belagavi news :
ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಚೀನಾಗೆ ಐತಿಹಾಸಿಕ ಭೇಟಿ: ಜಾಗತಿಕ ರಾಜಕೀಯದಲ್ಲಿ ಹೊಸ ತಿರುವು: ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ಅವರು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರ ಆಹ್ವಾನದ ಮೇರೆಗೆ ಮೇ 13 ರಿಂದ 15 ರವರೆಗೆ ಚೀನಾಗೆ ಅಧಿಕೃತ ಭೇಟಿ ನೀಡಲಿದ್ದಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ಸೋಮವಾರ ಪ್ರಕಟಿಸಿದೆ. ಈ ಭೇಟಿ ಸುಮಾರು 9 ವರ್ಷಗಳ ನಂತರ ಅಮೆರಿಕ ಅಧ್ಯಕ್ಷರಿಂದ ಚೀನಾಕ್ಕೆ ನಡೆಯುತ್ತಿರುವ ಮೊದಲ ಅಧಿಕೃತ ಭೇಟಿಯಾಗಿದ್ದು, ಜಾಗತಿಕ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹತ್ವದ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಅಮೆರಿಕ ಚೀನಾ ಸಂಬಂಧದಲ್ಲಿ ಹೊಸ ಅಧ್ಯಯನ: ಈ ಭೇಟಿ ಅಮೆರಿಕ ಮತ್ತು ಚೀನಾ ನಡುವಿನ ಸಂಬಂಧಗಳಲ್ಲಿ ಹೊಸ ತಿರುವು ತರಬಹುದು ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ದೀರ್ಘಕಾಲದಿಂದ ಮುಂದುವರೆದಿರುವ ಅಮೆರಿಕ-ಇಸ್ರೇಲ್-ಇರಾನ್ ಸಂಘರ್ಷ, ಜಾಗತಿಕ ಇಂಧನ ಬಿಕ್ಕಟ್ಟು ಹಾಗೂ ಹಾರ್ಮುಜ್ ಜಲಸಂಧಿಯ ಸ್ಥಾನದಲ್ಲಿ ಉಂಟಾದ ತೀವ್ರ ಉದ್ವಿಗ್ನತೆಗಳ ನಡುವೆ ಈ ಭೇಟಿ ನಡೆಯುತ್ತಿರುವುದು ಗಮನಾರ್ಹವಾಗಿದೆ.
ತೈಲ ಮತ್ತು ಜಾಗತಿಕ ಭದ್ರತೆ ಮುಖ್ಯ ಚರ್ಚಾ ವಿಷಯಗಳು: ಈ ಉನ್ನತ ಮಟ್ಟದ ಭೇಟಿ ಸಂದರ್ಭದಲ್ಲಿ ತೈವಾನ್ ವಿಷಯ, ಇಂಡೋ ಪೆಸಿಫಿಕ್ ಭದ್ರತೆ, ವ್ಯಾಪಾರ ನೀತಿಗಳು ಹಾಗೂ ಜಾಗತಿಕ ಸರಬರಾಜು ಸರಪಳಿ ಸಮಸ್ಯೆಗಳು ಪ್ರಮುಖ ಚರ್ಚಾ ವಿಷಯಗಳಾಗುವ ಸಾಧ್ಯತೆ ಇದೆ. ಅಮೆರಿಕ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧಗಳು ಇತ್ತೀಚಿನ ವರ್ಷಗಳಲ್ಲಿ ಹಲವು ತೀವ್ರತೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಈ ಸಭೆ ವಿಶ್ವದ ಗಮನ ಸೆಳೆದಿದೆ.
ಜಾಗತಿಕ ಆರ್ಥಿಕತೆ ಮೇಲೆ ಪರಿಣಾಮ ಸಾಧ್ಯತೆ: ವಿಶ್ವದ ಎರಡು ದೊಡ್ಡ ಆರ್ಥಿಕ ಶಕ್ತಿಗಳ ನಡುವಿನ ಈ ಮಾತುಕತೆಗಳು ಜಾಗತಿಕ ಮಾರುಕಟ್ಟೆ, ಇಂಧನ ಬೆಲೆಗಳು ಮತ್ತು ವ್ಯಾಪಾರ ನೀತಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶ್ಲೇಷಕರ ಪ್ರಕಾರ, ಈ ಭೇಟಿ ಯಶಸ್ವಿಯಾದರೆ, ಮುಂದಿನ ದಿನಗಳಲ್ಲಿ ಎರಡು ದೇಶಗಳ ನಡುವಿನ ಉದ್ವಿಗ್ನತೆ ಕಡಿಮೆಯಾಗುವ ನಿರೀಕ್ಷೆ ಇದೆ.
