ನೀವು ಸ್ಮಾರ್ಟ್ ವಾಚ್ ಬಳಸುವವರಾದ್ರೆ ಈ ವಿಷಯಗಳನ್ನು ತಿಳಿದುಕೊಳ್ಳಿ
ನೀವು ಕೂಡ ಸ್ಮಾರ್ಟ್ ವಾಚ್ ಬಳಸುತ್ತೀರಾ? ಹಾಗಿದ್ರೆ ನೀವು ಈ ಸ್ಟೋರಿಯನ್ನು ತಪ್ಪದೆ ಓದಲೇಬೇಕು. ಏಕೆಂದರೆ ಸ್ಮಾರ್ಟ್ ವಾಚ್ ಕಟ್ಟಿಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯೂ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಬಹಳ ಅವಶ್ಯಕವಾಗಿದೆ. ಆರೋಗ್ಯ ತಜ್ಞರು ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಾರೆ. ವಾಚ್ ಗಳಲ್ಲಿ ಹಲವಾರು ವೈಶಿಷ್ಟ್ಯಗಳಿದ್ದರೂ ಕೂಡ ಸರಿಯಾಗಿ ಬಳಸದಿದ್ದರೆ ಅದು ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಈ ಹಿಂದೆ ಇಂತಹ ಸಮಸ್ಯೆಗಳು ವರದಿಯಾಗಿರುವುದರಿಂದ ಸ್ವಲ್ಪ ಎಚ್ಚರಿಕೆ ವಹಿಸುವುದು ಒಳ್ಳೆಯದು. ಹಾಗಾದರೆ, ಸ್ಮಾರ್ಟ್ವಾಚ್ನ ಬಗ್ಗೆ ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಇತ್ತೀಚಿನ ದಿನಗಳಲ್ಲಿ, ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್ ವಾಚ್ (
Smartwatch) ಇದ್ದೆ ಇರುತ್ತದೆ. ಇದು ನಿಮ್ಮ ಪ್ರತಿ ಹೆಜ್ಜೆಗಳನ್ನು ಎಣಿಸುತ್ತದೆ, ಹೃದಯ ಬಡಿತ ಮತ್ತು ನಿದ್ರೆಯನ್ನು ಕೂಡ ಮೇಲ್ವಿಚಾರಣೆ ಮಾಡುತ್ತದೆ. ನಿಮಗೆ ಬಂದಿರುವ ಸಂದೇಶಗಳನ್ನು ಪರಿಶೀಲಿಸುತ್ತದೆ, ವಾಟ್ಸಾಪ್ ನ ನೋಟಿಫಿಕೇಶನ್ ಮತ್ತು ಇತರ ಕರೆಗಳನ್ನು ಮಾಡುವುದಕ್ಕೆ ಹೆಲ್ಪ್ ಮಾಡುತ್ತದೆ. ಹೀಗೆ ನಿಮ್ಮ ಸ್ಮಾರ್ಟ್ಫೋನ್ ಅನ್ನು ಒಂದು ರೀತಿಯಲ್ಲಿ ಅದೇ ಮ್ಯಾನೇಜ್ ಮಾಡುತ್ತದೆ. ಆದರೆ ಈ ಎಲ್ಲಾ ವೈಶಿಷ್ಟ್ಯಗಳನ್ನು ಹೊಂದಿದ್ದರೂ, ಸ್ಮಾರ್ಟ್ವಾಚ್ ಬಳಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹೌದು, ಇಷ್ಟೆಲ್ಲಾ ಸಹಕಾರಿಯಾಗಿರುವ ವಾಚ್ ಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳುವುದು ಬಹಳ ಅನಿವಾರ್ಯ. ಇಲ್ಲವಾದಲ್ಲಿ ಆರೋಗ್ಯ (Health) ಕಾಪಾಡುವ ನಿಮ್ಮ ವಾಚ್ ಗಳೇ ಆರೋಗ್ಯ ಹಾಳು ಮಾಡಬಹುದು. ಹಾಗಾದರೆ, ಸ್ಮಾರ್ಟ್ವಾಚ್ನ ಬಗ್ಗೆ ಯಾವ ರೀತಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ರೀತಿಯ ಆರೋಗ್ಯ ಸಮಸ್ಯೆಗಳಾಗುತ್ತದೆ:
