<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಗಂಗಾ ತೀರದಲ್ಲಿ ಚಿಕ್ಕಣ್ಣನ "ಲಕ್ಷ್ಮಿಪುತ್ರ" ಚಿತ್ರದ ಶೂಟಿಂಗ್

ಗಂಗಾ ತೀರದಲ್ಲಿ ಚಿಕ್ಕಣ್ಣನ "ಲಕ್ಷ್ಮಿಪುತ್ರ" ಚಿತ್ರದ ಶೂಟಿಂಗ್
Summary: ಕಾಶಿ ಪವಿತ್ರ ತೀರ್ಥ ಕ್ಷೇತ್ರದಲ್ಲಿ ಚಿತ್ರೀಕರಣ ಗೊಂಡಿರುವ ಚಿಕ್ಕಣ್ಣನ ನಟನೆಯ "ಲಕ್ಷ್ಮಿಪುತ್ರ" ಸಿನಿಮಾದ ಶೂಟಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ. ಚಿತ್ರದ ಇನ್ನಷ್ಟು ಮಾಹಿತಿ ನೋಡೋಣ ಬನ್ನಿ..

Belagavi news:

ಉಪಾಧ್ಯಕ್ಷ ಚಿತ್ರದಿಂದ ಎಲ್ಲರ ಮನ ಗೆದ್ದಂತಹ ನಟ ಚಿಕ್ಕಣ್ಣ ಅವರು ತಮ್ಮ ಸ್ವಂತ ಚಿತ್ರ "ಲಕ್ಷ್ಮಿಪುತ್ರ" ಚಿತ್ರದ ಶೂಟಿಂಗಿಗೆ ಕಾಶಿಗೆ ತೆರಳಿದ್ದಾರೆ. ಮಣಿಕರ್ಣಿಕಾ ಘಾಟ್ ಸೇರಿದಂತೆ ಕಾಶಿಯ ಪ್ರಮುಖ ಸ್ಥಳಗಳಲ್ಲಿ ಅದ್ದೂರಿಯಾಗಿ ಕ್ಲೈಮ್ಯಾಕ್ಸ್ ದೃಶ್ಯವನ್ನು ಚಿತ್ರರಿಸಲಾಗಿದೆ. ಜೊತೆಗೆ ಈ ಸಿನಿಮಾವನ್ನು ನಿರ್ದೇಶಕ ಎ.ಪಿ.ಅರ್ಜುನ್ ನಿರ್ದೇಶಸುತ್ತಿದ್ದು, ಚಿಕ್ಕಣ್ಣ ಹೊಸ ಲುಕ್ ಹಾಗೂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಿಸಿದೆ.

ಹೊಸ ಪ್ರತಿಭೆಗಳನ್ನು ಚಿತ್ರರಂಗಕ್ಕೆ ಪರಿಚಯಿಸುವಲ್ಲಿ ಹೆಸರುವಾಸಿಯಾಗಿರುವ ನಿರ್ದೇಶಕ ಎಪಿ ಅರ್ಜುನ್,ಇದೀಗ ನಟ ಚಿಕ್ಕಣ್ಣ ಜೊತೆ ಕೈಜೋಡಿಸಿ 'ಲಕ್ಷ್ಮಿಪುತ್ರ' ಸಿನಿಮಾವನ್ನು ನಿರ್ಮಿಸುತ್ತಿದ್ದಾರೆ.ಜೊತೆಗೆ ಈಗಾಗಲೇ ಈ ಕಾಂಬಿನೇಷನ್ ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿದ್ದು,ಸಿನಿಮಾ ಚಿತ್ರೀಕರಣ ವೇಗವಾಗಿ ಸಾಗುತ್ತಿದೆ. ಎ.ಪಿ ಅರ್ಜುನ್ ಸ್ವತಃ ಕತೆ ಬರೆದು, ತಮ್ಮದೇ ಎ.ಪಿ ಅರ್ಜುನ್ ಫಿಲಂ ಬ್ಯಾನರ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ ಎಂಬುದು ತುಂಬಾ ವಿಶೇಷವಾದ ಸಂಗತಿ.

ಇತ್ತೀಚಿಗೆ ಸಿನಿಮಾ ಪ್ರಮುಖ ಕ್ಲೈಮಾಕ್ಸ್ ದೃಶ್ಯಗಳನ್ನು ಪವಿತ್ರ ಕಾಶಿ ಕ್ಷೇತ್ರದಲ್ಲಿ ಅದ್ದೂರಿಯಾಗಿ ಚಿತ್ರೀಕರಿಸಲಾಗಿದೆ.ಮೂರು ದಿನಗಳ ಕಾಲ ನಡೆದ ಈ ಶೂಟಿಂಗ್ನಲ್ಲಿ ನಟ ಚಿಕ್ಕಣ್ಣ ಹಿರಿಯ ನಟಿತಾರ ಸೇರಿದಂತೆ ಅರವತ್ತಕ್ಕೂ ಹೆಚ್ಚು ಕಲಾವಿದರು ಭಾಗವಹಿಸಿದ್ದರು. ಚಿತ್ರ ತಂಡ ಕಾಶಿಯ ಪ್ರಸಿದ್ಧ ಮಣಿಕರ್ಣಿಕಾ ಘಾಟ್ , ಗಂಗಾ ನದಿ ತೀರ,ಬನಾರಸ್ ನ ಐತಿಹಾಸಿಕ ಸ್ಥಳಗಳು ಹಾಗೂ ಪ್ರಮುಖ ಬೀದಿಗಳಲ್ಲಿ ಚಿತ್ರೀಕರಣ ನಡೆಸಿದ್ದು,ದೃಶ್ಯಗಳು ಸಿನಿಮಾದ ಪ್ರಮುಖ ಹೈಲೈಟ್ ಆಗಲಿದೆ ಎಂದು ಹೇಳಲಾಗಿದೆ.