ಟ್ರಂಪ್ - ಕ್ಸಿ ಜಿನ್ ಪಿಂಗ್ ಭೇಟಿ: ಬೀಜಿಂಗ್ ನಲ್ಲಿ ಐತಿಹಾಸಿಕ ರಾಜತಾಂತ್ರಿಕ ಭೇಟಿ, ವ್ಯಾಪಾರ ಒಪ್ಪಂದದ ನಿರೀಕ್ಷೆ: ಅಮೇರಿಕಾದ ಪ್ರಧಾನ ಉಪತ್ರಿಕ ಕಾರ್ಯದರ್ಶಿ ಅನ್ನಾ ಕೆಲ್ಲಿ ಅವರು ಭಾನುವಾರ ಮಾತನಾಡಿ, ಅಮೆರಿಕ ಅಧ್ಯಕ್ಷರು ಡ್ರೋನಾಲ್ ಟ್ರಂಪ್ ಅವರ ಚೀನಾ ಭೇಟಿ"ಮಹಾನ್ ಸಾಂಕೇತಿಕ ಮಹತ್ವದ ಭೇಟಿ"ಎಂದು ಹೇಳಿದ್ದಾರೆ. ಅವರ ಪ್ರಕಾರ, ಅಧ್ಯಕ್ಷ ಟ್ರಂಪ್ ಬುಧವಾರ ಸಂಜೆ ಬೀಜಿಂಗ್ ಗೆ ಆಗಮಿಸಲಿದ್ದಾರೆ. ಈ ಅಧಿಕೃತ ಪ್ರವಾಸದ ವೇಳೆ ಟ್ರಂಪ್ ಅವರು ಕ್ಸಿ ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೊತೆಗೆ ಪ್ರಮುಖ ರಾಜತಾಂತ್ರಿಕ ಕಾರ್ಯಕ್ರಮಗಳ ಭಾಗವಾಗಿ ದೇವಾಲಯ ಭೇಟಿಗೂ ನಡೆಯಲಿದ್ದು, ನಂತರ ರಾಜ್ಯ ಔತಣ ಒಕ್ಕೂಟವನ್ನು ಆಯೋಜಿಸಲಾಗುತ್ತದೆ ಎಂದು ಹಾಂಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.
ಉನ್ನತ ಮಟ್ಟದ ರಾಜತಾಂತ್ರಿಕ ಕಾರ್ಯಕ್ರಮಗಳು: ಅಧಿಕೃತ ವೇಳಾಪಟ್ಟಿಯ ಪ್ರಕಾರ, ಅಭಯ್ ನಾಯಕರು ಚಹಾ ಕೂಟ ಮತ್ತು ಔತಣಕೂಟದಲ್ಲಿ ಮತ್ತೆ ಭೇಟಿಯಾಗಲಿದ್ದಾರೆ ಎಂದು ಅನ್ನಾ ಕೆಲ್ಲಿ ತಿಳಿಸಿದ್ದಾರೆ. ಈ ಬೇಟಿಗಳು ಅಮೆರಿಕ ಚೀನಾ ಸಂಬಂಧಗಳಲ್ಲಿ ಹೊಸ ಸಂವಹನದ ಹಂತವನ್ನು ಸೂಚಿಸುತ್ತವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ವ್ಯಾಪಾರ ಮಾತುಕತೆಗಳಿಗೂ ವೇದಿಕೆ: ಟ್ರಂಪ್ ಅವರ ಚೀನಾ ಬೇಟಿ ಮುನ್ನವೇ ಪ್ರಮುಖ ಆರ್ಥಿಕ ಚಟುವಟಿಕೆಗಳು ನಡೆಯಲಿವೆ. ಮೇ 12 ಮತ್ತು 13ರಂದು ಅಂತಿಮ ಸುತ್ತಿನ ವ್ಯಾಪಾರ ಮಾತುಕತೆಗಳಿಗಾಗಿ ಚೀನಾದ ಉಪ ಪ್ರಧಾನಿ ಹೇ ಲಿಪೆಂಗ್ ಅವರು ಅಮೆರಿಕಾದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್ ಅವರೊಂದಿಗೆ ದಕ್ಷಿಣ ಕೊರಿಯಾಕ್ಕೆ ಪ್ರವಾಸಿಸಲಿದ್ದಾರೆ ಎಂದು ಎರಡು ದೇಶಗಳು ಭಾನುವಾರ ಘೋಷಿಸಿದೆ. ಈ ಮಾತುಕತೆಗಳು ಎರಡು ಆರ್ಥಿಕ ಶಕ್ತಿಗಳ ನಡುವೆ ದೀರ್ಘಕಾಲದಿಂದ ಮುಂದುವರಿದಿರುವ ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಹಾಗೂ ಹೊಸ ವ್ಯಾಪಾರ ಒಪ್ಪಂದಕ್ಕೆ ದಾರಿ ಮಾಡಿಕೊಡುವ ನಿರೀಕ್ಷೆ ಇದೆ.
ಜಾಗತಿಕ ಆರ್ಥಿಕತೆಗೆ ಮಹತ್ವ: ಅಮೆರಿಕ ಮತ್ತು ಚೀನಾ ನಡುವಿನ ಈ ಉನ್ನತ ಮಟ್ಟದ ರಾಜ ತಾಂತ್ರಿಕ ಮತ್ತು ಆರ್ಥಿಕ ಸಂವಾದಗಳು ಜಾಗತಿಕ ಮಾರುಕಟ್ಟೆ, ಸರಬರಾಜು ಸರಪಳಿ ಮತ್ತು ಅಂತರಾಷ್ಟ್ರೀಯ ವ್ಯಾಪಾರ ನೀತಿಗಳ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಟ್ರಂಪ್ ಅವರ ಬೀಜಿಂಗ್ ಭೇಟಿ ವಿಶ್ವದ ಗಮನಿಸಲಿದೆ.