ನೀವು ಬಳಸುವ ಸ್ಮಾರ್ಟ್ ವಾಚ್ ಚಾರ್ಜ್ ಮಾಡುವಾಗ, ಅತಿಯಾಗಿ ಬಿಸಿಯಾಗುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಗಮನಿಸಬೇಕು. ಅದು ಬಿಸಿಯಾಗಿದ್ದರೆ, ಹೆಚ್ಚು ಹೊತ್ತು ಚಾರ್ಜ್ ಮಾಡುವುದನ್ನು ನಿಲ್ಲಿಸಿ, ಮಾತ್ರವಲ್ಲ ಅದು ಬಿಸಿ ಇರುವಾಗಲೇ ವಾಚ್ ಕಟ್ಟಿಕೊಳ್ಳುವುದನ್ನು ನಿಲ್ಲಿಸಿ. ಸ್ಮಾರ್ಟ್ ವಾಚ್ಗಳು ಹಲವು ವೈಶಿಷ್ಟ್ಯಗಳನ್ನು ಹೊಂದಿದ್ದರೂ, ನೀವು ಅವೆಲ್ಲವನ್ನೂ ಬಳಸದಿರಬಹುದು. ಆದ್ದರಿಂದ, ನಿಮಗೆ ಅಗತ್ಯವಿರುವ ವೈಶಿಷ್ಟ್ಯಗಳನ್ನು ಮಾತ್ರ ಬಳಸುವುದು ಉತ್ತಮ. ಸ್ಮಾರ್ಟ್ ವಾಚ್ ತೂಕ
ಇಳಿಸಿಕೊಳ್ಳಲು ಮಾತ್ರ ಉಪಯುಕ್ತವಲ್ಲ. ಇದು ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಅಂಶಗಳನ್ನು ಟ್ರ್ಯಾಕ್ ಮಾಡುತ್ತದೆ. ಇಷ್ಟೆಲ್ಲಾ ಇದ್ದರೂ ಕೂಡ ಆರೋಗ್ಯ ತಜ್ಞರು ಇದನ್ನು ಬಹಳ ಎಚ್ಚರಿಕೆಯಿಂದ ಬಳಸಿ ಎಂದು ಸಲಹೆ ನೀಡುತ್ತಾರೆ. ಇಲ್ಲದಿದ್ದರೆ, ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಎಚ್ಚರಿಸಿದ್ದಾರೆ.
ಕೆಲವರಿಗೆ ಸ್ಮಾರ್ಟ್ ವಾಚ್ಗಳಿಂದಾಗಿ ಚರ್ಮದ ಸಮಸ್ಯೆಗಳು ಉಂಟಾಗಬಹುದು ಎಂದು
ಆರೋಗ್ಯ ತಜ್ಞರು ಹೇಳುತ್ತಾರೆ. ಹೌದು, ವಾಚ್ ಗಳನ್ನು ತುಂಬಾ ಬಿಗಿಯಾಗಿ ಕಟ್ಟುವುದು ಒಳ್ಳೆಯದಲ್ಲ. ಅದರ ಬದಲು ಸ್ವಲ್ಪ ಸಡಿಲವಾಗಿ ಧರಿಸುವುದು ಸೂಕ್ತ. ಇಲ್ಲವಾದಲ್ಲಿ ಇದು ರಕ್ತ ಸಂಚಾರಕ್ಕೆ ಅಡ್ಡಿಯಾಗುತ್ತದೆ. ಇನ್ನು ಕೆಲವರಲ್ಲಿ ಇದು ಚರ್ಮದಲ್ಲಿ ತುರಿಕೆ, ಚಿಕ್ಕ ಚಿಕ್ಕ ಗುಳ್ಳೆಗಳು ಕಂಡುಬರುವುದಕ್ಕೂ ಕಾರಣವಾಗಬಹುದು. ಮಾತ್ರವಲ್ಲ, ವಾಚ್ ಗಳನ್ನು ತುಂಬಾ ಹೊತ್ತು ಕಟ್ಟಿಕೊಂಡಿರುವುದರಿಂದ ಕೆಲವರಿಗೆ ತಲೆನೋವು ಬರುತ್ತದೆ. ಅಷ್ಟೇ ಅಲ್ಲ, ಸ್ಮಾರ್ಟ್ ವಾಚ್ಗಳಿಂದ ಬರುವ ವಿಕಿರಣದಿಂದ ಅಸ್ವಸ್ಥತೆಗಳು ಉಂಟಾಗಿರುವುದು ಕೂಡ ವರದಿಯಾಗಿದೆ. ನಿಮಗೂ ಕೂಡ ಇಂತಹ
ಸಮಸ್ಯೆಗಳು ಕಂಡುಬರುತ್ತಿದ್ದರೆ, ವಾಚ್ ಬಳಕೆಯನ್ನು ಕೂಡ ಕಡಿಮೆ ಮಾಡಬೇಕು ಅಥವಾ ಸಂಪೂರ್ಣವಾಗಿ ನಿಲ್ಲಿಸುವುದು ಒಳ್ಳೆಯದು. ಇನ್ನು ಸ್ಮಾರ್ಟ್ ವಾಚ್ ಬಳಸುವುದರಿಂದ ಕೆಲವರಿಗೆ ನಿದ್ರಾಹೀನತೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಮಲಗುವ ಮೊದಲು ಸ್ಮಾರ್ಟ್ ವಾಚ್ ತೆಗೆಯುವುದು ಒಳ್ಳೆಯದು.
ಇನ್ನಷ್ಟು ಓದಿರಿ:
ಬಾಡಿ ಶೇಮಿಂಗ್: ನಟಿಯ ಬೆಂಬಲಕ್ಕೆ ಬಂದ ತಮಿಳು ಚಿತ್ರರಂಗ