belagavi news :
ಚೆನ್ನೈ(ತಮಿಳುನಾಡು) : ವಿಜಯ್ ನೇತೃತ್ವದ ತಮಿಳುನಾಡಿನ ನೂತನ ಸರ್ಕಾರ ಮಹಿಳೆಯರ ರಕ್ಷಣೆಗೆ ವಿಶೇಷ ಆದ್ಯತೆ ನೀಡಿದ್ದು, ಅವರ ಸುರಕ್ಷತೆಯನ್ನು ಬಲಪಡಿಸುವ ನಿಟ್ಟಿನಲ್ಲಿ 'ಸಿಂಗಪ್ಪೆನ್ ವಿಶೇಷ ಕಾರ್ಯಪಡೆ' ರಚಿಸಲು ಆದೇಶಿಸಿದೆ .
ಸರ್ಕಾರಿ ಆದೇಶದ ಪ್ರಕಾರ ಈ ವಿಶೇಷ ಘಟಕವು ಮುಖ್ಯಮಂತ್ರಿಗಳ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸಲಿದೆ. ಮೊದಲ ಹಂತದಲ್ಲಿ ಒಬ್ಬ ಪೊಲೀಸ್ ಮಹಾನಿರ್ದೇಶಕ ಒಬ್ಬ ಪೊಲೀಸ್ ವರಿಷ್ಠಾಧಿಕಾರಿ, ಇಬ್ಬರು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 4 ಇನ್ಸ್ಪೆಕ್ಟರ್ ಗಳು, ಎಂಟು ಸಬ್ -ಇನ್ಸ್ ಪೆಕ್ಟರ್ ಗಳು ಹಾಗೂ ಇತರ ಶ್ರೇಣಿಯ 20 ಸಿಬ್ಬಂದಿ ಸೇರಿದಂತೆ ಹಲವು ಹುದ್ದೆಗಳನ್ನು ಮಂಜೂರು ಮಾಡಲಾಗಿದೆ.
ಪೊಲೀಸ್ ಮಹಾನಿರ್ದೇಶಕರು ಸಲ್ಲಿಸಿದ ಪ್ರಸ್ತಾವನೆಯನ್ನು ಸರ್ಕಾರವು ಪರಿಶೀಲಿಸಿದ ಬಳಿಕ, ಮಹಿಳೆಯರ ಸುರಕ್ಷತೆಯನ್ನು ಹೆಚ್ಚಿಸುವುದು ಹಾಗೂ ತಡೆಗಟ್ಟುವ ಕ್ರಮಗಳು ಮತ್ತು ರಕ್ಷಣಾ ತಂತ್ರಗಳನ್ನು ಜಾರಿಗೆ ತರುವ ಉದ್ದೇಶದಿಂದ ಈ ' ಸಿಂಗಪ್ಪೆನ್ ' ವಿಶೇಷ ಕಾರ್ಯಪಡೆ ರಚನೆಗೆ ಅನುಮೋಧನೆ ನೀಡಲಾಗಿದೆ.
ಮೊದಲ ಹಂತವಾಗಿ, ಪೊಲೀಸ್ ಪ್ರಧಾನ ಕಚೇರಿಯಲ್ಲಿ ಈ ಕೆಳಗಿನ ಆಡಳಿತಾತ್ಮಕ ಹುದ್ದೆಗಳನ್ನು ಮಂಜೂರು ಮಾಡಲಾಗಿದೆ. ಈ ' ಸಿಂಗಪ್ಪೆನ್ ' ವಿಶೇಷ ಕಾರ್ಯಪಡೆ ಮುಖ್ಯಮಂತ್ರಿ ಅವರ ನೇರ ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ತಮಿಳುನಾಡಿನ 13ನೇ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ನಂತರ ತಮಿಳಗ ವೆಟ್ರಿ ಕಳಗಂ ಮುಖ್ಯಸ್ಥ ವಿಜಯ್ ಅಧಿಕಾರ ವಹಿಸಿಕೊಂಡ ಒಂದು ದಿನದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿ.ಜೋಸೆಫ್ ವಿಜಯ್ ಅವರು ತಮ್ಮ ಆಡಳಿತಾತ್ಮಕ ತಂಡಕ್ಕೆ ಹೊಸ ನೇಮಕಾತಿಗಳನ್ನು ಮಾಡಿದ್ದಾರೆ. ಸಿ.ಸೆಂಥಿಲ್ ಕುಮಾರ್ ಅವರನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಹಾಗೂ ಜಿ. ಲಕ್ಷ್ಮಿ ಪ್ರಿಯಾ ಅವರನ್ನು ಎರಡನೇ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಈ ಮೊದಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ಡಾ. ಪಿ. ಸೆಂಥಿಲ್ ಕುಮಾರ್ ಅವರನ್ನು ಇದೀಗ ಮುಖ್ಯಮಂತ್ರಿಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ. ಅದೇ ರೀತಿ ಆದಿ ದ್ರಾವಿಡರ ಮತ್ತು ಬುಡಕಟ್ಟು ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಾಗಿದ್ದ ಲಕ್ಷ್ಮಿ ಪ್ರಿಯಾ ಅವರನ್ನು ಸಿಎಂನ ಎರಡನೇ ಕಾರ್ಯದರ್ಶಿಯಾಗಿ ನೇಮಿಸಲಾಗಿದೆ.
ಸಿಎಂ ಸ್ಥಾನ ಅಲಂಕರಿಸಿದ ನಂತರ ಟಿವಿಕೆಗೆ ಪಕ್ಷದ ಸಂಸ್ಥಾಪಕರು ಆಗಿರುವ ವಿಜಯ್, ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳಂತೆ ಮೊದಲ ಹಂತದಲ್ಲೇ ಹಲವು ಕಡತಗಳಿಗೆ ಸಹಿ ಹಾಕಿದ್ದಾರೆ. ಗೃಹ ಬಳಕೆಗೆ 200 ಯೂನಿಟ್ ಉಚಿತ ವಿದ್ಯುತ್, ಮಹಿಳೆಯರ ಸುರಕ್ಷತೆಗೆ ವಿಶೇಷ ಪಡೆ ಸ್ಥಾಪನೆ ಹಾಗೂ ರಾಜ್ಯಾದ್ಯಂತ ಮಾದಕ ವಸ್ತು ಕಳ್ಳಸಾಗಣೆ ವಿರೋಧಿಘಟ್ಟಕಗಳನ್ನು ಪ್ರಾರಂಭಿಸುವಂತಹ ಪ್ರಮುಖ ಯೋಜನೆಗಳಿಗೆ ಅನುಮೋದನೆ ನೀಡಿದ್ದಾರೆ.
Also Read:
ಟ್ರಂಪ್ ಚೀನಾ ಪ್ರವಾಸ 2026: ಮೇ 13 ರಿಂದ 15 ರವರೆಗೆ ಮಹತ್ವದ ಅಧಿಕೃತ ಭೇಟಿ