1 ವರ್ಷದೊಳಗಿನ ಮಕ್ಕಳಿಗೆ ಎಳನೀರನ್ನು ನೀಡಬಹುದೇ
ಎಳನೀರು ನೀರು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದು ತಿಳಿದಂತಹ ವಿಚಾರ. ಇದರಲ್ಲಿ ಅಮೃತದ ಗುಣವಿದ್ದು ಅನೇಕ ರೀತಿಯ ಕಾಯಿಲೆಗಳಿಗೆ ರಾಮಬಾಣವಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿಯೇ ಇದನ್ನು ನಿಯಮಿತವಾಗಿ ಸೇವನೆ ಮಾಡಿ ಎಂದು ಹೇಳಲಾಗುತ್ತದೆ. ಆದರೆ ಇದು ಎಲ್ಲರಿಗೂ ಒಳ್ಳೆಯದೇ? ಅದರಲ್ಲಿಯೂ 1 ವರ್ಷದೊಳಗಿನ ಮಕ್ಕಳಿಗೆ ಎಳನೀರನ್ನು ನೀಡಬಹುದೇ? ಎಂಬ ಅನುಮಾನ ಹಲವರಿಗಿರಬಹುದು. ಇದರ ಬಗ್ಗೆ ಡಾ. ರಾಕೇಶ್ ಬಾಗ್ರಿ ಅವರು ಮಾತನಾಡಿದ್ದು ಸಾಕಷ್ಟು ಮಾಹಿತಿ ಹಂಚಿಕೊಂಡಿದ್ದಾರೆ. ನಿಮ್ಮ ಮನೆಯಲ್ಲಿಯೂ ಚಿಕ್ಕ ಮಕ್ಕಳಿದ್ದು ನಿಮಗೂ ಇದೇ ರೀತಿ ಗೊಂದಲಗಳಿದ್ದರೆ ನೀವು ಈ ಸ್ಟೋರಿಯನ್ನು ಮಿಸ್ ಮಾಡ್ದೆ ಓದಿ.
ಸಣ್ಣ ಮಕ್ಕಳಿಗೆ ಯಾವುದೇ ಕಾರಣಕ್ಕೂ ವೈದ್ಯರ ಸಲಹೆ ಪಡೆಯದೆಯೇ ಆಹಾರಗಳನ್ನು ನೀಡಬಾರದು. ಏಕೆಂದರೆ ನೀವು ಮಾಡುವ ಒಂದು ಸಣ್ಣ ತಪ್ಪು ಶಿಶುವಿನ ಹೊಟ್ಟೆ ನೋವು, ಗ್ಯಾಸ್, ವಾಂತಿ ಅಥವಾ ಅತಿಸಾರಕ್ಕೆ ಕಾರಣವಾಗಬಹುದು. ಇದೆ ರೀತಿ ಎಳನೀರು ಕೂಡ ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುತ್ತದೆ ಜೊತೆಗೆ ನಮ್ಮ ಆರೋಗ್ಯವನ್ನು ಕಾಪಾಡುತ್ತದೆ. ಆದರೆ 6 ತಿಂಗಳೊಳಗಿನ ಮಕ್ಕಳಿಗೆ ಎಳನೀರನ್ನು ನೀಡಬಾರದು. ಈ ವಯಸ್ಸಿನಲ್ಲಿ ಶಿಶುವಿಗೆ ತಾಯಿಯ ಹಾಲನ್ನು ಮಾತ್ರ ನೀಡಬೇಕು. 6 ತಿಂಗಳ ನಂತರ, ಮಗು ಮೃದುವಾದ ಆಹಾರವನ್ನು ಸೇವಿಸಲು ಪ್ರಾರಂಭಿಸಿದಾಗ, ಬಹಳ ಕಡಿಮೆ ಪ್ರಮಾಣದಲ್ಲಿ ಅಂದರೆ 1 ರಿಂದ 2 ಟೀ ಚಮಚ ಕೊಡಬೇಕು. ಬಳಿಕ ಈ ಪ್ರಮಾಣವನ್ನು ಕ್ರಮೇಣ ಹೆಚ್ಚಿಸಬೇಕು. ಅದರಲ್ಲಿಯೂ ತಾಜಾ ಎಳನೀರನ್ನೇ ನೀಡಿ. ಆದರೆ 6 ತಿಂಗಳ ಮೊದಲು ಯಾವುದೇ ರೀತಿಯ ಹೊರಗೆ ಸಿಗುವ ದ್ರವ ಪದಾರ್ಥ, ರಸ, ಜೇನುತುಪ್ಪ ಅಥವಾ ನೀರನ್ನು ನೀಡಬೇಡಿ ಇದು ಮಗುವಿನ ಹೊಟ್ಟೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತ. ಹಾಗಾಗಿ ಯಾವುದೇ ರೀತಿಯ ಹೊಸ ಆಹಾರ ಅಥವಾ ಪಾನೀಯಗಳನ್ನು ಮಕ್ಕಳಿಗೆ ಪರಿಚಯಿಸುವ ಮೊದಲು ವೈದ್ಯರ ಸಂಪರ್ಕ ಮಾಡಿ ಸಲಹೆ ಪಡೆಯುವುದನ್ನು ಮರೆಯಬೇಡಿ.
ಎಳನೀರು (Coconut Water) ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದರ ನಿಯಮಿತ ಸೇವನೆಯಿಂದ ಅನೇಕ ರೀತಿಯ ಸಮಸ್ಯೆಗಳನ್ನು ಪರಿಹರಿಸಿಕೊಂಡು ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಆದರೆ ಇದು ಎಲ್ಲರಿಗೂ ಒಳ್ಳೆಯದೇ ಎಂಬ ಪ್ರಶ್ನೆ ಮೂಡುತ್ತದೆ. ಅದರಲ್ಲಿಯೂ 1 ವರ್ಷದೊಳಗಿನ ಮಕ್ಕಳಿಗೆ ಎಳನೀರನ್ನು ಕೊಡಬಹುದೇ ಎಂಬುದನ್ನು ಯೋಚಿಸಬೇಕಾಗುತ್ತದೆ. ಏಕೆಂದರೆ ಸಣ್ಣ ಮಕ್ಕಳ ಹೊಟ್ಟೆ ತುಂಬಾ ಸೂಕ್ಷ್ಮವಾಗಿದ್ದು ಈ ಸಮಯದಲ್ಲಿ, ಅವರ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಿರುವುದಿಲ್ಲ ಹಾಗಾಗಿ, ಕೊಟ್ಟಿದ್ದೆಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಅವರಿಗಿರುವುದಿಲ್ಲ. ಅದಕ್ಕಾಗಿಯೇ ಪೋಷಕರಾದವರು ಮಕ್ಕಳಿಗೆ ಯಾವ ರೀತಿಯ ಆಹಾರಗಳನ್ನು ಕೊಡಬೇಕು, ಯಾವುದು ಒಳ್ಳೆಯದಲ್ಲ ಎಂಬುದರ ಬಗ್ಗೆ ವಿಶೇಷವಾಗಿ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ 1 ವರ್ಷದೊಳಗಿನ ಶಿಶುಗಳಿಗೆ ಎಳನೀರನ್ನು ಕೊಡಬಹುದೇ, ಆರೋಗ್ಯ (Health) ತಜ್ಞರ ಅಭಿಪ್ರಾಯವೇನು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಈ ವಿಷಯಗಳನ್ನು ಸಹ ನೆನಪಿನಲ್ಲಿಡಿ:
ಮಕ್ಕಳಿಗೆ 1 ವರ್ಷದ ಮೊದಲು ಉಪ್ಪು, ಸಕ್ಕರೆ ಅಥವಾ ಜೇನುತುಪ್ಪವನ್ನು ನೀಡಬೇಡಿ.
