<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ಕೊಲ್ಲೂರಿಗೆ ಭೇಟಿ ನೀಡಿದ ಸಿಎಂ ಜೋಸೆಫ್ ವಿಜಯ್ : ಅರ್ಚಕರಿಂದ ಮಹತ್ವದ ಮಾಹಿತಿ

ಕೊಲ್ಲೂರಿಗೆ ಭೇಟಿ ನೀಡಿದ ಸಿಎಂ ಜೋಸೆಫ್ ವಿಜಯ್ : ಅರ್ಚಕರಿಂದ ಮಹತ್ವದ ಮಾಹಿತಿ
Summary: Tamil Nadu CM Joseph Vijay visited Kollur Mookambika Temple and offered special prayers. Priest Nityananda Adiga shared important information about Vijay's devotion to the goddess.

Belagavi News:

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ಈ ವೇಳೆ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದವರು, ರಾಜ್ಯದ ಜನರ ಶಾಂತಿ ಮತ್ತು ಸುಖ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥನೆಯನ್ನು ಸಲ್ಲಿಸಿದರು.

ಭೇಟಿ ಕುರಿತು ಮಾಹಿತಿ ನೀಡಿದ ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ, ವಿಜಯ್ ಅವರು ಅತ್ಯಂತ ಭಕ್ತಿಯಿಂದ ದೇವಿಯ ದರ್ಶನ ಪಡೆದಿದ್ದು, ದೇವಸ್ಥಾನ ಸಂಪ್ರದಾಯದಂತೆ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು. ದೇವಿಯ ಆಶೀರ್ವಾದ ಪಡೆದ ಬಳಿಕ ದೇವಸ್ಥಾನದ ಆಡಳಿತ ಮಂಡಳಿ ಅವರೊಂದಿಗೆ ಕೆಲಕಾಲ ಮಾತುಕತೆ ನಡೆಸಿದರು.

ಜೋಸೆಫ್ ವಿಜಯ್, ಅವರ ದೇವಸ್ಥಾನ ಬೇಟಿನಿಂದಲೆಯಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿತ್ತು. ದೇವಸ್ಥಾನಕ್ಕೆ ಆಗಮಿಸಿದ ಭಕ್ತರು ಹಾಗೂ ಅಭಿಮಾನಿಗಳು ಅವರನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರು. ಅವರ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿಯೂ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ ದೇಶದ ಪ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ವಿವಿಧ ರಾಜ್ಯಗಳ ರಾಜಕೀಯ ನಾಯಕರು, ಸಿನಿಮಾ ತಾರೆಯರು ಹಾಗೂ ಗಣ್ಯರು ಆಗಾಗ ಭೇಟಿ ನೀಡಿ ದೇವಿಯ ಆಶೀರ್ವಾದ ಪಡೆಯುವುದು ವಿಶೇಷವಾಗಿದೆ.

ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತಮಿಳುನಾಡು ಸಿಎಂ ವಿಜಯ್ ಭೇಟಿ: ನಿತ್ಯಾನಂದ ಅಡಿಗ ಮಹತ್ವದ ಮಾಹಿತಿ:

ತಮಿಳುನಾಡು ಮುಖ್ಯಮಂತ್ರಿ ಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಜೋಸೆಫ್ ವಿಜಯ್ ಅವರು ಇಂದು ಪ್ರಸಿದ್ಧ ಧಾರ್ಮಿಕ ಕ್ಷೇತ್ರದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಅವರು ದೇವಸ್ಥಾನಕ್ಕೆ ಆಗಮಿಸಲಿದ್ದು, ಈ ಕುರಿತು ದೇವಸ್ಥಾನದ ಅರ್ಚಕರು ನಿತ್ಯಾನಂದ ಅಡಿಗ ಮಾಹಿತಿ ನೀಡಿದ್ದಾರೆ.

ಸಿಎಂ ವಿಜಯ್ ಅವರ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ವಿಶೇಷ ಸಿದ್ಧತೆಗಳನ್ನು ಕೈಗೊಂಡಿದೆ. ಅರ್ಚಕ ವೃಂದ ಹಾಗೂ ಸಿಬ್ಬಂದಿಗೆ ಅಗತ್ಯ ಸೂಚನೆಗಳನ್ನು ಭೌತಿಕ ಮತ್ತು ಲಿಖಿತ ರೂಪದಲ್ಲಿ ನೀಡಲಾಗಿದ್ದು, ಭದ್ರತಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.

