<?= $pageTitle ?>
Logo
ಮುಖಪುಟ ಓದುವುದು ಕೇಳು
Advertisement
Entertainment

ಜೈಲಿನಲ್ಲಿ ಯೋಗ ಮಾಡಿದ ದರ್ಶನ್ : ಪರಪ್ಪನ ಅಗ್ರಹಾರದಿಂದ ವೈರಲ್ ಆಯ್ತು ಹೊಸ ಫೋಟೋ

ಜೈಲಿನಲ್ಲಿ ಯೋಗ ಮಾಡಿದ ದರ್ಶನ್ : ಪರಪ್ಪನ ಅಗ್ರಹಾರದಿಂದ ವೈರಲ್ ಆಯ್ತು ಹೊಸ ಫೋಟೋ
Summary: A video of actor Darshan Thogudeep practicing yoga in Parappana Agrahara jail has gone viral on social media. This video of Darshan, who is giving importance to health and fitness even in jail, has caught the attention of fans.

BELAGAVI NEWS :

ಚಾಲೆಂಜಿಂಗ್ ಸ್ಟಾರ್ ದರ್ಶನ್ ಯೋಗ ದಿನಾಚರಣೆಯಲ್ಲಿ ಭಾಗವಹಿಸಿದ ಫೋಟೋ ವೈರಲ್

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರ್ಯಗೃಹದಲ್ಲಿ ಕೈದಿಗಳಿಗೆ ಯೋಗಭ್ಯಾಸ ಕಾರ್ಯಕ್ರಮ ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ದರ್ಶನ್ ತೂಗುದೀಪ ಕೂಡ ಇತರ ಕೈದಿಗಳೊಂದಿಗೆ ಯೋಗಭ್ಯಾಸದಲ್ಲಿ ಭಾಗವಹಿಸಿರುವುದು ಗಮನ ಸೆಳೆದಿದೆ.

ಜೈಲಿನ ಕಾರಿಡಾರ್ ನಲ್ಲಿ ಇತರ ಕೈದಿಗಳ ಸಾಲಿನಲ್ಲಿ ಕುಳಿತು ಯೋಗ ಮಾಡುತ್ತಿರುವ ದರ್ಶನ್ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ಹಲವು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ 'ಚಾಲೆಂಜಿಂಗ್ ಸ್ಟಾರ್' ಎಂದು ಗುರುತಿಸಿಕೊಂಡಿರುವ ದರ್ಶನ್, ಇದೀಗ ಕಾನೂನು ಹೋರಾಟದ ಮಧ್ಯೆ ಜೈಲು ಜೀವನ ನಡೆಸುತ್ತಿದ್ದಾರೆ.

Sponsored

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ತನಿಖೆ ಮತ್ತು ನ್ಯಾಯಾಂಗ ಪ್ರಕ್ರಿಯೆ ಇನ್ನೂ ಮುಂದುವರೆಯುತ್ತಿದ್ದು, ಪ್ರಕರಣದ ಕುರಿತು ಅಂತಿಮ ತೀರ್ಪು ಹೊರ ಬಂದಿಲ್ಲ. ಈ ಹಿನ್ನೆಲೆ ಯೋಗ ದಿನಾಚರಣೆಯ ವೇಳೆ ತೆಗೆದಿರುವ ಈ ಚಿತ್ರ ಅಭಿಮಾನಿಗಳು ಹಾಗೂ ನೆಟಿಜನ್ ಗಳ ನಡುವೆ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಏನು?

ಒಂದೆಡೆ ದರ್ಶನ್ ಅವರ ಅಭಿಮಾನಿಗಳು "ಜೈಲಿನಲ್ಲಿರುವ ಕೈದಿಗಳಿಗೆ ಯೋಗದಂತಹ ಚಟುವಟಿಕೆಗಳು ಮಾನಸಿಕ ನೆಮ್ಮದಿಗೆ ಸಹಕಾರಿ" ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಒಟ್ಟಾರೆ, ಯೋಗ ದಿನಾಚರಣೆಯ ಸಂಭ್ರಮದಲ್ಲಿ ಸೆರೆಮನೆಯ ಒಳಗಿನಿಂದ ಹೊರಬಂದ ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಗಮನ ಸೆಳೆಯುತ್ತಿರುವ ಚಿತ್ರಗಳಲ್ಲಿ ಒಂದಾಗಿದೆ.

