BELAGAVI NEWS :
ದಾವಣಗೆರೆ: ಜಿಲ್ಲಾ ಪಂಚಾಯತ್ ನಡುವೆ ನೌಕರರ ಮಕ್ಕಳಿಗೆ ಅನುಕೂಲವಾಗುವಂತೆ ಜಿಲ್ಲಾ ಪಂಚಾಯತ್ ಸಿಇಒ ಗಿತ್ತೆ ಮಾಧವ ವಿಠಲ್ ರಾವ್ ಅವರು ಹೈಟೆಕ್ ಶಿಶುಪಾಲನಾ ಕೇಂದ್ರವನ್ನು ಅಭಿವೃದ್ಧಿಪಡಿಸಿದ್ದಾರೆ. ವಿಶೇಷವೆಂದರೆ, ಇಲ್ಲಿ ಸರ್ಕಾರಿ ನೌಕರರ ಮಕ್ಕಳಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.
ಸಿಇಒ ಗಿತ್ತಿ ಮಾಧವ ವಿಠಲ್ ರಾವ್ ಅವರ ಪುತ್ರ ಕೂಡ ಇದೇ ಶಿಶುಪಾಲನಾ ಕೇಂದ್ರದಲ್ಲಿ ಶಿಕ್ಷಣ ಪಡೆಯುತ್ತಿರುವುದು ಗಮನಾರ್ಹವಾಗಿದೆ. ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಈ ಕೇಂದ್ರ ಹಿಂದೆ ಹಾಳಾದ ಸ್ಥಿತಿಯಲ್ಲಿ ಇದ್ದು, ಸಿಇಒ ಅವರ ವಿಶೇಷ ಮುತುವರ್ಜಿಯಿಂದ ಸಂಪೂರ್ಣ ರೂಪಾಂತರಗೊಂಡಿದೆ.
ಮಕ್ಕಳ ಮನಸೆಳೆಯುವಂತೆ ಶಿಶುಪಾಲನಾ ಕೇಂದ್ರದ ಗೋಡೆಗಳ ಮೇಲೆ ಬಣ್ಣದ ಚಿತ್ತಾರಗಳನ್ನು ಬಿಡಿಸಲಾಗಿದೆ. ಸ್ವಚ್ಛ ಹಾಗೂ ಆಕರ್ಷಕ ಉದ್ಯಾನವನದಲ್ಲಿ ಜಾರಬಂಡಿ, ಜೋಕಾಲಿ ಸೇರಿದಂತೆ ಮಕ್ಕಳ ಆಟೋಪಕರಣಗಳನ್ನು ಅಳವಡಿಸಲಾಗಿದೆ ಜೊತೆಗೆ ಹವಾನಿಯಂತ್ರಿತ ಕೊಠಡಿಯಲ್ಲಿ ಮಕ್ಕಳು ಸುಸಜ್ಜಿತ ವಾತಾವರಣದಲ್ಲಿ ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಸದ್ಯ 25 ರಿಂದ 30 ಮಕ್ಕಳು ಆಗಮಿಸುತ್ತಿದ್ದಾರೆ. ಮಕ್ಕಳನ್ನು ನೋಡಿಕೊಳ್ಳಲು ಇಬ್ಬರು ಆಯಾಗಳು, ಓರ್ವ ಶಿಕ್ಷಕಿ ಇದ್ದಾರೆ. ಸುರಕ್ಷತೆಯ ದೃಷ್ಟಿಯಿಂದ ಸಿಸಿಟಿವಿ ಅಳವಡಿಸಲಾಗಿದೆ.
ಜಿಲ್ಲಾ ಪಂಚಾಯತ್ ನೌಕರರ ಮಕ್ಕಳಿಗೆ ಅನುಕೂಲವಾಗುವಂತೆ ಜಿಲ್ಲಾ ಪಂಚಾಯತ್ ಸಿಇಓ ಗಿತ್ತೆ ಮಾದವ ವಿಠಲ್ ರಾವ್ ಅವರ ಹೈಟೆಕ್ ಶಿಶುಪಾಲನಾ ಕೇಂದ್ರವನ್ನು ಅಭಿವೃದ್ಧಿಪಡಿಸಿದ್ದು, ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಲ್ಲಿ ಸರ್ಕಾರಿ ನೌಕರರ ಮಕ್ಕಳಷ್ಟೇ ಅಲ್ಲದೆ ಸುತ್ತಮುತ್ತಲಿನ ಪ್ರದೇಶದ ಮಕ್ಕಳಿಗೂ ಪ್ರವೇಶ ಅವಕಾಶ ಕಲ್ಪಿಸಲಾಗಿದೆ.
