<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ವಿಜಯ್ ಮತ್ತು ತ್ರಿಶಾ ಸಂಬಂಧದಲ್ಲಿ ಬಿರುಕು ? ಹೊಸ ಅಪ್ಡೇಟ್ ವೈರಲ್

ವಿಜಯ್ ಮತ್ತು ತ್ರಿಶಾ ಸಂಬಂಧದಲ್ಲಿ ಬಿರುಕು ? ಹೊಸ ಅಪ್ಡೇಟ್ ವೈರಲ್
Summary: News of a break-up between Vijay and Trisha are doing the rounds on social media, and there has been a special development in this regard. This issue, which has piqued the curiosity of fans, has now become a topic of discussion.

Belagavi News :

ತಮಿಳು ಚಿತ್ರರಂಗದಲ್ಲಿ ದಳಪತಿ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಚರ್ಚೆ ಆರಂಭವಾಗಿದೆ. ಇತ್ತೀಚೆಗೆ ವಿಜಯ್ ಅವರ ಜನ್ಮದಿನದಂದು ನಟಿ ತ್ರಿಶಾ ಯಾವುದೇ ಶುಭಾಶಯ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ.

ಸಾಮಾನ್ಯವಾಗಿ ಸಿನಿಮ ಕ್ಷೇತ್ರದ ಸ್ನೇಹಿತರು ಪರಸ್ಪರ ಜನ್ಮದಿನಕ್ಕೆ ಶುಭಾಶಯ ಕೋರುವ ಪ್ರಥೆಯನ್ನು ಅನುಸರಿಸುವುದು ಕಂಡು ಬರುತ್ತದೆ. ಆದರೆ ಈ ಬಾರಿ ತ್ರಿಶಾ ಅವರ ಮೌನವೂ ಹಲವುಗಳಿಗೆ ಕಾರಣವಾಗಿದೆ. ಇದರಿಂದಲೇ ಖಾಲಿ ಹುಡ್ ವಲಯದಲ್ಲಿ ಇಬ್ಬರ ನಡುವೆ ಅಂತರ ಮೂಡಿದೆಯೇ ಎಂಬ ಚರ್ಚೆ ಆರಂಭವಾಗಿದೆ.

ಇನ್ನು ಮತ್ತೊಂದು ಬೆಳವಣಿಗೆಯಲ್ಲಿ ತ್ರಿಶಾ ಕೃಷ್ಣನ್ ಅವರು ಇನ್ಸ್ಟಾಗ್ರಾಮ್ ನಲ್ಲಿ ವಿಜಯ್ ಅವರನ್ನು ಅನ್ ಫಾಲೋ ಮಾಡಿರುವುದು ಬೆಳಕಿಗೆ ಬಂದಿದೆ. ಈ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಡಿದ್ದು, ಅಭಿಮಾನಿಗಳಲ್ಲಿ ವಿವಿಧ ರೀತಿಯ ಪ್ರತಿಕ್ರಿಯೆಗಳು ಹುಟ್ಟಿಸಿವೆ.

Sponsored

ಕೆಲವು ವರದಿಗಳ ಪ್ರಕಾರ, ವಿಜಯ್ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ಪತ್ನಿ ಸಂಗೀತ ಅವರೊಂದಿಗೆ ಸಂಬಂಧವನ್ನು ಸರಿಪಡಿಸಿಕೊಳ್ಳುವತ್ತ ಗಮನಹರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದರಿಂದಾಗಿ ವೈಯಕ್ತಿಕ ಮತ್ತು ವೃತ್ತಿಪರ ಅಂತರವನ್ನು ಕಾಪಾಡಿಕೊಳ್ಳಲು ತ್ರಿಶಾ ಈ ರೀತಿಯ ಕ್ರಮ ಕೈಗೊಂಡಿರಬಹುದು ಎಂಬ ಊಹೆಗಳು ಕೂಡ ಹರಿದಾಡುತ್ತಿವೆ.

ಆದರೆ ಈ ಬಗ್ಗೆ ಇಬ್ಬರು ನಟರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದ್ದರಿಂದ ಇದು ಕೇವಲ ಗಾಸಿಪ್ ಆಗಿರಬಹುದು ಎಂಬ ಅಭಿಪ್ರಾಯವೂ ಕೆಲಸ ಸಿನಿಮಾ ವಿಶ್ಲೇಷಕರಿಂದ ವ್ಯಕ್ತವಾಗಿದೆ. ಈ ಬೆಳವಣಿಗೆ ಕಾಲಿವುಡ್ ನಲ್ಲಿ ದೊಡ್ಡ ಕುತೂಹಲಕ್ಕೆ ಕಾರಣವಾಗಿದ್ದು, ವಿಜಯ್ - ತ್ರಿಷಾ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಮುಂದುವರಿದಿದೆ.

