<?= $pageTitle ?>
Logo
ಮುಖಪುಟ ಓದುವುದು ಕೇಳು
Politics

ಡಿಸಿಸಿ ಬ್ಯಾಂಕ್ ರಾಜಕೀಯ ಗಲಾಟೆ

ಡಿಸಿಸಿ ಬ್ಯಾಂಕ್ ರಾಜಕೀಯ ಗಲಾಟೆ
Summary: ಡಿಸಿಸಿ ಬ್ಯಾಂಕ್ ಕುರಿತು ಅಪಪ್ರಚಾರ ಮಾಡುವವರಿಗೆ ಕಾನೂನು ನೋಟಿಸ್ ನೀಡಲಾಗುವುದು ಎಂದು ಬ್ಯಾಂಕ್ನ ಅಧ್ಯಕ್ಷ ಜೊಲ್ಲೆಯವರು ಎಚ್ಚರಿಕೆಯನ್ನು ನೀಡಿದ್ದಾರೆ.
Belagavi news:
ಬ್ಯಾಂಕ್ ಕಾರ್ಯಾಚರಣೆ ಮತ್ತು ಆಡಳಿತದ ಬಗ್ಗೆ ತಪ್ಪು ಮಾಹಿತಿ ಹರಡುತ್ತಿರುವ ಆರೋಪದ ಹಿನ್ನೆಲೆಯಲ್ಲಿ ಕತ್ತಿ ಹಾಗೂ ಕಡಾಡಿ ವಿರುದ್ಧ ಜೊಲ್ಲೆ ತೀವ್ರವಾಗಿ ನಡೆಸಿದ್ದಾರೆ.

ಡಿಸಿಸಿ ಬ್ಯಾಂಕ್ ಗೌರವಕ್ಕೆ ಧಕ್ಕೆ ತರಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿರುವ ಅಧ್ಯಕ್ಷ ಜೊಲ್ಲೆ ಅವರು,ಅಪಪ್ರಚಾರಕ್ಕೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ.ಹಾಗೆ ಈ ಬೆಳವಣಿಗೆ ರಾಜಕೀಯ ಹಾಗೂ ಬ್ಯಾಂಕಿಂಗ್ ವಲಯದಲ್ಲಿ ಚರ್ಚೆಗೆ ಕಾರಣವಾಗಿದ್ದು,ಮುಂದಿನ ದಿನಗಳಲ್ಲಿ ಈ ವಿವಾದ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿಸಿದೆ.

ಡಿಸಿಸಿ ಬ್ಯಾಂಕ್ ಆರೋಪದ ಬಗ್ಗೆ ತಮಗೆ ಅಧಿಕಾರ ತಪ್ಪಿದೆ ಎಂಬ ಕಾರಣಕ್ಕೆ ಬಿಸಿಸಿ ಬ್ಯಾಂಕಿಗೆ ಬಡ್ಡಿ ರೂಪದಲ್ಲಿ ಹಣ ಬರಬಾರದೆಂಬ ದುರುದ್ದೇಶದಿಂದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಹಾಲಿ ಅಧ್ಯಕ್ಷ ಅಣ್ಣ ಸಾಹೇಬ್ ಜೊಲ್ಲೆ ಆರೋಪಿಸಿದ್ದಾರೆ.ಅಂತವರ ಮಾತಿಗೆ ಜಿಲ್ಲೆಯ ಜನರು ಕಿವಿ ಕೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ.ಹಾಗೆ ಈ ಮೂಲಕ ಮಾಜಿ ಅಧ್ಯಕ್ಷ ರಮೇಶ್ ಕತ್ತಿ ವಿರುದ್ಧ ಜೊಲ್ಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು,ಬ್ಯಾಂಕಿಂಗ್ ಠೇವಣಿದಾರರು ಹಾಗೂ ಸಾಲಗಾರರು ಸೇರಿದಂತೆ ಎಲ್ಲರ ಹಿತ ಕಾಪಾಡಲು ಆಡಳಿತ ಬದ್ಧವಾಗಿದೆ ಎಂದು ತಿಳಿಸಿದರು.ಬ್ಯಾಂಕಿನ ಕಾರ್ಯಾಚರಣೆ ಕುರಿತು ಸುಳ್ಳು ಮಾಹಿತಿ ನೀಡಲಾಗುತ್ತಿದ್ದು,ಇದರಿಂದ ಬ್ಯಾಂಕಿನ ಪ್ರತಿಷ್ಠೆಗೆ ಧಕ್ಕೆ ತರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು. ಅನ್ಯಗತ್ಯವಾಗಿ ತಪ್ಪು ಮಾಹಿತಿ ನೀಡಿ ಅಪಪ್ರಚಾರ ಮಾಡುತ್ತಿರುವ ಡಾ. ಮಹಾಂತೇಶ್ ಕಡಾಡಿ ಅವರಿಗೆ ಈಗಾಗಲೇ ನೋಟಿಸ್ ನೀಡಲಾಗಿದ್ದು,ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.ಅಧ್ಯಕ್ಷ ರಮೇಶ್ ಕಟ್ಟಿ ಅವರಿಗೂ ನೋಟಿಸ್ ನೀಡಲಾಗುವುದು ಎಂದು ಜೊಲ್ಲೆ ಎಚ್ಚರಿಕೆಯನ್ನು ನೀಡಿದ್ದಾರೆ.

