<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Breaking News

ಬೆಂಗಳೂರು - ಮಂಗಳೂರು ವಂದೇ ಭಾರತ್ ಗೆ ಕೌಂಟ್ ಡೌನ್ : ಜೂನ್ 3ರಂದು ಟ್ರಯಲ್ ರನ್

ಬೆಂಗಳೂರು - ಮಂಗಳೂರು ವಂದೇ ಭಾರತ್ ಗೆ ಕೌಂಟ್ ಡೌನ್ : ಜೂನ್ 3ರಂದು ಟ್ರಯಲ್ ರನ್
Summary: Travel between Bengaluru and Mangalore will be faster. The much-awaited Vande Bharat Express train is expected to reach Mangaluru Central Station from "YeshvantPur Railway Station" in about 8 hours and 40 minutes.

belagavi news :

ಕರಾವಳಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರು ನಡುವಿನ ವೇಗದ ರೈಲು ಸಂಪರ್ಕದ ಬಹುಕಾಲದ ಕನಸು ನನಸಾಗುವ ಕ್ಷಣ ಸಮೀಪಿಸಿದೆ. ಬಹು ನಿರೀಕ್ಷಿತ vande Bharat Express ರೈಲು ಜೂನ್ ೩ರಂದು ಪ್ರಾಯೋಗಿಕ ಸಂಚಾರ ನಡೆಸಲಿದ್ದು,ಈ ಬೆಳವಣಿಗೆ ಕರಾವಳಿ ಭಾಗದ ಪ್ರಯಾಣಿಕರಲ್ಲಿ ಹೊಸ ನಿರೀಕ್ಷೆ ಮೂಡಿಸಿದೆ.

ರೈಲು ಇಲಾಖೆಯ ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ಎಂಟು ಭೋಗಿಗಳ ವಂದೇ ಭಾರತ ರೈಲು ಬೆಳಿಗ್ಗೆ 6.5ಕ್ಕೆ " yeshvantpur junction Railway station" ನಿಂದ ಹೊರಟು ಮಧ್ಯಾಹ್ನ 2.40 ಕ್ಕೆ mangalore central railway station ತಲುಪಿದೆ. ಸುಮಾರು 8 ಗಂಟೆ 40 ನಿಮಿಷಗಳ ಪಯಣವು ಮಾರ್ಗದ ವೇಗ, ಸುರಕ್ಷತೆ, ಕಾರ್ಯಕ್ಷಮತೆ ಹಾಗೂ ತಾಂತ್ರಿಕ ಸಿದ್ಧತೆಯ ಮೌಲ್ಯಮಾಪನಕ್ಕೆ ಪ್ರಮುಖವಾಗಲಿದೆ.

ಟ್ರಯಲ್ ರನ್ ವೇಳೆ ರೈಲು ಬೆಳಿಗ್ಗೆ 9.00ಕ್ಕೆ hassan ತಲುಪಿ 9.10ಕ್ಕೆ ಹೊರಡಲಿದೆ. ಬಳಿಕ 9:55 ಕ್ಕೆ ಸಕಲೇಶಪುರ ತಲುಪಿ 10.00 ಕ್ಕೆ ಪ್ರಯಾಣ ಮುಂದುವರಿಸಲಿದೆ. ಮಧ್ಯಾಹ್ನ 12:30ಕ್ಕೆ subrahamanya roda railway station ತಲುಪುವ ರೈಲು, ಐದು ನಿಮಿಷಗಳ ಬಳಿಕ 12:35 ಕ್ಕೆ ಅಲ್ಲಿಂದ ಹೊರಡಲಿದೆ. ನಂತರ ಅಪರಾಹ್ನ 2.05ಕ್ಕೆ padil ತಲುಪಿ, 2.40ಕ್ಕೆ ಮಂಗಳೂರು ಸೆಂಟ್ರಲ್ ನಿಲ್ದಾಣ ಸೇರುವ ನಿರೀಕ್ಷೆ ಇದೆ.

