Belagavi news:
ಇಂದು ವಾಣಿಜ್ಯ ಬಳಕೆಯ ಎಲ್ ಪಿ ಸಿಲೆಂಡರ್ ಬೆಲೆಯಲ್ಲಿ ಬಾರಿ ಏರಿಕೆ ದಾಖಲಾಗಿದ್ದು, ಮೇ 1ರಿಂದ ಜಾರಿಗೆ ಬರುವಂತೆ 10 ಮತ್ತು ಕೆಜಿ ವಾಣಿಜ್ಯ ಸಿಲಿಂಡರ್ ಗಳ ಬೆಲೆ ಬರೋಬ್ಬರಿ ₹993 ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಹೊಸ ದರ ಏರಿಕೆಯ ನಂತರ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಎಲ್ ಪಿ ಜಿ ಸಿಲಿಂಡರ್ ಬೆಲೆ ₹3,071.50ಕ್ಕೆ ತಲುಪಿದೆ. ಇದರ ಏರಿಕೆ ಹೋಟೆಲ್, ರೆಸ್ಟೋರೆಂಟ್, ಕ್ಯಾಟ್ರಿಂಗ್ ಸೇವೆಗಳು ಹಾಗೂ ಇತರ ವಾಣಿಜ್ಯ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ವ್ಯವಹಾರ ವಲಯದಲ್ಲಿ ಈಗಾಗಲೇ ಕಾರ್ಯಚರಣ ವೆಚ್ಚ ಹೆಚ್ಚುತ್ತಿರುವ ನಡುವೆ ಎಲ್ ಪಿ ಜಿ ದರ ಏರಿಕೆ ಮತ್ತಷ್ಟು ಆರ್ಥಿಕ ಒತ್ತಡವನ್ನುಂಟು ಮಾಡಲಿದೆ. ಉದ್ಯಮ ವಲಯ ಅಭಿಪ್ರಾಯ ಪಟ್ಟಿದೆ. ವಿಶೇಷವಾಗಿ ಆಹಾರ ಮತ್ತು ಆತಿತ್ಯ ಕ್ಷೇತ್ರದಲ್ಲಿ ಬೆಲೆ ಏರಿಕೆ ಮುಂದುವರೆಯುವ ಸಾಧ್ಯತೆ ಇದೆ.
ಆದರೆ ಈ ಬೆಲೆ ಏರಿಕೆಯೂ ಕೇವಲ ವಾಣಿಜ್ಯ ಸಿಲಿಂಡರ್ ಗಳಿಗೆ ಮಾತ್ರ ಅನ್ವಯವಾಗಿದ್ದು, ದೇಶಿಯ 14.2 ಕೆಜಿ ಗೃಹಬಳಿಕೆಯ ಎಲ್ ಪಿ ಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.
ಇದಲ್ಲದೆ ಪೆಟ್ರೋಲ್ ಡೀಸೆಲ್ ಹಾಗೂ ಸೀಮೆಎಣ್ಣೆ ಬೆಲೆಗಳಲ್ಲಿಯೂ ಯಾವುದೇ ಬದಲಾವಣೆ ಇಲ್ಲ ಎಂದು ಮೂಲಗಳು ತಿಳಿಸಿದೆ.
ವಾಣಿಜ್ಯ ಬಳಕೆಯಲ್ಪಿಜಿ ಸಿಲಿಂಡರ್ ದರದಲ್ಲಿ ಇತ್ತೀಚಿಗೆ ಏರಿಕೆ ಕಂಡು ಬಂದಿದ್ದರು, ಸಾಮಾನ್ಯ ಗ್ರಾಹಕರಿಗೆ ನೇರವಾಗಿ ಅನ್ವಯವಾಗುವ ಪ್ರಮುಖ ಇಂಧನ ದರಗಳಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ ಎಂದು ಸ್ಪಷ್ಟವಾಗಿದೆ. ಇದರಿಂದ ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ನಿರಾಳತೆ ದೊರೆತಿದೆ.
ಸುಮಾರು 33 ಕೋಟಿ ಗ್ರಾಹಕರು ಬಳಸುವ 14.2 ಕೆಜಿ ದೇಶಿಯ ಎಲ್ ಪಿ ಜಿ ಸಿಲೆಂಡರ್ ಬೆಲೆಗಳು ಯಥಾ ಸ್ಥಿತಿಯಲ್ಲಿವೆ. ಮನೆ ಬಳಕೆಯ ಗ್ಯಾಸ್ ದರದಲ್ಲಿ ಯಾವುದೇ ಏರಿಕೆ ಅಥವಾ ಏರಿಕೆ ಇಲ್ಲದಿರುವುದು ಕುಟುಂಬ ಬಜೆಟ್ ಗಳಿಗೆ ಅನುಕೂಲಕರವಾಗಿದೆ.
ಅದೇ ರೀತಿ, ದೇಶಾದ್ಯಂತ ವಾಹನ ಸವಾರರಿಗೆ ಪ್ರಮುಖವಾಗಿರುವ ಪೆಟ್ರೋಲ್ ಮತ್ತು ಡೀಸೆಲ್ ಚಿಲ್ಲರೆ ಬೆಲೆಗಳಲ್ಲಿ ಕೂಡ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಒಟ್ಟು ಇಂಧನ ಬಳಕೆಯ ಸುಮಾರು 90% ಪಾಲನ್ನು ಹೊಂದಿರುವ ಈ ಇಂಧನಗಳ ಸ್ಥಿರತೆ ಜನರಿಗೆ ಆರ್ಥಿಕ ಒತ್ತಡ ಕಡಿಮೆಯಾಗಲು ಕಾರಣವಾಗಿದೆ.
