BELAGAVI NEWS :
ಮಂಗಳೂರು-ಬೆಂಗಳೂರು ನಡುವೆ ಬಹು ನಿರೀಕ್ಷಿತ ಒಂದೇ ಭಾರತ ಎಕ್ಸ್ಪ್ರೆಸ್ ರೈಲು ಜೂನ್ ನಲ್ಲಿ ಸಂಚಾರ ಆರಂಭಿಸಲಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರು ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಹೊಸ ರೈಲು ಸೇವೆಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಅವರು ಹೇಳಿದರು.
ಶನಿವಾರ ಮಂಗಳೂರು ಜಂಕ್ಷನ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ಸಚಿವರು, ಅಮೃತ ಭಾರತ ಯೋಜನೆ ಅಡಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ಪರಿಶೀಲಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದರು. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಬಿಜೆಪಿ ಸಂಸದರು ಇದ್ದು, ಅವರ ಬೇಡಿಕೆಗಳನ್ನು ಪರಿಗಣಿಸಲಾಗುತ್ತಿದೆ ಎಂದ ಅವರು, ಸಕಲೇಶಪುರ-ಕುಕ್ಕೆ ಸುಬ್ರಮಣ್ಯ ಮಾರ್ಗದವರೆಗೆ 55 ಕಿಲೋಮೀಟರ್ ವಿದ್ಯುದ್ದಿಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಮಾಹಿತಿ ನೀಡಿದರು. ಬೆಂಗಳೂರು ಮಂಗಳೂರು ಮಾರ್ಗ ಸಂಪೂರ್ಣ ವಿದ್ಯುದ್ದಿಕರಣಗೊಂಡಿರುವುದರಿಂದ ಹೆಚ್ಚುವರಿ ರೈಲು ಸಂಚಾರಕ್ಕೆ ಅವಕಾಶಗಳು ಹೆಚ್ಚಾಗಿವೆ. ಇದರಿಂದ ಕರಾವಳಿ ಮತ್ತು ರಾಜ್ಯ ರಾಜಧಾನಿ ನಡುವಿನ ಸಂಪರ್ಕ ಮತ್ತಷ್ಟು ವೇಗವಾಗಿ ಹಾಗೂ ಸುಗಮವಾಗಲಿದೆ ಎಂದು ಸಚಿವರು ಹೇಳಿದರು.
ಹೊಸ ರೈಲು ಮಾರ್ಗ ರಚನೆ ಸಮೀಕ್ಷೆ ಪೂರ್ಣ: ಪ್ರಸ್ತಾವಿತ ಶಿವಮೊಗ್ಗ-ಮಂಗಳೂರು ರೈಲು ಮಾರ್ಗ 332 ಕಿಲೋಮೀಟರ್ ಇರಲಿದೆ. ಇದಕ್ಕೆ 300 ಕೋಟಿ ರೂಪಾಯಿ ಯೋಜನಾ ವೆಚ್ಚ ಅಂದಾಜಿಸಲಾಗಿದೆ. ಈ ಮಾರ್ಗದ ಎಫ್ ಎಲ್ ಸಿ ನಡೆದು ಅನುಮೋದನೆಗೊಂಡಿದ್ದು, ಈಗ ಟೆಂಡರ್ ಕರೆಯಲಾಗುವುದು ಎಂದು ತಿಳಿಸಿದರು.
ಮಂಗಳೂರು ರೈಲ್ವೆ ಅಭಿವೃದ್ಧಿಗೆ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ ಸೋಮಣ್ಣ ತಿಳಿಸಿದ್ದಾರೆ. ಮಂಗಳೂರು ಜಂಕ್ಷನ್ ಮತ್ತು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣಗಳ ತ್ವರಿತ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದ್ದು, ಮಂಗಳೂರು ಜಂಕ್ಷನ್ ನಲ್ಲಿ ನಡೆಯುತ್ತಿರುವ 38 ಕೊಟ್ಟಿರುವ ಅಭಿವೃದ್ಧಿ ಕಾಮಗಾರಿ ಅಕ್ಟೋಬರ್x ಒಳಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.