Sponsored

ಯೋಗಕ್ಕೆ ಮೊದಲು ನಿರಾಕರಿಸಿದ ದರ್ಶನ?ನಂತರ ಅಧಿಕಾರಿಗಳ ಮನವಿಗೆ ಒಪ್ಪಿಗೆ

ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ 21ರಂದು ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರ್ಯ ಗೃಹ ದಲ್ಲಿ ಕೈದಿಗಳಿಗೆ ಯೋಗಭ್ಯಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು.ಈ ವೇಳೆ ನಟ ದರ್ಶನ್ ತೂಗುದೀಪ್ ಆರಂಭದಲ್ಲಿ ಯೋಗ ಮಾಡಲು ನಿರಾಕರಿಸಿದ್ದರೆಂಬ ಮಾಹಿತಿ ಹರಿದಾಡುತ್ತಿದೆ.

ಮೂಲಗಳ ಪ್ರಕಾರ, ಬೆನ್ನು ನೋವಿನ ಸಮಸ್ಯೆಯನ್ನು ಉಲ್ಲೇಖಿಸಿ ಯೋಗಭ್ಯಾಸದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ದರ್ಶನ್ ತಿಳಿಸಿದ್ದರಂತೆ. ಆದರೆ ಕಾರ್ಯಗೃಹ ಮತ್ತು ಸುಧಾರಣಾ ಸೇವೆಗಳ ಮಹಾನ್ ನಿರ್ದೇಶಕರಾದ ಅಲೋಕ್ ಕುಮಾರ್ ಅವರು ಯೋಗದ ಆರೋಗ್ಯಕರ ಪ್ರಯೋಜನಗಳನ್ನು ವಿವರಿಸಿ, "ಯೋಗ ಮಾಡಿದರೆ ಬೆನ್ನು ನೋವು ಕಡಿಮೆಯಾಗಲು ಸಹಕಾರಿ" ಎಂದು ಮನವರಿಗೆ ಮಾಡಿದ ಬಳಿಕ ದರ್ಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆಂದು ಹೇಳಲಾಗುತ್ತಿದೆ.

ಅಧಿಕಾರಿಗಳ ಸಲಹೆಯನ್ನು ಸ್ವೀಕರಿಸಿದ ಬಳಿಕ ದರ್ಶನ್ ಸೇರಿದಂತೆ ರೇಣುಕಾ ಸ್ವಾಮಿ ಹತ್ಯೆ ಪ್ರಕರಣದ ಇತರೆ ಆರೋಪಿಗಳು ಯೋಗಾಭ್ಯಾಸದಲ್ಲಿ ಭಾಗವಹಿಸಿದರು ಎನ್ನಲಾಗಿದೆ. ಜೈಲಿನ ಕಾರಿಡಾರ್ ನಲ್ಲಿ ನಡೆದ ಈ ಸಾಮೂಹಿಕ ಯೋಗ ಕಾರ್ಯಕ್ರಮ ಒಂದು ಗಂಟೆಗೂ ಹೆಚ್ಚು ಕಾಲ ನಡೆದಿದ್ದು, ಕೈದಿಗಳು ವಿವಿಧ ಯೋಗಭ್ಯಾಸಗಳು ಮತ್ತು ಉಸಿರಾಟದ ವ್ಯಾಯಾಮಗಳನ್ನು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Sponsored

ಈ ವೇಳೆ ದರ್ಶನ್ ಹಾಗೂ ಇತರ ಆರೋಪಿಗಳು ಯೋಗ ಮಾಡುತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಮತ್ತು ಸಾರ್ವಜನಿಕರ ನಡುವೆ ಚರ್ಚೆಗೆ ಕಾರಣವಾಗಿದೆ. ಕೆಲವರು ಇದನ್ನು ಆರೋಗ್ಯ ಮತ್ತು ಸಾಮಾಜಿಕ ಸಮತೋಲನಕ್ಕೆ ಕೈಗೊಂಡ ಉತ್ತಮ ಕ್ರಮವೆಂದು ಅಭಿಪ್ರಾಯಪಟ್ಟರೆ, ಇನ್ನೂ ಕೆಲವರು ವೈರಲ್ ವಿಡಿಯೋಗಳ ಬಗ್ಗೆ ತಮ್ಮದೇ ರೀತಿಯ ಪ್ರತಿಕ್ರಿಯೆಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಯೋಗದಿನದ ಫೋಟೋ ವೈರಲ್ : ದರ್ಶನ್ ಕಂಡು ಅಭಿಮಾನಿಗಳಲ್ಲಿ ಸಂತಸ

