<?= $pageTitle ?>
Logo
ಮುಖಪುಟ ಓದುವುದು ಕೇಳು
Business

ಭಾರತದ ಆರ್ಥಿಕತೆ ಜಿಗಿತ: 2027ರಲ್ಲಿ ಜಿಡಿಪಿ ಶೇ 6.4, ಜಿ - 20 ರಾಷ್ಟ್ರಗಳಲ್ಲಿ ಮುಂಚೂಣಿ

ಭಾರತದ ಆರ್ಥಿಕತೆ ಜಿಗಿತ: 2027ರಲ್ಲಿ ಜಿಡಿಪಿ ಶೇ 6.4, ಜಿ - 20 ರಾಷ್ಟ್ರಗಳಲ್ಲಿ ಮುಂಚೂಣಿ
Summary: ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ನೀಡಿರುವ ಭವಿಷ್ಯ ವಾಣಿಯ ಪ್ರಕಾರ 2027ರಲ್ಲಿ ಭಾರತದ ಜಿಡಿಪಿ (GDP) ಶೇಕಡಾ 6.4 ರಷ್ಟು ಬೆಳವಣಿಗೆ ಸಾಧಿಸುವ ನಿರೀಕ್ಷೆಯಿದೆ. ಜಿ - 20 ರಾಷ್ಟ್ರಗಳ ಪೈಕಿ ಇಂದು ಅತ್ಯಧಿಕ್ ಆರ್ಥಿಕ ವೃದ್ಧಿದರ ಆಗಿರಲಿದೆ ಎಂಬುದನ್ನು ಗಮನಾರ್ಹ ಅಂಶ.
belagavi news:
ಮೂಡೀಸ್ ವರದಿ ಪ್ರಕಾರ, ಭಾರತದ ಆರ್ಥಿಕ ಬೆಳವಣಿಗೆ ದೇಶಿಯ ಬಳಕೆ ಬಲಿಷ್ಠ ಸೇವಾ ವಲಯ ಮೂಲ ಸೌಕರ್ಯ ಹೂಡಿಕೆ ಮತ್ತು ಸರ್ಕಾರದ ನೀತಿಗಳು ಪ್ರಮುಖ ಕಾರಣಗಳಾಗಿವೆ. ಜಾಗತಿಕ ಆರ್ಥಿಕ ಅನಿಶ್ಚಿತತೆ ಗಳ ನಡುವೆಯೂ ಭಾರತ ತನ್ನ ಬೆಳವಣಿಗೆ ವೇಗವನ್ನು ಕಾಪಾಡಿಕೊಳ್ಳುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿವೆ.

ಭಾರತ ಒಟ್ಟು ದೇಶಿಯ ಉತ್ಪನ್ನ ಜಿಡಿಪಿ ದರ 2027ರಲ್ಲಿ ಶೇಕಡಾ 6.4 ರಷ್ಟು ಬೆಳವಣಿಗೆ ಕಾಣಲಿದೆ. 2025ರಲ್ಲಿ ಸರಕು ಮತ್ತು ಸೇವಾ ತೆರಿಗೆ ( ಜಿ ಎಸ್ ಟಿ) ದರಗಳನ್ನು ಪರಿಷ್ಕರಣೆ ಮತ್ತು ವೈಯತಿಕ ಆದಾಯ ತೆರಿಗೆ ಮಿತಿಗಳನ್ನು ಹೆಚ್ಚಿಸಿದ್ದು ಜನರ ಆರ್ಥಿಕತೆ ಸುಧಾರಿಸಲು ಸಹಾಯ ಮಾಡಲಾಗಿದೆ. ಇದು ಜಿ - 20 ರಾಷ್ಟ್ರಗಳಲ್ಲಿಯೇ ಅತ್ಯಂತ ವೇಗದ ಆರ್ಥಿಕತೆಯಾಗಲಿದೆ ಎಂದು ಜಾಗತಿಕ ಆರ್ಥಿಕತೆ ವಿಶ್ಲೇಷಿ ಸುವ ಸಂಸ್ಥೆಯಾದ ಮೂಡೀಸ್ ರೇಟಿಂಗ್ ಸೋಮವಾರ ಭವಿಷ್ಯ ನುಡಿದರು.


ಇದು ಬಲವಾದ ದೇಶಿಯ ಬಳಕೆ ಮತ್ತು ನೀತಿ ಕ್ರಮಗಳಿದ್ದಾಗಿ ಸಾಧ್ಯವಾಗಲಿದೆ ಎಂದು ಅಂದಾಜಿಸಿದೆ. ಮೂಡೀಸ್ ತನ್ನ ಆರ್ಥಿಕ ಮುನ್ನೋಟ ವರದಿಯಲ್ಲಿ ಉಲ್ಲೇಖಿಸಿದಂತೆ 2026 27ರ ಆರ್ಥಿಕ ವರ್ಷದಲ್ಲಿ ಭಾರತದ ನೈಜ ಜಿಡಿಪಿ ಶೇಕಡಾ 6.4 ರಷ್ಟು ಬೆಳವಣಿಗೆ ದಾಖಲಿಸಲಾಗಿದೆ. ಈ ಎರಡು ನೀತಿಗಳಿಗಾಗಿ ದೇಶದ ಅರ್ಥವ್ಯವಸ್ಥೆಯು ಬೆಳವಣಿಗೆ ದಾಖಲಿಸುವ ಸಾಧ್ಯತೆ ಎಂದು ಮೂಡೀಸ್ ಹೇಳಿದರು.