ಜಿಲ್ಲಾ ಪಂಚಾಯತ್ ಆವರಣದಲ್ಲಿರುವ ಈ ಶಿಶುಪಾಲನಾ ಕೇಂದ್ರ ಹಿಂದೆ ಹಾಳಾದ ಸ್ಥಿತಿಯಲ್ಲಿ ಇದ್ದು, ಸಿಇಓ ಅವರ ವಿಶೇಷ ಮುತುವರ್ಜಿಯಿಂದ ಸಂಪೂರ್ಣವಾಗಿ ಅಭಿವೃದ್ಧಿ ಗೊಂಡಿದೆ. ಮಕ್ಕಳ ಮನಸೆಳೆಯುವಂತೆ ಗೋಡೆಗಳ ಮೇಲೆ ಬಣ್ಣಬಣ್ಣದ ಚಿತ್ತಾರಗಳನ್ನು ಬಿಡಿಸಲಾಗಿದ್ದು, ಸ್ವಚ್ಛ ಉದ್ಯಾನವನದಲ್ಲಿ ಜಾರಬಂಡಿ, ಜೋಕಾಲಿ ಸೇರಿದಂತೆ ವಿವಿಧ ಆಟೋಪಕರಣಗಳನ್ನು ಅಳವಡಿಸಲಾಗಿದೆ. ಹವಾನಿಯಂತ್ರಿತ ಕೊಠಡಿಯಲ್ಲಿ ಮಕ್ಕಳ ಕಲಿಕೆಯಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಪೋಷಕರ ಮೆಚ್ಚುಗೆಗೆ ಪಾತ್ರವಾಗಿದೆ.
"ರಾಜ್ಯದಲ್ಲಿ ಕೆಲವೇ ಕೆಲವು ಜಿಲ್ಲಾ ಪಂಚಾಯತ್ಗಳಲ್ಲಿ ಮಾತ್ರ ಶಿಶುಪಾಲನಾ ಕೇಂದ್ರಗಳಿವೆ. ಎಂಪ್ಲಾಯ್ಮೆಂಟ್ ಆ್ಯಕ್ಟ್ ಪ್ರಕಾರ ಇಂತಹ ಕೇಂದ್ರಗಳ ಅಗತ್ಯವಿದೆ. ಡಿ ಗ್ರೂಪ್ ನಿಂದ ಹಿಡಿದು ಎಲ್ಲಾ ವರ್ಗದ ನೌಕರರ ಮಕ್ಕಳಿಗೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ ಇಲ್ಲಿ ನ ವಾತಾವರಣ ಉತ್ತಮವಾಗಿದು ಕಚೇರಿಯಲ್ಲಿ ಕೆಲಸ ಮಾಡುವ ನೌಕರರ ಮಕ್ಕಳನ್ನು ಮನೆಯಲ್ಲಿ ಬಿಟ್ಟು ಬರುವ ಚಿಂತೆ ಇಲ್ಲದೆ ಕೆಲಸ ನಿರ್ವಹಿಸಬಹುದು," ಎಂದು ಸಿಇಒ ಗಿತ್ತೆ ಮಾಧವ ವಿಠಲ್ ರಾವ್ ತಿಳಿಸಿದರು.
ಶಿಕ್ಷಕಿ ನೇತ್ರಾವತಿ ಮಾತನಾಡಿ, "ಈ ಶಿಶುಪಾಲನಾ ಕೇಂದ್ರ ಆರಂಭವಾಗಿ ಮೂರು ವರ್ಷಗಳಾಗಿವೆ. ಪ್ರಸ್ತುತ ಇಪ್ಪತೈದು ಮಕ್ಕಳಿಗೆ ಕಲಿಯುತ್ತಿದ್ದಾರೆ ಜಿಲ್ಲಾ ಪಂಚಾಯತ್ ನೌಕರರು ಹಾಗೂ ಮನೆ ಕೆಲಸಕ್ಕೆ ಹೋಗುವ ಮಹಿಳೆಯರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಮೊದಲು ಇಲ್ಲಿ ಯಾವುದೇ ಮೂಲಭೂತ ಸೌಲಭ್ಯಗಳಿರಲಲ್ಲಿ. ಸಿಇಒ ಗಿತ್ತೆ ಮಾಧವ ವಿಠಲ್ ರಾವ್ ಅವರು ಬಂದ ಬಳಿಕ ಎಲ್ಲ ರೀತಿಯ ಸೌಲಭ್ಯಗಳನ್ನು ಒದಗಿಸಿ ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಿದ್ದಾರೆ" ಎಂದು ಹೇಳಿದರು.
Also Read:
ಕರಾವಳಿ ಜನರಿಗೆ ಗುಡ್ ನ್ಯೂಸ್: ಮಂಗಳೂರು ಬೆಂಗಳೂರು ಒಂದೇ ಭಾರತ ರೈಲು ಜೂನ್ ನಿಂದ ಆರಂಭ: ಸಚಿವ ಸೋಮಣ್ಣ