<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Business

ಮೋದಿ "ಮಿತ ಬಳಕೆ" ಕರೆ ಬಳಿಕ ಅಡುಗೆ ಎಣ್ಣೆ ದರ ಏರಿಕೆ

ಮೋದಿ "ಮಿತ ಬಳಕೆ" ಕರೆ ಬಳಿಕ ಅಡುಗೆ ಎಣ್ಣೆ ದರ ಏರಿಕೆ
Summary: Another big shock for those who use cooking oil! The price of one liter has been increased by Rs. 3, and traders have taken a new decision on the back of the message given by Prime Minister Modi. Let's see more information about this oil price hike..

Belagavi News:

ಅಡುಗೆ ಎಣ್ಣೆ ಬೆಲೆ ಲೀಟರ್ ಗೆ ರೂ. 3 ಏರಿಕೆ ಮಾಡಿರುವುದು ಗ್ರಾಹಕರಿಗೆ ಮತ್ತೊಂದು ಬೆಲೆ ಶಾಕ್ ನೀಡಿದೆ. ದೇಶಾದ್ಯಂತ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ನಡುವೆ,ಇದೀಗ ಅಡುಗೆ ದರವು ಹೆಚ್ಚಳ ಕಂಡಿದ್ದು, ಮನೆ ಮಂದಿಯ ತಿಂಗಳ ಖರ್ಚಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಇದಕ್ಕೂ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಜನರಿಗೆ ಎಣ್ಣೆ 'ಮಿತ ಬಳಕೆ ಆರೋಗ್ಯಕ್ಕೂ ಉತ್ತಮ' ಎಂದು ನೀಡಿದ ಸಲಹೆ ಇದೀಗ ಹೊಸ ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ಅವರ ಈ ಕರೆಗೆ ಕೆಲವು ವ್ಯಾಪಾರಿಗಳು ಮತ್ತು ಎಣ್ಣೆ ಮಾರಾಟಗಾರರು ಬೆಂಬಲ ಸೂಚಿಸಿದ್ದು,ಆರೋಗ್ಯಕರ ಜೀವನ ಶೈಲಿಗೆ ಇದು ಸಹಾಯಕಾರಿ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ವ್ಯಾಪಾರಿಗಳ ಪ್ರಕಾರ, ಅಡುಗೆ ಎಣ್ಣೆಯ ಮಿತ ಬಳಕೆ ಆರೋಗ್ಯದ ದೃಷ್ಟಿಯಿಂದ ಉತ್ತಮವಾಗಿದ್ದು, ಜನರ ಅಗತ್ಯಕ್ಕಿಂತ ಹೆಚ್ಚು ಎಣ್ಣೆ ಬಳಕೆಯನ್ನು ಕಡಿಮೆ ಮಾಡಬೇಕು ಎನ್ನುವುದನ್ನು ಅವರ ವಾದವಾಗಿದೆ. ಆದರೆ ಬೆಲೆ ಏರಿಕೆಯ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳುತ್ತಿರುವುದರಿಂದ ಇದರಿಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Sponsored

ಮಾರುಕಟ್ಟೆ ತಜ್ಞರ ಪ್ರಕಾರ ಅಂತರಾಷ್ಟ್ರೀಯ ಮಾರುಕಟ್ಟೆಯ ಬೆಲೆ ಬದಲಾವಣೆ, ಸಾಗಾಟ ವೆಚ್ಚ ಹಾಗೂ ಬೇಡಿಕೆ ಹೆಚ್ಚಳದಿಂದ ಅಡುಗೆ ಎಣ್ಣೆ ದರದಲ್ಲಿ ಏರಿಕೆ ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಈ ಎಣ್ಣೆ ದರದ ಮೇಲೆ ಮತ್ತಷ್ಟು ಬದಲಾವಣೆ ಕಂಡುಬರುತ್ತದೆ ಎಂದು ಹೇಳಲಾಗುತ್ತಿದೆ.

ಪದ್ಯ ಅಡುಗೆ ಎಣ್ಣೆ ದರ ಏರಿಕೆ ಮತ್ತು ಪ್ರಧಾನಿ ಮೋದಿ ಅವರ "ಮಿತ ಬಳಕೆ" ಕರೆ ಸಾಮಾಜಿಕ ಜಾಲತಾಣಗಳನ್ನು ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಆರೋಗ್ಯದ ದೃಷ್ಟಿಯಿಂದ ಈ ಸಲಹೆಯನ್ನು ಸ್ವಾಗತಿಸಿದರೆ ಇನ್ನೂ ಕೆಲವರು ಬೆಲೆ ಟೀಕಿಸುತ್ತಿದ್ದಾರೆ.

