<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Politics

ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರರವರಿಗೂ ಕೂಡ ಅವಕಾಶ ನೀಡಬೇಕು : ಇಕ್ಬಾಲ್ ಹುಸೇನ್

ಸಿಎಂ ಸ್ಥಾನಕ್ಕೆ ಡಿ.ಕೆ.ಶಿವಕುಮಾರರವರಿಗೂ ಕೂಡ ಅವಕಾಶ ನೀಡಬೇಕು : ಇಕ್ಬಾಲ್ ಹುಸೇನ್
Summary: ಕರ್ನಾಟಕ ರಾಜಕೀಯದಲ್ಲಿ ಮತ್ತು ನಾಯಕತ್ವ ಚರ್ಚೆ ಜೋರಾಗಿದ್ದು, ಸಿಎಂ ಸಿದ್ದರಾಮಯ್ಯ ಅವರ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೂ ಕೂಡ ಅವಕಾಶ ಮಾಡಿಕೊಡಬೇಕು ಎಂದು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆಯನ್ನು ನೀಡಿದ್ದಾರೆ.

Belagavi news:

ಡಿ.ಕೆ.ಶಿವಕುಮಾರ್ ಅವರು ಕನಿಷ್ಠ ಒಂದು ಬಾರಿ ಮುಖ್ಯಮಂತ್ರಿಯಾಗಬೇಕು ಅನ್ನೋದಷ್ಟೇ ನಮ್ಮ ಉದ್ದೇಶ ಎಂದು ಶಾಸಕ ಇಕ್ಬಾಲ್ ಹುಸ್ಸೈನ್ ಸ್ಪಷ್ಟಪಡಿಸಿದ್ದಾರೆ.ಜೊತೆಗೆ ಈ ಹೇಳಿಕೆ ಕರ್ನಾಟಕ ಕಾಂಗ್ರೆಸ್ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ ಮತ್ತು ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಮಧ್ಯೆ ಡಿಕೆ ಶಿವಕುಮಾರ್ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂಬ ಅಭಿಪ್ರಾಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

ಈ ಅವಧಿಯಲ್ಲಿ ಡಿಕೆಶಿ ಅವರು ಮುಖ್ಯಮಂತ್ರಿ ಆಗಬೇಕು ಎಂದು ಹುಸೇನ್ ಮನವಿಯನ್ನು ಮಾಡಿದ್ದಾರೆ. ಇದರ ಜೊತೆಗೆ ನಗರದಲ್ಲಿದ್ದು ಮಾಧ್ಯಮದವರು ಡಿ ದೇವರಾಜ್ ಅರಸು ಬಳಿಕ ದಲಿತರ ಪರವಾಗಿ ಶೋಷಿತರ ಪರವಾಗಿ ಸಿದ್ದರಾಮಯ್ಯ ಅಳಿಲು ಸೇವೆ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ಡಿಕೆ ಶಿವಕುಮಾರ್ ಅವರಿಗೂ ಕೂಡ ಅವಕಾಶ ಮಾಡಿಕೊಡಬೇಕು ಎಂದು ಮನವಿಯನ್ನು ಮಾಡಿಕೊಂಡಿದ್ದಾರೆ.

