ಬಾರಿ ಗಮನ ಸೆಳೆಯುತ್ತಿದೆ. ಈ ಚಿತ್ರವನ್ನು ಏಕಕಾಲದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರಿಕರಿಸಲಾಗುತ್ತಿದ್ದು, ಬಳಿಕ ಹಿಂದಿ, ತಮಿಳು, ತೆಲುಗು ಹಾಗೂ ಮಲಯಾಳಂ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲು ಚಿತ್ರ ತಂಡ ಯೋಚಿಸಿದೆ. ಚಿತ್ರದ ಆಕ್ಷನ್ ಸೀಕ್ವೆನ್ಸ್ ಗಳಿಗೆ ಹಾಲಿವುಡ್ ನ ಪ್ರಸಿದ್ಧ ಜಾನ್ ವಿಕ್ ಸಿನಿಮಾ ಸರಣಿಯ ಖ್ಯಾತ ಸಾಹಸ ನಿರ್ದೇಶಕ ಜೆಜೆ ಪೆರ್ರಿ ಕೆಲಸ ಮಾಡಿರುವುದು ವಿಶೇಷ. ಜೊತೆಗೆ ಭಾರತದ ಖ್ಯಾತ ಸಾಹಸ ನಿರ್ದೇಶಕರಾದ ಅನ್ವರಿವ್ ಜೋಡಿ ಕೆಲವು ಪ್ರಮುಖ ಸಾಹಸ ದೃಶ್ಯಗಳನ್ನು ಸಂಯೋಜಿಸಿದೆ.
ಅಂತರಾಷ್ಟ್ರೀಯ ಮಠದ ತಾಂತ್ರಿಕ ತಂಡ ಮತ್ತು ಬಾರಿ ಆಕ್ಷನ್ ಅಂಶಗಳೊಂದಿಗೆ ಮೂಡಿಬಂದಿರುವ ಟಾಕ್ಸಿಕ್ ಸಿನಿಮಾ, ಭಾರತೀಯ ಸಿಹಿ ರಂಗದಲ್ಲಿ ಹೊಸಮಠದ ಅನುಭವ ನೀಡುವ ನಿರೀಕ್ಷೆ ಮೂಡಿಸಿದೆ.
Also Read:
ಬಿಸಿಲಿನ ತಾಪಕ್ಕೆ ತೆಲಂಗಾಣ ತತ್ತರ: 51 ಜನ ಸಾವು, ಕುಟುಂಬಕ್ಕೆ ನಾಲ್ಕು ಲಕ್ಷ ಪರಿಹಾರ