ಇದು ಜೂನ್ 21ರಂದು ಒಂದೇ ದಿನ ಅಂತರಾಷ್ಟ್ರೀಯ ಯೋಗ ದಿನಾಚರಣೆ, ವಿಶ್ವ ಸಂಗೀತ ದಿನ ಹಾಗೂ ಫಾದರ್ಸ್ ಡೇ ಆಚರಣೆಗಳ ಸಂಭ್ರಮದಲ್ಲಿದ್ದರೆ, ಇತ್ತೀಚಿಗಷ್ಟೇ ಮರು ಬಿಡುಗಡೆಯಾದ ಕಲಾಸಿಪಾಳ್ಯ ಚಿತ್ರದ ಯಶಸ್ವಿ ಪ್ರದರ್ಶನವು ಅಭಿಮಾನಿಗಳ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿತ್ತು. ಇಂತಹ ಸಂದರ್ಭದಲ್ಲಿ ದರ್ಶನ್ ಅವರ ಹೊಸ ಫೋಟೋ ಲಭ್ಯವಾಗಿರುವುದು ಅಭಿಮಾನಿಗಳಿಗೆ ಸಂತಸದ ಕ್ಷಣವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹಲವು ಚಿತ್ರವನ್ನು ಹಂಚಿಕೊಂಡು, "ಬೇಗ ಆರೋಪ ಮುಕ್ತರಾಗಿ ಹೊರಬನ್ನಿ ಬಾಸ್" ಎಂಬ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಮತ್ತೊಂದೆಡೆ, ದರ್ಶನ್ ಅವರ ಆರೋಗ್ಯ ಮತ್ತು ಮನೋಜ್ ಸ್ಥಿತಿ ಕುರಿತು ಕಾಳಜಿ ಹೊಂದಿದ್ದ ಅಭಿಮಾನಿಗಳಿಗೆ ಈ ಫೋಟೋ ಸ್ವಲ್ಪ ನೆಮ್ಮದಿ ನೀಡಿದಂತಾಗಿದೆ.

Sponsored

ಫೋಟೋದಲ್ಲಿ ದರ್ಶನ್ ಹೇಗೆ ಕಾಣಿಸಿಕೊಳ್ಳುತ್ತಿದ್ದಾರೆ?

ವೈರಲ್ ಆಗುತ್ತಿರುವ ಚಿತ್ರದಲ್ಲಿ ದರ್ಶನ್ ಸರಳ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಕಪ್ಪು ಬಣ್ಣದ ಶಾರ್ಟ್ಸ್,ಕಪ್ಪು ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜಾಕೆಟ್ ಧರಿಸಿರುವ ಅವರು, ಇತರ ಕೈದಿಗಳೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಗೋಚರಿಸುತ್ತದೆ. ಒಂದು ಚಿತ್ರದಲ್ಲಿ ಅವರು ಸೊಂಟದ ಮೇಲೆ ಕೈ ಇಟ್ಟು ನಿಂತಿರುವ ದೃಶ್ಯವು ಗಮನ ಸೆಳೆಯುತ್ತಿದೆ.

ಅಭಿಮಾನಿಗಳ ಗಮನ ಸೆಳೆದ ಜೈಲು ಫೋಟೋ:

ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರ್ಯಾಗ್ರಹದಲ್ಲಿ ನ್ಯಾಯಾಂಗ ಪ್ರಕ್ರಿಯೆಯ ನಡುವೆ ಇರುವ ದರ್ಶನ್ ಅವರ ಈ ಫೋಟೋ ಅಭಿಮಾನಿಗಳಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಜೈಲು ಪರಿಸರದಲ್ಲಿದ್ದರೂ ಅವರು ಸಾರ್ವಜನಿಕರ ಗಮನ ಸೆಳೆಯುತ್ತಿರುವ ವ್ಯಕ್ತಿಯಾಗಿಯೇ ಉಳಿದಿದ್ದು,ಯೋಗ ದಿನಾಚರಣೆಯ ಈ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.

Sponsored

Also Read:

ಡಿಕೆಶಿ ಯಾವೂರಿಗೆ ಚಾಣಾಕ್ಷ ? ಸಿಎಂ ವಿರುದ್ಧ ಆರ್.ಅಶೋಕ್ ತೀವ್ರ ವಾಗ್ದಾಳಿ

You May Also Like
Sponsored
Stay Updated

Get the latest news delivered to your inbox

We respect your privacy. Unsubscribe anytime.

Trending News

Related News

View All
logo

H16NEWS

ತ್ವರಿತ ಸುದ್ದಿ. ಅನಂತ ಒಳನೋಟ
ADS

© H16news.online . All Rights Reserved. Designed by H16news.online