Sponsored

ಈ ಯಶಸ್ವಿ ಪ್ರಾಯೋಗಿಕ ಸಂಚಾರದ ಬಳಿಕ ಬೆಂಗಳೂರು-ಮಂಗಳೂರು ವಂದೇ ಭಾರತ್ ಟ್ರಯಲ್ ರನ್: ಹಿಂದಿರುವ ವೇಳಾಪಟ್ಟಿಯು ಪ್ರಕಟ

ಪ್ರಾಯೋಗಿಕ ಸಂಚಾರದ ಬಳಿಕ ವಂದೇ ಭಾರತ್ ರೈಲು ಅದೇ ದಿನ ಮಂಗಳೂರಿನಿಂದ ಬೆಂಗಳೂರಿಗೆ ಹಿಂದಿರುಗಲಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ, ರೈಲು ಅಪರಾಹ್ನ 2.45ಕ್ಕೆ " mangalore central railway station"ದಿಂದ ಹೊರಟು 3.10ಕ್ಕೆ padil, 3.50ಕ್ಕೆ subrahmanya road railway station ತಲುಪಲಿ ದೆ. ಅಲ್ಲಿಂದ 3.52 ಕ್ಕೆ ಪ್ರಯಾಣ ಮುಂದುವರೆಸಿ ಸಂಜೆ 4:30ಕ್ಕೆ sakaleshpur, ರಾತ್ರಿ 7:20ಕ್ಕೆ hassan ತಲುಪಲಿದೆ. ಹಾಸನದಿಂದ 7:30ಕ್ಕೆ ಹೊರಡುವ ರೈಲು ರಾತ್ರಿ 11:00 ಗಂಟೆಗೆ yashavantapur junction railway station ತಲುಪುವ ನಿರೀಕ್ಷೆಯಿದೆ.

ದೇಶದ ವಿವಿಧ ಭಾಗಗಳಲ್ಲಿ vande Bharat express ರೈಲುಗಳು ಯಶಸ್ವಿಯಾಗಿ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು-ಬೆಂಗಳೂರು ನಡುವೆಯೂ ಈ ಆಧುನಿಕ ರೈಲು ಸೇವೆ ಆರಂಭಿಸಬೇಕೆಂಬ ಬೇಡಿಕೆ ಹಲವು ವರ್ಷಗಳಿಂದ ಕೇಳಿ ಬರುತ್ತಿತ್ತು. ವಿಶೇಷವಾಗಿ ಈ ಮಾರ್ಗದ ಸಂಪೂರ್ಣ ವಿದ್ಯುದ್ದೀಕರಣ ಪೂರ್ಣಗೊಂಡ ಬಳಿಕ ವಂದೇ ಭಾರತ ಸಂಚಾರದ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದ್ದು, ಇದೀಗ ಟ್ರಯಲ್ ರನ್ ಘೋಷಣೆಯೊಂದಿಗೆ ಈ ಕನಸು ಸಾಕಾರವಾಗುವ ಹಂತಕ್ಕೆ ಬಂದಿದೆ.

ವಂದೇ ಭಾರತ್ ಸೇವೆ ಆರಂಭವಾದರೆ ಕರಾವಳಿ ಮತ್ತು ರಾಜ್ಯ ರಾಜಧಾನಿ ನಡುವಿನ ಪ್ರಯಾಣದ ಅವಧಿ ಕಡಿಮೆಯಾಗುವುದರ ಜೊತೆಗೆ, ಉದ್ಯೋಗ, ಶಿಕ್ಷಣ, ಪ್ರವಾಸೋದ್ಯಮ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಹೊಸ ಉತ್ತೇಜನ ದೊರೆಯುವ ನಿರೀಕ್ಷೆ ಇದೆ. ಪ್ರಯಾಣಿಕರಿಗೆ ವೇಗ, ಆರಾಮದಾಯಕ ಸೌಲಭ್ಯಗಳು ಮತ್ತು ಆಧುನಿಕ ರೈಲು ಅನುಭವವನ್ನು ಈ ಸೇವೆ ಒದಗಿಸಲಿದೆ.

Sponsored

ರೈಲ್ವೆ ಸಚಿವ ಅಶ್ವಿನ್ ವೈಷ್ಣವ್, ಕೇಂದ್ರ ರೈಲ್ವೆ ಸಹಾಯಕ ಸಚಿವ ವಿ ಸೋಮಣ್ಣ ಹಾಗೂ ಕ್ಯಾ.ಬ್ರಿಜೆಶ್ ಚೌಟ್ ಅವರು ಈ ಮಾರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ಆರಂಭಿಸುವ ಕುರಿತು ಹಿಂದೆ ಹಲವು ಬಾರಿ ಆಶದಾಯಕ ಹೇಳಿಕೆಗಳನ್ನು ನೀಡಿದ್ದರು. ಇದೀಗ ಪ್ರಾಯೋಗಿಕ ಸಂಚಾರ ಘೋಷಣೆಯೊಂದಿಗೆ ಆ ಕನಸು ಸಾಕಾರಗೊಳ್ಳುವ ಹಂತಕ್ಕೆ ಬಂದಿದೆ.