ವಿಜಯ್ ಮತ್ತು ತ್ರಿಶಾ ಸಂಬಂಧದ ಗಾಸಿಪ್ ಮತ್ತೆ ಚರ್ಚೆ - ಪತ್ನಿ ಸಂಗೀತಾ, ರಾಜಕೀಯ ಎಂಟ್ರಿ ವದಂತಿಗಳು ಸೇರಿ ಕಾಲಿವುಡ್ ನಲ್ಲಿ ಕುತೂಹಲ :

ದಳಪತಿ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣನ್ ನಡುವಿನ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆಗಳು ಮತ್ತೆ ತೀವ್ರಗೊಂಡಿವೆ. ಇತ್ತೀಚಿನ ಬೆಳವಣಿಗೆಗಳು ಹಾಗೂ ಹಳೆಯ ಗಾಸಿಪ್ ಗಳು ಸೇರಿ ಕಾಲಿವುಡ್ ನಲ್ಲಿ ಹೊಸ ಕುತೂಹಲವನ್ನು ಹುಟ್ಟಿಸಿವೆ.

Sponsored

ಕೆಲವು ತಿಂಗಳುಗಳ ಹಿಂದೆ ವಿಜಯ್ ಮತ್ತು ಅವರ ಪತ್ನಿ ಸಂಗೀತಾ ನಡುವೆ ಭಿನ್ನಾಭಿಪ್ರಾಯಗಳು ಉಂಟಾಗಿದ್ದವು ಎಂಬ ವರದಿಗಳು ಹರಿದಾಡಿದ್ದವು. ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎಂಬ ಮಾತುಗಳು ಕೂಡ ಆ ಸಮಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದವು. ಆದರೆ ಈ ಕುರಿತು ಅಧಿಕೃತ ದೃಢೀಕರಣಗಳು ಬಹಿರಂಗವಾಗಿರಲಲ್ಲಿ.

ಈ ನಡುವೆ ವಿಜಯ್ ಮತ್ತು ತ್ರಿಶಾ ಇಬ್ಬರು ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದವು. ಈ ಬೇಟಿಗಳು ಹಾಗೂ ಆಪ್ತತೆ ಕುರಿತು ಹೊರಬಂದ ಸುದ್ದಿಗಳು ಗಾಸಿಪ್ ಗಳಿಗೆ ಮತ್ತಷ್ಟು ರೆಕ್ಕೆ ಪುಕ್ಕ ನೀಡಿದ್ದವು ಎಂದು ಅಭಿಮಾನಿಗಳು ಹಾಗೂ ಸಿನಿಮಾ ವಲಯದಲ್ಲಿ ಚರ್ಚೆ ನಡೆಯುತ್ತಿದೆ.

ಇನ್ನೊಂದೆಡೆ, ಇವರಿಬ್ಬರ ಸ್ನೇಹದ ಕುರಿತು ರಾಜಕೀಯ ವಲಯದಲ್ಲಿಯೂ ವದಂತಿಗಳು ಹರಿದಾಡಿದ್ದವು. ವಿಜಯ್ ಮತ್ತು ರಾಜಕೀಯ ಪಕ್ಷ 'ತಮಿಳಿಗ ವೆಟ್ರಿ ಕೆಳಗಂ' ಮೂಲಕ ತ್ರಿಷಾ ಅವರನ್ನು ರಾಜಕೀಯಕ್ಕೆ ಪರಿಚಯಿಸಬಹುದು ಎಂಬ ಮಾತುಗಳು ಕೇಳಿಬಂದಿದ್ದವು. ತ್ರಿಷಾ ಅವರನ್ನು ವಿಜಯ್ ಬೆಂಬಲದೊಂದಿಗೆ ಸಕ್ರಿಯ ರಾಜಕೀಯಕ್ಕೆ ಕರೆ ತರಬಹುದು ಎಂಬ ಊಹೆಗಳು ಕೆಲ ರಾಜಕೀಯ ಹಾಗೂ ಸಿನಿಮಾ ವಲಯದಲ್ಲಿ ಬಲವಾಗಿ ಹರಿದಾಡಿದ್ದವು.

ಆದರೆ ಈ ಎಲ್ಲಾ ವಿಚಾರಗಳ ಕುರಿತು ವಿಜಯ ಮತ್ತು ತ್ರಿಶಾ ಇಬ್ಬರು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಇವುಗಳನ್ನು ಗಾಸಿಪ್ ಮಟ್ಟದಲ್ಲೇ ಪರಿಗಣಿಸಬೇಕೆಂದು ಕೆಲ ಸಿನಿಮಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

Sponsored

ಇತ್ತೀಚಿನ ಸಾಮಾಜಿಕ ಜಾಲತಾಣಗಳ ಘಟನೆಗಳು, ಅನ್ ಫಾಲೋಸ್ ಸುದ್ದಿ ಮತ್ತು ಜನ್ಮದಿನದ ಶುಭಾಶಯ ಗೈರು ಹಾಜರಿ ಎಲ್ಲವೂ ಸೇರಿ ಈಗ ಗಳನ್ನು ಮತ್ತೊಮ್ಮೆ ಚರ್ಚೆಗೆ ತಂದಿವೆ. ಕಾಲಿವುಡ್ ನಲ್ಲಿ ವಿಜಯ್ ಮತ್ತು ತ್ರಿಶಾ ಸಂಬಂಧದ ಕುರಿತು ಕುತೂಹಲ ಮುಂದುವರೆದಿದೆ.