ಅಡುಗೆ ಎಣ್ಣೆಯ ಬಲಿಯಲ್ಲಿ ಮತ್ತಷ್ಟು ಏರಿಕೆ ಕಂಡು ಬಂದಿದ್ದು, ಪ್ರತಿ ಲೀಟರ್ ಗೆ ₹3 ಹೆಚ್ಚಳವಾಗಿದೆ. ಈ ಹಿಂದೆ ₹138ಕ್ಕೆ ಮರಠವಾಗುತ್ತಿದ್ದ ಅಡುಗೆ ಎಣ್ಣೆ ಇದೀಗ ₹141ಕ್ಕೆ ಮಾರಾಟವಾಗುತ್ತಿದೆ. ಮಾರಾಟವು141ಕ್ಕೆ ತಲುಪಿದ್ದು,ಗ್ರಾಹಕರಿಗೆ ಮತ್ತೊಂದು ಬಿಗ್ ಶಾಕ್ ಎದುರಾಗಿದೆ. ಅಗತ್ಯ ವಸ್ತುಗಳ ದರ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಜನರಿಗೆ ಈ ಹೆಚ್ಚಳ ಹೆಚ್ಚುವರಿ ಹೊರತಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ವ್ಯಾಪಾರಿ ಅಣ್ಣೋಜಿ ರಾವ್ ಅವರು, ಪ್ರಧಾನಿ ನರೇಂದ್ರ ಮೋದಿ ನೀಡಿರುವ "ಅಡುಗೆ ಎಣ್ಣೆಯನ್ನು ಮಿತವಾಗಿ ಬಳಸಿ" ಎಂಬ ಸಲಹೆಯನ್ನು ಸಂಪೂರ್ಣವಾಗಿ ಬೆಂಬಲಿಸಿದ್ದಾರೆ. "ವ್ಯಾಪಾರಿಯಾಗಿರುವ ನಾನು ಎಣ್ಣೆ ಕಡಿಮೆ ಬಳಸಿ ಎಂದು ಹೇಳುವುದು ನನ್ನ ವ್ಯಾಪಾರಕ್ಕೆ ನಷ್ಟವೇ ಸರಿ. ಆದರೂ ದೇಶದ ಹಿತ ದೃಷ್ಟಿ, ಜನರ ಆರೋಗ್ಯ ಮತ್ತು ಯುದ್ಧದ ಪರಿಸ್ಥಿತಿಯನ್ನು ಗಮನಿಸಿದರೆ ಪ್ರಧಾನಿ ಮೋದಿ ಅವರ ಸಲಹೆ ಸರಿಯಾಗಿದೆ" ಎಂದು ಹೇಳಿದ್ದಾರೆ.

Sponsored

ಅಣ್ಣೋಜಿ ರಾವ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ಆರೋಗ್ಯದ ದೃಷ್ಟಿಯಿಂದ ಮೋದಿ ಅವರ ಸಲಹೆಯನ್ನು ಸ್ವಾಗತಿಸುತ್ತಿದ್ದಾರೆ. ಆದರೆ ಇನ್ನೂ ಕೆಲವರು, ಬೆಲೆ ಏರಿಕೆಯಿಂದ ಸಾಮಾನ್ಯ ಜನರ ಸಂಕಷ್ಟಕ್ಕೆ ಸಿಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಮಾರುಕಟ್ಟೆ ತಜ್ಞರ ಪ್ರಕಾರ, ಅಂತರಾಷ್ಟ್ರೀಯ ಮಾರುಕಟ್ಟೆಯ ಬದಲಾವಣೆ, ಆಮದು ವೆಚ್ಚ ಮತ್ತು ಜಾಗತಿಕ ಯುದ್ಧದ ಪರಿಸ್ಥಿತಿಗಳ ಪರಿಣಾಮವಾಗಿ ಅಡುಗೆ ಎಣ್ಣೆ ದರ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ದರದಲ್ಲಿ ಇನ್ನಷ್ಟು ವ್ಯತ್ಯಾಸ ಉಂಟಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಪದ್ಯ ಮೋದಿ ಅವರ "ಮಿತ ಬಳಕೆ" ಕರೆ ಹಾಗೂ ಅಡುಗೆ ಎಣ್ಣೆ ದರ ಏರಿಕೆ ರಾಜ್ಯದ ವ್ಯಾಪಕ ಚರ್ಚೆಗೆ ಕಾರಣವಾಗಿದ್ದು, ಜನರು ಬೆಲೆ ನಿಯಂತ್ರಣಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೀಡಿರುವ "ಮಿತ ಬಳಕೆ ಮತ್ತು ಸಂಪನ್ಮೂಲಗಳ ರಕ್ಷಣೆ" ಕುರಿತ ಹೇಳಿಕೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಹೇಳಿಕೆ ಕೆಲವರಲ್ಲಿ ಆಕ್ರೋಶ ಮತ್ತು ಅನುಮಾನ ಮೂಡಿಸಿದ್ದರೆ, ಮತ್ತೊಂದೆಡೆ ಹಲವರು ಇದನ್ನು ಪರಿಸರ ಸಂರಕ್ಷಣೆ ಹಾಗೂ ಮುಂದಿನ ಪೀಳಿಗೆಗಾಗಿ ಸಂಪನ್ಮೂಲಗಳನ್ನು ಉಳಿಸುವ ಅತ್ಯಂತ ಅಗತ್ಯ ಕ್ರಮ ಎಂದು ಬೆಂಬಲಿಸಿದ್ದಾರೆ.

Sponsored

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಸಾರ್ವಜನಿಕ ವಲಯದಲ್ಲಿ ಪ್ರಧಾನಿ ಮೋದಿ ಅವರ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ. ಅನಗತ್ಯವಾಗಿ ವಾಹನಗಳನ್ನು ಬಳಸುವುದು,ಅತಿಯಾಗಿ ಟ್ರಿಪ್ ಗಳಿಗೆ ಹೋಗುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಖರೀದಿಸುವ ಪ್ರವೃತ್ತಿಯನ್ನು ಕಡಿಮೆ ಮಾಡಬೇಕು ಎಂಬ ಅಂಶಕ್ಕೆ ಅನೇಕರು ಒಪ್ಪಿಗೆ ಸೂಚಿಸಿದ್ದಾರೆ. ಇದರಿಂದ ಇಂಧನ ಉಳಿತಾಯವಾಗುವುದಲ್ಲದೇ ಪರಿಸರದ ಮೇಲಿನ ಒತ್ತಡವು ಕಡಿಮೆಯಾಗುತ್ತದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಪರಿಸರ ತಜ್ಞರ ಪ್ರಕಾರ, ನಿಯಂತ್ರಿತ ಬಳಕೆ ಮತ್ತು ಜವಾಬ್ದಾರಿಯುತ ಜೀವನಶೈಲಿ ಅಳವಡಿಸಿಕೊಳ್ಳುವುದು ಇಂದಿನ ಕಾಲದಲ್ಲಿ ಅಗತ್ಯವಾಗಿದೆ. ವಿಶೇಷವಾಗಿ ಜಾಗತಿಕ ತಾಪಮಾನ ಏರಿಕೆ, ಇಂಧನ ಕೊರತೆ ಮತ್ತು ಯುದ್ಧದಂತಹ ಅಂತರಾಷ್ಟ್ರೀಯ ಪರಿಸ್ಥಿತಿಗಳ ನಡುವೆ ಸಂಪನ್ಮೂಲಗಳ ಸಮರ್ಪಕ ಬಳಕೆ ಮಹತ್ವ ಪಡೆದುಕೊಂಡಿದೆ.

ಕೆಲವರು ಪ್ರಧಾನಿ ಮೋದಿ ಅವರ ಸಂದೇಶವನ್ನು "ಸರಳ ಜೀವನ ಉತ್ತಮ ಭವಿಷ್ಯ" ಎಂಬ ದೃಷ್ಟಿಕೋನದ ಭಾಗವಾಗಿ ನೋಡುತ್ತಿದ್ದಾರೆ. ಅತಿಯಾದ ಬಳಕೆ ಮತ್ತು ವ್ಯರ್ಥ ಖರ್ಚು ಕಡಿಮೆ ಮಾಡುವ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಗೂ ಸಹಾಯಕವಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿ ಬರುತ್ತಿವೆ.

ಒಟ್ಟಾರೆ, ಪ್ರಧಾನಿ ಮೋದಿ ಅವರ ಈ ಏರಿಕೆ ದೇಶದಲ್ಲಿ ಪರಿಸರ ಜಾಗೃತಿ, ಸಂಪನ್ಮೂಲಗಳ ಸಂರಕ್ಷಣೆ ಮತ್ತು ಮಿತ ಬಳಕೆಯ ಬಗ್ಗೆ ಹೊಸ ಚರ್ಚೆಗೆ ಕಾರಣವಾಗಿದ್ದು, ಸಾರ್ವಜನಿಕರಲ್ಲಿ ಜವಾಬ್ದಾರಿಯಿಂದ ಬಳಕೆಯ ಅರಿವು ಹೆಚ್ಚಿಸುತ್ತದೆ.

Sponsored

Also Read:

ವಿಜಯ್ ಸರ್ಕಾರದ ಮೊದಲ ಹೆಜ್ಜೆ: ಮಹಿಳೆಯರಿಗಾಗಿ ಸಿಂಗಪ್ಪೆನ್ ಸ್ಪೆಷಲ್ ಟಾಸ್ಕ್ ಫೋರ್ಸ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online