Megastar Chiranjeevi:
' ಮಾ ಇಂಟಿ ಬಂಗಾರಂ' ಸಿನಿಮಾ ಪ್ರೇಕ್ಷಕರಷ್ಟೇ ಅಲ್ಲ, ಕೆಲ ಸಿನಿಮಾ ಸೆಲೆಬ್ರಿಟಿಗಳನ್ನು ಆಕರ್ಷಿಸಿದೆ. ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಚಿರಂಜೀವಿ ಕೂಡ ಈ ಚಿತ್ರವನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ರದ ಬಗ್ಗೆ ಮೆಚ್ಚುಗೆ ಸೂಚಿಸಿದ ಅವರು, ಚಿತ್ರತಂಡದ ಇಡೀ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಆಗಲಿರುವ ಸಮಂತಾ ಅವರಿಗೆ ವಿಶೇಷ ಉಡುಗೊರೆಗಳನ್ನು ನೀಡಿ ಆಶೀರ್ವಾದಿಸಿದ್ದಾರೆ ಎನ್ನಲಾಗಿದೆ.
ಈ ಆತ್ಮೀಯ ಭೇಟಿ ಸಿನಿಮಾ ಕ್ಷೇತ್ರದಲ್ಲಿ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಗಿದ್ದು, ಚಿರಂಜೀವಿಯ ಸರಳತೆ ಮತ್ತು ಕುಟುಂಬದೊಂದಿಗೆ ಅವರ ಆತ್ಮೀಯ ನಡೆಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಸಮಂತಾ ಋತ್ ಪ್ರಭು ನಟನೆಯ ' ಮಾ ಇಂಟಿ ಬಂಗಾರಂ ' ಸಿನಿಮಾ ಕಳೆದ ವಾರ ಬಿಡುಗಡೆಯಾಗಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಫ್ಯಾಮಿಲಿ ಆಕ್ಷನ್ ಡ್ರಾಮಾ ಹಿಟ್ ಆಗಿ ಹೊರಹೊಮ್ಮಿದೆ. ವಿಶೇಷವಾಗಿ ಕುಟುಂಬ ಪ್ರೇಕ್ಷಕರು ಹಾಗೂ ಮಹಿಳೆಯರು ಸಿನಿಮಾವನ್ನು ಮೆಚ್ಚಿಕೊಳ್ಳುತ್ತಿರುವುದು ಗಮನಾರ್ಹವಾಗಿದೆ.
ಪ್ರೇಕ್ಷಕರಷ್ಟೇ ಅಲ್ಲದೇ ಚಿತ್ರರಂಗದ ಕೆಲ ಸೆಲೆಬ್ರಿಟಿಗಳು ಸಿನಿಮಾವನ್ನು ಮೆಚ್ಚಿಕೊಂಡಿದ್ದು, ಅವರಲ್ಲಿ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ಮೆಗಾಸ್ಟಾರ್ ಚಿರಂಜೀವಿಯೂ ಸೇರಿದ್ದಾರೆ. ಸಿನಿಮಾವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸಿದ ಅವರು, ಚಿತ್ರತಂಡ ಹಾಗೂ ಸಮಂತಾ ಅವರ ಕುಟುಂಬವನ್ನು ತಮ್ಮ ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿದ್ದಾರೆ.
ಈ ಸಂದರ್ಭದಲ್ಲಿ ತಾಯಿ ಆಗಲಿರುವ ಸಮಂತಾಗೆ ಚಿರಂಜೀವಿ ಅವರು ವಿಶೇಷ ಉಡುಗೊರೆಗಳನ್ನು ನೀಡಿ ಆಶೀರ್ವದಿಸಿರುವುದು ಈ ಭೇಟಿಗೆ ವಿಶೇಷತೆ ತಂದಿದೆ. ಈ ಆತ್ಮೀಯ ಕ್ಷಣಗಳು ಅಭಿಮಾನಿಗಳ ಗಮನ ಸೆಳೆಯುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿಯೂ ಚರ್ಚೆಗೆ ಕಾರಣವಾಗಿದೆ.
' ಮಾ ಇಂಟಿ ಬಂಗಾರಂ' ಸಿನಿಮಾ ತಂಡವನ್ನು ಮೆಗಾಸ್ಟಾರ್ ಚಿರಂಜೀವಿ ತಮ್ಮ ಮನೆಗೆ ಆಹ್ವಾನಿಸಿ ಆತ್ಮೀಯವಾಗಿ ಸತ್ಕರಿಸಿದ್ದಾರೆ. ಈ ಸಂದರ್ಭದಲ್ಲಿ ತಾಯಿ ಆಗುತ್ತಿರುವ ಸಮಂತಾ ಅವರಿಗೆ ಸೀರೆ ಸೇರಿದಂತೆ ಪವಿತ್ರ ವಸ್ತುಗಳನ್ನು ಉಡುಗೊರೆಯಾಗಿ ನೀಡಲಾಗಿದೆ. ಜೊತೆಗೆ ಚಿರಂಜೀವಿ ಮತ್ತು ಅವರ ಪತ್ನಿ ಸುರೇಖಾ ಅವರು ಸಮಂತಾಗೆ ಶಂಖವೊಂದನ್ನು ನೀಡಿ ಶುಭ ಹಾರೈಸಿದ್ದಾರೆ.