ಸುರಕ್ಷಿತ ಪರೀಕ್ಷೆಗೆ ಮಹತ್ವದ ಟ್ರಯಲ್ ರನ್:

ರೈಲ್ವೆ ಅಧಿಕಾರಿಗಳ ಪ್ರಕಾರ, ಟ್ರಯಲ್ ರನ್ ವೇಳೆ ಹಳಿ ಸಾಮರ್ಥ್ಯ, ವೇಗ ನಿಯಂತ್ರಣ, ಸುರಂಗ ಮಾರ್ಗಗಳ ಕಾರ್ಯಕ್ಷಮತೆ ಹಾಗೂ ಘಾಟ್ ವಿಭಾಗದಲ್ಲಿನ ಸುರಕ್ಷಿತ ಮಾನದಂಡಗಳನ್ನು ಸಮಗ್ರವಾಗಿ ಪರಿಶೀಲಿಸಲಾಗುತ್ತದೆ. ವಿಶೇಷವಾಗಿ ಪಶ್ಚಿಮ ಘಟ್ಟದ ಸವಾಲಿನ ಮಾರ್ಗದಲ್ಲಿ ರೈಲಿನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಮೌಲ್ಯಮಾಪನ ಮಾಡುವುದೇ ಈ ಪರೀಕ್ಷೆಯ ಪ್ರಮುಖ ಉದ್ದೇಶವಾಗಿದೆ.

ಈ ಪ್ರಾಯೋಗಿಕ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡು ಅಗತ್ಯ ಸುರಕ್ಷತಾ ಮಾನದಂಡಗಳನ್ನು ಪೂರೈಸಿದರೆ, vande Bharat express ರೈಲು ಸೇವೆಯನ್ನು ಬೆಂಗಳೂರು ಮತ್ತು ಮಂಗಳೂರು ನಡುವೆ ಶೀಘ್ರದಲ್ಲೇ ಅಧಿಕೃತವಾಗಿ ಆರಂಭಿಸುವ ಸಾಧ್ಯತೆ ಇದೆ. ಸೇವೆಯ ಅಂತಿಮ ವೇಳಾಪಟ್ಟಿ, ನಿಲ್ದಾಣಗಳ ಪಟ್ಟಿ ಹಾಗೂ ಪ್ರಮಾಣದ ವಿವರಗಳನ್ನು ನಂತರ ರೈಲ್ವೆ ಇಲಾಖೆ ಪ್ರಕಟಿಸಲಿದೆ.

Sponsored

ಕರಾವಳಿ ಕರ್ನಾಟಕ ಮತ್ತು ಬೆಂಗಳೂರು ನಡುವಿನ ವೇಗದ ಸಂಪರ್ಕಕ್ಕೆ ಹೊಸ ಅಧ್ಯಯ ಬರೆಯಲಿರುವ ಈ ಸೇವೆ, ಪ್ರಯಾಣಿಕರ ಸಮಯ ಉಳಿತಾಯಕ್ಕೆ ನೆರವಾಗುವುದರ ಜೊತೆಗೆ ವ್ಯಾಪಾರ, ಶಿಕ್ಷಣ, ಉದ್ಯೋಗ ಹಾಗೂ ಪ್ರವಾಸೋದ್ಯಮ ಕ್ಷೇತ್ರಗಳ ಬೆಳವಣಿಗೆಗೂ ಮಹತ್ತರ ಉತ್ತೇಜನ ನೀಡುವ ನಿರೀಕ್ಷೆ ಮೂಡಿದೆ. ಆಧುನಿಕ ಸೌಲಭ್ಯಗಳು ಮತ್ತು ವೇಗದ ಪ್ರಯಾಣದ ಅನುಭವದೊಂದಿಗೆ ವಂದೇ ಭಾರತ ಸೇವೆ ರಾಜ್ಯದ ಪ್ರಮುಖ ರೈಲು ಸಂಪರ್ಕಗಳಲ್ಲಿ ಒಂದಾಗಿ ಹೊರಹೊಮ್ಮುವ ಸಾಧ್ಯತೆ ಇದೆ.

Also Read:

ನೇರಳೆ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಮುಖ್ಯ ಸುದ್ದಿ - BMRCL ಅಧಿಕೃತ ಪ್ರಕಟಣೆ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online