ಪಬ್ಲಿಕ್ ಡಿಸ್ಟ್ರಿಬ್ಯೂಷನ್ ಸಿಸ್ಟಮ್ ಅಡಿಯಲ್ಲಿ ವಿತರಿಸಲಾಗುವ ಸೀಮೆಎಣ್ಣೆಯ ಬೆಲೆಗಳಲ್ಲಿಯೂ ಯಾವುದೇ ಬದಲಾವಣೆ ಇಲ್ಲ ಎಂದು ಮೂಲಗಳು ತಿಳಿಸುವೆ.
ಇನ್ನೊಂದೆಡೆ ಬೆಂಗಳೂರಿನಲ್ಲಿ ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ ಬೆಲೆ ಹಿಂದೆ ಸುಮಾರು ₹1950 ರಿಂದ 2200ರ ನಡುವೆ ಇತ್ತು ಎಂಬ ಮಾಹಿತಿ ಲಭ್ಯವಾಗಿದೆ. ಇತ್ತೀಚಿನ ಏರಿಕೆ ಕೇವಲ ವಾಣಿಜ್ಯ ವಿಭಾಗಕ್ಕೆ ಮಾತ್ರ ಸೀಮಿತವಾಗಿದ್ದು, ಹೋಟೆಲ್ ಮತ್ತು ರೆಸ್ಟೋರೆಂಟ್ ಕ್ಷೇತ್ರಗಳ ಮೇಲೆ ಮಾತ್ರ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ.
ವಿಮಾನಯಾನ ಇಂಧನ ದರ ಸ್ಥಿರ :
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ಬೆಲೆಗಳು ಏರಿಕೆಯಾಗುತ್ತಿದ್ದರು, ದೇಶಿಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ವಿಮಾನಯಾನ ಟರ್ಬೈನ್ ಇಂಧನ ದರಗಳನ್ನು ಶುಕ್ರವಾರವೂ ಯಥಾ ಸ್ಥಿತಿಯಲ್ಲಿ ಉಳಿಸಲಾಗಿದೆ ಎಂದು ತೈಲ ಮಾರುಕಟ್ಟೆ ಕಂಪನಿಗಳು ತಿಳಿಸಿವೆ.
ಗ್ರಾಹಕರು ಮತ್ತು ವಿಮಾನಯಾನ ಸಂಸ್ಥೆಗಳ ಮೇಲೆ ಹೆಚ್ಚುವರಿ ಆರ್ಥಿಕ ಬಾರದಂತೆ ಮಾಡಲು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಅಂತರಾಷ್ಟ್ರೀಯ ಬೆಲೆಯನ್ನು ತಾವೇ ಹೊತ್ತುಕೊಳ್ಳಲು ನಿರ್ಧರಿಸಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ ತಿಳಿಸಿದೆ.
ಆದರೆ, ಅಂತರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳಿಗೆ ನೀಡಲಾಗುವ ಇಂಧನ ದರಗಳಲ್ಲಿ ಮಾತ್ರ ಏರಿಕೆ ಮಾಡಲಾಗಿದೆ ಎಂದು ಮೂಲಗಳು ಸ್ಪಷ್ಟಪಡಿಸುವೆ. ಇದರಿಂದ ದೇಶಿಯ ವಿಮಾನಯಾನ ಕ್ಷೇತ್ರದಲ್ಲಿ ಟಿಕೆಟ್ ದರದ ಮೇಲೆ ತಕ್ಷಣದ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ.
ತೈಲ ಮಾರುಕಟ್ಟೆ ಕಂಪನಿಗಳ ಈ ನಿರ್ಧಾರದಿಂದಾಗಿ ಮಾರುಕಟ್ಟೆಯಲ್ಲಿ ಲಭ್ಯವಿರುವ ಸುಮಾರು ಶೇಕಡ 80% ರಷ್ಟು ಪೆಟ್ರೋಲಿಯಂ ಉತ್ಪನ್ನಗಳ ದರಗಳಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇವುಗಳಲ್ಲಿ ಶೇ 4ರಷ್ಟು ಉತ್ಪನ್ನಗಳ ಬೆಲೆ ಇಳಿಕೆಯನ್ನು ದಾಖಲಿಸಿದರೆ, ಕೇವಲ ಶೇಕಡಾ 16 ರಷ್ಟು ಇಂಧನಗಳು ಮಾತ್ರ ಬೆಲೆ ಏರಿಕೆಯನ್ನು ಕಂಡಿವೆ.
ಅಂತರಾಷ್ಟ್ರೀಯ ಬೆಲೆ ಏರುಳಿತಗಳ ಪರಿಣಾಮದಿಂದ ದೇಶಿಯ ಗ್ರಾಹಕರನ್ನು ರಕ್ಷಿಸುವುದು ಹಾಗೂ ಆರ್ಥಿಕ ಸ್ಥಿರತೆಯನ್ನು ಕಾಪಾಡುವುದು ಈ ಕ್ರಮದ ಪ್ರಮುಖ ಉದ್ದೇಶವಾಗಿದೆ ಎಂದು ಐಓಸಿ ಕಷ್ಟಪಡಿಸಿದೆ.
Also Read: