ಒಂದು ಕಿಡ್ನಿ ಇರುವ ಮಗು ಆರೋಗ್ಯವಾಗಿರಲು ಸಾಧ್ಯವೇ
ಹುಟ್ಟುವ ಮಗುವಿಗೆ ಎರಡು ಮೂತ್ರಪಿಂಡಗಳಿರುತ್ತದೆ. ಆದರೆ ಕೆಲವೊಮ್ಮೆ ಮಗು ಹುಟ್ಟುವಾಗಲೇ ಒಂದು ಮೂತ್ರಪಿಂಡ ಅಥವಾ ಕಿಡ್ನಿಯೊಂದಿಗೆ ಜನಿಸುತ್ತದೆ. ಇಂತಹ ಸಂದರ್ಭಗಳಲ್ಲಿ ಪೋಷಕರು ಚಿಂತೆಗೀಡಾಗುತ್ತಾರೆ. ಆದರೆ ಆರೋಗ್ಯ ತಜ್ಞರು ಒಂದೇ ಕಿಡ್ನಿ ಇರುವ ಮಗು ಜನಿಸಿದಾಗ ಸಾಮಾನ್ಯವಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಆದರೂ ಅವರ ತಲೆಯಲ್ಲಿ ತಮ್ಮ ಮಗು ಮುಂದೆ ಆರೋಗ್ಯವಾಗಿರಲು ಸಾಧ್ಯವೇ, ಆ ಮಗುವಿನ ಜೀವನ ಹೇಗೆ ನಡೆಯಬಹುದು ಹೀಗೆ ಸಾವಿರ ಪ್ರಶ್ನೆಗಳು ಉದ್ಭವವಾಗುತ್ತದೆ. ಇಂತಹ ಸಂದೇಹಗಳಿಗೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮಕ್ಕಳ ಶಸ್ತ್ರಚಿಕಿತ್ಸಕ ಮತ್ತು ಪೀಡಿಯಾಟ್ರಿಕ್ ಮೂತ್ರಶಾಸ್ತ್ರಜ್ಞ ಡಾ. ಸಂದೀಪ್ ಕುಮಾರ್ ಸಿನ್ಹಾ ಅವರು ಹೇಳುವ ಪ್ರಕಾರ, ಒಂದೇ ಕಿಡ್ನಿಯೊಂದಿಗೆ ಜನಿಸಿದ ಮಗುವೂ ಸಾಮಾನ್ಯ ಜೀವನವನ್ನು ನಡೆಸಬಹುದು ಎಂದು ಹೇಳುತ್ತಾರೆ. ಆದರೆ ಕೆಲವು ನಿಯಮಿತ ತಪಾಸಣೆ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಇದು ಸಾಧ್ಯವಾಗುತ್ತದೆ. ಜೊತೆಗೆ ಮಗುವಿನ ಆಹಾರಕ್ರಮಕ್ಕೆ ಸರಿಯಾದ ಗಮನ ನೀಡಿದರೆ ಮತ್ತು ನಿಯಮಿತ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿದರೆ, ಯಾವುದೇ ಅಪಾಯವಿರುವುದಿಲ್ಲ. ಅದರಲ್ಲಿಯೂ ಇತ್ತೀಚಿನ ದಿನಗಳಲ್ಲಿ, ಅನೇಕ ಸುಧಾರಿತ ತಂತ್ರಗಳು (ಗರ್ಭಾವಸ್ಥೆಯಲ್ಲಿ ಅಲ್ಟ್ರಾಸೌಂಡ್) ಲಭ್ಯವಿದೆ, ಇದು ಜನನದ ಮೊದಲು ಸ್ಥಿತಿಯನ್ನು ಪತ್ತೆಹಚ್ಚಲು ಸಹಾಯ ಮಾಡುತ್ತದೆ, ಮಾತ್ರವಲ್ಲ ವೈದ್ಯರನ್ನು ಸಂಪರ್ಕಿಸಿ ಮುಂಚಿತವಾಗಿ ಸರಿಯಾದ ಚಿಕಿತ್ಸೆ ಮುಂದುವರಿಸಲು ಅನುವು ಮಾಡಿಕೊಡುತ್ತದೆ.
