<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಗೌತಮ್ ಅದಾನಿ ವಿರುದ್ಧದ ಕೇಸ್ ಕ್ಲೋಸ್? ಅಮೆರಿಕ ಕೋರ್ಟ್ ತೀರ್ಪು ವೈರಲ್

ಗೌತಮ್ ಅದಾನಿ ವಿರುದ್ಧದ ಕೇಸ್ ಕ್ಲೋಸ್? ಅಮೆರಿಕ ಕೋರ್ಟ್ ತೀರ್ಪು ವೈರಲ್
Summary: A significant verdict has been issued in the US court regarding the criminal case against Gautam Adani and his son-in-law Sagar. After this verdict, a huge debate has started in the political and business circles of the country. Has the case been dropped? What did the court say? What is the impact of this verdict?

Belagavi news:

ನವದಹಲಿ: ಅಮೆರಿಕದಲ್ಲಿ ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದ ಖ್ಯಾತ ಉದ್ಯಮಿ ಗೌತಮ್ ಅದಾನಿ ಹಾಗೂ ಅವರ ಸೋದರಳಿಯ ಸಾಗರ್ ಅವರಿಗೆ ಭಾರೀ ರಿಲೀಫ್ ಸಿಕ್ಕಿದೆ. ಇವರ ವಿರುದ್ಧ ಬಹುಲಾಗಿದ್ದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ಅಮೆರಿಕದ ನ್ಯಾಯಾಂಗ ಇಲಾಖೆ ಶಾಶ್ವತವಾಗಿ ಕೈಬಿಟ್ಟಿದೆ ಎಂಬ ಮಾಹಿತಿ ಇದೀಗ ಹೊರಬಿದ್ದಿದೆ.

ಈ ಮಹತ್ವದ ತೀರ್ಪಿನ ಬಳಿಕ ಅದಾನಿ ಗ್ರೂಪ್ ಗೆ ದೊಡ್ಡ ಮಟ್ಟದ ನೆಮ್ಮದಿ ದೊರೆತಿದ್ದು. ದೇಶದ ರಾಜಕೀಯ ಹಾಗೂ ಉದ್ಯಮ ವಲಯದಲ್ಲಿ ಈ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಅಮೇರಿಕ ನ್ಯಾಯಾಂಗ ಇಲಾಖೆಯ ಈ ನಿರ್ಧಾರವು ಅಂತರಾಷ್ಟ್ರೀಯ ಮಟ್ಟದಲ್ಲಿಯೂ ಗಮನ ಸೆಳೆದಿದೆ.

ಗೌತಮ್ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಹಲವು ತಿಂಗಳುಗಳಿಂದ ಚರ್ಚೆ ನಡೆಯುತ್ತಿತ್ತು. ಆದರೆ ಈಗ ಪ್ರಕರಣವೇ ಕೈ ಬಿಟ್ಟಿರುವುದು ಅದಾನಿ ಕುಟುಂಬಕ್ಕೆ ಬಿಗ್ ವಿನಿ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿಯೋ ಈ ಸುದ್ದಿ ವೈರಲ್ ಆಗಿದ್ದು. ಪರ-ವಿರೋಧ ಚರ್ಚೆಗಳು ಜೋರಾಗಿವೆ.

ನ್ಯೂಯಾರ್ಕ್ ನ ಪೂರ್ವ ಜಿಲ್ಲಾ ಪ್ರಾಸಿಕ್ಯೂಟರ್ ಗಳು ಗೌತಮ್ ಅದಾನಿ ಮತ್ತು ಸಾಗರ್ ಅದಾನಿ ವಿರುದ್ಧದ ಎಲ್ಲಾ ಕ್ರಿಮಿನಲ್ ಆರೋಪಗಳನ್ನು ವಾಪಸ್ ಪಡೆಯಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರು. ಪ್ರಕರಣವನ್ನು ಮರುಪರಿಶೀಲಿಸಿದ ಅಮೇರಿಕಾ ನ್ಯಾಯಾಂಗ ಇಲಾಖೆ. ಈ ಆರೋಪಗಳಿಗೆ ಹೆಚ್ಚಿನ ಸಂಪನ್ಮೂಲಗಳನ್ನು ಬಳಸುವ ಅಗತ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದಿರುವುದಾಗಿ ತಿಳಿಸಿದೆ.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ಗೌತಮ ಅದಾನಿ ಸೇರಿದಂತೆ ಇತರರ ವಿರುದ್ಧದ ದೋಷಾರೋಪನೆಯನ್ನು ಅಧಿಕೃತವಾಗಿ ವಜಾಗೊಳಿಸುವಂತೆ ಆದೇಶಿಸಿದೆ. ಈ ಬೆಳವಣಿಗೆ ಇದೀಗ ಜಾಗತಿಕ ಉದ್ಯಮ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು ಅದಾನಿ ಗ್ರೂಪ್ಗೆ ದೊಡ್ಡ ಮಟ್ಟದ ರಿಲೀಫ್ ಎಂದು ವಿಶ್ಲೇಷಿಸಲಾಗುತ್ತಿದೆ.

ಸೌರಶಕ್ತಿ ಯೋಜನೆಗಳ ಗುತ್ತಿಗೆ ಪಡೆಯಲು ಭಾರತೀಯ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕದ ಬ್ಯಾಂಕುಗಳು ಮತ್ತು ಹೊಡಿಕೆಗಾರರಿಗೆ ತಪ್ಪು ಮಾಹಿತಿ ನೀಡಿ ವಂಚನೆ ನಡೆಸಿದ ಆರೋಪಗಡಿ ಉದ್ಯಮಿ ಗೌತಮ್ ಅದಾನಿ. ಅವರ ಅಳಿಯ ಸಾಗರ್ ಅದಾನಿ ಸೇರಿದಂತೆ ಹಲವರ ವಿರುದ್ಧ 2024ರ ನವೆಂಬರ್ ನಲ್ಲಿ ಅಮೆರಿಕದಲ್ಲಿ ಗಂಭೀರ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು.

2020 ರಿಂದ 2024ರ ಮಧ್ಯಭಾಗದವರಿಗೆ ಸುಮಾರು 250 ಮಿಲಿಯನ್ ಡಾಲರಿಗೂ ಅಧಿಕ ಲಂಚ ನೀಡಿಲಾಗಿದೆ ಎಂದು ಅಮೆರಿಕ ಪ್ರಾಸಿಕ್ಯೂಟರ್ ಗಳು ಆರೋಪಿಸಿದ್ದರು. ಈ ಮಾಹಿತಿಯನ್ನು ಹೊಡಿಕೆದಾರರು ಹಾಗೂ ಬ್ಯಾಂಕ್ ಗಳಿಂದ ಮರೆಮಾಚಿ, ಅದಾನಿ ಗ್ರೂಪ್ ಶತಕೋಟಿ ಡಾಲರ್ ಹಣ ಸಂಗ್ರಹಿಸಿದೆ ಎಂಬ ಗಂಭೀರ ಆರೋಪವು ಕೆಳಿಬಂದಿತ್ತು.

Also Read:

ಇರಾನ್ ಮೇಲಿನ ದಾಳಿ ತಡೆದಿದ್ದೇವೆ ಎಂದ ಟ್ರಂಪ್ ; ಪಾಕಿಸ್ತಾನದ ಉಲ್ಲೇಖವಿಲ್ಲ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online