ಹಾಗೆ ಈ ಅವಧಿಯಲ್ಲಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಬೇಕು ಎಂದು ಕಟ್ಟುನಿಟ್ಟಾಗಿ ಹೇಳಿದ್ದಾರೆ.ಎರಡುವರೆ ವರ್ಷ ಆದಮೇಲೆ ಸಾಕಷ್ಟು ಶಾಸಕರು ಒಬ್ಬ ನಿಷ್ಠಾವಂತ ಪಕ್ಷ ನಿಷ್ಠ ವ್ಯಕ್ತಿ ಬರಬೇಕು ಅಂತ ಡಿಕೆ ಶಿವಕುಮಾರ್ ಅವರ ಪರವಾಗಿ ಮಾತನಾಡುತ್ತಿದ್ದೇವೆ ಎಂದು ಸಹ ಹೇಳಿದರು.80 90 ಶಾಸಕರು ಡಿಕೆಶಿ ಅವರಿಗೆ ಅವಕಾಶ ಕೊಡಬೇಕು ಎಂದು ಆಶಯ ಪಡುತ್ತಿದ್ದೇವೆ.ಸಾಮಾಜಿಕ ನ್ಯಾಯ ಎಂದು ಹೇಳುತ್ತೀರಿ,ಸಾಮಾಜಿಕ ನ್ಯಾಯದಂತೆ ನಡೆದುಕೊಳ್ಳುವುದು ಬಹಳ ಮುಖ್ಯ ಎಂದು ಅರ್ಥೈಸಿದ್ದಾರೆ.

Sponsored

ತಪ್ಪಾಗಿ ನಡೆದುಕೊಳ್ಳುವುದು ಸರಿಯಲ್ಲ:

ನಮ್ಮೆಲ್ಲರಿಗೂ ಗೊತ್ತಿರುವ ಂಎಲ್ಸಿ ಯತೀಂದ್ರ ಸಿದ್ದರಾಮಯ್ಯ ಅವರು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿ,ನಮ್ಮದು ಶಿಸ್ತಿನ ಪಕ್ಷ ತಂದೆ ಪರವಾಗಿ ಈ ರೀತಿ ಪದೇಪದೇ ಮಾತನಾಡುವುದು,ಅಸಹ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ.ಬೇರೆ ನಾಯಕರು ಮಾತನಾಡಿದರೆ ಒಂದು ಬೆಲೆ ಇರುತ್ತದೆ,ಅಪ್ಪನಿಗೆ ಮಗನ ಮೇಲೆ ಮಗನಿಗೆ ಅಪ್ಪನ ಮೇಲೆ ಪ್ರೀತಿ ಇದ್ದೆ ಇರುತ್ತದೆ.ಎಂದು ಮನವಿಯನ್ನು ಮಾಡುತ್ತೇನೆ ಈ ರೀತಿಯಾಗಿ ಮಾತನಾಡಿ ನಮ್ಮನ್ನು ಪ್ರಚೋದಿಸಬೇಡಿ ಎಂದು ಎಚ್ಚರಿಕೆ ಹಾಕಿದರು.

ತದನಂತರ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಸ್ಪರ್ಧೆ ಮಾಡಲು ತಯಾರಿ ವಿಚಾರವಾಗಿ ಮಾತನಾಡಿ,ಇದು ಪ್ರಜಾಪ್ರಭುತ್ವ ರಾಮನಗರ ಯಾರಪ್ಪಂದ ಸ್ವತ್ತು ಅಲ್ಲ,ಯಾರು ಬೇಕಿದ್ರೂ ರಾಮನಗರದಲ್ಲಿ ಚುನಾವಣೆ ಸ್ಪರ್ಧೆ ಮಾಡಬಹುದು.ಸಾಕಷ್ಟು ಜನ ನಾಯಕರು ರಾಮನಗರದಲ್ಲಿ ನಿಂತಿದ್ದಾರೆ.ತಾಲೂಕಿನ ಮಗ ನಾನು,ಅಲ್ಲಿ ಹುಟ್ಟಿದವನು ನಾನು.ಕುಮಾರಸ್ವಾಮಿ ಯನ್ನು ಚುನಾವಣೆಗೆ ನಿಲ್ಲಿಸಬೇಡಿ ಅಂತ ಹೇಳಲು ಸಾಧ್ಯವಾಗುತ್ತಾ? ಅವರು ಎಲ್ಲಿ ಬೇಕಿದ್ರೂ ನಿಲ್ಲುತ್ತಾರೆ. ಶಿಸ್ತು ಇಲ್ಲದೆ ಇರೋದು ಎಲ್ಲಿ ಬೇಕಿದ್ರೂ ನಿಲ್ಲುತ್ತಾರೆ ಎಂದು ಟಾಂಗ್ ಕೊಡುವ ಮೂಲಕ ಉತ್ತರಿಸಿದರು.