ಸರ್ಕಾರದ ಪ್ರೋಟೋಕಾಲ್ ಪ್ರಕಾರ ಜೋಸೆಫ್ ವಿಜಯ್ ಅವರನ್ನು ದೇವಸ್ಥಾನದ ವತಿಯಿಂದ ಪೂರ್ಣ ಕುಂಭ ಸ್ವಾಗತದೊಂದಿಗೆ ಗೌರವ ಪೂರ್ವಕವಾಗಿ ಬರಮಾಡಿಕೊಳ್ಳಲಾಗುತ್ತದೆ. ಬಳಿಕ ಅವರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದ ಆವರಣವನ್ನು ವೀಕ್ಷಿಸಿದ ನಂತರ ಅವರು ತೆರಳಲ್ಲಿದ್ದಾರೆ.

ಜೋಸೆಫ್ ವಿಜಯ್ ಅವರು ಭೇಟಿ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ವಿಶೇಷ ಗಮನ ಸೆಳೆದಿದ್ದು, ಭಕ್ತರು ಮತ್ತು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ತಮಿಳುನಾಡು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಕರ್ನಾಟಕ ಪ್ರಮುಖ ಶಕ್ತಿಪೀಠಕ್ಕೆ ಅವರು ಭೇಟಿ ನೀಡುತ್ತಿರುವುದು ಮಹತ್ವ ಪಡೆದಿದೆ.

ಕೊಲ್ಲೂರು ದೇವಸ್ಥಾನದಲ್ಲಿ ವಿಶೇಷ ಪೂಜೆ ಇಲ್ಲ, ಅರ್ಚಕ ನಿತ್ಯಾನಂದ ಅಡಿಗ ಸ್ಪಷ್ಟನೆ:

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಭೇಟಿಯ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆ ಅಥವಾ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ ಎಂದು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಸ್ಪಷ್ಟಪಡಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದವರು, ಕೊಲ್ಲೂರು ಕ್ಷೇತ್ರಕ್ಕೆ ಯಾರೇ ವಿಐಪಿಗಳು ರಾಜಕೀಯ ನಾಯಕರು ಅಥವಾ ಗಣ್ಯರು ಭೇಟಿ ನೀಡಿದರು ದೇವಸ್ಥಾನದಲ್ಲಿ ಪ್ರತ್ಯೇಕ ಪೂಜೆ ನಡೆಸುವ ಪರಿಪಾಠ ಇಲ್ಲ ಎಂದು ತಿಳಿಸಿದ್ದಾರೆ. ಇತರ ಕೆಲವು ದೇವಸ್ಥಾನಗಳಂತೆ ಗಣ್ಯರು ಆಗಮಿಸಿದ ವೇಳೆ ಪದೇಪದೇ ಮಂಗಳಾರತಿ ಮಾಡುವ ಸಂಪ್ರದಾಯವೂ ಇಲ್ಲ ಎಂದು ಅವರು ಹೇಳಿದ್ದಾರೆ.

ಸಾಮಾನ್ಯ ಭಕ್ತರು ದೇವಿಯ ದರ್ಶನ ಪಡೆಯುವ ರೀತಿಯಲ್ಲಿ ಕೂಡ ಶ್ರೀಮುಕಾಂಬಿಕಾ ದೇವಿಯ ದರ್ಶನವನ್ನು ಪಡೆಯಲಿದ್ದಾರೆ. ದೇವಸ್ಥಾನದ ಸಂಪ್ರದಾಯ ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಅವರ ಭೇಟಿ ನಡೆಯಲಿದ್ದು, ಭಕ್ತರ ದರ್ಶನಕ್ಕೂ ಯಾವುದೇ ಅಡಚಣೆ ಉಂಟಾಗದಂತೆ ಕ್ರಮ ಕೈಗೊಳ್ಳಲಿದ್ದಾರೆ.

ತಮಿಳುನಾಡು ಮುಖ್ಯಮಂತ್ರಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಕರ್ನಾಟಕಕ್ಕೆ ಆಗಮಿಸುತ್ತಿರುವ ಜೋಸೆಫ್ ವಿಜಯ್ ಅವರ ಕೊಲ್ಲೂರು ಭೇಟಿ ರಾಜ್ಯದ ರಾಜಕೀಯ ಹಾಗೂ ಧಾರ್ಮಿಕ ವಲಯಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ.