Sponsored

ಲಕ್ಷ್ಮಿಪುತ್ರ ಸಿನಿಮಾ ಭಾವನಾತ್ಮಕ ಮತ್ತು ಮನರಂಜನೆಯ ಅಂಶಗಳನ್ನು ಒಳಗೊಂಡಿದ್ದು,ಚಿಕ್ಕಣ್ಣ ಹೊಸ ರೀತಿಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ಸಿನಿಮಾ ಅಭಿಮಾನಿಗಳೇ ನಿರೀಕ್ಷೆಯನ್ನು ಹೆಚ್ಚಿಸಿದೆ.ಜೊತೆಗೆ ವಿಭಿನ್ನ ಕಥಾಹಂದರದೊಂದಿಗೆ ತಯಾರಾಗುತ್ತಿರುವ ಈ ಸಿನಿಮಾ ಸ್ಯಾಂಡಲ್ವುಡ್ ನಲ್ಲಿ ಹೊಸ ಸಂಚಲನ ಮೂಡಿಸುವ ಸಾಧ್ಯತೆ ಇದೆ ಎಂದು ಚಿತ್ರತಂಡ ವಿಶ್ವಾಸ ವ್ಯಕ್ತಪಡಿಸಿದೆ.

ಈ ಚಿತ್ರದಲ್ಲಿ ತಾಯಿ ಮಗನ ಬಾಂಧವ್ಯದ ಕಥೆ ಹೇಳುವ ಪ್ರಯತ್ನದಲ್ಲಿ ಚಿತ್ರತಂಡವಿದೆ. ಇದರೊಂದಿಗೆ ಕನ್ನಡ ಚಿತ್ರರಂಗದಲ್ಲಿ ಹಾಸ್ಯ ನಟನಾಗಿ ಗುರುತಿಸಿಕೊಂಡಿರುವ ಚಿಕ್ಕಣ್ಣ,ನಾಯಕ ನಟನಾಗಿ ಅಭಿನಯಿಸುತ್ತಿರುವ ಎರಡನೇ ಸಿನಿಮಾ ಇದು ಎಂದು ಹೇಳಲಾಗುತ್ತದೆ. 9ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಹಾಸ್ಯ ನಟ ಹಾಗೂ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಿಕ್ಕಣ್ಣ ಉಪಾಧ್ಯಕ್ಷ ಸಿನಿಮಾದಲ್ಲಿ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದು ಇದೀಗ ಎರಡನೇ ಸಿನಿಮಾದಲ್ಲಿ ಮಿಂಚಲು ಕಾತುರದಿದ್ದಾರೆ. ವಿಜಯ ಸಾಮಿ ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾದಲ್ಲಿ ಚಿಕ್ಕಣ್ಣನಿಗೆ ಜೋಡಿಯಾಗಿ ನಟಿ ಹೊಂದಿದ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ತಾರಾ ಕುರಿ ಪ್ರತಾಪ್, ಧರ್ಮಣ್ಣ ಸೇರಿ ದೊಡ್ಡ ತಾರಾಗಣವಿದೆ. ಅರ್ಜುನ ಜನ್ಯ ಸಂಗೀತ ಚಿತ್ರಕ್ಕೆದೆ.

ಈ ಚಿತ್ರವು ಎರಡು ದಿನದ ಮಾತಿನ ಭಾಗದ ಚಿತ್ರೀಕರಣ ಬಾಕಿ ಇದ್ದು ಶೀಘ್ರದಲ್ಲೇ ಹಾಡುಗಳ ಶೂಟಿಂಗ್ ಕೂಡ ನಡೆಯಲಿದೆ ಎಂದು ಹೇಳಿದ್ದಾರೆ. ಮೇ ಅಥವಾ ಜೂನ್ ತಿಂಗಳಲ್ಲಿ ಸಿನಿಮಾ ಬಿಡುಗಡೆ ಮಾಡಲು ತಂಡ ಯೋಜನೆ ಹಾಕಿಕೊಂಡಿದೆ.

ಇನ್ನಷ್ಟು ಓದಿರಿ:

Sponsored

ಹೃದಯಾ ಸಿನಿಮಾಗೆ ಎಂಟ್ರಿ ಕೊಟ್ಟ ನವೀನ್ ಶಂಕರ್

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online