ಎಮ್ ಎಲ್ ಸಿ ಯತೀಂದ್ರಗೆ ನೋಟಿಸ್ ನೀಡದೆ ಇರುವ ವಿಚಾರವಾಗಿ ಪ್ರತಿಕ್ರಿಯಿಸಿ,ನಾನು ಶಾಸಕ ಅವರು ವಿಧಾನ ಪರಿಷತ್ ಸದಸ್ಯ.ನನಗೆ ಹಿಂದೆ ಮಾತನಾಡಿದಾಗ ಕೊಟ್ಟಿದ್ದರು.ಯಾರು ನೋಟಿಸ್ ಕೊಡಬೇಕು ಅವರು ಇದನ್ನೆಲ್ಲಾ ನೋಡಬೇಕು.ಯಾಕೆ ಅವರಿಗೆ ನೋಟೀಸ್ ಕೊಟ್ಟಿಲ್ಲ ಅಂತ ಕೇಳಲು ಆಗಲ್ಲ.ಹತ್ತು ನೋಟಿಸ್ ನೀಡಿದರು ನಾನು ಒಂದೇ ಉತ್ತರ ನೀಡುವುದು.ಅದೇನೆಂದರೆ ಡಿಕೆ ಶಿವಕುಮಾರ್ ಅವರು ಒಂದು ಬಾರಿಯಾದರೂ ಸಿಎಂ ಆಗಬೇಕು ಅನ್ನೋದಷ್ಟೇ ಉದ್ದೇಶ ಎಂದು ಇಕ್ಬಾಲ್ ಹುಸೇನ್ ಮರಳಿ ಉತ್ತರಿಸಿದರು.

Sponsored

ಇನ್ನು ನಿಖಿಲ್ ಕುಮಾರಸ್ವಾಮಿ ಅವರಂತೂ ಟಾಂಗ್ ಕೊಡುವುದರ ಮೂಲಕ ಮಾತನಾಡಿದ್ದಕ್ಕೆ ಇಕ್ಬಾಲ್ ಹುಸೇನ್ ಅವರು ರಾಮನಗರ ಚನ್ನಪಟ್ಟಣ ಚಿಕ್ಕಬಳ್ಳಾಪುರದಲ್ಲಿ ಅವರು ಚುನಾವಣೆಗೆ ನಿಂತಿದ್ದಾರೆ.ಹಾಗೆ ಹಗಲು ಹೊತ್ತಲ್ಲೇ ಬಣ್ಣ ಹಾಕಿಕೊಂಡು ಗೆಲ್ಲಿಬೇಕು ಇದ್ದರೂ ಹಾಗೇ ನಿಲ್ಲುತ್ತಾರೆ.ನಾನು ಸಾಧಾರಣ ಮನುಷ್ಯ.ಅವರ ಕುಟುಂಬ ರಾಜಕೀಯ ಹಿನ್ನಲೆಗೂ ಅವರು ರಾಜಕೀಯ ಹಿನ್ನೆಲೆಗು ಸಾಕಷ್ಟು ವ್ಯತ್ಯಾಸ ಇದೆ ಎಂದು ಹೇಳಿದರು.

ಇನ್ನಷ್ಟು ಓದಿರಿ:

ಭಾರತದ ಆರ್ಥಿಕತೆ ಜಿಗಿತ: 2027ರಲ್ಲಿ ಜಿಡಿಪಿ ಶೇ 6.4, ಜಿ - 20 ರಾಷ್ಟ್ರಗಳಲ್ಲಿ ಮುಂಚೂಣಿ

Sponsored
You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online