ಮಂಗಳೂರು ಜಂಕ್ಷನ್ ಯಾರ್ಡ್ ಅಭಿವೃದ್ಧಿಪಡಿಸುವ ಜೊತೆಗೆ ಹೆಚ್ಚುವರಿ ಗೂಡ್ಸ್ ರೈಲು ಹಳಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಇಡೀ ಮಂಗಳೂರು ಪ್ರದೇಶದ ರೈಲ್ವೆ ಅಭಿವೃದ್ಧಿಗಾಗಿ ಪ್ರತ್ಯೇಕ ಮಾಸ್ಟರ್ ಪ್ಲಾನ್ ಸಿದ್ಧಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಮುಂದಿನ ಆರು ತಿಂಗಳುಗಳಲ್ಲಿ ರೈಲ್ವೆ ಕ್ಷೇತ್ರದಲ್ಲಿ ಸ್ಪಷ್ಟ ಹಾಗೂ ಪಾರದರ್ಶಕ ಬದಲಾವಣೆ ಕಾಣಬಹುದಾಗಿದೆ ಎಂದು ಸಚಿವರು ತಿಳಿಸಿದರು. ಹಾಸನ ಮಂಗಳೂರು ನಡುವೆ 2547km ಹಾಗೂ ಹಳಿಯನ್ನು 8300 ಕೋಟಿ ರೂ ವೆಚ್ಚದಲ್ಲಿ ದ್ವಿಗುಣಗೊಳಿಸುವ ಯೋಜನೆ ಎಫ ಎಲ್ ಸಿ ಪರಿಶೀಲನ ಹಂತದಲ್ಲಿದೆ. ಶೋರ್ನೂರು -ಮಂಗಳೂರು ನಡುವೆ 36 ಕಿಲೋಮೀಟರ್ ದೂರದಲ್ಲಿ ಮೂರನೇ ಮತ್ತು ನಾಲ್ಕನೇ ಹಳ್ಳಿ ನಿರ್ಮಾಣಕ್ಕೂ ಯೋಜನೆ ರೂಪಿಸಲಾಗಿದೆ.
ಈ ಮಾರ್ಗದಲ್ಲಿ ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ರೈಲು ಸಂಚಾರ ನಡೆಸಲು ಕಾರ್ಯಸಾದ್ಯತಾ ವರದಿ ಸಿದ್ದಪಡಿಸಲಾಗುತ್ತಿದ್ದು, ಮೊದಲ ಹಂತದಲ್ಲಿ ಮೂರನೇ ಹಳಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಸಚಿವರು ಮಾಹಿತಿ ನೀಡಿದರು. ಮೆಮು ಓಡಾಟಕ್ಕೆ ಪ್ರಸ್ತಾವನೆ: ಮಂಗಳೂರು-ಕುಕ್ಕೆ ಸುಬ್ರಮಣ್ಯ ಮಾರ್ಗ ನಡುವೆ ಮೆಮು ರೈಲು ಓಡಾಟಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಪಾಲ್ವಾಟ್ ರೈಲ್ವೆ ಅಧಿಕಾರಿಗಳಿಗೆ ಸಚಿವ ಸೋಮಣ್ಣ ಸೂಚಿಸಿದರು. ಈ ಮಾರ್ಗದಲ್ಲಿ ಹಾಲಿ ಸಂಚರಿಸುವ ಪ್ಯಾಸೆಂಜರ್ ಒಡಾಟವನ್ನು ಇನ್ನಷ್ಟು ಹೆಚ್ಚಳ ಗೊಳಿಸುವ ಉದ್ದೇಶವಿದೆ ಎಂದರು.
ಮಂಗಳೂರಿಗೆ ಪ್ರತ್ಯೇಕ ರೈಲ್ವೆ ವಿಭಾಗ ಸಚಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ರೈಲ್ವೆ ಖಾತೆ ಸಹಾಯಕ ಸಚಿವ ವಿ ಸೋಮನ ತಿಳಿಸಿದ್ದಾರೆ. ಮಂಗಳೂರು ಒಳಗೊಂಡಿರುವ ಕೊಂಕಣ, ನೈರುತ್ಯ ಹಾಗೂ ದಕ್ಷಿಣ ರೈಲ್ವೆ ಮೂರು ವಿಭಾಗಗಳನ್ನು ಒಂದೇ ಆಡಳಿತಾತ್ಮಕ ವಿಭಾಗದಡಿ ತರಲು ಚರ್ಚೆಗಳು ನಡೆಯುತ್ತಿದ್ದು, ಆದಷ್ಟು ಬೇಗ ಈ ಬೇಡಿಕೆ ಈಡೇರಲಿದೆ ಎಂದು ಭರವಸೆ ನೀಡಿದರು.
ಮಂಗಳೂರು ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವವರಿಗೆ ಅನುಕೂಲವಾಗುವಂತೆ ಸಮೀಪದಲ್ಲಿ ಹೊಸ ರೈಲು ನಿಲ್ದಾಣ ನಿರ್ಮಾಣವಾದ ಪ್ರಸ್ತಾವನೆ ಸಲ್ಲಿಸುವ ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವರು ಹೇಳಿದರು.