ಹೊಸ ಆಹಾರವನ್ನು ಪ್ರಾರಂಭಿಸುವ ಮೊದಲು ಸ್ವಲ್ಪ ಮಾತ್ರ ನೀಡಿ. ಯಾವುದೇ ಕಾರಣಕ್ಕೂ ಒಮ್ಮೆಲೇ ತಿನ್ನಿಸಬೇಡಿ.
ಹೊಸದಾಗಿ ಯಾವುದೇ ರೀತಿಯ ಲಕ್ಷಣಗಳು ಕಂಡುಬಂದರೂ ಕೂಡ ತಕ್ಷಣ ವೈದ್ಯರನ್ನು ಸಂಪರ್ಕಿಸಿ.
ಶಿಶುವಿಗೆ ಎಳನೀರು ಕೊಡುವಾಗ ನೆನಪಿನಲ್ಲಿರಬೇಕಾದ ಅಂಶಗಳು:
ಮಗುವಿಗೆ ಎಳನೀರು ಕೊಡುವ ಮೊದಲು ಗ್ಯಾಸ್, ಅತಿಸಾರ, ವಾಂತಿ ಅಥವಾ ಹೊಟ್ಟೆ ನೋವಿನಂತಹ ಯಾವುದೇ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ. ಇಂತಹ ಯಾವುದೇ ಸಮಸ್ಯೆಗಳಿದ್ದರೂ, ಎಳನೀರನ್ನು ನೀಡಬೇಡಿ. ಜೊತೆಗೆ ಮಕ್ಕಳಿಗೆ ಕೊಡುವಾಗ ಬಹಳ ಕಡಿಮೆ ಪ್ರಮಾಣದಲ್ಲಿ ಪ್ರಾರಂಭಿಸಿ. ಮಾತ್ರವಲ್ಲ ದಿನಕ್ಕೆ ಒಮ್ಮೆ ಮಾತ್ರ ನೀಡಿ. 6 ರಿಂದ 12 ತಿಂಗಳ ಶಿಶುಗಳಿಗೆ, ಎಳನೀರನ್ನು ಪೂರಕವಾಗಿ ಮಾತ್ರ ನೀಡಲಾಗುತ್ತದೆ; ನಿಜವಾದ ಪೋಷಣೆ ತಾಯಿಯ ಹಾಲಿನಿಂದ ಮಾತ್ರ ಸಿಗುತ್ತದೆ.
ಎಐಎಂಎಸ್ (AIIMS) ಮಾಜಿ ಮಕ್ಕಳ ತಜ್ಞ ಡಾ. ರಾಕೇಶ್ ಬಾಗ್ರಿ ಅವರು ನೀಡಿರುವ ಮಾಹಿತಿ ಪ್ರಕಾರ, 6 ತಿಂಗಳಿಗಿಂತ ಮೇಲ್ಪಟ್ಟ ಮಕ್ಕಳಿಗೆ ಎಳನೀರನ್ನು ನೀಡಬಹುದು, ಆದರೆ ಕೆಲವು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕಾಗುತ್ತದೆ. ಏಕೆಂದರೆ ಎಳನೀರು ನೀಡಲು ಯಾವಾಗಲೂ ತಾಜಾ ತೆಂಗನ್ನೇ ಆಯ್ಕೆ ಮಾಡಿಕೊಳ್ಳಿ, ಯಾವುದೇ ಕಾರಣಕ್ಕೂ ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಅಥವಾ ಸುವಾಸನೆ ಭರಿತ ಎಳನೀರನ್ನು ಮಕ್ಕಳಿಗೆ ನೀಡಬೇಡಿ, ಏಕೆಂದರೆ ಅವು ಸಕ್ಕರೆ ಅಂಶವನ್ನು ಮತ್ತು ಸಂರಕ್ಷಕಗಳನ್ನು ಹೊಂದಿರುತ್ತವೆ.
ಇನ್ನಷ್ಟು ಓದಿರಿ :
18 ಎಸೆತಗಳಲ್ಲಿ 10 ಬೌಂಡರಿ, ವಿಂಡೀಸ್ ವಿರುದ್ಧ ಸ್ಯಾಂಟ್ನರ್ ಏಕಾಂಗಿ ಹೋರಾಟ