<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

"ಕಾಂಗ್ರೆಸ್ ಬೆನ್ನಿಗೆ ಚೂರಿ ಇರದಿದೆ ಆರೋಪ: ಟಿವಿಕೆ ಬೆಂಬಲ ಘೋಷಣೆ ಬಳಿಕ ಡಿಎಂಕೆ ಆಕ್ರೋಶ"

"ಕಾಂಗ್ರೆಸ್ ಬೆನ್ನಿಗೆ ಚೂರಿ ಇರದಿದೆ ಆರೋಪ: ಟಿವಿಕೆ ಬೆಂಬಲ ಘೋಷಣೆ ಬಳಿಕ ಡಿಎಂಕೆ ಆಕ್ರೋಶ"
Summary: A political rift has emerged within I.N.D.I.A in Tamil Nadu. There are now differences between the Congress and DMK, which were previously allies.

belagavi news :

ರಾಜಕೀಯದಲ್ಲಿ ಅಚ್ಚರಿ ಬೆಳವಣಿಗೆಗಳು ನಡೆಯುತ್ತಿವೆ. ನಟ ವಿಜಯ್ ನೇತೃತ್ವದ ಸರ್ಕಾರ ರಚಿಸಲು ಸ್ಪಷ್ಟ ಬಹುಮತ ಸಿಗದ ಕಾರಣ ಇತರೆ ಪಕ್ಷಗಳ ಬೆಂಬಲ ಅನಿವಾರ್ಯವಾಗಿದೆ. ಈ ಹಿನ್ನಲೆ, ಪಕ್ಷದ ನಾಯಕರು ಇತರ ರಾಜಕೀಯ ಪಕ್ಷಗಳ ಬೆಂಬಲಕ್ಕಾಗಿ ನಿರೀಕ್ಷೆಯಲ್ಲಿ ಇದ್ದಾರೆ. ಸರ್ಕಾರ ರಚನೆಗೆ ಬೇಕಾದ ಸಂಖ್ಯೆಯನ್ನು ಸೇರ್ಪಡೆಗೊಳಿಸಲು ರಾಜಕೀಯ ಮಾತುಕತೆಗಳು ನಡೆಯುತ್ತಿವೆ.

ಈ ನಡುವೆ ಕೇವಲ ಐದು ಸ್ಥಾನಗಳನ್ನು ಪಡೆದಿರುವ ಕಾಂಗ್ರೆಸ್ ಪಕ್ಷವು ಟಿವಿಕೆಗೆ ಬೆಂಬಲ ನೀಡು ವುದಾಗಿ ಘೋಷಿಸಿದೆ. ಆದರೆ ಚುನಾವಣೆಗೂ ಮೊದಲು ಕಾಂಗ್ರೆಸ್ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದರಿಂದ, ಈಗ ನನ್ನ ನಿರ್ಧಾರ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಡಿಎಂಕೆ ನಾಯಕರು, ಕಾಂಗ್ರೆಸ್ನ ಈ ನಡೆ "ಬೆನ್ನಿಗೆ ಚೂರಿ ಇರಿದಂತೆ"ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆಳವಣಿಗೆ ತಮಿಳುನಾಡಿನ ರಾಜಕೀಯ ಸಮೀಕರಣವನ್ನು ಮತ್ತಷ್ಟು ಜಟಿಲಗೊಳಿಸಿದೆ.

ಇತ್ತೀಚಿಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡಿದ್ದರು ಡಿಎಂಕೆ ಮತ್ತೆ ಶಕ್ತಿಯಾಗಿ ಮರಳಿದೆ ಎಂದು ಪಕ್ಷದ ಸಂಘಟನಾ ಕಾರ್ಯದರ್ಶಿ ಆರ್ಎಸ್ ಭಾರತಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅವರು ಮಾತನಾಡಿ, ಸೋಲು ಗೆಲುವು ರಾಜಕೀಯದಲ್ಲಿ ಸಾಮಾನ್ಯ. ಪಕ್ಷವು ಹಿಂದೆಂದೂ ಇಂತಹ ಸವಾಲುಗಳನ್ನು ಎದುರಿಸಿ ಮತ್ತೆ ಅಧಿಕಾರಕ್ಕೆ ಬಂದ ಇತಿಹಾಸವಿದೆ ಎಂದು ಹೇಳಿದರು.

