<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಚಾಮುಂಡಿ ಬೆಟ್ಟದಲ್ಲಿ ರಣವೀರ್ ಸಿಂಗ್ ವಿಶೇಷ ಪೂಜೆ: ಕಾಂತಾರ ವಿವಾದದ ಬಳಿಕ ಭೇಟಿ

ಚಾಮುಂಡಿ ಬೆಟ್ಟದಲ್ಲಿ ರಣವೀರ್ ಸಿಂಗ್ ವಿಶೇಷ ಪೂಜೆ: ಕಾಂತಾರ ವಿವಾದದ ಬಳಿಕ ಭೇಟಿ
Summary: Amid the Kantara mimicry controversy, Bollywood actor Ranveer Singh visited Chamundi Hills in Mysore and offered special prayers. His visit has caused widespread discussion on social media and has caught the attention of fans.

belagavi news :

ಮೈಸೂರು: ಕಾಂತಾರ ಚಾಪ್ಟರ್ 1 ಚಿತ್ರದ ದೈವಪಾತ್ರದ ಕುರಿತು ಅಪಮಾನಕಾರಿಯಾಗಿ ಸನ್ನೆ ಮಾಡಿ ಮಾತನಾಡಿದ ಆರೋಪದ ಹಿನ್ನೆಲೆಯಲ್ಲಿ ಹೈಕೋರ್ಟ್ ನಿರ್ದೇಶನದಂತೆ ಬಾಲಿವುಡ್ ನಟ Ranveer Singh ಇಂದು ಮೈಸೂರಿನ Chanmundi Hillದಲ್ಲಿರುವ Chamundeshwari Templeಕ್ಕೆ ಭೇಟಿ ನೀಡಿ ನಾಡದೇವತೆಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಅಭಿಮಾನಿಗಳ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸಾಮಾನ್ಯ ಭಕ್ತರಂತೆ ಆಗಮಿಸಿ ಪೂಜೆ: ಬಾಲಿವುಡ್ ನಟ ರಣವೀರ್ ಸಿಂಗ್ ಅವರು ಸಾಮಾನ್ಯ ಭಕ್ತರಂತೆ ಬಂದು ನಾಡ ಅದಿದೇವತೆ ಚಾಮುಂಡಿ ತಾಯಿಗೆ ಪೂಜೆ ಸಲ್ಲಿಸಿದರು ಎಂದ ದೇವಾಲಯದ ಮೂಲಗಳು ಖಚಿತಪಡಿಸಿವೆ.

ಸಾಮಾನ್ಯ ಭಕ್ತರಂತೆ ಆಗಮಿಸಿದ ರಣವೀರ: ಮಾಸ್ಕ್ ಧರಿಸಿದರೆ ರಣವೀರ್ ಸಿಂಗ್ ಇಂದು ಸಾಮಾನ್ಯ ಭಕ್ತರ ಸಾಲಿನಲ್ಲಿ ಬೆಳಗ್ಗೆ 7.15ಕ್ಕೆ ದೇವಸ್ಥಾನಕ್ಕೆ ಆಗಮಿಸಿದ್ದರು. ಮೊದಲು ದೇವಾಲಯದ ಮುಂಭಾಗದ ಗಣೇಶಮೂರ್ತಿಗೆ ಪೂಜೆ ಸಲ್ಲಿಸಿ ನಂತರ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿ, ಬಳಿಕ ತಾಯಿಯ ಸನ್ನಿಧಿಯಲ್ಲಿ ನಟ ಕುಳಿತಿದ್ದರು.

Sponsored

ಈ ಕುರಿತು ಮಾಹಿತಿ ನೀಡಿದ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಜೆ. ರೂಪ, ಬಾಲಿವುಡ್ ನಟ ರಣವೀರ್ ಸಿಂಗ್ ಮಂಗಳವಾರ ಬೆಳಿಗ್ಗೆ ಸುಮಾರು 7:30ರ ವೇಳೆಗೆ Chamundi Hillಕ್ಕೆ ಸಾಮಾನ್ಯ ಭಕ್ತರಂತೆ ಆಗಮಿಸಿದ್ದರು ಎಂದು ತಿಳಿಸಿದ್ದಾರೆ.

ದೇವಾಲಯದ ಬಲಭಾಗದಲ್ಲಿ ಕುಳಿತು ಪೂಜೆ ಸಲ್ಲಿಸಿದ ರಣವೀರ್ ಸಿಂಗ್ ಅವರಿಗೆ ದೇವಸ್ಥಾನದ ವತಿಯಿಂದ ಹಾರ ಹಾಕಿ ಸ್ವಾಗತಿಸಲಾಯಿತು ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಕರಣದ ಹಿನ್ನೆಲೆ: 2025 ರ ನವೆಂಬರ್ 28 ರಂದು ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಬಾಲಿವುಡ್ ನಟ ರಣವೀರ್ ಸಿಂಗ್, ಕಾಂತರ ಚಿತ್ರದ ದೈವಪಾತ್ರವನ್ನು ಅಪಮಾನಕರವಾಗಿ ಅನುಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು.

ವೇದಿಕೆಯಲ್ಲಿ ಮಾತನಾಡುವ ವೇಳೆ ಪಂಜುರ್ಲಿ/ ಗುಳಿಗ ದೈವದ ಅಭಿ ವ್ಯಕ್ತಿಗಳನ್ನು ಹಾಸ್ಯಮಯವಾಗಿ ಪ್ರದರ್ಶಿಸಿ, " ಭೂತ" ಎಂದು ಉಲ್ಲೇಖಿಸಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಕರಾವಳಿ ಕರ್ನಾಟಕದ ತುಳು ಸಾಂಪ್ರದಾಯದಲ್ಲಿ ದೈವ ಕೋಲ ಪವಿತ್ರ ಆಧ್ಯಾತ್ಮಿಕ ಆಚರಣೆಯಾಗಿ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ದೈವವನ್ನು ಅವಹೇಳನಕಾರಿ ರೀತಿಯಲ್ಲಿ ಚಿತ್ರಿಸಿರುವುದು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡಿದೆ ಎಂದು ದೂರುದಾರರು ಹೇಳಿದ್ದಾರೆ.

Sponsored

ಅಂತರರಾಷ್ಟ್ರೀಯ ವೇದಿಕೆಯಲ್ಲಿ ನಡೆದ ಈ ಹೇಳಿಕೆ ಹಾಗೂ ವರ್ತನೆ ತುಳು ಸಂಸ್ಕೃತಿ, ದೈವ ಆರಾಧನೆ ಮತ್ತು ಹಿಂದೂ ಧಾರ್ಮಿಕ ನಂಬಿಕೆಗಳನ್ನು ಅಪಹಾಸ್ಯ ಮಾಡುವಂತಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆ ದೈವ ಭಕ್ತರಲ್ಲಿ ಆಕ್ರೋಶ, ಅಸಮಾಧಾನ ಹಾಗೂ ಮಾನಸಿಕ ನೋವು ಉಂಟುಮಾಡಿದ್ದು, ಸಾರ್ವಜನಿಕ ಶಾಂತಿಗೆ ಧಕ್ಕೆ ಯಾಗುವ ಸಾಧ್ಯತೆಯೂ ಇದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ದೂರಿನ ಆಧಾರದ ಮೇಲೆ ಬಾಲಿವುಡ್ ನಟ ರಣವೀರ್ ಸಿಂಗ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.

ಈ ಎಫ್ ಐ ಆರ್ ರದ್ದು ಪಡಿಸುವಂತೆ ಕೋರಿ ರಣವೀರ್ ಸಿಂಗ್ ಹೈ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಬಳಿಕ ಅವರು ಬೇಷರತ್ ಕ್ಷಮೆಯಾಚಿಸಿರುವ ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಜೊತೆಗೆ ಚಾಮುಂಡೇಶ್ವರಿ ದೇವಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದಾಗಿ ಅವರ ಪರ ವಕೀಲರು ಹೈಕೋರ್ಟ್ ಗೆ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಒಂದು ತಿಂಗಳೊಳಗೆ ದೇವಸ್ಥಾನಕ್ಕೆ ಭೇಟಿ ನೀಡುವಂತೆ ಹೈಕೋರ್ಟ್ ನಿರ್ದೇಶನ ನೀಡಿದ್ದು, ನಂತರ ಅವರ ವಿರುದ್ಧದ ಪ್ರಕರಣವನ್ನು ಇತ್ಯರ್ಥಪಡಿಸಿತ್ತು.

Sponsored

Also Read:

Belagavi issue :ಜೂನ್ ಎರಡರ ಒಳಗೆ ನಿರ್ಧಾರ ಕೈಗೊಳ್ಳಿ,ಇಲ್ಲವಾದರೆ ಕ್ರಮ ಎಂದು ವಾಟಾಳ್ ಎಚ್ಚರಿಕೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online