ಇದರ ಜೊತೆಗೆ ಜಿಲ್ಲೆಯ 4.75 ಲಕ್ಷ ರೈತರಿಗೆ ,ಶೂನ್ಯ ಬಡ್ಡಿ ದರದಲ್ಲಿ 3,700 ಕೋಟಿ ರೂ.ವರೆಗೆ ಸಾಲ ವಿತರಣೆ ಮಾಡುವಮೂಲಕ ರಾಜ್ಯದಲ್ಲಿಯೇ ರೈತರಿಗೆ ಅತಿ ಹೆಚ್ಚು ಸಾಲ ನೀಡದ ಹೆಗ್ಗಳಿಗೆ ಬಿಡಿಸಿಸಿ ಬ್ಯಾಂಕ್ ಹೊಂದಿದೆ. ಯಾರು ಎಷ್ಟೇ ಅಪಪ್ರಚಾರ ಮಾಡಿದರು,ಬ್ಯಾಂಕ್ ಠೇವಣಿ ಹೆಚ್ಚುತ್ತಲೇ ಇದೆ.ಮೂರು ತಿಂಗಳಲ್ಲಿ ಠೇವಣಿಯ ಮೊತ್ತ 500 ಕೋಟಿ ರೂ. ಹೆಚ್ಚಾಗಿದೆ. ಕಳೆದ ವರ್ಷ ನವೆಂಬರ್ ನಲ್ಲಿ ಹೊಸ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದ ಬಳಿಕ ಒಟ್ಟು ಠೇವಣಿ ಮೊತ್ತ 5,575 ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ಸಮರ್ಥಿಸಿದರು.

ಡಿಸಿಸಿ ಬ್ಯಾಂಕ್ ಬಗ್ಗೆ ಮಾತನಾಡುತ್ತಿರುವಾಗ ಭದ್ರತೆ ಆದರಿಸಿ ನಾವು ವಾಣಿಜ್ಯ ಸಾಲ ವಿತರಿಸುತಿದ್ದೇವೆ ಎಂಬ ಹಲವು ಮಾತುಗಳು ಕೇಳಿ ಬಂದವು.ಹಾಗೆ ಗುತ್ತಿಗೆದಾರ ಜಯಶೀಲ ಶೆಟ್ಟಿ ಅವರಿಗೂ ಭದ್ರತೆ ಆಧರಿಸಿ 120 ಕೋಟಿ ಸಾಲ ವಿತರಿಸಿದ್ದೇವೆ.ಇದಕ್ಕಾಗಿ ಬೆಳಗಾವಿ ನಗರದಲ್ಲಿನ 4 ಎಕರೆ ಜಾಗದ ಪತ್ರ ಹಾಗೂ ವಿವಿಧ ಯೋಜನೆಗಳಲ್ಲಿ ಕೈಗೊಂಡ ಕಾಮಗಾರಿಗಳ 700 ಕೋಟಿ ರೂ.ಸರ್ಕಾರದಿಂದ ತಮಗೆ ಬರಬೇಕಿರುವ ಬಗ್ಗೆ ದಾಖಲೆಗಳನ್ನು ಅವರು ಭದ್ರತೆ ರೂಪದಲ್ಲಿ ಕೊಟ್ಟಿದ್ದಾರೆ. ತಾವು ಪಡೆದ ಸಾಲಕ್ಕೆ ಇವರಿಗೆ ಬಡ್ಡಿ ರೂಪದಲ್ಲಿ ಎಂಟು ಕೋಟಿ ಪಾವತಿಸಿದ್ದಾರೆ.ಮಾರ್ಚ್ ನಲ್ಲಿ ಸಾಲದ ಮೊತ್ತ ಮರುಪಾವತಿಸಿರುವುದಾಗಿ ತಿಳಿಸಿದ್ದಾರೆ ಎಂದು ಸ್ಪಷ್ಟೀಕರಣ ಪಡಿಸಿದ್ದಾರೆ.

