Breast Cancer: ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ, ಮಹಿಳೆಯರಿಗೆ ಧೈರ್ಯ ತುಂಬುವ
ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಮಹಿಳೆಯರು ವೈದ್ಯರೊಂದಿಗೆ ರ್ಯಾಂಪ್ ನಲ್ಲಿ ಹೆಜ್ಜೆ ಹಾಕಿ ಧೈರ್ಯ, ಆತ್ಮವಿಶ್ವಾಸ ಮತ್ತು ಭರವಸೆಯ ಸಂದೇಶವನ್ನು ಸಾರಿದರು.
ಮೈಸೂರು:
ರ್ಯಾಂಪ್ ನಲ್ಲಿ ಹೆಜ್ಜೆ ಹಾಕುತ್ತಿರುವ ಇವರು ಧೈರ್ಯವಂತರು, ಇತರರಿಗೆ ಮಾದರಿ ಅಂದ್ರೂ ತಪ್ಪಾಗಲಾರದು. ಏಕಂದ್ರೆ ಇವರು ಸ್ತನ ಕ್ಯಾನ್ಸರ್ (Breast Cancer) ವಿರುದ್ಧ ಹೋರಾಡಿ ಗೆದ್ದ ಮಹಿಳೆಯರು (Women's). ಹೌದು ವಿಶ್ವ ಸ್ತನ ಕ್ಯಾನ್ಸರ್ ಜಾಗೃತಿ ಮಾಸದ ಅಂಗವಾಗಿ ಮೈಸೂರು (Mysuru) ಭಾರತ್ ಆಸ್ಪತ್ರೆ (Hospital) ಮತ್ತು ಆಂಕೋಲಜಿ ಇನ್ಸ್ಟಿಟ್ಯೂಟ್ ವತಿಯಿಂದ ಭಾವನಾತ್ಮಕ ಹಾಗೂ ಸ್ಪೂರ್ತಿದಾಯಕ ರ್ಯಾಂಪ್ ವಾಕ್ ಕಾರ್ಯಕ್ರಮವನ್ನು ನೆಕ್ಸಸ್ ಸೆಂಟರ್ ಸಿಟಿ ಮಾಲ್ನಲ್ಲಿ ಆಯೋಜಿಸಲಾಗಿತ್ತು.
ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಮಹಿಳೆಯರು:
ಸ್ತನ ಕ್ಯಾನ್ಸರ್ ವಿರುದ್ಧ ಹೋರಾಡಿ ಗೆದ್ದ ಮಹಿಳೆಯರು ವೈದ್ಯರೊಂದಿಗೆ ರ್ಯಾಂಪ್ ನಲ್ಲಿ ಹೆಜ್ಜೆ ಹಾಕಿ ಧೈರ್ಯ, ಆತ್ಮವಿಶ್ವಾಸ ಮತ್ತು ಭರವಸೆಯ ಸಂದೇಶವನ್ನು ಸಾರಿದರು. “ಪಿಂಕ್ ಹೋಪ್” ಎಂಬ ವಿಷಯಾಧಾರಿತ ಈ ರ್ಯಾಂಪ್ ವಾಕ್ ಮಹಿಳೆಯರ ಶಕ್ತಿಯನ್ನು ಮತ್ತು ಕ್ಯಾನ್ಸರ್ ವಿರುದ್ಧದ ಹೋರಾಟದ ಸಂಕೇತವಾಗಿ ಗಮನ ಸೆಳೆಯಿತು.
ಆರೋಗ್ಯ ಜಾಗೃತಿ:
ಈ ಸಂದರ್ಭ BHIO ಸಂಸ್ಥೆಯ COO ಗೌತಮ್ ಧಾಮರ್ಲ, ನೆಕ್ಸಸ್ ಸೆಂಟರ್ ಸಿಟಿ ಮೈಸೂರಿನ ಸೆಂಟರ್ ಹೆಡ್ ಕುಮಾರ್ ಮೋಹನನ್ ಮತ್ತು ಫ್ಯಾಷನ್ ಪಾಲುದಾರರಾದ ಮಾಡೆಲ್ ಆಕಾಂಕ್ಷಾ ಗೌಡ ಉಪಸ್ಥಿತರಿದ್ದರು. ಕಾರ್ಯಕ್ರಮವು ಸ್ತನ ಕ್ಯಾನ್ಸರ್ ಜಾಗೃತಿಗೆ ಬಣ್ಣ ತುಂಬಿದ ವಿಶಿಷ್ಟ ಪ್ರಯತ್ನವಾಗಿ ಮೈಸೂರಿನ ಜನರ ಮೆಚ್ಚುಗೆಗೆ ಪಾತ್ರವಾಯಿತು.
ವೈದ್ಯರು ಹಾಗೂ ಕ್ಯಾನ್ಸರ್ ವಿಜೇತೆಯರು ಒಂದೇ ವೇದಿಕೆಯಲ್ಲಿ ನಡೆದು, ಆರೋಗ್ಯ ಜಾಗೃತಿ ಮತ್ತು ಮಹಿಳಾ ಸಬಲೀಕರಣದ ಸಂದೇಶವನ್ನು ನೀಡಿದರು. ಪ್ರೇಕ್ಷಕರಿಂದ ಭಾರಿ ಚಪ್ಪಾಳೆ ಗಳಿಸಿದ ಈ ವಾಕ್ನಲ್ಲಿ ಭಾಗವಹಿಸಿದ ಪ್ರತಿಯೊಬ್ಬರೂ ಸ್ತನ ಕ್ಯಾನ್ಸರ್ ವಿರುದ್ಧದ ಹೋರಾಟದ ನಿಜವಾದ “ಸರ್ವೈವರ್ಗಳು” ಎಂಬ ಭಾವನೆಯನ್ನು ಮೂಡಿಸಿದರು.
ಇನ್ನಷ್ಟು ಓದಿರಿ:
ಕಾರವಾರ ಪುರಸಭೆ ಸದಸ್ಯರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