ಸಾಮಾನ್ಯವಾಗಿ ಹುಟ್ಟುವ ಮಗುವಿಗೆ ಎರಡು ಮೂತ್ರಪಿಂಡಗಳಿರುತ್ತದೆ. ಆದರೆ ಇದು ಎಲ್ಲ ಮಕ್ಕಳಿಗೂ ಅನ್ವಯವಾಗುವುದಿಲ್ಲ. ಹೌದು, ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಪ್ರಕಾರ, ವಿಶ್ವದಾದ್ಯಂತ ಸಾವಿರ ಮಕ್ಕಳಲ್ಲಿ ಒಂದು ಮಗು ಎರಡು ಮೂತ್ರಪಿಂಡಗಳ ಬದಲಿಗೆ ಒಂದೇ ಕಿಡ್ನಿ (Kidney) ಅಥವಾ ಮೂತ್ರಪಿಂಡದೊಂದಿಗೆ ಜನಿಸುತ್ತದೆ. ಈ ಪರಿಸ್ಥಿತಿಯಲ್ಲಿ ಮಗು ಜನಿಸಿದಾಗ ಪೋಷಕರು ಸಹಜವಾಗಿ ಚಿಂತಿತರಾಗುತ್ತಾರೆ. ಅದು ತಪ್ಪಲ್ಲ. ಆದರೆ ಆರೋಗ್ಯ (Health) ತಜ್ಞರು ಒಂದೇ ಕಿಡ್ನಿ ಇರುವ ಮಗು ಜನಿಸಿದಾಗ ಸಾಮಾನ್ಯವಾಗಿ ಭಯ ಪಡುವ ಅವಶ್ಯಕತೆ ಇಲ್ಲ ಎನ್ನುತ್ತಾರೆ. ಆದರೂ ಮಕ್ಕಳು ಜನಿಸಿದಾಗ ಪೋಷಕರ ತಲೆಯಲ್ಲಿ ತಮ್ಮ ಮಗು ಆರೋಗ್ಯವಾಗಿರಲು ಸಾಧ್ಯವೇ, ಮುಂದೆ ಆ ಮಗುವಿನ ಜೀವನ ಹೇಗೆ ನಡೆಯಬಹುದು ಹೀಗೆ ಸಾವಿರ ಪ್ರಶ್ನೆಗಳು ಉದ್ಭವವಾಗುತ್ತದೆ. ಇಂತಹ ಸಂದೇಹಗಳಿಗೆ ತಜ್ಞರು ನೀಡಿರುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
ಮಗುವಿನ ಬೆಳವಣಿಗೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ:
ಕೆಲವೊಮ್ಮೆ, ಒಂದು ಮೂತ್ರಪಿಂಡದೊಂದಿಗೆ ಜನಿಸುವುದು ಇತರ ಆರೋಗ್ಯ ಸಮಸ್ಯೆಗಳನ್ನು ಒಳಗೊಂಡಿರುವ ದೊಡ್ಡ ಸಿಂಡ್ರೋಮ್ನ ಭಾಗವಾಗಿರಬಹುದು. ಆದರೆ ಹೆಚ್ಚಿನ ಸಂದರ್ಭಗಳಲ್ಲಿ, ಇದು ಮಗುವಿನ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುವುದಿಲ್ಲ. ಜೊತೆಗೆ ಒಂದು ಮೂತ್ರಪಿಂಡ ಹೊಂದಿರುವ ಮಗು ದೈಹಿಕವಾಗಿ ದುರ್ಬಲವಾಗಿರುತ್ತದೆ ಎಂಬುದು ಇದರ ಅರ್ಥವಲ್ಲ.
ಸರಿಯಾದ ಸಮಯದಲ್ಲಿ ಅಗತ್ಯ ಪರೀಕ್ಷೆಗಳು:
ಡಾ. ಸಿನ್ಹಾ ಹೇಳುವಂತೆ ಈ ರೀತಿ ಒಂದೇ ಕಿಡ್ನಿ ಇರುವ ಮಕ್ಕಳಲ್ಲಿ, ಪ್ರತಿ ವರ್ಷ ಮೂತ್ರದಲ್ಲಿ ಪ್ರೋಟೀನ್ ಮತ್ತು ರಕ್ತದೊತ್ತಡವನ್ನು ಪರೀಕ್ಷಿಸುವುದು ಮುಖ್ಯ. ಈ ಪರೀಕ್ಷೆಗಳು ಒತ್ತಡ ಅಥವಾ ಮೂತ್ರಪಿಂಡಗಳಿಗೆ ಹಾನಿಯಾಗುವುದನ್ನು ಮೊದಲೇ ಸೂಚಿಸಬಹುದು. ಆದರೆ ಮಕ್ಕಳು ಯಾವಾಗಲೂ ನಿರ್ಬಂಧ ಅಥವಾ ಎಚ್ಚರಿಕೆಯಿಂದ ಬದುಕಬೇಕು ಎಂಬುದು ಇದರ ಅರ್ಥವಲ್ಲ. ಅವರು ಇತರ ಮಕ್ಕಳಂತೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಮತ್ತು ಆಟವಾಡಬಹುದು. ಒಂದು ಮೂತ್ರಪಿಂಡ ಹೊಂದಿರುವ ಮಕ್ಕಳಿಗೆ ಸಾಮಾನ್ಯವಾಗಿ ಯಾವುದೇ ವಿಶೇಷ ಆಹಾರದ ಅಗತ್ಯವಿಲ್ಲ. ಆದರೆ ಮೂತ್ರಪಿಂಡಕ್ಕೆ ಹಾನಿ ಮಾಡುವ ವಿಷಯಗಳನ್ನು ತಪ್ಪಿಸಬೇಕಾಗುತ್ತದೆ.
ಇನ್ನಷ್ಟು ಓದಿರಿ :
ವರ್ಷಗಳ ನಂತರ ನ್ಯೂಜಿಲೆಂಡ್ ವಿರುದ್ಧ ಅವಮಾನಕರ ಸೋಲಿಗೆ ಕೊರಳೊಡ್ಡಿದ ಇಂಗ್ಲೆಂಡ್