ಈ ಬ್ಯಾಂಕಿನ ಮೂಲಕ ರೈತರಿಗೆ ಜಮೀನು ಆಧರಿಸಿ ವಿತರಿಸುವ ಸಾಲದ ಮೊತ್ತ ಹೆಚ್ಚಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಬೇಕು ಎಂದು ಪ್ರಶ್ನೆ ಒಂದಕ್ಕೆ ಜೊಲ್ಲೆ ಉತ್ತರವನ್ನು ನೀಡಿದ್ದಾರೆ.

ಹಾಗೆ ಡಿಸಿಸಿ ಬ್ಯಾಂಕ್ ಬಗ್ಗೆ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಈ ರೀತಿಯಾಗಿ ಮಾತನಾಡಿದರು,ಬಿಡಿಸಿಸಿ ಬ್ಯಾಂಕಿನ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಗೋಕಾಕದ ಡಾಕ್ಟರ್ ಮಹಾಂತೇಶ್ ಕಡಾಡಿ ಅವರಿಗೆ ಕಾನೂನು ಪ್ರಕಾರ ನೋಟಿಸ್ ನೀಡಿದ್ದೇವೆ.ಅವರು ತಮ್ಮ ಆರೋಪ ಹಿಂಪಡೆದು ಕ್ಷಮೆ ಕೇಳದಿದ್ದರೆ ಮಾನ ನಷ್ಟ ಮೋಕ್ಷದಮ್ಮೆ ದಾಖಲಿಸಲಾಗುವುದು.ನೌಕರರ ನೇಮಕಾತಿ ಬಗ್ಗೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾಪ ಸಲ್ಲಿಸಲಾಗಿದೆ.ಒಪ್ಪಿಗೆ ಸಿಕ್ಕ ತಕ್ಷಣವೇ ನೇಮಕಾತಿ ನಡೆಸಲಾಗುವುದು ಎಂದು ಬಾಲಚಂದ್ರ ಜಾರಕಿಹೊಳಿಯವರು ಮಾತನಾಡಿದ್ದಾರೆ.

ಇದರ ಜೊತೆಗೆ ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಆಗಿರುವಂತಹ ರಾಜು ಕಾಗೆ,ಹಾಗೂ ನಿರ್ದೇಶಕರಾದ ಮಹಾಂತೇಶ್ ದೊಡ್ಡ ಗೌಡರ್,ಅರವಿಂದ್ ಪಾಟೀಲ್, ನಾನಾಸಾಹೇಬ್ ಪಾಟೀಲ್,ಚನ್ನರಾಜ ಹಟ್ಟಿಹೊಳಿ,ರಾಹುಲ್ ಜಾರಕಿಹೊಳಿ ಸೇರಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಬಿಡಿಸಿಸಿ ಬ್ಯಾಂಕಿನ ಸಾಲದ ಬಗ್ಗೆ ಮಾತನಾಡುವಾಗ, ಖಾರಿಫ್ ಋತುವಿನಲ್ಲಿ ಠೇವಣಿದಾರರು ಮತ್ತು ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಬೇಕಾದ ಅಗತ್ಯ ಪೂರೈಸಿಕೊಳ್ಳಲು ಪ್ರತಿ ವರ್ಷವೂ ಠೇವಣಿ ಹಿಂಪಡೆಯುವುದು ಹಾಗೂ ಕೃಷಿ ಉತ್ಪನ್ನ ಮಾರಾಟವಾದ ನಂತರ ಮತ್ತೆ ಠೇವ ನೀಡುವುದು ಸಾಮಾನ್ಯವಾಗಿದೆ ಇದನ್ನೇ ಆಧರಿಸಿ ವಿರೋಧಿಗಳು ಮಾಡುತ್ತಿರುವ ಅಪಪ್ರಚಾರಕ್ಕೆ ಯಾರು ಕಿವಿ ಕೊಡಬಾರದು ಎಂದು ತಿಳಿಸಲಾಗಿದೆ.


ಇನ್ನಷ್ಟು ಓದಿರಿ:
ಹೆರಿಗೆಯ ಬಳಿಕ ಕೂದಲು ಉದುರುವಿಕೆ ಏಕೆ? ತಡೆಯುವುದು ಹೇಗೆ? ತಜ್ಞರ ಮಾಹಿತಿ
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online