ಮಂಗಳೂರು ಗೂಡ್ಸ್ ಶೇಡ್ ಬಳಿ ಕಾಳಿ ಕೋಚ್ ರೈಲುಗಳ ಸಂಚಾರದಿಂದಾಗಿ ವಾಹನ ಸಂಚಾರಕ್ಕೆ ಆಗಾಗ ತೊಂದರೆ ಉಂಟಾಗುತ್ತಿರುವ ಬಗ್ಗೆ ದೂರುಗಳು ಬಂದಿವೆ. ಈ ಸಮಸ್ಯೆ ನಿವಾರಣೆಗೆ ಸಂಸಾದರು ಮತ್ತು ಪಾಲಿಕೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಅಗತ್ಯವಿದ್ದರೆ ಭೂ ಸ್ವಾದೀನ ಮಾಡಿ ಕೆಲಸ ಸೇತುವೆ ನಿರ್ಮಾಣ ಮಾಡುವ ಸಾಧ್ಯತೆ ಪರಿಶೀಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಭೂಸ್ವಾಧೀನಕ್ಕೆ ರಾಜ್ಯ ಸರ್ಕಾರದಿಂದ ಹಣ ಬಿಡುಗಡೆ ವಿಳಂಬವಾದರೆ ಕಾಮಗಾರಿ ಕೂಡ ತಡವಾಗುವ ಸಾಧ್ಯತೆ ಇದೆ ಎಂಬ ಸಂಸದರ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿದ ಸಚಿವ ಸೋಮಣ್ಣ, ಇನ್ನು ಮುಂದೆ ತುರ್ತು ಕಾಮಗಾರಿಗಳನ್ನು ರೈಲ್ವೆ ಇಲಾಖೆ ನೇರವಾಗಿ ಕೆತ್ತಿಕೊಳ್ಳಲಿದೆ ಎಂದು ಹೇಳಿದರು.
ವೇಳಾಪಟ್ಟಿ ಬದಲಾವಣೆ ಇಲ್ಲ: ಪಂಚಗಂಗಾ ಎಕ್ಸ್ಪ್ರೆಸ್ ಸೇರಿದಂತೆ ಬೆಂಗಳೂರು-ಮಂಗಳೂರು-ಕಾರವಾರ ನಡುವಿನ ಯಾವುದೇ ರೈಲುಗಳ ವೇಳಾಪಟ್ಟಿ ಪರಿಸ್ಕರಿಸಿ ವಿಳಂಬ ಮಾಡುವ ಯೋಜನೆ ಇಲ್ಲ. ಮುಂಬೈ ಸಿ ಎಸ್ ಟಿ, ಗೊಮ್ಮಟೇಶ್ವರ ಎಕ್ಸ್ಪ್ರೆಸ್ ಹಾಗೂ ಯಶವಂತಪುರ ಎಕ್ಸ್ಪ್ರೆಸ್ ರೈಲನ್ನು ಮಂಗಳೂರು ಸೆಂಟ್ರಲ್ ಗೆ ವಿಸ್ತರಿಸಲು ಪರಿಶೀಲಿಸಲಾಗುವುದು. ಮಂಗಳೂರು ಸೆಂಟ್ರಲ್ ನಿಲ್ದಾಣದಲ್ಲಿ ಮತ್ತೆ ಹೆಚ್ಚುವರಿ ಪ್ಲಾಟ್ ಫಾರ್ಮ್ ರಚನೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಮಂಗಳೂರು ಸೆಂಟ್ರಲ್ ಮತ್ತು ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಕನ್ನಡ ಬಲ್ಲ ಸಿಬ್ಬಂದಿಯನ್ನು ನಿಯೋಜಿಸುವಂತೆ ರೈಲ್ವೆ ಖಾತೆ ಸಹಾಯಕ ಸಚಿವ ವಿ ಸೋಮನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರಯಾಣಿಕರಿಗೆ ಭಾಷಾ ಸಮಸ್ಯೆ ಉಂಟಾಗಬಾರದು ಎಂದು ಹೇಳಿದ ಅವರು, ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಬೇರೆ ರಾಜ್ಯದ ಸಿಬ್ಬಂದಿಯು ಕನಿಷ್ಠ ಮಟ್ಟದಲ್ಲಿ ಕನ್ನಡ ಭಾಷೆ ಕಲಿತು ಸಂವಹನ ನಡೆಸಬೇಕು ಎಂದು ತಾಕಿತು ಮಾಡಿದರು. ಪ್ರಯಾಣಿಕರೊಂದಿಗೆ ಸುಗಮ ಸಮಾನಕ್ಕೆ ಕನ್ನಡಕ್ಕೆ ಆದ್ಯತೆ ನೀಡಬೇಕೆಂದು ಸಚಿವರು ಸೂಚಿಸಿದರು.
Also Read:
ಬೆಳಗಾವಿ ಪ್ರತಿಭೆಗಳ ಮೆರಗು: ಅಂತರಾಷ್ಟ್ರೀಯ ರೋಬೊ ಸಾಕರ್ ಲೀಗ್ ನಲ್ಲಿ ಚಾಂಪಿಯನ್