<?= $pageTitle ?>
Logo
ಮುಖಪುಟ ಓದುವುದು ಕೇಳು
Breaking News

ತನ್ನ ಕಾಲಿಗೆ ತಾನೇ ನಮಸ್ಕಾರ ಮಾಡಿದ ಮಗು: ನೆಟ್ಟಿಗರ ಮನಗೆದ್ದ ವಿಡಿಯೋ

ತನ್ನ ಕಾಲಿಗೆ ತಾನೇ ನಮಸ್ಕಾರ ಮಾಡಿದ ಮಗು: ನೆಟ್ಟಿಗರ ಮನಗೆದ್ದ ವಿಡಿಯೋ
Summary: A cute video of a little girl bowing to her own feet has gone viral on social media. Netizens are appreciating the child's innocent behavior and cute reaction.

belagavi news :

ಸೋಶಿಯಲ್ ಮೀಡಿಯಾದಲ್ಲಿ ಮುದ್ದು ಮಗಳ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಲೇ ಆಗುತ್ತದೆ. ಈ ಕ್ಯೂಟ್ ಕ್ಷಣಗಳು ಮತ್ತೆ ಮತ್ತೆ ನೋಡಬೇಕೆನಿಸುವಂತೆ ಮಾಡುವುದು ಸಹಜ. ಇದೀಗ ಒಂದು ಪುಟಾಣಿ ಮಾಡಿರುವ ಕ್ರಿಯೆ ಎಲ್ಲರ ಗಮನ ಸೆಳೆದಿದೆ.

ಪುಟಾಣಿಯೊಂದು ತನ್ನ ಕಾಲನ್ನು ತಾನೇ ಮುಟ್ಟಿಕೊಂಡು ನಮಸ್ಕರಿಸುವ ಮುದ್ದಾದ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಈ ವಿಡಿಯೋ ಈಗ ನೆಟ್ಟಿಗರ ಮನಗೆದ್ದಿದೆ. ಈ ಕುರಿತಾದ ಸ್ಟೋರಿ ಇದೀಗ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.

ಪುಟಾಣಿಗಳು ಏನು ಮಾಡಿದರೂ ಚೆಂದವೇ. ಅವರ ನಡೆ-ನುಡಿಯಲ್ಲಿ ಕಾಣುವ ಮುಗ್ದತೆ ಎಲ್ಲರ ಮನಸ್ಸನ್ನು ಸೆಳೆಯುತ್ತದೆ. ಹೆತ್ತವರು ಹೇಳಿಕೊಡುವುದನ್ನು ಮಕ್ಕಳು ತಕ್ಷಣವೇ ಕಲಿತು ಅನುಸರಿಸುವುದು ಸಹಜ. ಇದೀಗ ಒಂದು ಪುಟಾಣಿ ತನ್ನ ಕಾಲನ್ನು ತಾನೇ ಸ್ಪರ್ಶಿಸಿ ಆಶೀರ್ವಾದ ಪಡೆದಂತೆ ಮಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಮುದ್ದಾದ ವಿಡಿಯೋವನ್ನು ನೋಡಿ ನೆಟ್ಟಿಗರ ಈ ಪುಟ್ಟ ಹುಡುಗಿಯ ಮುಗ್ಧತೆಗೆ ಫಿದಾ ಆಗಿದ್ದಾರೆ. ಈ ಕ್ಯೂಟ್ ಕ್ಷಣ ಈಗ ಎಲ್ಲೆಡೆ ಗಮನ ಸೆಳೆಯುತ್ತಿದೆ.

Instagram ನಲ್ಲಿ Ishanvi ಹೆಸರಿನ ಖಾತೆಯಲ್ಲಿ ಪುಟಾಣಿಯ ಮುಗ್ಧತೆ ತುಂಬಿದ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ಕ್ಲಿಪಿಂಗ್ ನಲ್ಲಿ ಪುಟ್ಟ ಹುಡುಗಿವೊಂದು ಬಗ್ಗಿಕೊಂಡು ತನ್ನ ಕಾಲನ್ನು ತಾನೇ ಮುಟ್ಟಿ ಆಶೀರ್ವಾದ ಪಡೆದಂತೆ ಕಾಣಿಸುವ ದೃಶ್ಯ ಕಂಡು ಬರುತ್ತದೆ. ಮಗು ಹೀಗೆ ನಾಲ್ಕೈದು ಬಾರಿ ನಮಸ್ಕರಿಸುವ ಈ ಕ್ಯೂಟ್ ಕ್ಷಣವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ವಿಡಿಯೋ ಈಗಾಗಲೇ ನಾಲ್ಕು ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ.

ಒಬ್ಬ ಬಳಿಕೆದಾರರು "ಮಕ್ಕಳು ಎಷ್ಟು ಮುಗ್ದರೂ" ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು " ಬೇರೆಯವರಿಗೆ ಗೌರವ ನೀಡುವುದು ಎಷ್ಟು ಮುಖ್ಯವೋ, ನಮ್ಮನ್ನೇ ನಾವು ಗೌರವಿಸುವುದು ಅಷ್ಟೇ ಮುಖ್ಯ" ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇನ್ನೊಬ್ಬರು "ಇದು ಆತ್ಮ ಗೌರವದ ಅಭಿವ್ಯಕ್ತಿ" ಎಂದು ಪ್ರತಿಕ್ರಿಯಿಸಿದ್ದಾರೆ.

ಈ ರೀತಿಯ ವಿಭಿನ್ನ ಕಾಮೆಂಟ್ಗಳು ವಿಡಿಯೋಗೆ ಇನ್ನಷ್ಟು ಗಮನ ಸೆಳೆಯುವಂತೆ ಮಾಡಿವೆ.

Also Read:

ಚಾಮುಂಡಿ ಬೆಟ್ಟದಲ್ಲಿ ರಣವೀರ್ ಸಿಂಗ್ ವಿಶೇಷ ಪೂಜೆ: ಕಾಂತಾರ ವಿವಾದದ ಬಳಿಕ ಭೇಟಿ

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online