ಜೋಸೆಫ್ ವಿಜಯ್ ಬೇಟಿಗೆ ವಿಶೇಷ ಪೂಜೆ ಇಲ್ಲ: ಮಹಾ ಮಂಗಳಾರತಿ ವೀಕ್ಷಿಸುವ ಸಾಧ್ಯತೆ, ಶುಕ್ರವಾರದ ನಿಯಮಿತ ರಥೋತ್ಸವ ಎಂದ ಆರ್ಚಕ:

ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ಅವರು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಯಾವುದೇ ವಿಶೇಷ ಪೂಜೆ ಅಥವಾ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿಲ್ಲ ಎಂದು ದೇವಸ್ಥಾನದ ಅರ್ಚಕ ನಿತ್ಯಾನಂದ ಅಡಿಗ ಅವರು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.

ಸಿಎಂ ವಿಜಯ್ ಅವರು ದೇವಸ್ಥಾನಕ್ಕೆ ಆಗಮಿಸುವ ವೇಳೆ ಮಹಾ ಮಂಗಳಾರತಿ ನಡೆಯುತ್ತಿದ್ದರೆ , ಅದನ್ನು ವೀಕ್ಷಿಸುವ ಅವಕಾಶ ದೊರೆಯಬಹುದು. ಆದರೆ ಅವರಿಗಾಗಿ ಪ್ರತ್ಯೇಕವಾಗಿ ಯಾವುದೇ ಪೂಜೆ ಅಥವಾ ವಿಶೇಷ ಮಂಗಳಾರತಿ ನಡೆಸುವ ಸಂಪ್ರದಾಯ ದೇವಸ್ಥಾನದಲ್ಲಿಲ್ಲ ಎಂದು ಅವರು ತಿಳಿಸಿದ್ದಾರೆ.

ಇಂದು ಶುಕ್ರವಾರವಾಗಿರುವುದರಿಂದ ದೇವಸ್ಥಾನದಲ್ಲಿ ಸಂಜೆ ಪ್ರದೋಷ ಕಾಲಕ್ಕೂ ಮುನ್ನ ಸಂಪ್ರದಾಯ ಬದ್ಧವಾಗಿ ನಡೆಯುವ ರಥೋತ್ಸವ ಹಾಗೂ ಇತರೆ ಉತ್ಸವಗಳು ಎಂದಿನಂತೆ ಜರಗಲಿವೆ. ಈ ಕಾರ್ಯಕ್ರಮಗಳು ಸಿಎಂ ಜೋಸೆಫ್ ವಿಜಯ್ ಅವರ ಭೇಟಿಗಾಗಿ ಆಯೋಜಿಸಿರುವ ವಿಶೇಷ ಕಾರ್ಯಕ್ರಮಗಳಲ್ಲ, ಪ್ರತಿ ಶುಕ್ರವಾರ ನಡೆಯುವ ನಿಯಮಿತ ಧಾರ್ಮಿಕ ಆಚರಣೆಗಳ ಭಾಗವಾಗಿದೆ ಎಂದು ನಿತ್ಯಾನಂದ ಅಡಿಗ ವಿವರಿಸಿದ್ದಾರೆ.

ಕೊಲ್ಲೂರು ದೇವಸ್ಥಾನ ತನ್ನ ಶತಮಾನಗಳ ಪರಂಪರೆ ಮತ್ತು ಧಾರ್ಮಿಕ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದು, ಸಾಮಾನ್ಯ ಭಕ್ತರಿಂದ ಹಿಡಿದು ವಿಐಪಿ ಗಳವರೆಗೆ ಎಲ್ಲರಿಗೂ ಒಂದೇ ರೀತಿಯ ದರ್ಶನ ವ್ಯವಸ್ಥೆಯನ್ನು ಅನುಸರಿಸುತ್ತಿದೆ. ಈ ಹಿನ್ನಲೆಯಲ್ಲಿ ಜೋಸೆಫ್ ವಿಜಯ್ ಅವರ ಭೇಟಿಯು ದೇವಸ್ಥಾನದ ಸಂಪ್ರದಾಯದಂತೆ ಸರಳವಾಗಿ ನಡೆಯುತ್ತದೆ.

Also Read:

ಉಡುಪಿಯಲ್ಲಿ ಹೃದಯವಿದ್ರಾವಕ ಘಟನೆ : ತೆಂಗಿನಕಾಯಿ ಬಿದ್ದು ಮಗು ಸಾವು

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online