ಬುಸಾನ್ ಸಭೆ ನಂತರ ಅಮೆರಿಕ ಚೀನಾ ಹೊಸ ವ್ಯಾಪಾರ ಸಂವಾದ: ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನಿರೀಕ್ಷೆ: ದಕ್ಷಿಣ ಕೊರಿಯಾ ಬುಸಾನ್ ನಲ್ಲಿ ನಡೆದ ಉನ್ನತ ಮಟ್ಟದ ಸಭೆ ಹಾಗೂ ಹಿಂದಿನ ಫೋನ್ ಕರೆಗಳ ನಂತರ ಅಮೆರಿಕ ಮತ್ತು ಚೀನಾ ನಡುವಿನ ಆರ್ಥಿಕ ಹಾಗೂ ವ್ಯಾಪಾರ ಸಂಬಂಧಗಳಲ್ಲಿ ಹೊಸ ಚಲನೆ ಕಾಣಿಸಿಕೊಂಡಿದೆ. ಚೀನಾದ ವಾಣಿಜ್ಯ ಸಚಿವಾಲಯದ ಹೇಳಿಕೆಯ ಪ್ರಕಾರ, ಚೀನಾ ದೇಶ ಕ್ಸಿ ಜಿನ್ ಪಿಂಗ್ ಮತ್ತು ಅಮೆರಿಕ ಅಧ್ಯಕ್ಷರು ಡೊನಾಲ್ಡ್ ಟ್ರಂಪ್ ನಡುವಿನ ಮಾತುಕತೆಗಳಲ್ಲಿ ಪ್ರಮುಖ 9ಕ್ಕೆ ಬರಲಿದೆ.
ಆರ್ಥಿಕ ಮತ್ತು ವ್ಯಾಪಾರ ಸಮಸ್ಯೆಗಳ ಪರಿಹರಿಸುವ ಸಭೆಯಲ್ಲಿ ಮುಂದುವರೆದ ಚರ್ಚೆಗಳನ್ನು ನಡೆಸಲು ಒಪ್ಪಿಕೊಂಡಿವೆ. ಬುಸಾನ್ ಸಭೆ ಮತ್ತು ಹಿಂದಿನ ದೂರವಾಣಿ ಸಂಭಾಷಣೆಗಳು ಈ ಹೊಸ ರಾಜತಾಂತ್ರಿಕ ಮುಂದಾಳತ್ವಕ್ಕೆ ಆಧಾರವಾಗಿವೆ.
ದ್ವಿಪಕ್ಷಿಯ ಸಂಬಂಧಗಳಲ್ಲಿ ಹೊಸ ಹಂತ: ಈ ಬೆಳವಣಿಗೆ ಅಮೆರಿಕ ಚೀನಾ ಸಂಬಂಧಗಳಲ್ಲಿ ಸ್ಥಿರತೆ ತರಲು ಸಹಾಯಕವಾಗಬಹುದು ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ವ್ಯಾಪಾರ ಒತ್ತಡ, ಸುಂಕ ನೀತಿಗಳು ಮತ್ತು ಜಾಗತಿಕ ಸರಬರಾಜು ಸರಪಳಿ ಸಮಸ್ಯೆಗಳ ನಡುವೆ ಈ ಒಪ್ಪಂದಗಳು ಮಹತ್ವ ಪಡೆದಿವೆ. ಜಾಗತಿಕ ಆರ್ಥಿಕತೆಗೆ ಪ್ರಭಾವ. ವಿಶ್ವದ ಎರಡು ಅತಿ ದೊಡ್ಡ ಆರ್ಥಿಕ ಶಕ್ತಿಗಳಾದ ಅಮೆರಿಕ ಮತ್ತು ಚೀನಾ ನಡುವಿನ ಈ ಸಂವಾದಗಳು ಜಾಗತಿಕ ಮಾರುಕಟ್ಟೆ, ಹೂಡಿಕೆ ಪರಿಸರ ಮತ್ತು ವ್ಯಾಪಾರ ನೀತಿಗಳ ಮೇಲೆ ನೇರ ಪರಿಣಾಮ ಬೀರುವ ಸಾಧ್ಯತೆ ಇದೆ. ವಿಶೇಷವಾಗಿ ತಂತ್ರಜ್ಞಾನ, ಇಂಧನ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಹೊಸ ಸಹಕಾರದ ಅವಕಾಶಗಳು ಮೂಡುವ ನಿರೀಕ್ಷೆ ಇದೆ.
Also Read:
ಹೈದರಾಬಾದ್ ನಲ್ಲಿ ದುರಂತ: ಔಟರ್ ರಿಂಗ್ ರೋಡ್ ಅಪಘಾತದಲ್ಲಿ ನಟ ಭರತ್ ಕಾಂತ್ ಸಾವು