BELAGAVI NEWS :
ತೆಲಂಗಾಣದಲ್ಲಿ ತೀವ್ರ ಬಿಸಿ ಗಾಳಿ ಅಬ್ಬರ ಮುಂದುವರೆದಿದ್ದು, ಜನರು ಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿದ್ದಾರೆ. ಶನಿವಾರ ಒಂದೇ ದಿನ ರಾಜ್ಯದ ವಿವಿಧ ಭಾಗಗಳಲ್ಲಿ 51 ಮಂದಿ ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ವಾರಂಗಲ್ ಜಿಲ್ಲೆಯಲ್ಲಿ ಅತಿ ಹೆಚ್ಚು 23 ಮಂದಿ ಸಾವನ್ನಪ್ಪಿದ್ದು, ಕರೀಂ ನಗರದಲ್ಲಿ 11, ಖಮ್ಮಂ ನಲ್ಲಿ 7, ಆದಿಲಾಬಾದ ಹಾಗೂ ನಲ್ಗೊಂಡ್ ಜಿಲ್ಲೆಗಳಲ್ಲಿ ತಲ ಐದು ಮಂದಿ ಮೃತಪಟ್ಟಿದ್ದಾರೆ. ಅಮೃತರಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರೂ ಬಿಸಿಲಿನ ಹೊಡೆತದಿಂದ ಅಸ್ತ ವ್ಯಸ್ತಗೊಂಡು ಪ್ರಾಣ ಕಳೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.
ಈ ದುರ್ಘಟ್ಟನೇ ಹಿನ್ನೆಲೆ ಮೃತರ ಕುಟುಂಬಗಳಿಗೆ ತಲಾ ನಾಲ್ಕು ಲಕ್ಷ ಪರಿಹಾರ ನೀಡಲಾಗುವುದು ಎಂದು ತೆಲಂಗಾಣ ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ಘೋಷಿಸಿದ್ದಾರೆ.
ಪ್ರಾಣಿ ಪಕ್ಷಿಗಳನ್ನು ರಕ್ಷಿಸುವುದು ಕೂಡ ನಮ್ಮ ಜವಾಬ್ದಾರಿ ಎಂದು ತೆಲಂಗಾಣ ರಾಜ್ಯ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವ ಪೊಂಗುಲೇಟಿ ಶ್ರೀನಿವಾಸ್ ರೆಡ್ಡಿ ತಿಳಿಸಿದ್ದಾರೆ. ಚಾಕದ ಅಲೆಗಳ ಪರಿಸ್ಥಿತಿಯನ್ನು ವೈಯಕ್ತಿಕವಾಗಿ ಮೇಲ್ವಿಚಾರಣೆ ಮಾಡಬೇಕು ಹಾಗೂ ಎಲ್ಲಾ ಗ್ರಾಮ ಮತ್ತು ಮಂಡಲ ಮಟ್ಟದ ಸಿಬ್ಬಂದಿ ಕ್ಷೇತ್ರದಲ್ಲೇ ಸಕ್ರಿಯವಾಗಿರಬೇಕು ಎಂದು ಅವರು ಸೂಚಿಸಿದರು. ಬಿಸಿಲಿನ ಹೊಡೆತದ ಲಕ್ಷಣಗಳು ಕಂಡ ತಕ್ಷಣ ತುರ್ತು ವೈದ್ಯಕೀಯ ಚಿಕಿತ್ಸೆ ನೀಡಲು ಆರೋಗ್ಯ ಸೇವೆಗಳು ಸಿದ್ಧವಾಗಿರಬೇಕು ಎಂದು ಸಚಿವರು ಹೇಳಿದರು. ಅವರು, ಪ್ರಾಣಿ ಪಕ್ಷಿಗಳಿಗೆ ನೀರಿನ ಟ್ಯಾಂಕ್ಗಳು ಹಾಗೂ ಮಣ್ಣಿನ ಮಡಿಕೆಗಳ ಮೂಲಕ ಕುಡಿಯುವ ನೀರು ಒದಗಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ರಾಜ್ಯದ್ಯಂತ ತಾಪಮಾನ ಅಪಾಯಕಾರಿಯಾಗಿ ಹೆಚ್ಚುತ್ತಿದ್ದು, ಮಧ್ಯಾಹ್ನದ ವೇಳೆ ಅಗತ್ಯವಿಲ್ಲದೆ ಹೊರ ಹೋಗುವುದನ್ನು ತಪ್ಪಿಸಬೇಕು ಎಂದು ಆರೋಗ್ಯ ಇಲಾಖೆ ಮನವಿ ಮಾಡಿದೆ. ಸಾಕಷ್ಟು ನೀರು ಕುಡಿಯುವುದು ಮತ್ತು ನೇರ ಬಿಸಿಲಿಗೆ ವಡ್ಡಿಕೊಳ್ಳದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸಲಹೆ ನೀಡಲಾಗಿದೆ. ತೆಲಂಗಾಣದ 15 ಜಿಲ್ಲೆಗಳಲ್ಲಿ 45 ಡಿಗ್ರಿಗಿಂತ ಹೆಚ್ಚು ತಾಪಮಾನ ದಾಖಲಾಗಿದ್ದು, ಕೊಥಗುಡೆಮ್ ಜಿಲ್ಲೆಯಲ್ಲಿ ಗರಿಷ್ಠ 46.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಶುಕ್ರವಾರ ಮಾತ್ರವೇ ಬಿಸಿ ಗಾಳಿಗೆ 34 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.
Also Read:
ಸಿಇಒ ವಿಶೇಷ ಕಾಳಜಿ: ಜಿಪಂ ನೌಕರರ ಮಕ್ಕಳಿಗೆ ಆಧುನಿಕ ಶಿಶುಪಾಲನಾ ವ್ಯವಸ್ಥೆ