ವಿಜಯ್ - ತ್ರಿಷಾ ಗಾಸಿಪ್ ಗೆ ಹೊಸ ಟ್ವಿಸ್ಟ್ - ಅನ್ ಫಾಲೋ, ಮೌನ ಮತ್ತು ಸಂಸಾರ ಸುಧಾರಣೆ ಚರ್ಚೆ:

ದಳಪತಿ ವಿಜಯ್ ಹಾಗೂ ನಟಿ ತ್ರಿಶಾ ಕೃಷ್ಣ ನಡುವಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಚರ್ಚೆ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ತ್ರಿಶಾ ಅವರ ದಿಡೀರ್ ಹಾಗೂ ಮೌನ ನಡೆ ಬಗ್ಗೆ ನಟ್ಟಿದರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಸಾಮಾಜಿಕ ಜಲ ಧನಗಳಲ್ಲಿ ಕೆಲವರು "ಈಗ ತ್ರಿಶಾ ಗೆ ತಮ್ಮ ತಪ್ಪಿನ ಅರಿವಾಗಿದೆ, ಅದಕ್ಕೆ ಅವರು ವಿಜಯ್ ಅವರೊಂದಿಗೆ ದೂರು ಉಳಿಯುತ್ತಿದ್ದಾರೆ" ಎಂದು ಕಮೆಂಟ್ ಮಾಡುತ್ತಿದ್ದಾರೆ. ಮತ್ತೊಂದು ಕಡೆ, ಈ ವಿಚಾರ ಕೇವಲ ಊಹಾಪೋಹವಾಗಿರಬಹುದು ಎಂಬ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ.

Sponsored

ಇದೇ ವೇಳೆ, ವಿಜಯ್ ಮತ್ತು ಅವರ ಪತ್ನಿ ಸಂಗೀತ ಅವರ ವೈವಾಹಿಕ ಜೀವನ ಮತ್ತು ಸುಧಾರಣೆಯ ಹಾದಿಯಲ್ಲಿದೆ ಎಂಬ ಮಾತುಗಳು ಕಾಲಿವುಡ್ ವಲಯದಲ್ಲಿ ಹರಿದಾಡುತ್ತಿವೆ. ಕುಟುಂಬದ ಹಿರಿಯ ಮಧ್ಯಸ್ಥಿಕೆಯಲ್ಲಿ ಸಂಧಾನ ನಡೆದಿದ್ದು,ಇಬ್ಬರು ತಮ್ಮ ಸಂಸಾರವನ್ನು ಮತ್ತೆ ಸರಿಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂಬ ಚರ್ಚೆ ಕೂಡ ಜೋರಾಗಿದೆ.

ಈ ಬೆಳವಣಿಗೆಯ ನಡುವೆ ತ್ರಿಶಾ ಅವರು ವಿಜಯವರಿಂದ ಅಂತರ ಕಾಯ್ದುಕೊಂಡಿದ್ದಾರೆ ಎಂಬ ಊಹೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದರ ಹಿಂದಿನ ಕಾರಣವನ್ನು ಕೆಲವರು ವ್ಯಯಕ್ತಿಕ ಜೀವನದ ಗೌರವ ಹಾಗೂ ವಿವಾದವನ್ನು ತಪ್ಪಿಸಲು ಪ್ರಯತ್ನ ಎಂದು ವಿಶ್ಲೇಷಿಸುತ್ತಿದ್ದಾರೆ.

ಒಟ್ಟಿನಲ್ಲಿ ವಿಜಯ್ ಮತ್ತು ತ್ರಿಶಾ ಸಂಬಂಧದ ಕುರಿತು, ಚರ್ಚೆ ನಟಿಗಳು ಹಾಗೂ ಸಂಸಾರ ಸುಧಾರಣೆ ಕುರಿತುಗಳು ಕಾಲಿವುಡ್ ಅಂಗಗಳಲ್ಲಿ ಕುತೂಹಲವನ್ನು ಹೆಚ್ಚಿಸಿದ್ದು, ಎಲ್ಲದಕ್ಕೂ ಕಾಲವೇ ಉತ್ತರ ನೀಡಬೇಕಾಗಿದೆ.

Also Read:

Sponsored

ಕೈಲಾಸ ಮಾನಸ ಸರೋವರ ಯಾತ್ರೆ 2026: ಜುಲೈ 4ರಿಂದ ಆರಂಭ, ಬರದಿಂದ ಸಾಗಿದ ಸಿದ್ಧತೆಗಳು

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online