ನಿಯಂತ್ರಣದಲ್ಲಿ ಹಣ ದುಬ್ಬರ: ದೇಶದ ಕೇಂದ್ರ ಬ್ಯಾಂಕ್ ಆಗಿರೋ ಭಾರತೀಯ ರಿಸರ್ವ್ ಬ್ಯಾಂಕ್ ( ಆರ್ ಬಿಐ) ರೆಪೋ ದರವನ್ನು ಇಳಿಕೆ ಮಾಡುತ್ತಲೇ ಬಂದಿದ್ದು. 2025 ರಲ್ಲಿ ಶೇಕಡ 5.25ರಷ್ಟು ಕಡಿತ ಮಾಡಿತ್ತು.ಸದ್ಯ ದೇಶದಲ್ಲಿ ಹಣ ದುಬ್ಬರ ನಿಯಂತ್ರಣದಲ್ಲಿದೆ. ಬೆಳವಣಿಗೆಯ ಆವೇಗವು ಪ್ರಬಲವಾಗಿದೆ. ಇದರಿಂದ ಆರ್ಬಿಐ ಹಣಕಾಸು ನೀತಿಯನ್ನು ಮತ್ತು ಸಲೀಲ ಗೊಳಿಸುವ ಸಾಧ್ಯತೆ ಇದೆ ಎಂದು ಮೂಡೀಸ್ ವರದಿಯಲ್ಲಿ ಉಲ್ಲೇಖಿಸಿದೆ.

ಬಜೆಟ್ ಗಿಂತ ಕಡಿಮೆ ಅಂದಾಜು: ದೇಶದ ಆರ್ಥಿಕ ಬೆಳವಣಿಗೆಯು ವಿಶ್ವದ ಇತರ ರಾಷ್ಟ್ರಗಳಿಗಿಂತ ವೇಗವಾಗಿರಲಿದೆ ಎಂದು ಜಾಗತಿಕ ಕ್ರೆಡಿಟ್ ರೇಟಿಂಗ್ ಸಂಸ್ಥೆ ಮೂಡೀಸ್ ಭವಿಷ್ಯ ನುಡಿದರು. ಅದರ ಅಂದಾಜು 202627ನೇ ಕೇಂದ್ರ ಬಜೆಟ್ ನಲ್ಲಿ ನೀಡಿರುವ ಗುರಿಗಿಂತ ಕಡಿಮೆ ಎನ್ನುವುದು ಗಮನಾರ್ಹ ಅಂಶವಾಗಿದೆ. ಮೂಡೀಸ್ ವರದಿ ಪ್ರಕಾರ 2026- 27 ಅವಧಿಯಲ್ಲಿ ಭಾರತದ ಜಿಡಿಪಿ ಬೆಳವಣಿಗೆ ಬಲಿಷ್ಠ ವಾಗಿರಲಿದ್ದರೂ ಕೇಂದ್ರ ಸರ್ಕಾರ ಬಜೆಟ್ ನಲ್ಲಿ ನಿರೀಕ್ಷಿಸಿರುವ ಮಟ್ಟಕ್ಕಿಂತ ಸ್ವಲ್ಪ ಕಡಿಮೆ ಪ್ರಮಾಣದಲ್ಲಿ ಇರಲಿದೆ.

ಬಜೆಟ್ ನಲ್ಲಿ ಸರ್ಕಾರದ ಅಂದಾಜು ಏನು? ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರು ಫೆಬ್ರವರಿ 1 ರಂದು ಸಂಸತ್ತಿನಲ್ಲಿ ಮಂಡಿಸಿದ ಬಜೆಟ್ ನಲ್ಲಿ 2026 - 27ರ ಹಣಕಾಸು ವರ್ಷದಲ್ಲಿ ದೇಶದ ಆರ್ಥಿಕ ಬೆಳವಣಿಗೆ ಶೇಕಡ 7.4 ಸಾಧಿಸುವ ಗುರಿ ಇದೆ ಎಂದು ತಿಳಿಸಿದ್ದಾರೆ. ಇದಕ್ಕೂ ಮೊದಲು ಜನವರಿಯಲ್ಲಿ ಪ್ರಕಟವಾಗಿ ಹಣಕಾಸು ಇಲಾಖೆಯ ಆರ್ಥಿಕ ಸಮೀಕ್ಷೆಯಲ್ಲಿ 6.8 ರಿಂದ 7.2ರವರೆಗೆ ಜಿಡಿಪಿ ಬೆಳವಣಿಗೆ ದಾಖಲಿಸಿದೆ ಎಂದು ತಿಳಿಸಿದ್ದಾರೆ.

ಭಾರತ ಪ್ರಸ್ತುತ ಹಣಕಾಸು ವರ್ಷದಲ್ಲಿ 2025 - 26, 7.4 ಪ್ರತಿಶತ ದಷ್ಟು ವೇಗವಾಗಿ ಬೆಳೆಯುವ ಸಾಧ್ಯತೆ ಇವೆ. 2024 - 25ರಲ್ಲಿ 6.5 ಪ್ರತಿಶತ ಬೆಳವಣಿಗೆ ಗಿಂತ ಹೆಚ್ಚಾಗಿರಲಿದೆ ಎಂದು ಅಂದಾಜಿಸಲಾಗಿದೆ.



ಇನ್ನಷ್ಟು ಓದಿರಿ:
ಗಂಗಾ ತೀರದಲ್ಲಿ ಚಿಕ್ಕಣ್ಣನ "ಲಕ್ಷ್ಮಿಪುತ್ರ" ಚಿತ್ರದ ಶೂಟಿಂಗ್

Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online