Sponsored

1991ರ ವಿಧಾನಸಭಾ ಚುನಾವಣೆಯನ್ನು ಉದಾರಣೆಯಾಗಿ ನೀಡಿದ ಅವರು, ಆ ಸಮಯದಲ್ಲಿ 234 ಕ್ಷೇತ್ರಗಳ ಪೈಕಿ ಕೇವಲ ಎರಡು ಪಕ್ಷಗಳಲ್ಲಿ ಮಾತ್ರ ಗೆಲುವು ಸಿಕ್ಕಿದ್ದರು, 1996ರಲ್ಲಿ ಜನರ ವಿಶ್ವಾಸ ಪಡೆದು ಡಿಎಂಕೆ ಸ್ವಂತ ಬಲದಲ್ಲಿ ಸರ್ಕಾರ ರಚಿಸಿತು ಎಂದು ನೆನಪಿಸಿದರು."ಏಳು ದಶಕಗಳಿಗೂ ಹೆಚ್ಚು ಇತಿಹಾಸ ಇರುವ ಪಕ್ಷ ಇದಾಗಿದೆ. ಅನೇಕ ಏರುತಗಳನ್ನು ಕಂಡಿದ್ದೇವೆ. ಆದರೆ ನಮ್ಮ ಕಾರ್ಯಕರ್ತರು ಸದಾ ದೃಢವಾಗಿದ್ದಾರೆ. ಮುಂದೇವು ನಾವು ಅಧಿಕಾರಕ್ಕೆ ಬರುತ್ತೇವೆ"ಎಂದು ಅವರು ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಡಿ ಎಂ ಕೆ ವಕ್ತಾರ ಸರವಣನ್ ಅಣ್ಣ ದೊರೈ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಪಕ್ಷದ ರಾಜಕೀಯ ನಡೆಗಳನ್ನು ಗಂಭೀರವಾಗಿ ಪ್ರಶಿಸಿದ್ದಾರೆ. ಅವರ ಪ್ರಕಾರ, ಟಿವಿಕೆಗೆ ಬೆಂಬಲ ಘೋಷಿಸುವ ಮೂಲಕ ಕಾಂಗ್ರೆಸ್ ಸ್ವಯಂ ವಿನಾಶದ ದಾರಿಗೆ ಹೋಗುತ್ತಿದೆ ಎಂದು ಹೇಳಿದ್ದಾರೆ. ಚುನಾವಣೆಗೂ ಮುನ್ನ ಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿದ್ದ ಕಾಂಗ್ರೆಸ್ ಈಗ ನಿಷ್ಠೆ ಬದಲಿಸಿ ಡಿಎಂಕೆ ಗೆ "ಬೆನ್ನಿಗೆ ಚೂರಿ ಹಾಕಿದಂತೆ"ವರ್ತಿಸಿದೆ ಎಂದು ಆರೋಪಿಸಿದ್ದಾರೆ.

ಅಂಕಿಗಳ ಲೆಕ್ಕಾಚಾರದಲ್ಲೂ ಕಾಂಗ್ರೆಸ್ ಗೆ ಕೇವಲ 5 ಸ್ಥಾನಗಳಷ್ಟೇ ಇದ್ದು, ಟಿವಿಕೆ ಸರ್ಕಾರ ರಚನೆಗೆ ಕನಿಷ್ಠ 11- 12 ಸ್ಥಾನಗಳ ಅಗತ್ಯವಿದೆ ಎಂದು ಹೇಳಿದ ಅವರು, ಇಂಥ ಸ್ಥಿತಿಯಲ್ಲಿ ಬೆಂಬಲ ಘೋಷಿಸುವುದು ರಾಜಕೀಯವಾಗಿ ಅರ್ಥವಿಲ್ಲ ಎಂದು ಪ್ರಶಿಸಿದ್ದಾರೆ."ಅರ್ಧ ಸಂಖ್ಯೆಯು ಇಲ್ಲದ ಪಕ್ಷ ಬೆಂಬಲ ನೀಡಿದರು ಯಾವ ಬದಲಾವಣೆ ಆಗಲಿದೆ? ಟಿವಿಕೆ ಸರ್ಕಾರದಲ್ಲಿ ಎರಡು ಸಚಿವ ಸ್ಥಾನಕ್ಕಾಗಿ ಕಾಂಗ್ರೆಸ್ ಸ್ವಯಂ ನಾಶದ ದಾರಿಗೆ ಹೋಗುತ್ತಿದೆ"ಎಂದು ಅವರು ತೀವ್ರ ಟೀಕೆ ಮಾಡಿದ್ದಾರೆ.

Read also :

Sponsored

https://h16news.online/news-details.php?slug=Bringing_life_400_year_old_story_Ragini_Dwivedi

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online