ಈ ವಿಶೇಷ ಕ್ಷಣಗಳ ಚಿತ್ರಗಳನ್ನು ಚಿರಂಜೀವಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಮಂತಾಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಅವರು ' ಮಾ ಇಂಟಿ ಬಂಗಾರಂ' ಬಹಳ ಆಸಕ್ತಿಕರ ಕೌಟುಂಬಿಕ ಕಥೆಯಾಗಿದೆ ಎಂದು ಹೇಳಿದ್ದಾರೆ.
ಆಕ್ಷನ್, ಭಾವನೆಗಳು ಹಾಗೂ ಸ್ತ್ರೀಪರ ನಿಲುವುಗಳನ್ನು ಹಾಸ್ಯದ ಲೇಪನದೊಂದಿಗೆ ನಿರ್ದೇಶಕಿ ನಂದಿನಿ ರೆಡ್ಡಿ ಉತ್ತಮವಾಗಿ ತೆರೆಗೆ ತಂದಿದ್ದಾರೆ ಎಂದು ಅವರು ಪ್ರಶಂಸಿಸಿದ್ದಾರೆ. ಸಮಂತಾ ಅವರ ನಟನೆ ಗಮನಾರ್ಹವಾಗಿದ್ದು, ವಿಶೇಷವಾಗಿ ಸೀರೆಯುಟ್ಟು ಮಾಡುವ action ದೃಶ್ಯಗಳು ಅದ್ಭುತವಾಗಿವೆ ಎಂದು ಚಿರಂಜೀವಿ ಹೇಳಿದ್ದಾರೆ.
ಇಂತಹ ವಿಭಿನ್ನ ಸ್ತ್ರೀ ಪ್ರಧಾನ ಸಿನಿಮಾಗಳು ತೆಲುಗು ಚಿತ್ರರಂಗಕ್ಕೆ ಅವಶ್ಯಕತೆ ಎಂದು ಹೇಳಿರುವ ಅವರು, ಚಿತ್ರದ ಯಶಸ್ಸಿಗೆ ಸಮಂತಾ, ನಂದಿನಿ ರೆಡ್ಡಿ, ರಾಜ್ ಸೇರಿದಂತೆ ಚಿತ್ರ ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಜೊತೆಗೆ ಜೀವನದ ಹೊಸ ಅಧ್ಯಾಯಕ್ಕೆ ಕಾಲಿಡುತ್ತಿರುವ ಸಮಂತಾ ಮತ್ತು ರಾಜ್ ದಂಪತಿಗಳಿಗೆ ಹಾರೈಕೆಗಳನ್ನು ತಿಳಿಸಿದ್ದಾರೆ.
ಚಿತ್ರರಂಗದ ಹಿರಿಯ ಕಲಾವಿದರಾಗಿ ಮೆಗಾಸ್ಟಾರ್ ಚಿರಂಜೀವಿ ತೋರಿಸುತ್ತಿರುವ ಈ ಆತ್ಮೀಯ ನಡೆಗೆ ಅಭಿಮಾನಿಗಳು ಹಾಗೂ ನಟ್ಟಿಗರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉತ್ತಮ ಸಿನಿಮಾಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಅವರ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭೇಷ್ ಎಂದು ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಚಿರಂಜೀವಿ ಅವರು ಯಾವುದೇ ಒಳ್ಳೆಯ ಸಿನಿಮಾ ಬಿಡುಗಡೆಯಾದಾಗ ಅದನ್ನು ಖುದ್ದಾಗಿ ನೋಡಿ, ಚಿತ್ರತಂಡವನ್ನು ಮನೆಗೆ ಆಹ್ವಾನಿಸಿ ಸನ್ಮಾನಿಸುವ ಸಂಪ್ರದಾಯವನ್ನು ವರ್ಷಗಳಿಂದ ಮುಂದುವರಿಸಿಕೊಂಡು ಬಂದಿದ್ದಾರೆ. ವಿಶೇಷವಾಗಿ ಸಣ್ಣ ಹಾಗೂ ವಿಭಿನ್ನ ಕಥಾಹಂದರದ ಸಿನಿಮಾಗಳಿಗೆ ಅವರು ನೀಡುತ್ತಿರುವ ಬೆಂಬಲ ಚಿತ್ರರಂಗದಲ್ಲಿ ಪ್ರೇರಣೆಯಾಗಿ ಪರಿಣಮಿಸಿದೆ.
ಇಂತಹ ನಡೆಗಳು ಹೊಸ ಪ್ರತಿಭೆಗಳಿಗೆ ಉತ್ತೇಜನ ನೀಡುವುದರ ಜೊತೆಗೆ ಉತ್ತಮ ಕಂಟೆಂಟ್ ಸಿನಿಮಾಗಳನ್ನು ಪ್ರೋತ್ಸಾಹಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಅಭಿಮಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
Also Read:
ವಿಜಯ್ ಮತ್ತು ತ್ರಿಶಾ ಸಂಬಂಧದಲ್ಲಿ ಬಿರುಕು ? ಹೊಸ ಅಪ್ಡೇಟ್ ವೈರಲ್